Home
ಸುದ್ದಿಜಾಲ

ಈ ಫೋನ್‌ಗಳಲ್ಲಿದೆ 7000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ; ಅದೂ ಸಹ 20 ಸಾವಿರದೊಳಗೆ!

ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಲಭ್ಯ ಆಗುತ್ತಿದ್ದು, ಈ ನಡುವೆ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಬ್ಯಾಟರಿ ವಿಷಯಕ್ಕೂ ಹೆಚ್ಚಿನ ಗಮನ ನೀಡಿವೆ. ಅದರಲ್ಲೂ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಎಲ್ಲಾ ಫೋನ್‌ಗಳಲ್ಲೂ ಸಾಮಾನ್ಯವಾಗಿದ್ದು, 7000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಕೆಲವೇ ಫೋನ್‌ಗಳು ಹೊಂದಿವೆ.

ಹೌದು, ಸ್ಮಾರ್ಟ್‌ಫೋನ್‌ ಅನ್ನು ತಯಾರು ಮಾಡುವಾಗ ಅವುಗಳನ್ನು ಹಗುರ ಮಾಡುವ ಉದ್ದೇಶದಿಂದ ಬ್ಯಾಟರಿ ಹಾಗೂ ಇತರೆ ವಿಚಾರಕ್ಕೆ ಸ್ವಲ್ಪ ಕಡಿವಾಣ ಹಾಕಲಾಗುತ್ತದೆ. ಆದರೆ ನಾವಿಲ್ಲಿ ತಿಳಿಸಲು ಮುಂದಾಗಿರುವ ಫೋನ್‌ಗಳು ಬರೋಬ್ಬರಿ 7000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇವು ನೋಡಲು ಅತ್ಯಾಕರ್ಷಕವಾಗಿದ್ದು, ಅತ್ಯುತ್ತಮ ಫೀಚರ್ಸ್‌ ಆಯ್ಕೆ ಸಹ ಪಡೆದುಕೊಂಡಿವೆ. ಹಾಗಿದ್ರೆ, ಈ ಫೋನ್‌ಗಳ ಫೀಚರ್ಸ್‌ ಹಾಗೂ ಬೆಲೆ ವಿವರ ಗಮನಿಸೋಣ ಬನ್ನಿ.

ಈ ಫೋನ್‌ಗಳಲ್ಲಿದೆ 7000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ; ಅದೂ ಸಹ 20 ಸಾವಿರದೊಳಗೆ!

ಟೆಕ್ನೋ ಪೋವಾ 3:ಈ ಸ್ಮಾರ್ಟ್‌ಫೋನ್ 6.9ಇಂಚಿನ IPS LCDಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಪಡೆದಿದೆ. ಇದರೊಂದಿಗೆ ಮೀಡಿಯಾ ಟೆಕ್ ಹಿಲಿಯೊ G88 ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, 4GBRAM ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಾಗಿದೆ ಇನ್ನು 50MP+2MP ರಿಯರ್‌ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, 7000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಈ ಫೋನ್‌ ಬೆಲೆ 10,598ರೂ.ಗಳು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M51: ಈ ಸ್ಮಾರ್ಟ್‌ಫೋನ್ 6.7ಇಂಚಿನ ಸೂಪರ್ ಅಮೋಲೆಡ್‌ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದೆ. ಇನ್ನು ಸ್ನಾಪ್‌ಡ್ರಾಗನ್ 730G ಪ್ರೊಸೆಸರ್ ಬಲ ಪಡೆದುಕೊಂಡಿದ್ದು, 6GB RAM ಆಯ್ಕೆ ಹೊಂದಿದೆ. ಉಳಿದಂತೆ 64+12+5+5MP ನ ಕ್ವಾಡ್ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿದ್ದು, 32MP ಸೆಲ್ಫಿ ಕ್ಯಾಮೆರಾದ ಮೂಲಕ ವಿಶೇಷ ಎನಿಸಿದೆ. ಈ ಫೋನ್‌ ಸಹ 7000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದರ ಬೆಲೆ 17,999ರೂ.ಗಳಾಗಿದೆ.

ಟೆಕ್ನೋ ಪೋವಾ 2: ಈ ಫೋನ್‌ 6.95 ಇಂಚಿನ IPS LCDಡಿಸ್‌ಪ್ಲೇ ಹೊಂದಿದ್ದು, ಇದು 60Hz ರಿಫ್ರೆಶ್ ರೇಟ್ ಪಡೆದಿದೆ. ಜೊತೆಗೆ ಮೀಡಿಯಾ ಟೆಕ್ ಹಿಲಿಯೊG85 ಪ್ರೊಸೆಸರ್‌ನಲ್ಲಿ ಇದು ಕಾರ್ಯನಿರ್ವಹಿಸಲಿದ್ದು, 4GBRAM ಆಯ್ಕೆ ಪಡೆದುಕೊಂಡಿದೆ. ಇನ್ನು 48+2+2+2MP ಕ್ವಾಡ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು,8MP ಸೆಲ್ಫಿ ಕ್ಯಾಮೆರಾ ಹೊಂದಿದೆ ಉಳಿದಂತೆ ಈ ಫೋನ್‌ ಸಹ 7000mAh ಸಾಮರ್ಥ್ಯದ ಬ್ಯಾಟರಿಯಿಂದ ಕಾಣಿಸಿಕೊಂಡಿದ್ದು ಇದು ಫ್ಲ್ಯಾಶ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದರ ಬೆಲೆ 10,499ರೂ.ಗಳು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62: ಈ ಸ್ಮಾರ್ಟ್‌ಫೋನ್ 6.7ಇಂಚಿನ ಸೂಪರ್ ಅಮೋಲೆಡ್‌ ಪ್ಲಸ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 60Hz ರಿಫ್ರೆಶ್‌ ರೇಟ್‌ ಪಡೆದಿದೆ. ಜೊತೆಗೆ ಸ್ಯಾಮ್‌ಸಂಗ್‌ ಎಕ್ಸಿನೋಸ್‌9 ಆಕ್ಟಾ ಆಕ್ಟಾ ಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ 64+12+5+5 MP ರಿಯರ್‌ ಹಾಗೂ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ ಸಹ 7000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 25W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದರ ಬೆಲೆ 23,999ರೂ.ಗಳು.

ಈ ಫೋನ್‌ಗಳಲ್ಲಿದೆ 7000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ; ಅದೂ ಸಹ 20 ಸಾವಿರದೊಳಗೆ!

ಇತ್ತೀಚಿಗೆ ಈ ಫೋನ್‌ ಅನ್ನು ಲಾಂಚ್‌ ಮಾಡಲಾಗಿದ್ದು, ಇದು 6.8ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದಿದೆ. ಜೊತೆಗೆ ಯುನಿಸೊಕ್ ಆಕ್ಟಾ ಕೋರ್ ಪ್ರೊಸೆಸರ್ ಬಲ ಪಡೆದಿರುವ ಈ ಫೋನ್ 13+0.3MP ರಿಯರ್‌ 8MP ಸೆಲ್ಫಿ ಕ್ಯಾಮೆರಾದ ಮೂಲಕ ಆಕರ್ಷಕವಾಗಿದೆ. ಜೊತೆಗೆ 4GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಇದೆ. ಈ ಫೋನ್‌ನ ಸಾಮಾನ್ಯ ದರ 8,000ರೂ.ಗಳು.

Best Mobiles in India

English summary
These smartphones are packed with 7000mAh capacity battery and are available under 20 thousand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+