10,000ರೂ.ಒಳಗೆ ಲಭ್ಯ ಇರುವ ಟ್ರಿಪಲ್ ಕ್ಯಾಮೆರಾ ಫೋನ್‌ಗಳು
ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ವಿವಿಧ ರೀತಿಯ ಫೀಚರ್ಸ್‌ಗಳು ಬಹಳ ಮಂದಿಗೆ ಇಷ್ಟವಾದರೂ ಭಾರತದಲ್ಲಿ ಹೆಚ್ಚಾಗಿ ಕ್ಯಾಮೆರಾ ಫೀಚರ್ಸ್ ಹಾಗೂ ಬ್ಯಾಟರಿ ಸಾಮರ್ಥ್ಯ ಮತ್ತು ಅಗ್ಗದ ಬೆಲೆ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತದೆ. ಅದರಂತೆ ನೀವು ಬಜೆಟ್ ಬೆಲೆಯಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದು.
ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ವಿವಿಧ ಫೀಚರ್ಸ್ ಇದ್ದರೂ ಸಹ ಕ್ಯಾಮೆರಾವನ್ನು ಬಳಕೆ ಮಾಡುವಷ್ಟು ಬೇರೆ ಯಾವ ಫೀಚರ್ಸ್ ಅನ್ನು ಸಾಮಾನ್ಯರು ಬಳಸುವುದಿಲ್ಲ. ಈ ಕಾರಣಕ್ಕಾಗಿಯೇ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಈ ನಡುವೆ ನೀವು ಕೇವಲ 10,000ರೂ. ಗಳಗೆ ಲಭ್ಯ ಇರುವ ಈ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದು.

ಮೊಟೊ G13: ಮೊಟೊ G13 ಸ್ಮಾರ್ಟ್‌ಫೋನ್ 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 90 Hz ರಿಫ್ರೆಶ್ ರೇಟ್‌ಗ ನೀಡಲಿದೆ. ಹಾಗೆಯೇ ಮೀಡಿಯಾ ಟೆಕ್ ಹಿಲಿಯೊ G85 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM ಆಯ್ಕೆ ಹೊಂದಿದೆ. ಇದರೊಂದಿಗೆ 50 MP+2 MP+2 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 8MP ಸೆಲ್ಫಿ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಫೋನ್ ಅನ್ನು ನೀವು 9,999 ರೂ. ಗಳಿಗೆ ಖರೀದಿ ಮಾಡಬಹುದು.
ನೋಕಿಯಾ C31 : ಈ ಸ್ಮಾರ್ಟ್‌ಫೋನ್ 6.7 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಯುನಿಸೋಕ್ SC9863A ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4 GB RAM ನೊಂದಿಗೆ ಕಾಣಿಡಿಕೊಂಡಿರುವ ಈ ಫೋನ್ 13MP+ 2MP+2MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ ರಚನೆ ಹೊಂದಿದೆ. ಇದಕ್ಕಾಗಿ ಎಲ್ಇಡಿ ಪ್ಲ್ಯಾಶ್ ಆಯ್ಕೆ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ನೀವು 9,998 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F13: ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ 6.6 ಇಂಚಿನ PLS LCD ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಈ ಫೋನ್ ಸ್ಯಾಮ್‌ಸಂಗ್ ಎಕ್ಸಿನೋಸ್ 8ಅಕ್ಟಾ 850 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. 4GB RAM ಆಯ್ಕೆ ಹೊಂದಿದ್ದು, 50MP 5MP+2MP ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹಾಗೂ 8MP ಸೆಲ್ಫಿ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಅನ್ನು ನೀವು 9,699ರೂ. ಗಳಿಗೆ ಕೊಂಡುಕೊಳ್ಳಬಹುದು.
ಮೊಟೊ E32s: ಈ ಸ್ಮಾರ್ಟ್‌ಫೋನ್ 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ಹೊಂದಿದೆ. ಜೊತೆಗೆ ಮೀಡಿಯಾ ಟೆಕ್ ಹಿಲಿಯೊ G37 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 3GB RAM ಆಯ್ಕೆ ಪಡೆದುಕೊಂಡಿದೆ. ಪ್ರಮುಖವಾಗಿ ಎಲ್ಇಡಿ ಫ್ಲ್ಯಾಶ್ ಸೌಲಭ್ಯದೊಂದಿಗೆ 16MP+2MP+2MP ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹಾಗೂ 8MP ಸೆಲ್ಫಿ ಕ್ಯಾಮೆರಾ ರಚನೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಅನ್ನು 8,489ರೂ. ಗಳಿಗೆ ಖರೀದಿ ಮಾಡಬಹುದು.

ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್ 6.6 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಹಾಗೆಯೇ ಯುನಿಸೊಕ್ T612 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 4GB RAM ಹೊಂದಿದೆ. ಇನ್ನು ಎಲ್ಇಡಿ ಫ್ಲ್ಯಾಶ್ ನೊಂದಿಗೆ 50MP+2MP +03MP ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹಾಗೂ 8MP ಸೆಲ್ಫಿ ಕ್ಯಾಮೆರಾದೊಂದಿಗೆ ಪ್ಯಾಕ್ ಆಗಿದೆ. ಇದನ್ನು ನೀವು 9,999ರೂ. ಗಳಿಗೆ ಕೊಂಡುಕೊಳ್ಳಬಹುದು.


Click it and Unblock the Notifications








