ಈ ಪ್ರಮುಖ ಸ್ಮಾರ್ಟ್ ಗ್ಯಾಜೆಟ್‌ಗಳು ಕೇವಲ 999ರೂ.ಗಳ ಒಳಗೆ ಲಭ್ಯ!
ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಆಗಾಗ್ಗೆ ದೊಡ್ಡ ಮಟ್ಟದ ಡಿಸ್ಕೌಂಟ್ ಸೇಲ್‌ಗಳು ಗ್ರಾಹಕರಿಗೆ ಭಾರೀ ಹಣ ಉಳಿತಾಯ ಮಾಡುತ್ತಿರುತ್ತವೆ. ಅದರಲ್ಲೂ ಭಾರತದಲ್ಲಿ ಏನಾದರೂ ವಿಶೇಷ ಸಂದರ್ಭದ ಬಂದರಂತೂ ಫ್ಲಿಪ್‌ಕಾರ್ಟ್ (Flipkart) ದುಬಾರಿ ಬೆಲೆಯ ಡಿವೈಸ್‌ಗಳನ್ನೂ ಸಹ ಕಡಿಮೆ ಬೆಲೆಗೆ ಮಾರಲು ಮುಂದಾಗುತ್ತದೆ. ಈ ನಡುವೆ 999ರೂ.ಗಳ ಒಳಗೆ ಲಭ್ಯ ಇರುವ ಈ ಸ್ಮಾರ್ಟ್‌ಡಿವೈಸ್‌ಗಳು ಬಳಕೆದಾರರಿಗೆ ಹಲವು ರೀತಿಯ ಅನುಕೂಲ ನೀಡಲಿವೆ.
ಹೌದು, ಫ್ಲಿಪ್‌ಕಾರ್ಟ್ ಟೆಕ್ ಪ್ರಿಯರಿಗೆ ಅತ್ಯುತ್ತಮ ಪ್ಲಾಟ್‌ಫಾರ್ಮ್ ಎಂದೇ ಹೇಳಬಹುದು. ಇಲ್ಲಿ ವೈವಿಧ್ಯಮಯ ಶ್ರೇಣಿಯ ಆಯ್ಕೆಗಳನ್ನು ಅನ್ವೇಷಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ಈ ನಡುವೆ ಮಿ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಬೇಸಿಕ್ 2 ನಿಂದ ಹಿಡಿದು ರಿಯಲ್ ಪವರ್‌ಬ್ಯಾಂಕ್ ವರೆಗೂ ಡಿವೈಸ್‌ಗಳು 999ರೂ.ಗಳಿಗಿಂತ ಕಡಿಮೆ ಬೆಲೆಗೆ ಲಭ್ಯ ಇರಲಿವೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಪ್ರಮುಖ ಹಾಗೂ ಅಗತ್ಯ ಡಿವೈಸ್‌ಗಳು ಈ ಬೆಲೆಯ ಒಳಗೆ ಲಭ್ಯ ಇರಲಿದೆ ಎಂದು ತಿಳಿಯೋಣ.

ಮಿ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಬೇಸಿಕ್ 2: ಈ ಇಯರ್‌ಬಡ್ಸ್‌ಉತ್ತಮ ಧ್ವನಿ ಗುಣಮಟ್ಟವನ್ನು ಹೊಂದಿದ್ದು, ಇದನ್ನು ನೀವು 500ರೂ. ಗಳ ಒಳಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ದೀರ್ಘ ಬ್ಯಾಟರಿ ಬ್ಯಾಕಪ್ ನೀಡುವ ಈ ಇಯರ್‌ಬಡ್ಸ್ ಬಳಕೆದಾರರಿಗೆ ಧರಿಸಲು ಅಥವಾ ಬಳಕೆ ಮಾಡಲು ಅನುಕೂಲಕರವಾಗಿದೆ. ಅಂದರೆ ಸಿನಿಮಾ ನೋಡುವಾಗ, ಕರೆ ಮಾಡುವಾಗ ಹಾಗೂ ವಿಡಿಯೋ ಗೇಮ್ ಆಡುವಾಗ ಇದನ್ನು ಬಳಕೆ ಮಾಡಬಹುದು.
