Home
ಸುದ್ದಿಜಾಲ

2023 ರಲ್ಲಿನ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿಯೊಬ್ಬರೂ ಬಯಸುವ ಅತ್ಯುತ್ತಮ ಸೌಕರ್ಯ ಇವು!

ಸ್ಮಾರ್ಟ್‌ಫೋನ್‌ಗಳು ಇಂದು ಜನರ ಅವಿಭಾಜ್ಯ ಅಂಗದಂತೆ ಆಗಿಬಿಟ್ಟಿವೆ. ಈ ಕಾರಣಕ್ಕೆ ಪ್ರಮುಖ ಬ್ರ್ಯಾಂಡ್‌ಗಳು ಸಹ ಹೊಸ ಶೈಲಿಯ ಹಾಗೂ ವಿನೂತನ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡೇ ಬರುತ್ತಿವೆ. ಆದರೆ, ಈ ಫೋನ್‌ಗಳ ಕಾರ್ಯಕ್ಷಮತೆ, ಆಯಸ್ಸಿನ ಬಗ್ಗೆ ಒಮ್ಮೆಯಾದರೂ ಆಲೋಚಿಸಿದ್ದೀರಾ!?.

ಹೌದು, ನೀವು ಕೆಲವು ಬ್ರ್ಯಾಂಡ್‌ನ ಫೋನ್‌ ಅನ್ನು ಹೊಸದಾಗಿ ಖರೀದಿ ಮಾಡಿದಾಗ ಅದು ಅತ್ಯುತ್ತಮವಾಗಿಯೇ ಕಾಣಿಸುತ್ತದೆ. ಆದರೆ, ಕಾಲಕಳೆದಂತೆ ಆ ಫೋನ್‌ನಲ್ಲಿನ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಈ ನಡುವೆ ಮುಂದಿನ ಐದು ವರ್ಷದಲ್ಲಿ ನಾವು ನೀವೆಲ್ಲಾ ಸ್ಮಾರ್ಟ್‌ಫೋನ್‌ ವಿಚಾರದಲ್ಲಿ ಈ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಹಾಗೆಯೇ ಇನ್ಮುಂದೆ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವ ಬ್ರ್ಯಾಂಡ್‌ಗಳು ಸಹ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಈ ಅಂಶಗಳನ್ನು ಹೊಂದಿರಬೇಕಿದೆ.

2023 ರಲ್ಲಿನ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿಯೊಬ್ಬರೂ ಬಯಸುವ  ಸೌಕರ್ಯ ಇವು!

ದೀರ್ಘ ಬ್ಯಾಟರಿ ಬಾಳಿಕೆ: ಈ ಪಟ್ಟಿಯಲ್ಲಿ ಮೊದಲನೆಯದು ದೀರ್ಘ ಬ್ಯಾಟರಿ ಬಾಳಿಕೆ ವಿಷಯ. ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಳು 5000mAh ಹಾಗೂ 6000mAh ಸಾಮರ್ಥ್ಯದ ಬ್ಯಾಟರಿ ಇರುವ ಫೋನ್‌ಗಳನ್ನು ಪರಿಚಯಿಸುತ್ತಿವೆ. ಅದರಂತೆ, ಫೋನ್‌ಗಳಲ್ಲಿ ವಿಡಿಯೋಗಳಿಂದ ಹಿಡಿದು ಗೇಮ್‌ ಹಾಗೂ ಜಿಪಿಎಸ್ ಬಳಕೆ ಮಾಡುವ ವರೆಗೆ ಬ್ಯಾಟರಿ ಅತ್ಯಂತ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್‌ಫೋನ್‌ ತಯಾರಕರು ದೊಡ್ಡ ಬ್ಯಾಟರಿಗಳು ಮತ್ತು ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8 ಜನ್‌ 2 ನಂತಹ ಹೆಚ್ಚು ಪರಿಣಾಮಕಾರಿ ಪ್ರೊಸೆಸರ್‌ಗಳೊಂದಿಗೆ ಬರುತ್ತಿದ್ದಾರಾದರೂ
ಬ್ಯಾಟರಿ ವಿಚಾರದಲ್ಲಿ ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯ ಅವಶ್ಯಕತೆ ಇದೆ. ಅಂತೆಯೇ ಶಿಯೋಮಿ ರೀತಿಯ ಕಂಪೆನಿಗಳು ಹೆಚ್ಚು ಬ್ಯಾಟರಿ ಸಾಮರ್ಥ್ಯಕ್ಕಾಗಿ ಸಾಲಿಡ್ ಸ್ಟೇಟ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಿವೆ.

