Home
ಸುದ್ದಿಜಾಲ

ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿವೆ ಈ ಸ್ಮಾರ್ಟ್‌ಫೋನ್‌ಗಳು...

ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಮುಂದಾಗಿದ್ರೆ ನೀವು ಕೆಲವು ದಿನಗಳ ವರೆಗೆ ಕಾಯಿರಿ. ಯಾಕೆಂದರೆ ಮುಂದಿನ ದಿನಗಳಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳು (Smartphones) ಲಾಂಚ್‌ ಆಗಲಿವೆ. ಸ್ಮಾರ್ಟ್‌ಫೋನ್‌ ಕಂಪೆನಿಗಳು ಎರಡು ಸಮ್ಮೇಳನಗಳನ್ನು ಚೀನಾದಲ್ಲಿ ನಡೆಸಲಿದ್ದು, ಉಳಿದ ಎರಡರಲ್ಲಿ ಒಂದನ್ನು ಭಾರತದಲ್ಲಿ ಆಯೋಜಿಸಲಾಗುತ್ತದೆ. ಇನ್ನೊಂದು, ಜಾಗತಿಕವಾಗಿ ನಡೆಯಲಿದೆ.

ಹೌದು, ಈ ಕಾರ್ಯಕ್ರಮಗಳಲ್ಲಿ ಹೊಚ್ಚಹೊಸ ಫೋನ್‌ಗಳನ್ನು ಘೋಷಣೆ ಮಾಡಲಾಗುತ್ತದೆ. ಚೀನೀ ಈವೆಂಟ್‌ನಲ್ಲಿ ಐಕ್ಯೂ ಹಾಗೂ ಒಪ್ಪೋ ಫೋನ್‌ಗಳಾದ ನಿಯೋ ಮತ್ತು ರೆನೋ ಫೋನ್‌ಗಳು ಈ ವೇಳೆ ಕಾಣಿಸಿಕೊಳ್ಳಲಿವೆ. ಜಾಗತಿಕ ಈವೆಂಟ್‌ನಲ್ಲಿ ಪೊಕೊ ತನ್ನ ಮುಂದಿನ-ಜನ್ ಎಫ್ ಸರಣಿಯ ಫೋನ್ ಅನ್ನು ಲಾಂಚ್‌ ಮಾಡಲಿದೆ ಎಂದು ತಿಳಿದುಬಂದಿದೆ ಹಾಗೆಯೇ ಭಾರತೀಯ ಈವೆಂಟ್‌ ವಿಚಾರಕ್ಕೆ ಬಂದರೆ ಇಲ್ಲಿ ರಿಯಲ್‌ಮಿ ಜಿಟಿ ಮಾಡೆಲ್ ಅನ್ನು ಅನಾವರಣ ಮಾಡಲಿದೆ. ಹಾಗಿದ್ರೆ ಬನ್ನಿ ಯಾವೆಲ್ಲಾ ಫೋನ್‌ಗಳು ಲಾಂಚ್‌ ಆಗುತ್ತವೆ?, ಅವುಗಳ ಫೀಚರ್ಸ್‌ ಏನು ಅನ್ನೋದನ್ನು ನೋಡೋಣ.

ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿವೆ ಈ ಸ್ಮಾರ್ಟ್‌ಫೋನ್‌ಗಳು...

ಐಕ್ಯೂ ನಿಯೋ 9s ಪ್ರೊ: ಐಕ್ಯೂ ನಿಯೋ 9s ಪ್ರೊ (IQOO Neo 9s Pro) ಅನ್ನು ಮೇ 20 ರಂದು (ಸೋಮವಾರ) ಲಾಂಚ್‌ ಆಗಲಿದೆ. ಅದರ ಬಹುತೇಕ ಎಲ್ಲಾ ಫೀಚರ್ಸ್‌ ಅಧಿಕೃತ ಟೀಸರ್‌ಗಳು ಮತ್ತು ಸೋರಿಕೆಗಳ ಮೂಲಕ ಹೊರಬಂದಿವೆ. ಈ ಹ್ಯಾಂಡ್‌ಸೆಟ್‌ನ ಮುಖ್ಯ ಹೈಲೈಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ಲಸ್ ಚಿಪ್‌ಸೆಟ್ ಆಗಿರುತ್ತದೆ. ಇದು 144Hz ರಿಫ್ರೆಶ್ ದರ ಮತ್ತು HDR10+ ಬೆಂಬಲದೊಂದಿಗೆ 6.78-ಇಂಚಿನ 1.5K OLED ಡಿಸ್‌ಪ್ಲೇಯನ್ನು ಸಹ ಹೊಂದಿದೆ.

