Home
ಸುದ್ದಿಜಾಲ

ಬಿಗ್ ವ್ಯಾಲಿಡಿಟಿ ಜೊತೆಗೆ ಅಧಿಕ ಡೇಟಾ ಬೇಕೆ?..ಈ ಪ್ಲ್ಯಾನ್‌ ಸೂಪರ್‌!

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಗ್ರಾಹಕರನ್ನು ಆಕರ್ಷಿಸಲು ಹಲವು ಅತ್ಯುತ್ತಮ ಯೋಜನೆ ಪರಿಚಯಿಸಿವೆ. ಅವುಗಳಲ್ಲಿ ಅಲ್ಪಾವಧಿ ವ್ಯಾಲಿಡಿ ಜೊತೆಗೆ ದೀರ್ಘಾವಧಿ ವ್ಯಾಲಿಡಿಟಿ ಪಡೆದ ಯೋಜನೆಗಳು ಇವೆ. ಆದರೆ ಬಿಗ್ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಡೇಟಾ ಪ್ರಯೋಜನ ಪಡೆದ ಯೋಜನೆಗಳು ಗ್ರಾಹಕರನ್ನು ಸೆಳೆಯುತ್ತವೆ.

ಹೌದು, ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಭಿನ್ನ ಪ್ಲ್ಯಾನ್‌ಗಳ ಆಯ್ಕೆ ಹೊಂದಿವೆ. ಕೆಲವರು ದೀರ್ಘಾವಧಿಯ ಪ್ಲ್ಯಾನ್ ಆಯ್ಕೆ ಮಾಡಿದರೆ, ಮತ್ತೆ ಕೆಲವರು ಅಲ್ಪಾವಧಿ ಪ್ಲ್ಯಾನ್ ರೀಚಾರ್ಜ್‌ಗೆ ಮುಂದಾಗುತ್ತಾರೆ. ಆದರೆ ಅನೇಕರು ಹೆಚ್ಚಿನ ದೈನಂದಿನ ಡೇಟಾ ಪ್ರಯೋಜನ ಹಾಗೂ ದೀರ್ಘ ವ್ಯಾಲಿಡಿಟಿ ಇರುವ ಪ್ಲ್ಯಾನ್‌ಗಳ ಕಡೆಗೆ ಹೆಚ್ಚು ಮನಸ್ಸು ಮಾಡುತ್ತಾರೆ. ಹಾಗಾದರೆ ಬಿಗ್ ವ್ಯಾಲಿಡಿಟಿ ಜೊತೆಗೆ ಅಧಿಕ ಡೇಟಾ ಪಡೆದ ಕೆಲವು ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಗ್ ವ್ಯಾಲಿಡಿಟಿ ಜೊತೆಗೆ ಅಧಿಕ ಡೇಟಾ ಬೇಕೆ?..ಈ ಪ್ಲ್ಯಾನ್‌ ಸೂಪರ್‌!

ಜಿಯೋ ಟೆಲಿಕಾಂ 2999ರೂ. ರೀಚಾರ್ಜ್‌ನ ಪ್ರಯೋಜನ ಮಾಹಿತಿ : ಜಿಯೋ ಟೆಲಿಕಾಂನ ಈ ರೀಚಾರ್ಜ್‌ ಪ್ಲ್ಯಾನ್ ವಾರ್ಷಿಕ ವ್ಯಾಲಿಡಿಟಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಚಂದಾದಾರರಿಗೆ ಸಿಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಡೈಲಿ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಜಿಯೋ ಆಪ್ಸ್‌ಗಳು ಲಭ್ಯ ಆಗಲಿವೆ.

ಏರ್‌ಟೆಲ್‌ನ 2999ರೂ. ರೀಚಾರ್ಜ್‌ನ ಪ್ರಯೋಜನ ಮಾಹಿತಿ : ಏರ್‌ಟೆಲ್‌ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ವ್ಯಾಲಿಡಿಟಿಯ ಪ್ಲ್ಯಾನ್ ಆಗಿದ್ದು, 365 ದಿನಗಳ ವಾಯ್ದೆ ಪಡೆದಿದೆ. ಈ ವೇಳೆ ಡೈಲಿ 2 GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದ್ದು, ಜೊತೆಗೆ ಧ್ವನಿ ಕರೆ ಪ್ರಯೋಜನ ದೊರೆಯುತ್ತದೆ.

ಹಾಗೆಯೇ ಗ್ರಾಹಕರು ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ಧ್ವನಿ ಕರೆಗಳ ಮಾಡುವ ಅವಕಾಶ ಸಿಗುತ್ತದೆ. ಡೈಲಿ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಇದಲ್ಲದೇ ಏರ್‌ಟೆಲ್ Xstream ಪ್ರೀಮಿಯಂ ಸೌಲಭ್ಯ, ವಿಂಕ್ ಮ್ಯೂಸಿಕ್, ಫಾಸ್ಟ್‌ ಟ್ಯಾಗ್ ಕ್ಯಾಶ್‌ಬ್ಯಾಕ್ ಪ್ರಯೋಜನ ಗ್ಯಾರಂಟಿ ಲಭ್ಯ.

ಬಿಗ್ ವ್ಯಾಲಿಡಿಟಿ ಜೊತೆಗೆ ಅಧಿಕ ಡೇಟಾ ಬೇಕೆ?..ಈ ಪ್ಲ್ಯಾನ್‌ ಸೂಪರ್‌!

ವಿ ಟೆಲಿಕಾಂನ 3099ರೂ. ಪ್ಲ್ಯಾನ್ ಪ್ರಯೋಜನ ಮಾಹಿತಿ : ಈ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಲಭ್ಯ.

ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿ ಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ. ಇದರೊಂದಿಗೆ ವಿ ಆಪ್ಸ್‌ಗಳು ಲಭ್ಯವಾಗಲಿವೆ.

ಜಿಯೋ 2023ರೂ. ಪ್ರಯೋಜನ ಮಾಹಿತಿ : ರಿಲಾಯನ್ಸ್ ಜಿಯೋ 2023 ರೂ. ಪ್ಲ್ಯಾನ್ ಒಟ್ಟು 252 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 630 GB ಡೇಟಾ ಲಭ್ಯ. ವೇಗದಲ್ಲಿ ಇಂಟರ್ನೆಟ್ ಇರಲಿದೆ. ಹಾಗೆಯೇ ಅನಿಯಮಿತ ಜಿಯೋ ದಿಂದ ಇತರೆ ನೆಟವರ್ಕ್ ಕರೆಗಳಿಗೂ ಅನಿಯಮಿತ ಕರೆ ಒಳಗೊಂಡಿದೆ.

Best Mobiles in India

English summary
These Jio, Airtel and Vi Prepaid Plans Offers BIg Validity with Daily Data. details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+