ಪ್ರಸ್ತುತ ಭಾರಿ ಬೆಲೆ ಇಳಿಕೆ ಕಂಡಿರುವ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ!

|

ಮೊಬೈಲ್ ಮಾರುಕಟ್ಟೆಗೆ ಹಲವು ನೂತನ ಫೋನ್‌ಗಳು ಎಂಟ್ರಿ ನೀಡುತ್ತಲೇ ಇವೆ. ಅವುಗಳಲ್ಲಿ ಕೆಲವು ಫೋನ್‌ಗಳು ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದರೇ, ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಪ್ರೈಸ್‌ಟ್ಯಾಗ್‌ನಿಂದ ಗ್ರಾಹಕರಿಗೆ ಮೋಡಿ ಮಾಡುತ್ತವೆ. ಇನ್ನು ಕೆಲವೊಂದು ವಿಶೇಷ ಸೇಲ್‌ ಹಾಗೂ ಇ-ಕಾಮರ್ಸ್‌ ತಾಣಗಳಲ್ಲಿ ಭರ್ಜರಿ ಡಿಸ್ಕೌಂಟ್‌ ಸಹ ಲಭ್ಯವಾಗುತ್ತವೆ. ಅದೇ ರೀತಿ ಪ್ರಸ್ತುತ ಕೆಲವು ಫೋನ್‌ಗಳು ಭಾರಿ ರಿಯಾಯಿತಿ ಪಡೆದಿವೆ.

ಸ್ಮಾರ್ಟ್‌ಫೋನ್‌ಗಳು

ಹೌದು, ಕಳೆದ ಕೆಲವು ತಿಂಗಳುಗಳಲ್ಲಿ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಬೆಲೆ ಏರಿಕೆ ಕಂಡಿವೆ. ಹಾಗೆಯೇ ಇತರೆ ಕೆಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಬೆಲೆ ಇಳಿಕೆಯನ್ನು ಪಡೆದಿವೆ. ಬೆಲೆ ಇಳಿಕೆ ಕಂಡ ಲಿಸ್ಟ್‌ನಲ್ಲಿ ಸ್ಯಾಮ್‌ಸಂಗ್, ಒನ್‌ಪ್ಲಸ್‌, ಒಪ್ಪೋ, ರಿಯಲ್‌ ಮಿ, ಶಿಯೋಮಿ ಮತ್ತು ವಿವೋ ಕಂಪನಿಗಳ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಹಾಗಾದರೇ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ದರ ಕಡಿತ ಕಂಡಿವೆ ಎಂಬುದರ ಬಗ್ಗೆ ತಿಳಿಯಲು ಮುಂದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್‌ಸಂಗ್‌ನ ದುಬಾರಿ ಫ್ಲ್ಯಾಗ್‌ಶಿಪ್‌ ಆಗಿರುವ ಗ್ಯಾಲಕ್ಸಿ Z ಫ್ಲಿಪ್ ಫೋನ್ ಇದೀಗ 7,000 ರೂ.ಗಳ ರಿಯಾಯಿತಿ ಪಡೆದಿದೆ. ಇನ್ನು ಈ ಫೋನ್ ಅನ್ನು 1,15,999 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ 1,08,999ರೂ.ಗಳಿಗೆ ಲಭ್ಯವಾಗಲಿದೆ. ಈ ಫೋನ್ ಫೋಲ್ಡೆಬಲ್ ರಚನೆಯನ್ನು ಪಡೆದಿದ್ದು, ಆಕರ್ಷಕ ನೋಟವನ್ನು ಪಡೆದಿದೆ.

ಒನ್‌ಪ್ಲಸ್ 7T ಪ್ರೊ

ಒನ್‌ಪ್ಲಸ್ 7T ಪ್ರೊ

ಒನ್‌ಪ್ಲಸ್ ಕಂಪನಿಯ ಇತ್ತೀಚಿನ ಒನ್‌ಪ್ಲಸ್ 7T ಪ್ರೊ ಫೋನ್‌ 7000ರೂ. ಬೆಲೆ ಇಳಿಕೆ ಕಂಡಿದ್ದು, ಈಗ 47,999 ರೂ.ಗಳಲ್ಲಿ ಲಭ್ಯವಿದೆ. ಈ ಫೋನ್ 8GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಒಳಗೊಂಡಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855+ ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಮ್ ಬೆಂಬಲ ಪಡೆದಿದೆ.

ಒಪ್ಪೊ ರೆನೋ 3 ಪ್ರೊ

ಒಪ್ಪೊ ರೆನೋ 3 ಪ್ರೊ

ಮೊಬೈಲ್‌ಗಳ ಮೇಲಿನ ಜಿಎಸ್‌ಟಿ ಶುಲ್ಕ ಹೆಚ್ಚಳದ ನಂತರ ಒಪ್ಪೊ ರೆನೋ 3 ಪ್ರೊ ಬೆಲೆಯನ್ನು 31,990 ರೂ.ಗಳಿಗೆ ಹೆಚ್ಚಿಸಲಾಯಿತು. ಹಾಗೆಯೇ ಕಂಪನಿಯು ಈ ಫೋನ್‌ ಬೆಲೆಯಲ್ಲಿ ಇತ್ತೀಚಿಗೆ 2,000 ರೂ.ಗಳ ಇಳಿಕೆ ಮಾಡಿದ್ದು, ಈಗ 29,990 ರೂ.ಗಳಿಗೆ ಲಭ್ಯ.

ವಿವೋ S1 ಪ್ರೊ

ವಿವೋ S1 ಪ್ರೊ

ವಿವೊ ಕಂಪನಿಯು ಕೂಡ ತನ್ನ ವಿವೋ S1 ಪ್ರೊ ಫೋನ್ ಬೆಲೆಯಲ್ಲಿ 1000ರೂ. ಇಳಿಕೆ ಮಾಡಿದ್ದು, ಈ ಫೋನ್ ಈಗ 19,990 ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದೆ. ಇನ್ನು ಫೋನ್ 4500mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 ಪ್ರೊಸೆಸರ್ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A50s

ಸ್ಯಾಮ್‌ಸಂಗ್ ಗ್ಯಾಲಕ್ಸಿ A50s

ಜನಪ್ರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ A50s ಸಹ ಭಾರಿ ಬೆಲೆ ಇಳಿಕೆ ಕಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಮಾದರಿಗಳ ಆಯ್ಕೆಗಳನ್ನು ಒಳಗೊಂಡಿದ್ದು, 4GB RAM ವೇರಿಯಂಟ್ 18,599ರೂ.ಗಳ ಬೆಲೆಯನ್ನು ಹೊಂದಿದೆ. ಹಾಗೆಯೇ 6GB RAM ವೇರಿಯಂಟ್ 20,561ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಆಕ್ಟಾಕೋರ್‌ Exynos 9611 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲ ಪಡೆದಿದೆ.

Best Mobiles in India

English summary
These smartphones are across brands and comprise both new as well as those that are not-so-new.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X