ಈ ತಿಂಗಳು ಲಾಂಚ್ ಆಗುವ ಫೋನ್‌ಗಳಿವು: ಲಿಸ್ಟ್ ಇಲ್ಲಿದೆ ನೋಡಿ!
ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಭಿನ್ನ ಆಲೋಚನೆಗಳಿಗೆ ತಕ್ಕಂತೆ ಲಭ್ಯ ಆಗುತ್ತಿದ್ದು, ಹೊಸ ಸುಧಾರಿತ ಫೀಚರ್ಸ್ ಮೂಲಕ ಜನರ ಮನ ಸೆಳೆಯುತ್ತಿವೆ. ಈ ನಡುವೆ ಈ ತಿಂಗಳು ಹಲವಾರು ಸ್ಮಾರ್ಟ್‌ಫೋನ್‌ಗಳಿ ಲಾಂಚ್ ಆಗುತ್ತಿದ್ದು, ಈ ಕ್ಷಣಕ್ಕೆ ಫೋನ್ ಖರೀದಿ ಮಾಡಬೇಕು ಎಂದುಕೊಂಡಿರುವವರು ಸ್ವಲ್ಪ ಸಮಯ ಕಾದರೆ ಉತ್ತಮ.
ಹೌದು, ಜುಲೈನಲ್ಲಿ ಅಂದರೆ ಈ ತಿಂಗಳಲ್ಲಿ ಹಲವಾರು ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ. ಈ ಫೋನ್‌ಗಳು ಕೈಗೆಟಕುವ ಬೆಲೆಯಿಂದ ಹಿಡಿದು ದುಬಾರಿ ಬೆಲೆ ವರೆಗೂ ಲಭ್ಯ ಇವೆ. ಜೊತೆಗೆ ಹೊಸ ಶೈಲಿ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನು ಈ ಫೋನ್‌ಗಳಲ್ಲಿ ನಿರೀಕ್ಷಿಸಬಹುದು. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳು ಈ ತಿಂಗಳು ಲಾಂಚ್ ಆಗಲಿವೆ, ಅವುಗಳ ನಿರೀಕ್ಷಿತ ಫೀಚರ್ಸ್ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಗ್ಯಾಲಕ್ಸಿ Z ಫ್ಲಿಪ್ 5: ಸ್ಯಾಮ್‌ಸಂಗ್‌ನ ಮುಂಬರುವ ಈ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಜುಲೈ ಅಂತ್ಯದಲ್ಲಿ ಬಹುಶಃ ಜುಲೈ 26 ಅಥವಾ 27 ರಂದು ನಡೆಯಲಿರುವ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಲಾಂಚ್ ಆಗಲಿವೆ. ಈ ಲಾಂಚ್ ಭಾರತದಲ್ಲಿ ಮತ್ತು ಜಾಗತಿಕವಾಗಿ ನಡೆಯಲಿದ್ದು, ಈ ಸಂಬಂಧ ವೇದಿಕೆ ಸಜ್ಜುಗೊಂಡಿದೆ.
ಮೊಟೊರೊಲಾ ಫೋನ್‌ಗಳು: ಮೊಟೊ ಕಂಪೆನಿ ಈ ತಿಂಗಳು ಮೊಟೊರೊಲಾ ರೇಜರ್ 40 ಹಾಗೂ ಮೊಟೊರೊಲಾ ರೇಜರ್ 40 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ. ಭಾರತದಲ್ಲಿ ಈ ಸರಣಿಯ ಬಿಡುಗಡೆ ದಿನಾಂಕವನ್ನು ಜುಲೈ 3 ಕ್ಕೆ ನಿಗದಿಪಡಿಸಲಾಗಿದೆ. ಈ ನಡುವೆ ಭಾರತದಲ್ಲಿ ಈ ಮೊಟೊರೊಲಾ ರೇಜರ್ 40 ಸರಣಿಯ ಬೆಲೆ 59,999 ರೂ.ಗಳಿಂದ ರಿಂದ ಪ್ರಾರಂಭವಾಗಲಿದೆ ಎನ್ನಲಾಗಿದೆ.
