ನಿಮ್ಮ ಮೊಬೈಲ್ ಸುರಕ್ಷತೆಗೆ ಖಂಡಿತಾ ಈ ಸಲಹೆಗಳು ಉಪಯುಕ್ತ!

|

ಸದ್ಯ ಸ್ಮಾರ್ಟ್‌ಫೋನ್ ಅಗತ್ಯ ಡಿವೈಸ್‌ ಆಗಿ ಎನಿಸಿಕೊಂಡಿದೆ. ಹಲವು ಕೆಲಸಗಳನ್ನು ಆನ್‌ಲೈನ್‌ ಮೂಲಕ ಸುಲಭವಾಗಿ ಮಾಡಲು ಫೋನ್ ನೆರವಾಗಿದೆ. ಹಾಗೆಯೇ ಫೋನ್ ಡಿಜಿಟಲ್ ಲಾಕರ್ ಆಗಿದ್ದು, ಬಳಕೆದಾರರು ತಮ್ಮ ಅಗತ್ಯ ದಾಖಲೆಗಳು, ಖಾಸಗಿ ಫೋಟೊ ಹಾಗೂ ಇತರೆ ಮಾಹಿತಿಗಳನ್ನು ಸಂಗ್ರಹಿಸಿ ಇಡುತ್ತಾರೆ. ಹೀಗಾಗಿ ಫೋನ್ ಹಾನಿ ಆಗದಂತೆ ಮತ್ತು ಕಳೆದು ಹೋಗದಂತೆ ಎಚ್ಚರ ವಹಿಸುವುದು ಅಗತ್ಯ ಆಗಿದೆ.

ಎನ್ನುವುದರಲ್ಲಿ

ಸ್ಮಾರ್ಟ್‌ಫೋನ್ ಅಗತ್ಯ ಡಿವೈಸ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಸುರಕ್ಷತೆಯು ಅಷ್ಟೇ ಮುಖ್ಯ ಆಗಿದೆ. ಹಾಗಂತ ಫೋನಿಗೆ ಪಾಸ್‌ವರ್ಡ್‌ ಇಡುವುದೊಂದೆ ಸೆಕ್ಯುರಿಟಿ ಅಲ್ಲ. ಬದಲಿಗೆ ಅಗತ್ಯ ಆಪ್ಸ್‌, ಆನ್‌ಲೈನ್‌ ಬ್ರೌಸಿಂಗ್, ಡೇಟಾ ರಕ್ಷಣೆ, ಬ್ಲೂಟೂತ್ ಸೇರಿದಂತೆ ಇನ್ನು ಹಲವು ಹಂತಗಳಲ್ಲಿ ಸುರಕ್ಷತೆಯ ಕ್ರಮಗಳನ್ನು ಅನುಸರಿಸಬೇಕಿರುತ್ತದೆ. ಹಾಗಾದರೇ ಸ್ಮಾರ್ಟ್‌ಫೋನ್‌ಗಳ ಯಾವೆಲ್ಲಾ ಸುರಕ್ಷತೆ ಹಂತಗಳನ್ನು ಅನುಸರಿಸಬೇಕು ಎನ್ನುವು ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಫೋನ್‌ ಸ್ಕ್ರೀನ್ ಲಾಕ್ ಮರೆಯದೇ ಬಳಸಿ

ಫೋನ್‌ ಸ್ಕ್ರೀನ್ ಲಾಕ್ ಮರೆಯದೇ ಬಳಸಿ

ಫೋನ್‌ಗಳನ್ನು ಆನ್‌ ಮಾಡಬೇಕಾದಾಗ ಸಾಮಾನ್ಯವಾಗಿ ಆರಂಭದಲ್ಲಿ ಪರದೆ ಸರಿಸುವ ಬೇಸಿಕ್ ಸುರಕ್ಷತೆಯ ಆಯ್ಕೆ ಇರುತ್ತದೆ. ಅದನ್ನು ಬಳಕೆದಾರರು ಬದಲಿಸಿಕೊಳ್ಳಬಹುದು. ಇತ್ತೀಚಿನ ಬಹುತೇಕ ಫೋನ್‌ಗಳು ಫಿಂಗರ್‌ಪ್ರಿಂಟ್ ಆಯ್ಕೆ ಹೊಂದಿರುತ್ತವೆ ಅದನ್ನು ಸೆಟ್‌ ಮಾಡಿಕೊಳ್ಳಿ ಅಥವಾ ಪ್ಯಾಟರ್ನ್‌ ಲಾಕ್ ಇಲ್ಲವೇ ಪಿನ್‌ ಲಾಕ್ ವ್ಯವಸ್ಥೆ ಮಾಡಿಕೊಳ್ಳಿ. ಸ್ಮಾರ್ಟ್‌ಫೋನ್ ಇದು ಬೇಸಿಕ್ ರಕ್ಷಣೆ ಇದ್ದಂತೆ.

