Home
ಸುದ್ದಿಜಾಲ

ವಿವೋ ಕಂಪನಿಯ ಈ ಸ್ಮಾರ್ಟ್‌ಫೋನ್‌ಗಳಿಗೆ ಈಗ ಭಾರೀ ಕೊಡುಗೆ!

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವ ವಿವೋ, ಈಗಾಗಲೇ ಭಿನ್ನ ಶ್ರೇಣಿಯ ಫೋನ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇ ಕಾಮರ್ಸ್‌ ತಾಣಗಳಂತೆ ಕೆಲವೊಮ್ಮೆ ವಿಶೇಷ ದಿನಗಳ ಸಂದರ್ಭದಲ್ಲಿ ವಿವೋ ತನ್ನ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ನೀಡುತ್ತದೆ. ಇದೀಗ ವಿವೋ ಹೋಳಿ ಹಬ್ಬದ ಪ್ರಯುಕ್ತ ಕೆಲವೊಂದು ಆಯ್ದ ಸ್ಮಾರ್ಟ್‌ಫೋನ್‌ ಮಾಡೆಲ್‌ಗಳಿಗೆ ಬೊಂಬಾಟ್ ಡಿಸ್ಕೌಂಟ್‌ ಅನ್ನು ಘೋಷಿಸಿದೆ.

ವಿವೋ ಕಂಪನಿಯ ಈ ಸ್ಮಾರ್ಟ್‌ಫೋನ್‌ಗಳಿಗೆ ಈಗ ಭಾರೀ ಕೊಡುಗೆ!

ಹೌದು, ಹೋಳಿ ಹಬ್ಬಕ್ಕೆ ವಿವೋ ಸಂಸ್ಥೆಯು ತನ್ನ ವಿವೋ V23 ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಹೊಸ ಕೊಡುಗೆಗಳನ್ನು ಪ್ರಕಟಿಸಿದೆ. ಆ ಪೈಕಿ ವಿವೋ V23, ವಿವೋ V23e, ಮತ್ತು ವಿವೋ V23 ಪ್ರೊ ಫೋನ್‌ಗಳು ಆಫರ್‌ ಪಡೆದಿವೆ. ಈ ಆಫರ್‌ಗಳು ಬ್ಯಾಂಕ್ ಡಿಸ್ಕೌಂಟ್‌ಗಳಿಂದ ಹಿಡಿದು ಕ್ಯಾಶ್‌ಬ್ಯಾಕ್ ಮತ್ತು ಇತರೆ ಹೆಚ್ಚಿನ ಪ್ರಯೋಜನ ಪಡೆದಿವೆ. ಹಾಗೆಯೇ ಖರೀದಿದಾರರಿಗೆ ಹಲವಾರು ಬ್ಯಾಂಕ್ ಕಾರ್ಡ್‌ಗಳ ಬಳಕೆಯ ಮೇಲೆ 3,500 ರೂ. ವರೆಗೆ ಉಳಿಸುವ ಅವಕಾಶವಿದೆ.

ವಿವೋ ಕಂಪನಿಯ ಈ ಸ್ಮಾರ್ಟ್‌ಫೋನ್‌ಗಳಿಗೆ ಈಗ ಭಾರೀ ಕೊಡುಗೆ!

ಇನ್ನು ವಿವೋ ನೀಡುವ ಕೊಡುಗೆಗಳನ್ನು ಬಳಕೆದಾರರು ಅಧಿಕೃತ ವಿವೋ ಇಂಡಿಯಾ ಇ-ಸ್ಟೋರ್‌ನಲ್ಲಿ ಮತ್ತು ಎಲ್ಲಾ ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ ಪ್ರತ್ಯೇಕವಾಗಿ ಪಡೆಯಬಹುದು. ಮಾರಾಟದ ಕೊಡುಗೆಯಲ್ಲಿ ವಿವೋ V23, ವಿವೋ V23e, ಮತ್ತು ವಿವೋ V23 ಪ್ರೊ ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಜೊತೆಗೆ ಖರೀದಿಗೆ ಲಭ್ಯವಿರುತ್ತದೆ. ಇನ್ನು ಈ ಆಫರ್ ಮಾರ್ಚ್ 31 ರವರೆಗೆ ಮಾನ್ಯವಾಗಿರುತ್ತದೆ.

ಆಫರ್‌ನಲ್ಲಿರುವ ಪಾಲುದಾರ ಬ್ಯಾಂಕ್‌ಗಳು ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಒನ್ ಕಾರ್ಡ್ ಆಗಿವೆ. ಹಾಗೆಯೇ, ವಿವೋ V23 ಸರಣಿಯ ಯಾವುದೇ ಫೋನ್‌ಗಳ ಖರೀದಿದಾರರು ಜಸ್ಟ್‌ ಮನಿ ನಿಂದ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದರೊಂದಿಗೆ ವಿವೋ ನಿಂದ V23 ಪ್ರೊ ಮತ್ತು V23e ನ ಉಚಿತ ಒಂದು-ಬಾರಿ ಸ್ಕ್ರೀನ್ ರಿಪ್ಲೇಸ್ಮೆಂಟ್ ಅನ್ನು ಸಹ ಪಡೆಯಬಹುದು.

ವಿವೋ ಕಂಪನಿಯ ಈ ಸ್ಮಾರ್ಟ್‌ಫೋನ್‌ಗಳಿಗೆ ಈಗ ಭಾರೀ ಕೊಡುಗೆ!

ವಿವೋ V23e 5G ಸ್ಮಾರ್ಟ್‌ಫೋನ್‌ ಫೀಚರ್ಸ್‌
ವಿವೋ V23e 5G ಸ್ಮಾರ್ಟ್‌ಫೋನ್‌ 6.44 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಫೋನಿನ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ ಆಟೋಫೋಕಸ್ ಲೆನ್ಸ್‌ ಹೊಂದಿರುವ 44 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 4,050mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ವಿವೋ V23 5G ಸ್ಮಾರ್ಟ್‌ಫೋನ್‌ ಫೀಚರ್ಸ್‌
ವಿವೋ V23 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.44 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 920SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ.

ವಿವೋ V23 ಪ್ರೊ 5G ಸ್ಮಾರ್ಟ್‌ಫೋನ್‌
ವಿವೋ V23 ಪ್ರೊ 5G ಸ್ಮಾರ್ಟ್‌ಫೋನ್‌ ವಿವೋ V23 ಪ್ರೊ 5G ಸ್ಮಾರ್ಟ್‌ಫೋನ್‌ 1,080x2,376 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.56 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ ಈ ಫೋನಿನ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ.

Best Mobiles in India

English summary
These Three Vivo Phones Available for sale with best offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+