Home
ಸುದ್ದಿಜಾಲ

iPhone Tricks: ನೀವು ಐಫೋನ್ ಬಳಕೆದಾರರೇ... ತಿಳಿಯಲೇ ಬೇಕಾದ ಸೀಕ್ರೆಟ್ ಫೀಚರ್ಸ್‌ ಇವು!

ಐಫೋನ್‌ಗಳು (iPhone) ಇಂದು ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡ ಕಮಾಲ್‌ ಮಾಡುತ್ತಿವೆ. ಅದರಲ್ಲೂ ಈ ಫೋನ್‌ಗಳು ಹೆಚ್ಚಿನ ಫೀಚರ್ಸ್‌ ಆಯ್ಕೆ ಪಡೆದಿದ್ದು, ಈ ಮೂಲಕ ಬಳಕೆದಾರರಿಗೆ ನವೀನ ಅನುಭವ ನೀಡುತ್ತವೆ.

ಹೌದು, ಐಫೋನ್‌ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳನ್ನು ಸಾಕಷ್ಟು ಜನರು ಖರೀದಿ ಮಾಡಿದ್ದಾರೆ. ಅದಾಗ್ಯೂ ಖರೀದಿ ಮಾಡಿದ ಅದೆಷ್ಟೋ ಜನರಿಗೆ ಐಫೋನ್‌ಗಳಲ್ಲಿ ಇರುವ ಸೀಕ್ರೆಟ್ ಫೀಚರ್ಸ್‌ (Secret Features) ಬಗ್ಗೆ ತಿಳಿದಿಲ್ಲ. ಈ ಫೀಚರ್ಸ್‌ ಬಗ್ಗೆ ನೀವು ತಿಳಿದುಕೊಂಡರೆ ಈಗ ಪಡುವ ಖುಷಿಗಿಂತ ಇನ್ನೂ ಹೆಚ್ಚಿನ ಖುಷಿ ಪಡೆಯಬಹುದಾಗಿದೆ. ಹಾಗಿದ್ರೆ, ಐಫೋನ್‌ಗಳಲ್ಲಿ ಇರುವ ಪ್ರಮುಖ ಸೀಕ್ರೆಟ್ ಫೀಚರ್ಸ್‌ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನೀವು ಐಫೋನ್ ಬಳಕೆದಾರರೇ... ತಿಳಿಯಲೇ ಬೇಕಾದ ಸೀಕ್ರೆಟ್ ಫೀಚರ್ಸ್‌ ಇವು!

ಕಾಂಟ್ಯಾಕ್ಟ್ ಪೋಸ್ಟರ್ ಶೇರ್‌: ಕಾಂಟ್ಯಾಕ್ಟ್ ವಿಭಾಗದಲ್ಲಿ ಹೊಸ ಅನುಭವ ಪಡೆಯಲು ಈ ಫೀಚರ್ಸ್‌ ಬಳಕೆ ಮಾಡಬಹುದಾಗಿದೆ. ಇದು ಫುಲ್‌ ಡಿಸ್‌ಪ್ಲೇ ಗಾತ್ರದ ಚಿತ್ರಗಳು ಮತ್ತು ಕಸ್ಟಮ್ ಫಾಂಟ್ ಮತ್ತು ವಿವಿಧ ಸೈಜ್‌ನಲ್ಲಿ ಕಾಂಟ್ಯಾಕ್ಟ್ ಮಾಹಿತಿಯನ್ನು ತೋರಿಸಲಿದೆ. ನಿಮ್ಮ ಕಾಂಟ್ಯಾಕ್ಟ್ ಪೋಸ್ಟರ್ ಅನ್ನು ನೀವು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಶೇರ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಕಾಂಟ್ಯಾಕ್ಟ್ ವಿಭಾಗಕ್ಕೆ ಹೋಗಿ ನಂತರ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ಕಾಂಟ್ಯಾಕ್ಟ್ ಪೋಸ್ಟರ್ ಮತ್ತು ಫೋಟೋವನ್ನು ಆಯ್ಕೆಮಾಡಿ ಬಳಿಕ ಶೇರ್‌ ಆಯ್ಕೆ ಮಾಡಿದ್ರೆ ಸಾಕು.

