ಈ ಜನಪ್ರಿಯ ವಾರ್ಷಿಕ ಅವಧಿಯ ಪ್ಲ್ಯಾನ್‌ಗಳಲ್ಲಿ ನಿಮ್ಮ ಆಯ್ಕೆ ಯಾವುದು?
ಭಾರತೀಯ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್ ಜಿಯೋ, ವಿ ಟೆಲಿಕಾಂ ಮತ್ತು ಏರ್‌ಟೆಲ್ ಟೆಲಿಕಾಂಗಳು ತಮ್ಮ ಗ್ರಾಹಕರಿಗೆ ಹಲವು ಆಕರ್ಷಕ ಯೋಜನೆಗಳನ್ನು ಲಭ್ಯ ಮಾಡಿವೆ. ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಈ ಟೆಲಿಕಾಂಗಳು ಭರ್ಜರಿ ಪ್ರಯೋಜನಗಳ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಆ ಪೈಕಿ ಕೆಲವು ಕಡಿಮೆ ಅವಧಿಯ ವ್ಯಾಲಿಡಿಟಿ ಪಡೆದಿದ್ದರೇ, ಮತ್ತೆ ಕೆಲವು ವಾರ್ಷಿಕ ವ್ಯಾಲಿಡಿಟಿಯ ಸೌಲಭ್ಯ ಹೊಂದಿವೆ. ಹಾಗೆಯೇ ಈ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಡೇಟಾ, ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಸಹ ಪಡೆದಿವೆ.

ಹೌದು, ಜಿಯೋ, ವಿ ಟೆಲಿಕಾಂ ಮತ್ತು ಏರ್‌ಟೆಲ್ ಈ ಮೂರು ಟೆಲಿಕಾಂಗಳು ವಾರ್ಷಿಕ ಅವಧಿಯ ಕೆಲವು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಆಯ್ಕೆಯನ್ನು ಹೊಂದಿವೆ. ಆ ಪೈಕಿ ಕೆಲವು ಪ್ಲ್ಯಾನ್‌ಗಳು ಪ್ರತಿದಿನ ಅಧಿಕ ಡೇಟಾ ಪ್ರಯೋಜನ ಪಡೆದಿದ್ದರೇ, ಇನ್ನು ಕೆಲವು ನಿಗದಿತ ಡೇಟಾ ಹೊಂದಿವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್, ಸೇರಿದಂತೆ ಕೆಲವು ಯೋಜನೆಗಳು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿವೆ. ಹಾಗಾದರೇ ಜಿಯೋ, ವಿ ಟೆಲಿಕಾಂ ಹಾಗೂ ಏರ್‌ಟೆಲ್ ಟೆಲಿಕಾಂಗಳ ವಾರ್ಷಿಕ ಪ್ರೀಪೇಯ್ಡ್ ಯೋಜನೆಗಳಲ್ಲಿ ಯಾವುದು ಅತ್ಯುತ್ತಮ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 2,595ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ರಿಪೇಯ್ಡ್ ಯೋಜನೆಯೊಂದಿಗೆ 2GB ದೈನಂದಿನ ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ವಾರಾಂತ್ಯದ ರೋಲ್‌ಓವರ್ ಡೇಟಾ ಪ್ರಯೋಜನಗಳನ್ನು ಯೋಜನೆ ನೀಡುತ್ತದೆ. ಯೋಜನೆಯು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯೊಂದಿಗೆ ಸ್ಟ್ರೀಮಿಂಗ್ ಪ್ರಯೋಜನಗಳು ಪ್ರೀಮಿಯಂ ಜೀ5 ಚಂದಾದಾರಿಕೆಗಳು ಮತ್ತು ವಿ ಚಲನಚಿತ್ರಗಳು ಮತ್ತು ಟಿವಿ ಪ್ರವೇಶವನ್ನು ಒಳಗೊಂಡಿವೆ.