ಬ್ಲೂಟೂತ್ ಸಂಪರ್ಕದ ಬಗ್ಗೆ ಗಮನ ಇರಲಿ

ಬ್ಲೂಟೂತ್ ಸಂಪರ್ಕದ ಬಗ್ಗೆ ಗಮನ ಇರಲಿ

ಫೋನ್‌ಗಳಲ್ಲಿನ ಡೇಟಾ ಇತರರಿಗೆ ಸೆಂಡ್ ಮಾಡಲು ವಾಯರ್‌ಲೆಸ್‌ ಸೇವೆಗಳಾದ ಬ್ಲೂಟೂತ್, ಶೇರ್‌ ಇಟ್‌ನಂತಹ ಆಪ್ಸ್‌ಗಳನ್ನು ಬಳಸುತ್ತಿರಿ. ಬಳಕೆ ಇಲ್ಲದಿದ್ದಾಗ ಬ್ಲೂಟೂತ್ ಆಫ್‌ ಮಾಡಿಟ್ಟುಕೊಳ್ಳಿರಿ. ಕೆಲವೊಮ್ಮೆ ನಿಮ್ಮ ಅರಿವಿಲ್ಲದೆ ನಿಮ್ಮ ಫೋನ್‌ ಇತರರಿಗೆ ಕನೆಕ್ಟ್ ಆಗುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ನಿಮ್ಮ ಫೋನ್‌ನ ನೆಟ್‌ವರ್ಕ್ ಸೆಕ್ಯುರಿಟಿ ಸೆಟ್ಟಿಂಗ್‌ಗಳನ್ನು ಪರಿಶೀಲಿಸುವುದು ಯೋಗ್ಯ.

ಖಾಸಗಿ ಡೇಟಾವನ್ನು ರಕ್ಷಿಸಿ

ಖಾಸಗಿ ಡೇಟಾವನ್ನು ರಕ್ಷಿಸಿ

ಫೋನ್‌ಗಳಿಗೆ ಎಂಟ್ರಿ ಪಿನ್ ಲಾಕ್ ಮತ್ತು ಪಾಸ್‌ವರ್ಡ್ ಲಾಕ್‌ ಗಳು ಸಹಾಯಕವಾಗಿದ್ದರೂ, ಸಹ ಡೇಟಾ ಕಾಪಾಡಲು ಪ್ರತ್ಯೇಕ ಸುರಕ್ಷತೆ ಬೇಕು ಎಂದೆನಿಸುತ್ತದೆ. ಸ್ಮಾರ್ಟ್‌ಫೋನಿನಲ್ಲಿನ ಅಗತ್ಯ ಡೇಟಾವನ್ನು ಕಂಪ್ಯೂಟರ್‌ಗೆ ಪ್ಲಗ್ ಸ್ಟೋರ್‌ ಮಾಡಬಹುದು ಅಥವಾ ಮೈಕ್ರೊ ಎಸ್‌ಡಿ ಕಾರ್ಡ್‌ ಅಥವಾ ಪೆನ್‌ಡ್ರೈವ್‌ ಸಾಧನಗಳಲ್ಲಿ ಸಂಗ್ರಹಿ ಸಬಹುದು. ಇಲ್ಲವೇ ಕ್ಲೌಡ್‌ ಸ್ಟೋರೇಜ್ ಬಳಕೆ ಮಾಡಬಹುದು.

