ಜಿಯೋ ಬಳಕೆದಾರರಿಗೆ ಸಂಭ್ರಮ! ಈ ಪ್ಲ್ಯಾನ್‌ಗಳಲ್ಲಿ 5G ಡೇಟಾ, ಉಚಿತ ನೆಟ್‌ಫ್ಲಿಕ್ಸ್ ಸೌಲಭ್ಯ!
ಜಿಯೋ ಟೆಲಿಕಾಂ (jio telecom ) ಏರ್‌ಟೆಲ್ ಹಾಗೂ ವಿ ಟೆಲಿಕಾಂ ಗೆ ತೀವ್ರ ಪೈಪೋಟಿ ನೀಡುತ್ತಿದೆ. ಅದರಲ್ಲೂ ಇತ್ತೀಚಿನ ವರದಿಗಳ ಪ್ರಕಾರ ಈ ಜಿಯೋ ಗ್ರಾಮೀಣ ಭಾರತದಲ್ಲಿ ಹೆಚ್ಚು ಪ್ರಭಾವ ಬೀರುತ್ತಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಆಯ್ದ ಪ್ರಿಪೇಯ್ಡ್ ಮೊಬೈಲ್ ಪ್ಲ್ಯಾನ್‌ನಲ್ಲಿ 5G ಡೇಟಾ ಮತ್ತು ಉಚಿತ ನೆಟ್‌ಫ್ಲಿಕ್ಸ್ ಸೌಲಭ್ಯಗಳನ್ನೂ ಸಹ ಕಲ್ಪಿಸಿಕೊಡುತ್ತಿದೆ.
ಹೌದು, ಈಗಾಗಲೇ ಜಿಯೋ ನೆಟ್‌ಫ್ಲಿಕ್ಸ್(netflix) ಚಂದಾದಾರಿಕೆಯೊಂದಿಗೆ 2 ಮೊಬೈಲ್ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ನಡುವೆ ಜಿಯೋ ಫೈಬರ್ ಯೋಜನೆಗಳು ಉಚಿತ ನೆಟ್‌ಫ್ಲಿಕ್ಸ್‌ನೊಂದಿಗೆ 4 ಮಾಸಿಕ ಯೋಜನೆಗಳನ್ನು ಸಹ ಒಳಗೊಂಡಿವೆ. ಹೊಸದಾಗಿ ಪ್ರಾರಂಭಿಸಲಾದ ಜಿಯೋ ಏರ್ ಫೈಬರ್ ಆಯ್ದ ಯೋಜನೆಗಳೊಂದಿಗೆ ಓಟಿಟಿ ಪ್ರಯೋಜನಗಳನ್ನು ಸಹ ನೀಡುತ್ತದೆ. ಹಾಗಿದ್ರೆ, ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಬರೋಣ.

ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್,ಮತ್ತು ಇತರ ಹಲವು ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಜನರು ನಿತ್ಯವೂ ಬಳಕೆ ಮಾಡುತ್ತಾರೆ. ಈ ಮೂಲಕ ಅಗತ್ಯ ಮಾಹಿತಿ ಹಾಗೂ ಮನರಂಜನೆ ಸೇವೆ ಪಡೆದುಕೊಳ್ಳುತ್ತಾರೆ. ವಿಷಯ ಏನೆಂದರೆ ಈ ಸೇವೆ ಪಡೆಯಬೇಕು ಎಂದರೆ ಬಳಕೆದಾರರು ಪಾವತಿ ಮಾಡಬೇಕು. ಆದರೆ ಜಿಯೋ ಮಾತ್ರ ತನ್ನ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಈ ಪ್ಲಾಟ್‌ಫಾರ್ಮ್‌ಗೆ ಉಚಿತ ಎಂಟ್ರಿ ನೀಡಲು ಅನುಕೂಲ ಮಾಡಿಕೊಟ್ಟಿದೆ. ಆದ್ದರಿಂದ ಬಳಕೆದಾರರು ಪ್ರತ್ಯೇಕ ಓಟಿಟಿ ಚಂದಾದಾರಿಕೆಗಳಿಗಾಗಿ ಹೆಚ್ಚುವರಿ ಪಾವತಿಸದೆಯೇ 5G ಇಂಟರ್ನೆಟ್ ವೇಗ, ಓಟಿಟಿಯ ಎಲ್ಲಾ ಇತರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಜಿಯೋದಿಂದ ಇತ್ತೀಚಿಗೆ ಲಾಂಚ್ ಮಾಡಲಾದ ವಿಶೇಷ ಪ್ಲ್ಯಾನ್‌ಗಳು:
1,099 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್: ಈ ಯೋಜನೆಯು ಜಿಯೋ ವೆಲ್‌ಕಮ್ ಆಫರ್‌ನೊಂದಿಗೆ ಅನಿಯಮಿತ 5G ಡೇಟಾ, ದಿನಕ್ಕೆ 2GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 84 ದಿನಗಳವರೆಗೆ ಉಚಿತ ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ.