ವಿ ಟೆಲಿಕಾಂ 2,399ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ರಿಪೇಯ್ಡ್ ಯೋಜನೆಯು 1.5GB ದೈನಂದಿನ ಡೇಟಾವನ್ನು ಅನಿಯಮಿತ ಕರೆಗಳೊಂದಿಗೆ ನೀಡುತ್ತದೆ ಮತ್ತು 365 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಯೋಜನೆಯು ಒಂದು ವರ್ಷದ ಜೀ5 ಪ್ರೀಮಿಯಂ, ಆಲ್-ನೈಟ್ ಹೈಸ್ಪೀಡ್ ಡೇಟಾ ಮತ್ತು ವಾರಾಂತ್ಯದ ರೋಲ್‌ಓವರ್ ಡೇಟಾ ಪ್ರಯೋಜನಕ್ಕೂ ಪ್ರವೇಶವನ್ನು ನೀಡುತ್ತದೆ.

ಏರ್‌ಟೆಲ್ 2498ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ಏರ್‌ಟೆಲ್ ಸಂಸ್ಥೆಯ 2498ರೂ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಯಾವುದೇ ನೆಟವರ್ಕ್ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100ಎಸ್‌ಎಮ್‌ಎಸ್ ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ ಹೆಲೊ ಟ್ಯೂನ್, ಏರ್‌ಟೆಲ್ ಎಕ್ಸ್‌ಟ್ರೀಮ್ ಸೇವೆಗಳು ದೊರೆಯುತ್ತವೆ.

ಏರ್‌ಟೆಲ್ 2798ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ಏರ್‌ಟೆಲ್ ಸಂಸ್ಥೆಯ 2798ರೂ. ಪ್ರೀಪೇಯ್ಡ್ ಪ್ಲ್ಯಾನ್ ಸಹ ವಾರ್ಷಿಕ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಯಾವುದೇ ನೆಟವರ್ಕ್ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಹಾಟ್ ಸ್ಟಾರ್ ವಿಐಪಿ ಜೊತೆಗೆ ಹೆಲೊ ಟ್ಯೂನ್, ಏರ್‌ಟೆಲ್ ಎಕ್ಸ್‌ಟ್ರೀಮ್ ಸೇವೆಗಳು ದೊರೆಯುತ್ತವೆ.

ಏರ್‌ಟೆಲ್ 1498ರೂ. ಪ್ರೀಪೇಯ್ಡ್ ಯೋಜನೆ ಪ್ರಯೋಜನಗಳು
ಏರ್‌ಟೆಲ್‌ನ 1498ರೂ. ಪ್ರೀಪೇಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಒಟ್ಟು 24GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೂ ಒಟ್ಟು 3600 ಉಚಿತ ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗುತ್ತದೆ. ಇನ್ನು ಹೆಚ್ಚುವರಿಯಾಗಿ ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್, ಹೆಲೊ ಟ್ಯೂನ್, ಏರ್‌ಟೆಲ್ ಆಪ್ ಸೇವೆ ಲಭ್ಯ.

ಜಿಯೋ 2599ರೂ. ಪ್ರೀಪೇಯ್ಡ್ ಯೋಜನೆ ಪ್ರಯೋಜನಗಳು
ಜಿಯೋದ 2,599ರೂ. ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಜಿಯೋ 2,399ರೂ. ಪ್ರೀಪೇಯ್ಡ್ ಯೋಜನೆ ಪ್ರಯೋಜನಗಳು
ರಿಲಾಯನ್ಸ್ ಜಿಯೋ ಟೆಲಿಕಾಂನ 2399ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್ ಪ್ರಯೋಜನ ಲಭ್ಯ.

ಜಿಯೋ 3,499ರೂ. ಪ್ರೀಪೇಯ್ಡ್ ಯೋಜನೆ ಪ್ರಯೋಜನಗಳು
ರಿಲಾಯನ್ಸ್ ಜಿಯೋ ಟೆಲಿಕಾಂನ 3,499ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 1095 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 2121ರೂ. ಪ್ರೀಪೇಯ್ಡ್ ಯೋಜನೆ ಪ್ರಯೋಜನಗಳು
ಜಿಯೋ 2121ರೂ. ಪ್ರೀಪೇಯ್ಡ್ ಯೋಜನೆಯು ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಪಡೆದಿದೆ. ಹಾಗೆಯೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನವನ್ನು ಒಳಗೊಂಡಿದ್ದು, ಜಿಯೋ ಟಿವಿ, ಜಿಯೋ ಸಿನಿಮಾ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಸೇವೆಯು ದೊರೆಯುತ್ತದೆ. ಇನ್ನು ಈ ಪ್ಲ್ಯಾನ್ 336 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.


Click it and Unblock the Notifications








