Home
ಸುದ್ದಿಜಾಲ

ವಿದ್ಯುತ್‌ ಸಮಸ್ಯೆಗೆ ಹೇಳಿ ಗುಡ್‌ ಬೈ, ಈ ಪುಟ್ಟ ಜನರೇಟರ್‌ನಿಂದ ಎಲ್ಲವೂ ಸಾಧ್ಯ! ಬೆಲೆ ಎಷ್ಟು?

ಮಳೆಗಾಲ ಆರಂಭ ಆಗಿದ್ದು, ವಿದ್ಯುತ್‌ ಅನ್ನೇ ನಂಬಿಕೊಂಡು ಕೆಲಸ ಮಾಡುವವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಅದರಲ್ಲೂ ಹಳ್ಳಿಗಳಲ್ಲಿ ಮಳೆಯಿಂದ ಏನಾದರೂ ವಿದ್ಯುತ್‌ ಲೈನ್‌ ಸಮಸ್ಯೆಗೆ ಒಳಗಾದರೆ ಅದು ರಿಪೇರಿಯಾಗಲು ಬಹು ದಿನಗಳೇ ಬೇಕಾಗಬಹುದು.ಆದರೆ, ನೀವು ಈ ಒಂದು ಡಿವೈಸ್‌ ಅನ್ನು ಬಳಕೆ ಮಾಡುವ ಮೂಲಕ ಎಲ್ಲಾ ವಿದ್ಯುತ್‌ ಸಂಬಂಧಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಪಡೆಯಬಹುದು.

ಹೌದು, ವಿದ್ಯುತ್‌ ಇಲ್ಲದೆ ಏನನ್ನೂ ಮಾಡಲಾಗದ ಪರಿಸ್ಥಿತಿ ಇಂದು ನಿರ್ಮಾಣ ಆಗಿದೆ. ಆದರೆ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್‌ ಸಮಸ್ಯೆ ಹೆಚ್ಚಾಗಲಿದ್ದು ಬಹುಪಾಲು ಜನರು ಹಲವು ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯವಾದ ಸಂಗತಿ. ಆದರೆ, ಈ ಚಿಕ್ಕ ಜನರೇಟರ್ ನಿಮ್ಮ ಮನೆಯನ್ನು ಸಂಪೂರ್ಣವಾಗಿ ಬೆಳಗಲಿದೆ. ಅಂದರೆ ಇದರಿಂದ ಟಿವಿ, ಫ್ಯಾನ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಸೇರಿದಂತೆ ಎಲ್ಲವನ್ನೂ ಬಳಕೆ ಮಾಡಬಹುದು. ಹಾಗಿದ್ರೆ, ಯಾವುದು ಈ ಪುಟ್ಟ ಜನರೇಟರ್? ಇದರ ಫೀಚರ್ಸ್‌ ಏನು?, ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ವಿದ್ಯುತ್‌ ಸಮಸ್ಯೆಗೆ ಹೇಳಿ ಗುಡ್‌ ಬೈ, ಈ ಪುಟ್ಟ ಜನರೇಟರ್‌ನಿಂದ ಎಲ್ಲವೂ ಸಾಧ್ಯ!

ಸೌರ ಪವರ್ ಜನರೇಟರ್: ಮನೆಯಲ್ಲಿರುವ ಫ್ಯಾನ್, ಟಿವಿ, ಲೈಟ್ ಹೀಗೆ ಎಲ್ಲ ಡಿವೈಸ್‌ಗಳು ವಿದ್ಯುತ್‌ ಇಲ್ಲದೆ ಕೆಲಸ ಮಾಡುವುದಿಲ್ಲ. ಇವೆಲ್ಲಾ ನಿತ್ಯವೂ ಅಗತ್ಯವಾದ ಸಾಧನಗಳಾಗಿದ್ದು, ಇವುಗಳು ಕೆಲಸ ಮಾಡದೆ ಇದ್ದರೆ ನಮಗೂ ಕೆಲಸ ಇರುವುದಿಲ್ಲ. ಅಂದರೆ ಬದುಕುವುದು ತುಂಬಾ ಕಷ್ಟವಾಗುತ್ತದೆ. ಈ ರೀತಿಯ ಪರಿಸ್ಥಿತಿಯಲ್ಲಿ ವಿದ್ಯುತ್ ಅಗತ್ಯ ಇಲ್ಲದೆಯೇ ಸೋಲಾರ್ ಪವರ್ ಜನರೇಟರ್ ನಿಮಗೆ ಎಲ್ಲಾ ಅನುಕೂಲ ಮಾಡಿಕೊಡಲಿದೆ.