ನಥಿಂಗ್ ಫೋನ್ (2) : ಭಾರೀ ಕುತೂಹಲ ಹುಟ್ಟುಹಾಕಿರುವ ಫೋನ್ ಎಂದರೆ ಅದು ನಥಿಂಗ್ ಫೋನ್ (2). ಇದಕ್ಕಾಗಿ ಸಾಕಷ್ಟು ಗ್ರಾಹಕರು ಕಾದು ಕುಳಿತಿದ್ದಾರೆ. ಈ ಫೋನ್ ಜಾಗತಿಕವಾಗಿ ಜುಲೈ 11 ರಂದು ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಇದರ ಹಿಂದಿನ ಸರಣಿ ಫೋನ್‌ಗಿಂತ ಹೆಚ್ಚಿನ ಬೆಲೆ ಹೊಂದಿರಲಿದ್ದು, ಸುಧಾರಿತ ಹಾರ್ಡ್‌ವೇರ್ ನವೀಕರಣಗಳನ್ನು ಸಹ ಪಡೆದಿದೆ ಎಂದು ತೋರುತ್ತದೆ.
ಒಪ್ಪೋ ಫೋನ್‌ಗಳು: ಒಪ್ಪೋ ಕಂಪೆನಿಯು ರೆನೋ ಸರಣಿಯಲ್ಲಿ ಫೋನ್‌ಗಳನ್ನು ಲಾಚ್ ಮಾಡಲು ಮುಂದಾಗಿದೆ. ಇನ್ನು ಒಪ್ಪೋ ರೆನೋ 10 ಸರಣಿಯನ್ನು ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ಲಾಂಚ್ ಮಾಡಲಾಗಿದ್ದು, ಇದೇ ಫೋನ್‌ಗಳನ್ನು ಭಾರತದಲ್ಲಿ ಈ ತಿಂಗಳು ಲಾಂಚ್ ಮಾಡುವ ನಿರೀಕ್ಷೆ ಇದೆ. ಒಪ್ಪೋ ಈ ಫೋನ್ ಲಾಂಚ್ ಬಗ್ಗೆ ನಿಖರವಾದ ದಿನಾಂಕವನ್ನು ತಿಳಿಸದಿದ್ದರೂ ಸಹ ಒಪ್ಪೋ ನ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈಗಾಗಲೇ ಜಾಗ ಮೀಡಲಿಸಲಾಗಿದೆ. ಇದರಲ್ಲಿ ರೆನೋ 10, ರೆನೋ 10 ಪ್ಲಸ್, ರೆನೋ 10 ಪ್ರೊ ಇವೆ.
ಐಕ್ಯೂ: ಐಕ್ಯೂ ಸಂಸ್ಥೆಯಿಂದಲೂ ಸಹ ಐಕ್ಯೂ 11S, ಐಕ್ಯೂ ನಿಯೋ 7 ಪ್ರೊ ಫೋನ್‌ಗಳನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಫೋನ್‌ಗಳು ಜುಲೈ 4 ರಂದು ಭಾರತದಲ್ಲಿ ಲಾಂಚ್ ಆಗಲಿವೆ. ಇವು 5G ಬೆಂಬಲಿತ ಫೋನ್‌ಗಳಾಗಿದ್ದು, ನಿಯೋ ಸರಣಿಯಲ್ಲಿ ಮೊದಲ 'ಪ್ರೊ' ಸ್ಮಾರ್ಟ್‌ಫೋನ್ ಆಗಿ ಪದಾರ್ಪಣೆ ಮಾಡುತ್ತಿದೆ. ಹಾಗೆಯೇ ಈ ಪ್ರೊ ವೇರಿಯಂಟ್ ಭಾರತದಲ್ಲಿ 40 ಸಾವಿರದ ಆಸುಪಾಸಿನಲ್ಲಿ ಲಭ್ಯ ಇರಲಿದೆ.