ರಿಯಲ್‌ಮಿ ಪವರ್‌ಬ್ಯಾಂಕ್ 10000mAh: ಪವರ್‌ಬ್ಯಾಂಕ್ ಅಂತೂ ಇಂದಿನ ದಿನಗಳಲ್ಲಿ ಎಲ್ಲರಿಗೂ ಅಗತ್ಯವಾದ ಡಿವೈಸ್ ಆಗಿದೆ. ಈ ನಡುವೆ ಆನ್‌ಲೈನ್‌ನಲ್ಲಿ ಈ ಡಿವೈಸ್‌ಗಳ ಮೇಲೆ ಭಾರೀ ರಿಯಾಯಿತಿ ಸಹ ಇದೆ. ಈಗ ನೀವು ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ ಪವರ್‌ಬ್ಯಾಂಕ್ 10000mAh ಅನ್ನು ಕಡಿಮೆ ದರಕ್ಕೆ ಖರೀದಿ ಮಾಡಬಹುದಾಗಿದ್ದು, ಇದು ನಿಮ್ಮ ಫೋನ್ ಅನ್ನು ಹಲವು ಬಾರಿ ಚಾರ್ಜಿಂಗ್ ಮಾಡಲು ಅನುಕೂಲ ಮಾಡಿಕೊಡಲಿದೆ.
ಪೋರ್ಟ್ರೋನಿಕ್ಸ್ POR-881 ರಫ್‌ಪ್ಯಾಡ್: ಇದು ಪೋರ್ಟಬಲ್ ಇ-ರೈಟರ್ ಡಿವೈಸ್ ಆಗಿದ್ದು, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅಥವಾ ಶಿಕ್ಷಕರಿಗೆ ಹಲವಾರು ಪ್ರಯೋಜನ ನೀಡಲಿದೆ.
ಅಂದರೆ ಇದನ್ನು ಬಳಕೆ ಮಾಡಿಕೊಂಡು ಟಿಪ್ಪಣಿಗಳನ್ನು ಮಾಡಲು, ಆಲೋಚನೆಗಳನ್ನು ಬರಹದ ಮೂಲಕ ಇಳಿಸಲು ಅಥವಾ ಸ್ಕೆಚಿಂಗ್ ಮಾಡಲು ಬೆಂಬಲ ನೀಡಲಿದೆ. ಇದು 4.4-ಇಂಚಿನ ಡಿಸ್ಪ್ಲೇ ಆಯ್ಕೆ ಹೊಂದಿದ್ದು, ಸ್ಟೈಲಸ್‌ನೊಂದಿಗೆ ಪ್ಯಾಕ್ ಆಗಿದೆ.
ಅಂಬ್ರೇನ್ ಡ್ಯಾಶ್ 30W ಪವರ್ ಚಾರ್ಜರ್: ನಿಮ್ಮ ಸ್ಮಾರ್ಟ್‌ಡಿವೈಸ್ ಅನ್ನು ತ್ವರಿತವಾಗಿ ಚಾರ್ಜಿಂಗ್ ಮಾಡಬೇಕು ಎಂದರೆ ಉತ್ತಮ ಚಾರ್ಜಿಂಗ್ ಕೇಬಲ್‌ಗಳ ಅವಶ್ಯಕತೆ ಇದೆ. ಈ ನಡುವೆ ಕೆಲವು ನಕಲಿ ಚಾರ್ಜರ್‌ಗಳು ಸಹ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಆದರೆ, ನೀವೀಗ ನಿಮ್ಮ ಡಿವೈಸ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಲು ಈ ಪವರ್ ಚಾರ್ಜರ್ ಖರೀದಿ ಮಾಡಬಹುದು. ಇದು 30W ಔಟ್‌ಪುಟ್ ಪವರ್ ಅನ್ನು ಬೆಂಬಲಿಸುತ್ತದೆ ಮತ್ತು ಟೈಪ್-ಸಿ ಕೇಬಲ್‌ನೊಂದಿಗೆ ಬರುತ್ತದೆ.
ಕಾಸ್ಮಿಕ್ ಬೈಟ್ CB-GK-08 ಕರೋನಾ ವೈರ್ಡ್ ಗೇಮಿಂಗ್ ಕೀಬೋರ್ಡ್: ಈ ಕೀಬೋರ್ಡ್ ಗೇಮರುಗಳಿಗಾಗಿ ಉತ್ತಮ ಆಯ್ಕೆಯಾಗಿದೆ. ಇದು 7 ವಿಭಿನ್ನ ಆರ್‌ಜಿಬಿ ಲೈಟಿಂಗ್ ಮೋಡ್‌ಗಳನ್ನು ಹೊಂದಿದ್ದು, ಬಳಕೆದಾರರ ಆಯ್ಕೆಗೆ ತಕ್ಕಂತೆ ಲಭ್ಯ ಇದೆ. ಜೊತೆಗೆ ಇದನ್ನು ನೀವು ಫ್ಲಿಪ್‌ಕಾರ್ಟ್‌ನಿಂದ 999ರೂ.ಗಳ ಅಡಿಯಲ್ಲಿ ಖರೀದಿ ಮಾಡಬಹುದಾಗಿದೆ.