ದೊಡ್ಡ ಮಟ್ಟದ ಸ್ಟೋರೇಜ್‌ ಸಾಮರ್ಥ್ಯ: ಸ್ಮಾರ್ಟ್‌ಫೋನ್‌ಗಳಲ್ಲಿ ಸುಧಾರಣೆ ಆಗಬೇಕಿರುವ ಮತ್ತೊಂದು ವಿಷಯ ಎಂದರೆ ಸ್ಟೋರೇಜ್‌ ಸಾಮರ್ಥ್ಯ. ನಾವು ಹೆಚ್ಚಿನ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳುವುದರಿಂದ ಹಾಗೆಯೇ ಹೆಚ್ಚಿನ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವುದರಿಂದ ಹೆಚ್ಚಿನ ಸ್ಟೋರೇಜ್‌ ಅವಶ್ಯಕತೆ ಇರುತ್ತದೆ. ಈ ವೇಳೆ ಕಡಿಮೆ ಸ್ಟೋರೇಜ್‌ ಇರುವ ಫೋನ್‌ಗಳ ಅಗತ್ಯತೆ ಕಡಿಮೆ ಆಗುತ್ತದೆ.

2023 ರಲ್ಲಿನ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿಯೊಬ್ಬರೂ ಬಯಸುವ  ಸೌಕರ್ಯ ಇವು!

ಇತ್ತೀಚಿನ ದಿನಗಳಲ್ಲಿ 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಇರುವ ಫೋನ್‌ಗಳನ್ನು ಲಾಂಚ್‌ ಮಾಡುತ್ತಿದ್ದಾರೆ. ಅದಾಗ್ಯೂ ಇನ್ನೂ ಕೆಲವು ಫೋನ್‌ಗಳಲ್ಲಿ ಇದೇ ಸ್ಟೋರೇಜ್‌ನೊಂದಿಗೆ ಇನ್ನೂ ಹೆಚ್ಚಿನ ಸ್ಟೋರೇಜ್‌ ಉದ್ದೇಶಕ್ಕೆ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ. ಆದರೆ, ಕೆಲವು ಬ್ರ್ಯಾಂಡ್‌ಗಳು ಈ ಕೆಲಸ ಮಾಡುತ್ತಿಲ್ಲ. ಈ ಮೂಲಕ ಮುಂದಿನ ಪೀಳಿಗೆಗೆ ಅಗತ್ಯವಾಗಿ ಬೇಕಾದ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗುತ್ತಿವೆ.

ಉತ್ತಮ ಬಾಳಿಕೆ: ಸ್ಮಾರ್ಟ್‌ ಗ್ಯಾಜೆಟ್ ಖರೀದಿ ಎಂಬವುದೇ ‌ ದುಬಾರಿ ಹೂಡಿಕೆಯ ವಿಷಯವಾಗಿದ್ದು, ಇಷ್ಟು ಹಣ ಕೊಟ್ಟು ಖರೀದಿ ಮಾಡಿದ್ದೇವೆ ಎಂದ ಮೇಲೆ ಅವು ದೀರ್ಘ ಬಾಳಿಕೆ ಬರಬೇಕು. ಈ ಕಾರಣಕ್ಕಾಗಿ ಇತ್ತೀಚೆಗೆ ಮೆಟಲ್‌ ಫ್ರೇಮ್‌, ಕಾರ್ನಿಂಗ್ ಗೊರಿಲ್ಲಾ ವಿಕ್ಟಸ್ ಗ್ಲಾಸ್ ಪ್ರೊಟೆಕ್ಷನ್ ಮತ್ತು ವಾಟರ್‌ ರೆಸಿಸ್ಟೆಂಟ್‌ಗಾಗಿ IP68 ರೇಟೆಡ್ ಅನ್ನು ಕೆಲವು ಫೋನ್‌ಗಳು ಹೊಂದಿವೆ. ಆದರೆ, ಕೆಲವು ಫೋನ್‌ಗಳಲ್ಲಿ ಈ ಸೌಕರ್ಯ ಇಲ್ಲ.

2023 ರಲ್ಲಿನ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿಯೊಬ್ಬರೂ ಬಯಸುವ  ಸೌಕರ್ಯ ಇವು!

5G ಬೆಂಬಲಿತ ಫೋನ್‌: ಭಾರತದಲ್ಲಿ ಇದೀಗ 5G ಎಲ್ಲಾ ಕಡೆ ವಿಸ್ತರಿಸಿಕೊಳ್ಳುತ್ತಿದೆ. ಹಾಗೆಯೇ ಪ್ರಮುಖ ಟೆಲಿಕಾಂ ಸಂಸ್ಥೆಗಳು ಸಹ ಬಳಕೆದರರಿಗೆ 5G ಸೇವೆ ನೀಡುತ್ತಾ ಬರುತ್ತಿದ್ದು, ಅದಾಗ್ಯೂ ಈಗ 4G ಬೆಂಬಲಿತ ಫೋನ್‌ಗಳನ್ನು ಲಾಂಚ್‌ ಮಾಡಲಾಗುತ್ತಿದೆ. ಬ್ರ್ಯಾಂಡ್‌ಗಳ ಈ ನಿರ್ಧಾರ ಕೆಲವರಿಗೆ ಮಾತ್ರ ಉಪಯೋಗಕ್ಕೆ ಬರುತ್ತದೆಯೇ ಹೊರತು ಎಲ್ಲರನ್ನು ಒಳಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ 5G ಬೆಂಬಲಿತ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು ಒಳಿತು.

Best Mobiles in India

English summary
All smartphone makers need to focus on these key areas to improve their smartphone features in the next 5 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+