ಬ್ಯಾಟರಿ ಚಾರ್ಜ್ ಮಿತಿಗಿಳಿಸುವುದು: ನೀವು iOS 17 ಅಥವಾ ಹೊಸ ಆವೃತ್ತಿಯಲ್ಲಿ ರನ್‌ ಆಗುವ ಐಫೋನ್‌ ಬಳಕೆ ಮಾಡುತ್ತಿದ್ದರೆ ಈ ಸೌಲಭ್ಯ ಪಡೆಯಬಹುದಾಗಿದೆ. ಅಂದರೆ ಬ್ಯಾಟರಿ ಚಾರ್ಜ್ ಅನ್ನು 80% ಗೆ ಮಿತಿಗೊಳಿಸಬಹುದು. ಇದು ಬ್ಯಾಟರಿಯ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ ನಂತರ ಬ್ಯಾಟರಿ ಆಯ್ಕೆ ಮೇಲೆ ಕ್ಲಿಕ್‌ ಮಾಡಿದ್ರೆ ಅಲ್ಲಿ ಹೆಲ್ತ್ ಆಂಡ್ ಚಾರ್ಜಿಂಗ್ ಮೇಲೆ ಕ್ಲಿಕ್‌ ಮಾಡಿ. ಇದಾದ ಬಳಿಕ ನಿಮಗೆ ಚಾರ್ಜಿಂಗ್ ಆಪ್ಟಿಮೈಸೇಶನ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅಲ್ಲಿ 80% ಗೆ ಮಿತಿಗೊಳಿಸಬಹುದು.

ನೀವು ಐಫೋನ್ ಬಳಕೆದಾರರೇ... ತಿಳಿಯಲೇ ಬೇಕಾದ ಸೀಕ್ರೆಟ್ ಫೀಚರ್ಸ್‌ ಇವು!

ಒನ್‌ ಹ್ಯಾಂಡೆಂಡ್ ಮೋಡ್‌: ಒಂದು ಕೈನಲ್ಲೇ ಫೋನ್ ಅನ್ನು ಬಳಕೆ ಮಾಡಬೇಕು ಎಂದರೆ ಈ ಫೀಚರ್ಸ್‌ ಅನುಕೂಲ ಆಗಲಿದೆ. ನಿಮ್ಮ ಬೆರಳು ಚಿಕ್ಕದಾಗಿದ್ದು, ಡಿಸ್‌ಪ್ಲೇ ಸುತ್ತ ಚಲಿಸಲು ಸಾಧ್ಯವಿಲ್ಲ ಎಂದಾದರೆ ಡಿಸ್ಪ್ಲೇ ಕೆಳಗಿನಿಂದ ಕೆಳಕ್ಕೆ ಸ್ವೈಪ್ ಮಾಡುವ ಮೂಲಕ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿ. ಅದೇ ರೀತಿ ಫುಲ್‌ ಸ್ಕ್ರೀನ್ ಮೋಡ್‌ಗೆ ಮರಳಲು ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ.

ಸ್ಕ್ರೀನ್‌ಶಾಟ್‌ಗಳಿಗಾಗಿ ಬ್ಯಾಕ್ ಟ್ಯಾಪ್: ನಿಮ್ಮ ಐಫೋನ್‌ನ ರಿಯರ್‌ ಪ್ಯಾನಲ್‌ ಅನ್ನು ಟ್ಯಾಪ್ ಮಾಡುವ ಮೂಲಕ ಸ್ಕ್ರೀನ್‌ಶಾಟ್ ತೆಗೆಯಬಹುದಾಗಿದೆ. ಇದನ್ನು ಸಕ್ರಿಯಗೊಳಿಸಲು, ಸೆಟ್ಟಿಂಗ್ ವಿಭಾಗದಲ್ಲಿ ಆಕ್ಸೆಸಿಬಿಲಿಟಿ ಮೇಲೆ ಕ್ಲಿಕ್‌ ಮಾಡಿದ್ರೆ ಅಲ್ಲಿ ಟಚ್ ಅನ್ನು ಆಯ್ಕೆ ಮಾಡಿ ನಂತರ ಬ್ಯಾಕ್ ಟ್ಯಾಪ್ ಮೇಲೆ ಕ್ಲಿಕ್‌ ಮಾಡಬೇಕಾಗುತ್ತದೆ. ಇದಾದ ನಂತರದಲ್ಲಿ ಡಬಲ್ ಟ್ಯಾಪ್ ಮೇಲೆ ಕ್ಲಿಕ್‌ ಮಾಡಿ ನಂತರ ಸ್ಕ್ರೀನ್‌ಶಾಟ್ ಅನ್ನು ಅನ್ನು ಸಕ್ರಿಯಗೊಳಿಸಿ.