ಒನ್‌ಪ್ಲಸ್: ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಬ್ರ್ಯಾಂಡ್ ಆಗಿರುವ ಒನ್‌ಪ್ಲಸ್‌ನಲ್ಲಿ ಒನ್‌ಪ್ಲಸ್ ನಾರ್ಡ್ 3 5G, ಒನ್‌ಪ್ಲಸ್ ನಾರ್ಡ್ CE 3 5G ಸ್ಮಾರ್ಟ್‌ಫೋನ್ ಗಳು ಈ ತಿಂಗಳ 5 ರಂದು ಭಾರತದಲ್ಲಿ ಲಾಂಚ್ ಆಗಲಿವೆ. ಈ ಫೋನ್‌ಗಳು 120Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ನಂತಹ ಪ್ರಮುಖ ದರ್ಜೆಯ ಫೀಚರ್ಸ್ ಅನ್ನು ಪಡೆದಿರಲಿವೆ ಎಂದು ತಿಳಿದುಬಂದಿದೆ.
ರಿಯಲ್‌ಮಿ : ರಿಯಲ್‌ಮಿ ಕಂಪೆನಿಯ ವಿಚಾರಕ್ಕ ಬಂದರೆ ರಿಯಲ್‌ಮಿ ನಾರ್ಜೋ 60 ಸರಣಿ 5G ಸ್ಮಾರ್ಟ್‌ಫೋನ್‌ಗಳು ಜುಲೈ 6 ರಂದು ಭಾರತದಲ್ಲಿ ಲಾಂಚ್ ಆಗಲಿವೆ. ಈ ಸರಳಿಯಲ್ಲಿ
ರಿಯಲ್‌ಮಿ ನಾರ್ಜೋ 60 5G ಮತ್ತು ರಿಯಲ್‌ಮಿ ನಾರ್ಜೋ 60 ಪ್ರೊ 5G ಸೇರಿವೆ. ಈ ಫೋನ್‌ಗಳನ್ನು ಈಗಾಗಲೇ ಅಮೆಜಾನ್ ಇಂಡಿಯಾದಲ್ಲಿ ಪಟ್ಟಿ ಮಾಡಲಾಗಿದೆ. ಇದು ರಿಯಲ್‌ಮಿ 11 ಪ್ರೊ ಸರಣಿಯಂತೆಯೇ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದೆ ಎಂದು ತೋರುತ್ತದೆ.

ಉಳಿದಂತೆ ಸ್ಯಾಮ್‌ಸಂಗ್ M34 5G, ಟೆಕ್ನೋ ಕಾಮನ್ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್, ನುಬಿಯಾ ರೆಡ್ ಮ್ಯಾಜಿಕ್ 8S ಪ್ರೊ, ವಿವೋ V29 ಸರಣಿಯ ವಿವೋ 29 ಪ್ರೊ ಹಾಗೂ ವಿವೋ V29 ಲೈಟ್ ಫೋನ್‌ಗಳು ಈ ತಿಂಗಳು ಲಾಂಚ್ ಆಗಲಿವೆ. ಇನ್ನು ನೀವೇನಾದರೂ ಫೋನ್ ಖರೀದಿ ಮಾಡಬೇಕು ಅದೂ ಹೊಸದಾಗಿ ಲಾಂಚ್ ಆದ ಫೋನ್‌ಗಳನ್ನೇ ಕೊಂಡುಕೊಳ್ಳಬೇಕು ಎಂದರೆ ಈ ತಿಂಗಳು ನಿಮಗೆ ಹಲವಾರು ಆಯ್ಕೆ ಲಭ್ಯ ಇವೆ.


Click it and Unblock the Notifications