1,499 ರೂ.ಗಳ ಪ್ಲ್ಯಾನ್: ಈ ಯೋಜನೆಯು ಸಹ ಜಿಯೋ ವೆಲ್‌ಕಮ್ ಆಫರ್‌ನೊಂದಿಗೆ ಬರಲಿದೆ. ಇದರಲ್ಲಿ ಬಳಕದಾರರು ಅನಿಯಮಿತ 5G ಡೇಟಾ, ದಿನಕ್ಕೆ 3GB ಡೇಟಾ, ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯದೊಂದಿಗೆ 84 ದಿನಗಳವರೆಗೆ ಉಚಿತ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಈ ಎರಡು ಸೇವೆಗಳನ್ನು ಕೆಲವು ವಾರಗಳ ಹಿಂದಷ್ಟೇ ಪರಿಚಯಿಸಲಾಗಿದ್ದು, ಜನರು ಹೆಚ್ಚು ಈ ಪ್ಲ್ಯಾನ್ ಕಡೆ ವಾಲುತ್ತಿದ್ದಾರೆ.
ಗಮನಿಸಬೇಕಾದ ವಿಷಯ ಏನಂದರೆ ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆಯು 1,099 ಯೋಜನೆಯ ಬಳಕೆದಾರರಿಗೆ 480p ರೆಸಲ್ಯೂಶನ್‌ನಲ್ಲಿ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. 1,499 ರೂ.ಗಳ ಯೋಜನೆಯು ಬಳಕೆದಾರರಿಗೆ ಎಸ್‌ಡಿ ರೆಸಲ್ಯೂಶನ್‌ನಲ್ಲಿ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. ಉಳಿದಂತೆ ಇತರೆ ಪ್ಲ್ಯಾನ್ ಕಡೆ ಕಣ್ಣಾಯಿಸೋಣ.
ಉಚಿತ ನೆಟ್‌ಫ್ಲಿಕ್ಸ್‌ನೊಂದಿಗೆ ಜಿಯೋ ಪ್ರಿಪೇಯ್ಡ್ ಫೈಬರ್ ಪ್ಲ್ಯಾನ್:
1,499 ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್ ನಲ್ಲಿ ಬಳಕೆದಾರರು 300 Mbps ವರೆಗಿನ ಇಂಟರ್ನೆಟ್ ವೇಗವನ್ನು ಪಡೆದುಕೊಳ್ಳಬಹುದಾಗಿದ್ದು, ಇದರಲ್ಲಿ ನೆಟ್‌ಫ್ಲಿಕ್ಸ್ (ಬೇಸಿಕ್), ಜಿಯೋ ಸಾವನ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್ ಸೇರಿದಂತೆ 18 ಓಟಿಟಿ ಚಾನಲ್‌ಗಳಿಗೆ ಹೆಚ್ಚುವರಿ ಚಂದಾದಾರಿಕೆಯನ್ನು ನೀಡಲಾಗುತ್ತದೆ.
2,499 ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್ ನಲ್ಲಿ ಜಿಯೋ ಗ್ರಾಹಕರು 500 Mbps ವೇಗವನ್ನು ಪಡೆಯುತ್ತಾರೆ. ಇದರೊಂದಿಗೆ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್ ಸೇರಿದಂತೆ 16 ಇತರ ಆಪ್‌ಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ.
3,999 ರೂ.ಗಳ ಪ್ಲ್ಯಾನ್: ಇದರಲ್ಲಿ ಬಳಕೆದಾರರು 1 Gbps ವೇಗವನ್ನು ಪಡೆಯಲಿದ್ದು (35000GB + 7500GB ಬೋನಸ್). ಇದು ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್ ಮತ್ತು ಇನ್ನಿತರೆ ಓಟಿಟಿ ಒಳಗೊಂಡಂತೆ 19 ಆಪ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.