ಮಿ ಬ್ಯಾಂಡ್ 4: ಈ ಫಿಟ್‌ನೆಸ್ ಟ್ರ್ಯಾಕರ್ ನಿಮ್ಮ ಸ್ಟೆಪ್ಸ್‌ಗಳು, ಹೃದಯ ಬಡಿತ ಮತ್ತು ನಿದ್ರೆಯನ್ನು ಟ್ರ್ಯಾಕ್ ಮಾಡಲು ಉತ್ತಮ ಆಯ್ಕೆಯಾಗಿದೆ. ಇದು ವಾಟರ್ ರೆಸಿಸ್ಟೆಂಟ್‌ನಿಂದ ಕೂಡಿದ್ದು, ಈಜುವಾಗ ಅಥವಾ ಮಳೆಯಲ್ಲಿ ನಡೆದುಹೋಗುವಾಗಲೂ ಯಾವುದೇ ಸಮಸ್ಯೆ ಇಲ್ಲದೆ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ ರಿಯಲ್‌ಮಿ ಬಡ್ಸ್ Q2 ಅನ್ನು ಸಹ ನೀವು ಮೇಲೆ ಉಲ್ಲೇಖಿಸಿದ ಬೆಲೆ ಒಳಗೆ ಖರೀದಿ ಮಾಡಬಹುದು.
ಪೋರ್ಟ್ರೋನಿಕ್ಸ್ ಟ್ರಾವೆಲರ್ 1080p ವೆಬ್‌ಕ್ಯಾಮ್: ಈ ವೆಬ್‌ಕ್ಯಾಮ್ ವಿಡಿಯೋ ಕರೆಗಳು ಮತ್ತು ಆನ್‌ಲೈನ್ ಮೀಟಿಂಗ್‌ಗಳಿಗೆ ಉತ್ತಮ ಆಯ್ಕೆಯಾಗಿದೆ. ಇದು 1080p ರೆಸಲ್ಯೂಶನ್ ಸಾಮರ್ಥ್ಯದ ವಿಡಿಯೋಗಳನ್ನು ಸೆರೆಹಿಡಿಯಲಿದ್ದು, ಇನ್‌ಬಿಲ್ಟ್ ಮೈಕ್ರೊಫೋನ್‌ನೊಂದಿಗೆ ಕಾಣಿಸಿಕೊಂಡಿದೆ. ಇದರ ಜೊತೆಗೆ ನೀವು ಅಂಬ್ರೇನ್ ಝೆಬ್-ಚಾರ್ಜರ್ 20000mAh ಪವರ್ ಬ್ಯಾಂಕ್ ಅನ್ನು ಸಹ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಕಾಸ್ಮಿಕ್ ಬೈಟ್ CB-GK-16 ಕಾಸ್ಮಿಕ್ ಸ್ಟಾರ್‌ಡಸ್ಟ್ ವೈರ್ಡ್ ಮೆಕ್ಯಾನಿಕಲ್ ಕೀಬೋರ್ಡ್: ಮೆಕ್ಯಾನಿಕಲ್ ಕೀಬೋರ್ಡ್ ಬೇಕು ಎಂದು ಹುಡುಕುತ್ತಿರುವ ಗೇಮರುಗಳಿಗಾಗಿ ಈ ಕೀಬೋರ್ಡ್ ಉತ್ತಮ ಆಯ್ಕೆಯಾಗಿದೆ. ಇದು ಔಟೆಮು ಬ್ಲೂ ಸ್ವಿಚ್‌ಗಳ ಆಯ್ಕೆ ಪಡೆದುಕೊಂಡಿದ್ದು, ನಿಮ್ಮ ಗೇಮಿಂಗ್ ಸಮಯದಲ್ಲಿ ಉತ್ತಮ ಅನುಭವ ಲಭ್ಯ ಆಗಲಿದೆ. ಇದಿಷ್ಟು ಮಾತ್ರವಲ್ಲದೆ ಇನ್ನೂ ಅನೇಕ ಸ್ಮಾರ್ಟ್‌ಡಿವೈಸ್‌ಗಳು 999ರೂ.ಗಳ ಒಳಗೆ ಲಭ್ಯ ಇವೆ.


Click it and Unblock the Notifications