ಫ್ಲ್ಯಾಶ್‌ ಇಂಟೆನ್ಸಿಟಿ ಕಂಟ್ರೋಲ್: ನೀವು ಐಫೋನ್‌ನಲ್ಲಿ ಫ್ಲ್ಯಾಶ್‌ನ ಇಂಟೆನ್ಸಿಟಿಯನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಈ ಫೀಚರ್ಸ್‌ ತುರ್ತು ಟಾರ್ಚ್‌ಗೆ ಅನುಕೂಲ ಮಾಡಿಕೊಡಲಿದೆ. ಕಂಟ್ರೋಲ್‌ ಸೆಂಟರ್‌ನಲ್ಲಿ ಇರುವ ಫ್ಲಾಶ್ ಐಕಾನ್ ಮೇಲೆ ದೀರ್ಘವಾಗಿ ಒತ್ತಿ ಹಿಡಿದ್ರೆ ಇದು ಲಭ್ಯ ಆಗಲಿದ್ದು, ಲೈಟ್‌ನ ತೀವ್ರತೆಯನ್ನು ಸರಿಹೊಂದಿಸಲು ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಬಹುದಾಗಿದೆ.

ನೀವು ಐಫೋನ್ ಬಳಕೆದಾರರೇ... ತಿಳಿಯಲೇ ಬೇಕಾದ ಸೀಕ್ರೆಟ್ ಫೀಚರ್ಸ್‌ ಇವು!

ಫೋಟೋ ಅಥವಾ ವಿಡಿಯೋ ಮರೆಮಾಡಿ: ಫೋಟೋಗಳು ಮತ್ತು ವಿಡಿಯೋಗಳನ್ನು ಮರೆಮಾಡಲು ರಹಸ್ಯ ಫೋಲ್ಡರ್ ಅನ್ನು ಈ ಫೋನ್‌ ಹೊಂದಿದೆ. ಈ ಸೌಲಭ್ಯ ಪಡೆಯಲು ಯಾವ ಫೋಟೋ ಅಥವಾ ವಿಡಿಯೋವನ್ನು ಮರೆಮಾಡಲು ಮುಂದಾಗಿದ್ದೀರೋ ಅದನ್ನು ದೀರ್ಘಕಾಲ ಒತ್ತಿಹಿಡಿದುಕೊಳ್ಳಿ. ಅಲ್ಲಿ ಹೈಡ್‌ ಎಂಬ ಆಯ್ಕೆ ಕಾಣಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಸಾಕು. ಮರೆಮಾಡಲಾದ ಫೋಟೋ ಅಥವಾ ವಿಡಿಯೋಗಳನ್ನು ನೋಡಲು ಆಲ್ಬಮ್‌ ವಿಭಾಗಕ್ಕೆ ಹೋಗಿ ನಂತರ ಹಿಡನ್ ಆಯ್ಕೆ ಮೇಲೆ ಕ್ಲಿಕ್‌ ಮಾಡಿದ್ರೆ ಅಲ್ಲಿ ಫೇಸ್‌ಐಡಿ ಅಥವಾ ಟಚ್‌ ಐಡಿ ಬಳಕೆ ಮಾಡಿಕೊಂಡು ಅದನ್ನು ಅನ್‌ಲಾಕ್ ಮಾಡಬಹುದಾಗಿದೆ.

ನೀವು ಐಫೋನ್ ಬಳಕೆದಾರರೇ... ತಿಳಿಯಲೇ ಬೇಕಾದ ಸೀಕ್ರೆಟ್ ಫೀಚರ್ಸ್‌ ಇವು!

ಮ್ಯೂಸಿಕ್‌ ಅನ್ನು ಗುರುತಿಸಿ: ಐಫೋನ್‌ಗಳಲ್ಲಿ ಇನ್‌ಬಿಲ್ಟ್ ಶಾಝಮ್ (Shazam) ಆಪ್‌ ಇದ್ದು, ಇದು ಮ್ಯೂಸಿಕ್‌ ಅನ್ನು ತ್ವರಿತವಾಗಿ ಗುರುತಿಸಲು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಕಂಟ್ರೋಲ್ ಸೆಂಟರ್‌ಗೆ ಹೋಗಿ ಮತ್ತು ಹಾಡನ್ನು ಗುರುತಿಸಲು ಶಾಝಮ್ ಐಕಾನ್ ಅನ್ನು ಆಯ್ಕೆ ಮಾಡಿ. ಇದಕ್ಕೆ ಸಕ್ರಿಯ ಇಂಟರ್ನೆಟ್ ಕನೆಕ್ಟಿವಿಟಿ ಅಗತ್ಯವಿದೆ ಎಂಬುದು ನಿಮ್ಮ ಗಮನಕ್ಕೆ ಇರಲಿ.

Best Mobiles in India

English summary
Who doesn't like iPhone? There is a huge demand for these phones. However, the secret features of these phones that many people don't know about are mentioned here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+