8,499 ರೂ.ಗಳ ಪ್ಲ್ಯಾನ್: ಇದು 1Gbps ವೇಗ ಮತ್ತು 6600GB ಡೇಟಾ ಭತ್ಯೆಯನ್ನು ಒದಗಿಸುವ ಅತ್ಯಂತ ದುಬಾರಿ ಮಾಸಿಕ ಫೈಬರ್ ಪ್ಲ್ಯಾನ್ ಆಗಿದೆ. ಚಂದಾದಾರರು ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 19 ಆಪ್‌ಗಳಿಗೆ ಎಂಟ್ರಿ ನೀಡಬಹುದು.
ಜಿಯೋ ಏರ್‌ಫೈಬರ್ ಪ್ಲ್ಯಾನ್:
1,199ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ 550+ ಡಿಜಿಟಲ್ ಚಾನಲ್‌ಗಳಿಗೆ ಉಚಿತ ಪ್ರವೇಶ ಸಿಗಲಿದ್ದು, 100 Mbps ಇಂಟರ್ನೆಟ್ ವೇಗವನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ , ಡಿಸ್ನಿ+ ಹಾಟ್‌ಸ್ಟಾರ್, ಜಿಯೋ ಸಿನಿಮಾ ಪ್ರೀಮಿಯಂ ಮತ್ತು ಇನ್ನೂ ಹೆಚ್ಚಿನ ಓಟಿಟಿ ಆಪ್‌ಗಳಿಗೆ ಚಂದಾದಾರಿಕೆಗಳನ್ನು ಒದಗಿಸುತ್ತದೆ.

1,499 ರೂ.ಗಳ ಜಿಯೋ ಏರ್‌ಫೈಬರ್ ಮ್ಯಾಕ್ಸ್: ಜಿಯೋ ಆಯ್ದ ಸ್ಥಳಗಳಿಗೆ ಮ್ಯಾಕ್ಸ್ ಯೋಜನೆಗಳನ್ನು ಪರಿಚಯಿಸಲಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 30 ದಿನಗಳ ಮಾನ್ಯತೆಗೆ 300 Mbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ನೆಟ್‌ಫ್ಲಿಕ್ಸ್ ಬೇಸಿಕ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಸೋನಿ ಲಿವ್ ಸೇರಿದಂತೆ ಇನ್ನೂ ಅನೇಕ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಅನುವು ಮಾಡಿಕೊಡುತ್ತದೆ. ಜೊತೆಗೆ 550+ ಡಿಜಿಟಲ್ ಚಾನಲ್ ಸೇವೆ ಸಹ ಲಭ್ಯ.
2,499 ರೂ.ಗಳ ಜಿಯೋ ಏರ್‌ಪೈಬರ್ ಮ್ಯಾಕ್ಸ್ ಪ್ಲ್ಯಾನ್: ಈ ಹೊಸ ಪ್ಲ್ಯಾನ್‌ನಲ್ಲಿ ಗ್ರಾಹಕರು ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಸೋನಿ ಲಿವ್ , ಸೇರಿದಂತೆ 550+ ಡಿಜಿಟಲ್ ಚಾನಲ್‌ಗಳು ಮತ್ತು ಓಟಿಟಿ ಆಪ್‌ಗಳೊಂದಿಗೆ 30 ದಿನಗಳವರೆಗೆ 500 Mbps ಇಂಟರ್ನೆಟ್ ವೇಗವನ್ನು ನೀಡುತ್ತದೆ.
3,999 ರೂ.ಗಳ ಜಿಯೋ ಏರ್ ಫೈಬರ್ ಮ್ಯಾಕ್ಸ್ : ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ನೆಟ್‌ಫ್ಲಿಕ್ಸ್ ಪ್ರೀಮಿಯಂ, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಸೋನಿ ಲಿವ್, ಜೀ5 ಮತ್ತು ಇತರೆ ಸೇವೆ ಸೇರಿದಂತೆ 550+ ಡಿಜಿಟಲ್ ಚಾನಲ್‌ಗಳು ಮತ್ತು ಓಟಿಟಿ ಆಪ್‌ಗಳ ಜೊತೆಗೆ 30 ದಿನಗಳವರೆಗೆ 1 Gbps ಇಂಟರ್ನೆಟ್ ವೇಗವನ್ನು ಪಡೆಯಬಹುದಾಗಿದೆ.


Click it and Unblock the Notifications