ಬ್ರೌಸಿಂಗ್ ಮಾಡುವಾಗ ಎಚ್ಚರವಹಿಸಿ

ಬ್ರೌಸಿಂಗ್ ಮಾಡುವಾಗ ಎಚ್ಚರವಹಿಸಿ

ಸ್ಮಾರ್ಟ್‌ಫೋನ್‌ಗಳಲ್ಲಿ ಬ್ರೌಸಿಂಗ್ ಮಾಡುವಾಗ ಜಾಗೃತರಾಗಿರಿ. ಅದರಲ್ಲೂ ಆನ್‌ಲೈನ್‌ ಶಾಪಿಂಗ್ ಸೈಟ್‌ಗಳಲ್ಲಿ ಎಚ್ಚರಿಕೆ ಅಗತ್ಯ. ಆನ್‌ಲೈನ್‌ನಲ್ಲಿ ಹಣಕಾಸಿನ ವ್ಯವಹಾರ ವನ್ನು ಮಾಡುವಾಗ ವೆಬ್‌ಸೈಟ್‌ಗಳ ಅಸಲಿಯತ್ತನ್ನು ಪರೀಕ್ಷಿಸಿ. ಆ ಸೈಟ್‌ಗಳ URL ಗಮನಿಸಿ ನೋಡಿ. ಹಾಗೂ ಪೇಮೆಂಟ್‌ ಮಾಡುವಾಗ ಬ್ಯಾಂಕ್‌ ಮಾಹಿತಿ, ಪಿನ್ ನೀಡುವುದು ಮಾಡಿ ಹಣ ಕಳೆದುಕೊಳ್ಳಬೇಡಿ.

ಅಗತ್ಯ ವೇಳೆ ಸಿಮ್ ಕಾರ್ಡ್ ಲಾಕ್

ಅಗತ್ಯ ವೇಳೆ ಸಿಮ್ ಕಾರ್ಡ್ ಲಾಕ್

ಫೋನಿನಲ್ಲಿ ಸ್ಕ್ರೀನ್ ಲಾಕ್ ಎಲ್ಲರೂ ಉಪಯೋಗಿಸುತ್ತಾರೆ. ಆದರೆ ಸಿಮ್ ಕಾರ್ಡ್ ಲಾಕ್ ಬಳಸುವುದು ಕಡಿಮೆ. ಸಿಮ್ ಲಾಕ್ ಮಾಡುವುದರಿಂದ ಯಾರಾದರೂ ಫೋನಿನಂದ ಸಿಮ್ ತೆಗೆದುಹಾಕಿ ಇನ್ನೊಂದು ಫೋನಿನಲ್ಲಿ ಬಳಸುವುದನ್ನು ತಡೆಯಬಹುದಾಗಿದೆ. ಅದಕ್ಕಾಗಿ ಪಿನ್ ಸಂಖ್ಯೆಯ ರೂಪ ದಲ್ಲಿ ಸಿಮ್ ಕಾರ್ಡ್ ಲಾಕ್ ಅನ್ನು ಮಾಡಬಹುದಾಗಿದೆ. ಆದರೆ ಈ ಆಯ್ಕೆ ಬಳಸಲು ಜಾಗೃತರಾಗಿರಬೇಕು.

ಆಪ್ ಡೌನ್‌ಲೋಡ್ ಮಾಡುವಾಗ ಎಚ್ಚರ

ಆಪ್ ಡೌನ್‌ಲೋಡ್ ಮಾಡುವಾಗ ಎಚ್ಚರ

ಗೂಗಲ್ ಪ್ಲೇ ಸ್ಟೋರ್‌ನಿಂದ ಆಪ್ಸ್‌ ಡೌನ್‌ಲೋಡ್‌ ಮಾಡಿಕೊಳ್ಳುವಾಗ ಗೂಗಲ್ ಸಂಸ್ಥೆ ಸರ್ಟಿಫೈಡ್‌ ಇಲ್ಲದ ಆಪ್ಸ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಉತ್ತಮವಲ್ಲ. ಕೆಲವೊಂದು ಆಪ್ಸ್‌ಗಳು ಅಸುರಕ್ಷಿತವಾದ ಮಾಲ್‌ವೇರ್ ಆಪ್‌ಗಳಾಗಿದ್ದು, ನಿಮ್ಮ ಖಾಸಗಿ ಡೇಟಾ ಸೋರಿಕೆ ಆಗುವ ಸಾಧ್ಯತೆಗಳಿರುತ್ತವೆ. ಡೌನ್‌ಲೋಡ್‌ ಮಾಡುವಾಗ ರೇಟಿಂಗ್ಸ್‌ ಮತ್ತು ರೀವ್ಯೂಗಳನ್ನು ಗಮನಿಸಿ.

Best Mobiles in India

English summary
These Tips useful To keep Your Phone Secure.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X