ಈ 5 ಪ್ಲ್ಯಾನ್‌ಗಳಲ್ಲಿ 5GB ಡೇಟಾ ಉಚಿತ!..ಮತ್ಯಾಕೆ ತಡ ರೀಚಾರ್ಜ್ ಮಾಡಿ!
ವಿ ಟೆಲಿಕಾಂ ದೇಶದ ತೃತೀಯ ದೊಡ್ಡ ಟೆಲಿಕಾಂ ಆಗಿ ಪೂರೈಕೆದಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಅಧಿಕ ಚಂದಾದಾರರನ್ನು ಆಕರ್ಷಿಸಲು ಸಂಸ್ಥೆಯು ಹಲವು ಸರ್ಕಸ್ ನಡೆಸಿದ್ದು, ಕೆಲವು ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸಿದೆ. ಕೆಲವೊಂದು ಅಧಿಕ ಡೇಟಾ ಕೊಡುಗೆಯ ಯೋಜನೆಗಳ ಮೂಲಕ ರಿಲಯನ್ಸ್ ಜಿಯೋ, ಏರ್‌ಟೆಲ್ ಟೆಲಿಕಾಂಗಳಿಗೆ ಸ್ಪರ್ಧೆ ನೀಡುವ ಯತ್ನ ನಡೆಸುತ್ತಾ ಸಾಗಿದೆ.
ಹೌದು, ವಿ ಟೆಲಿಕಾಂನ ಕೆಲವು ಯೋಜನೆಗಳು ಹೆಚ್ಚಿನ ಪ್ರಯೋಜನ ಪಡೆದಿವೆ. ಮುಖ್ಯವಾಗಿ ಕೆಲವು ಪ್ಲ್ಯಾನ್‌ಗಳು ದೈನಂದಿನ ಡೇಟಾ ಹೊರತುಪಡಿಸಿ ಎಕ್ಸ್‌ಟ್ರಾ 5GB ಉಚಿತ ಡೇಟಾ ಪ್ರಯೋಜನ ಒಳಗೊಂಡಿವೆ. ಹೀಗಾಗಿ ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆಗಳು ಗಮನ ಸೆಳೆಯುವಂತಿವೆ.

ಅಧಿಕ ಡೇಟಾ ಜೊತೆಗೆ ಈ ಯೋಜನೆಗಳು ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್ ಪ್ರಯೋಜನ ಹಾಗೂ ವಿ ಆಪ್‌ಗಳ ಸೌಲಭ್ಯ ಸಹ ಪಡೆದಿವೆ. ಹಾಗಾದರೆ 5GB ಉಚಿತ ಡೇಟಾ ಪ್ರಯೋಜನ ಒಳಗೊಂಡ ಪ್ರಮುಖ 5 ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ವಿ ಟೆಲಿಕಾಂ 299ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು : ವಿ ಟೆಲಿಕಾಂನ 299ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ದೈನಂದಿನ ಡೇಟಾ ಸೌಲಭ್ಯ ಲಭ್ಯವಾಗಲಿದೆ. ಜೊತೆಗೆ ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ ದೊರೆಯುತ್ತದೆ. ಹೆಚ್ಚುವರಿಯಾಗಿ ವಿಕೆಂಡ್ ಡೇಟಾ ರೋಲ್‌ಓವರ್ ಸಹ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 5GB ಡೇಟಾ ಸೌಲಭ್ಯ ಸಹ ಲಭ್ಯ.
ವಿ ಟೆಲಿಕಾಂ 359ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನ ಮಾಹಿತಿ ಇಲ್ಲಿದೆ : ವಿ ಟೆಲಿಕಾಂನ 359ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೈಲಿ ಡೇಟಾ ಪ್ರಯೋಜನ ಖಚಿತ. ಜೊತೆಗೆ ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ ದೊರೆಯುತ್ತದೆ. ಹೆಚ್ಚುವರಿಯಾಗಿ ವಿಕೆಂಡ್ ಡೇಟಾ ರೋಲ್‌ಓವರ್ ಸಹ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 5GB ಡೇಟಾ ಸೌಲಭ್ಯ ಸಹ ಪಡೆದಿದೆ.
ವಿ ಟೆಲಿಕಾಂ 479ರೂ. ಪ್ರಿಪೇಯ್ಡ್ ಪ್ಲ್ಯಾನ್ ಮಾಹಿತಿ : ವಿ ಟೆಲಿಕಾಂನ 479ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 56 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ದೈನಂದಿನ ಡೇಟಾ ಸೌಲಭ್ಯ ಲಭ್ಯವಾಗಲಿದೆ. ಜೊತೆಗೆ ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ ದೊರೆಯುತ್ತದೆ. ಹೆಚ್ಚುವರಿಯಾಗಿ ವಿಕೆಂಡ್ ಡೇಟಾ ರೋಲ್‌ಓವರ್ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 5GB ಡೇಟಾ ಸೌಲಭ್ಯ ಖಚಿತ.
ವಿ ಟೆಲಿಕಾಂ 319ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು : ವಿ ಟೆಲಿಕಾಂನ 319ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 30 ದಿನಗಳ ಪ್ರಯೋಜನವನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ದೈನಂದಿನ ಡೇಟಾ ಸೌಲಭ್ಯ ಲಭ್ಯವಾಗಲಿದೆ. ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ ಪಡೆದಿದೆ. ಹೆಚ್ಚುವರಿಯಾಗಿ ವಿಕೆಂಡ್ ಡೇಟಾ ರೋಲ್‌ಓವರ್ ಪ್ರಯೋಜನ ಸಹ ಖಚಿತ. ಇದರೊಂದಿಗೆ ಹೆಚ್ಚುವರಿಯಾಗಿ 5GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ.
ವಿ ಟೆಲಿಕಾಂ 666ರೂ. ಪ್ರಿಪೇಯ್ಡ್ ಪ್ಲ್ಯಾನ್ ಮಾಹಿತಿ : ವಿ ಟೆಲಿಕಾಂನ 666ರೂ. ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ದೈನಂದಿನ ಡೇಟಾ ಸೌಲಭ್ಯ ಲಭ್ಯವಾಗಲಿದೆ. ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ ದೊರೆಯುತ್ತದೆ. ಹೆಚ್ಚುವರಿಯಾಗಿ ವಿಕೆಂಡ್ ಡೇಟಾ ರೋಲ್‌ಓವರ್ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 5GB ಡೇಟಾ ಸೌಲಭ್ಯ ಖಚಿತ.


Click it and Unblock the Notifications








