2020ರಲ್ಲಿ ಲಾಂಚ್ ಆಗಲಿವೆ ಕುತೂಹಲಕಾರಿ ಫೋಲ್ಡೆಬಲ್ ಫೋನ್‌ಗಳು!
ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಹೊಸ ಮಾದರಿಯ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಸಾಗಿವೆ. ಅವುಗಳಲ್ಲಿ ಈ ವರ್ಷ (2019) ಹೆಚ್ಚು ಆಕರ್ಷಿಸಿದ್ದು ಮತ್ತು ಸದ್ದು ಮಾಡಿದ್ದು, ಫೋಲ್ಡೆಬಲ್ ಫೋನ್‌ಗಳು. ಬರುವ ಹೊಸ ವರ್ಷ-2020ರಲ್ಲಿಯೂ ಸಹ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತವೆ ಅನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ. ಯಾಕೆ ಗೊತ್ತೆ?

ಯಸ್. 2020ರಲ್ಲಿ ಮೊಬೈಲ್ ಮಾರುಕಟ್ಟೆಗೆ ಪ್ರಮುಖ ಮೊಬೈಲ್ ಸಂಸ್ಥೆಗಳಿಂದ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡಲಿವೆ. ಈಗಾಗಲೇ ಆ ಫೋನ್‌ಗಳ ಕೆಲವು ಲೀಕ್ ಮಾಹಿತಿಗಳು ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿವೆ. ಸ್ಯಾಮ್‌ಸಂಗ್, ಶಿಯೋಮಿ, ಎಲ್‌ಜಿ, ಮೊಟೊರೊಲಾ, ಒನ್‌ಪ್ಲಸ್ ಸಂಸ್ಥೆಗಳು ಸಹ ಫೋಲ್ಡೆಬಲ್ ಫೋನ್ ಬಿಡುಗಡೆ ಮಾಡುವ ಸೂಚನೆಯನ್ನು ಹೊರಹಾಕಿವೆ. ಹಾಗಾದರೇ 2020ರಲ್ಲಿ ಲಾಂಚ್ ಆಗಲಿವೆ ಎನ್ನಲಾದ ಟಾಪ್ ಫೋಲ್ಟೆಬಲ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ 2
ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಗ್ಯಾಲಕ್ಸಿ ಫೋಲ್ಡ್ ಫೋನ್ ಬಿಡುಗಡೆ ಮಾಡಿ ಭಾರಿ ಸದ್ದು ಮಾಡಿದ್ದು, ಬರುವ 2020ಕ್ಕೆ ಗ್ಯಾಲಕ್ಸಿ ಫೋಲ್ಡ್ 2 ಸ್ಮಾರ್ಟ್‌ಫೋನ್ದ ಲಾಂಚ್ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್ ಹಲವು ಹೊಸತನಗಳನ್ನು ಒಳಗೊಂಡಿರಲಿದೆ.

ಮೊಟೊರೊಲಾ ರೇಜರ್
ಮೊಟೊರೊಲಾದ ಬಹುನಿರೀಕ್ಷಿತ ರೇಜರ್ ಫೋನ್ 2020ರಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಇನ್ನು ಈ ಫೋನ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಹೊಂದಿರಲಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಾಲೇ ಈ ಫೋನ್ ಕುತೂಹಲ ಹೆಚ್ಚಿಸಿದೆ.

ಒನ್‌ಪ್ಲಸ್ ಕಾನ್ಸೆಪ್ಟ್ ಒನ್
ಒನ್‌ಪ್ಲಸ್ ಸಂಸ್ಥೆಯು ಸಹ ಫೋಲ್ಡೆಬಲ್ ಫೋನ್ ಲಾಂಚ್ ಮಾಡುವ ಸೂಚನೆ ನೀಡಿದೆ. 2020ರಲ್ಲಿ ಕಾನ್ಸಪ್ಟೆ ಒನ್ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಲಿದ್ದು, ಇದು ಫೋಲ್ಡೆಬಲ್ ಡಿಸ್‌ಪ್ಲೇ ಹೊಂದಿರಲಿದೆ.

ಶಿಯೋಮಿ ಫೋಲ್ಡೆಬಲ್ ಫೋನ್
ಚೀನಾ ಮೂಲದ ಶಿಯೋಮಿ ಸಂಸ್ಥೆ ಸಹ ಹೊಸದಾಗಿ ಫೋಲ್ಡೆಬಲ್ ಫೋನ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಭಾರಿ ಅಚ್ಚರಿಯ ಫೀಚರ್ಸ್‌ಗಳೊಂದಿಗೆ ನೂತನ ಫೋನ್ ಬಿಡುಗಡೆ ಆಗಲಿದೆ ಎನ್ನಲಾಗಿದೆ.


Click it and Unblock the Notifications