ಈ ಸೌರ ಜನರೇಟರ್‌ನ ಹೆಸರು SARRVAD ಪೋರ್ಟಬಲ್ ಸೋಲಾರ್ ಪವರ್ ಜನರೇಟರ್ S-150 ಎಂದು. ಇದು ಚಿಕ್ಕದಾದರೂ ಸಹ ಇದು ನೀಡುವ ಸೇವೆ ಅಸಮಾನ್ಯವಾಗಿದೆ. ಜೊತೆಗೆ ಇದನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ಅದೆಲ್ಲಕ್ಕಿಂತ ಮಿಗಿಲಾಗಿ ಸಾಮಾನ್ಯ ಜನರೇಟರ್‌ಗಳಂತೆ ಹೆಚ್ಚಿನ ತೂಕ ಸಹ ಹೊಂದಿಲ್ಲ, ಬದಲಾಗಿ ಇದು 1.89 ಕೆಜಿ ತೂಕ ಹೊಂದಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಮನೆಯಲ್ಲೇ ಕೆಲಸ ಮಾಡುವವರಿಗೆ ಯೋಗ್ಯವಾಗಿದೆ ಇದರೊಂದಿಗೆ 2W ಅಲ್ಟ್ರಾ ಬ್ರೈಟ್ ಎಲ್ಇಡಿ ಫ್ಲ್ಯಾಶ್‌ಲೈಟ್ ಆಯ್ಕೆ ಸಹ ಇದೆ.

ಈ ಸಣ್ಣ ಜನರೇಟರ್‌ 42000mAh ಸಾಮರ್ಥ್ಯದ ಬ್ಯಾಟರಿ ಪಡೆದುಕೊಂಡಿದೆ. ಅಂದರೆ ಇದನ್ನು ಬಳಕೆ ಮಾಡಿಕೊಂಡು ನೀವು ಐಫೋನ್ 8 ಅನ್ನು ಸುಮಾರು 8 ಬಾರಿ ಚಾರ್ಜ್ ಮಾಡಬಹುದು. ಇದು ಈ ಸೌರ ಫಲಕದೊಂದಿಗೆ (14V-22V / 3A ಗರಿಷ್ಠ) ಬರಲಿದ್ದು, ನೀವು ಸೂರ್ಯನ ಕಿರಣಗಳೊಂದಿಗೆ ಚಾರ್ಜ್ ಮಾಡಿಕೊಳ್ಳಬಹುದು. ಇದಕ್ಕಾಗಿ 2 ಡಿಸಿ ಪೋರ್ಟ್‌ಗಳು, 3 ಯುಎಸ್‌ಬಿ ಪೋರ್ಟ್‌ಗಳನ್ನು ನೀಡಲಾಗಿದೆ.

ವಿವಿಧ ರೀಚಾರ್ಜಿಂಗ್ ಮೋಡ್‌ಗಳು: SARVAD S-150 ಪೋರ್ಟಬಲ್ ಜನರೇಟರ್ ಮೂರು ರೀಚಾರ್ಜಿಂಗ್ ಮೋಡ್‌ಗಳನ್ನು ಹೊಂದಿದೆ. ಅದರಲ್ಲಿ AC 220V ವಾಲ್ ಸಾಕೆಟ್ ಮೂಲಕ ಸಂಪೂರ್ಣವಾಗಿ ರೀಚಾರ್ಜ್ ಮಾಡಲು ಸುಮಾರು 6-7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಹಾಗೂ 30W ನಿಂದ 50W ವರೆಗಿನ 14-22V/3A ಸೌರ ಫಲಕದ ರೀಚಾರ್ಜಿಂಗ್‌ ಆಯ್ಕೆ ಇದ್ದು , ಇದರೊಂದಿಗೆ 12V/24V ಕಾರ್ ಸಿಗರೇಟ್ ಸಾಕೆಟ್ ಮೂಲಕವೂ ರೀಚಾರ್ಜ್ ಮಾಡಬಹುದು.

ವಿದ್ಯುತ್‌ ಸಮಸ್ಯೆಗೆ ಹೇಳಿ ಗುಡ್‌ ಬೈ, ಈ ಪುಟ್ಟ ಜನರೇಟರ್‌ನಿಂದ ಎಲ್ಲವೂ ಸಾಧ್ಯ!

SARVAD S-150 ಪೋರ್ಟಬಲ್ ಜನರೇಟರ್ ಬೆಲೆ ಹಾಗೂ ಲಭ್ಯತೆ: ಇದು 19,000 ರೂ.ಗಳ ಬೆಲೆ ಹೊಂದಿದ್ದು, ಇದಕ್ಕೆ ಯಾವುದೇ ನೇರ ಡಿಸ್ಕೌಂಟ್‌ ನೀಡಿಲ್ಲ. ಅದಾಗ್ಯೂ ಗ್ರಾಹಕರು ಕೊಟಕ್, ಹೆಚ್‌ಡಿಎಫ್‌ಸಿ, ಹೆಚ್‌ಎಸ್‌ಬಿಸಿ ಬ್ಯಾಂಕ್‌ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು 1,500ರೂ.ಗಳವರೆಗೂ ಡಿಸ್ಕೌಂಟ್‌ ಪಡೆದುಕೊಳ್ಳಬಹುದು. ಜೊತೆಗೆ ನೋಕಾಸ್ಟ್‌ ಇಎಮ್‌ಐ ಆಯ್ಕೆ ಸಹ ಇದೆ.

Best Mobiles in India

English summary
A situation has arisen today where nothing can be done without electricity. It is a common thing that most of the people face many problems, especially during the rainy season, the electricity problem will increase. Among these SARRVAD Portable Solar Power Generator S-150 is a good choice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+