ರಿಯಲ್‌ಮಿ ಜಿಟಿ 6T: ಈ ಸ್ಮಾರ್ಟ್‌ಫೋನ್ (Realme GT 6T) ಭಾರತದಲ್ಲಿ ಮೇ 22 ರಂದು (ಬುಧವಾರ) ಲಾಂಚ್‌ ಆಗಲಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಪ್ಲಸ್‌ ಜನ್ 3 ಚಿಪ್‌ಸೆಟ್, 6.78 ಇಂಚಿನ 1.5K 120Hz LTPO OLED ಡಿಸ್‌ಪ್ಲೇ ಹಾಗೂ 50 ಮೆಗಾಪಿಕ್ಸೆಲ್‌ ಸೋನಿ IMX882 ಪ್ರಾಥಮಿಕ ಕ್ಯಾಮೆರಾ, 5,500mAh ಸಾಮರ್ಥ್ಯದ ಬ್ಯಾಟರಿ ಮತ್ತು 120W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ ಎಂದು ಲೀಕ್‌ ಮಾಹಿತಿಯಲ್ಲಿ ಉಲ್ಲೇಖವಾಗಿದೆ.

ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿವೆ ಈ ಸ್ಮಾರ್ಟ್‌ಫೋನ್‌ಗಳು...

ಒಪ್ಪೋ ರೆನೋ 12 ಸರಣಿ: ಈ ಫೋನ್ (Oppo Reno 12 series) ಚೀನಾದಲ್ಲಿ ಮೇ 23 ರಂದು (ಗುರುವಾರ) ಲಾಂಚ್‌ ಆಗಲಿದೆ. ಈ ವಿಭಾಗದಲ್ಲಿ ಒಪ್ಪೋ ರೆನೋ 12 ಮತ್ತು ಒಪ್ಪೋ ರೆನೋ 12 ಪ್ರೊ ಎಂಬ ಎರಡು ಡಿವೈಸ್‌ಗಳು ಕಾಣಿಸಿಕೊಳ್ಳಲಿವೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8250 ಪ್ರೊಸೆಸರ್‌ ಬಲ ಪಡೆದಿದ್ದು, ಮತ್ತೊಂದು ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9200 ಪ್ಲಸ್ ಚಿಪ್ ಅನ್ನು ಹೊಂದಿರುತ್ತದೆ.

ಪೊಕೊ F6 ಸರಣಿ: ಈ ಸ್ಮಾರ್ಟ್‌ಫೋನ್ (Poco F6 series) ಮೇ 23 ರಂದು (ಗುರುವಾರ) ಲಾಂಚ್‌ ಆಗಲಿದೆ.ಈ ಶ್ರೇಣಿಯಲ್ಲಿ ಪೊಕೊ F6 ಮತ್ತು ಪೊಕೊ F6 ಪ್ರೊ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ. ಲೀಕ್‌ ಮಾಹಿತಿ ಪ್ರಕಾರ ಕ್ರಮವಾಗಿ ರೆಡ್ಮಿ ಟರ್ಬೋ 3 ಮತ್ತು ರೆಡ್ಮಿ K70 ನ ಮರುಬ್ರಾಂಡ್ ಆವೃತ್ತಿಗಳಾಗಿವೆ ಎನ್ನಲಾಗಿದೆ. ಹಾಗೆಯೇ ಪೊಕೊ F6 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ ಬಲ ಪಡೆದಿದ್ದು, 6.67-ಇಂಚಿನ 1.5K 120Hz OLED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ.

ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿವೆ ಈ ಸ್ಮಾರ್ಟ್‌ಫೋನ್‌ಗಳು...

ಮತ್ತೊಂದೆಡೆ, ಪೊಕೊ F6 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6.67-ಇಂಚಿನ QHD+ OLED ಡಿಸ್‌ಪ್ಲೇ, 50 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 120W ವೈರ್ಡ್ ಚಾರ್ಜಿಂಗ್ ಬೆಂಬಲವನ್ನು ಈ ಫೋನ್‌ ಹೊಂದಿರಲಿದೆ ಎಂದು ತಿಳಿದುಬಂದಿದೆ.

Best Mobiles in India

English summary
In a few days, various smartphones such as IQOO Neo 9s Pro, Realme GT 6T, Oppo Reno 12 series, Poco X6 series, Poco F6 Pro smartphone will be launched globally including in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+