ಉಪಯುಕ್ತ ಅನಿಸುವ ಈ ಸ್ಮಾರ್ಟ್‌ ಡಿವೈಸ್‌ಗಳು ಜಸ್ಟ್‌ 1,000ರೂ.ಒಳಗೆ ಲಭ್ಯ!

|

ಪ್ರಸ್ತುತ ಜನರು ಹೆಚ್ಚು ಡಿಜಿಟಲೀಕರಣದತ್ತ ವಾಲುತ್ತಿದ್ದು, ಸ್ಮಾರ್ಟ್‌ ಡಿವೈಸ್‌ಗಳ ಬಳಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅತೀ ಅಗತ್ಯ ಡಿವೈಸ್‌ಗಳು ಈಗ ಸ್ಮಾರ್ಟ್‌ ರೂಪ ತಾಳುತ್ತಿವೆ. ಇಂದಿನ ಬಹುತೇಕ ಸ್ಮಾರ್ಟ್‌ ಉಪಕರಣಗಳು AI-ಕೃತಕ ಬುದ್ಧಿಮತ್ತೆ, ವಾಯಿಸ್‌ ಅಸಿಸ್ಟಂಟ್ ಮತ್ತು ವರ್ಚುವಲ್ ಅಸಿಸ್ಟಂಟ್ ತಂತ್ರಜ್ಞಾನಗಳ ಸಂಯೋಜನೆಗೊಂಡಿರುತ್ತವೆ. ಬಜೆಟ್‌ ದರದಲ್ಲಿನ ಸ್ಮಾರ್ಟ್‌ ದೈನಂದಿನ ಬಳಕೆಯ ಡಿವೈಸ್‌ಗಳು ಗ್ರಾಹಕರನ್ನು ಆಕರ್ಷಿಸಿವೆ.

ಮಾರುಕಟ್ಟೆಯಲ್ಲಿ

ಹೌದು, ಸದ್ಯ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಡಿವೈಸ್‌ಗಳ ದೊಡ್ಡ ಪಟ್ಟಿಯೇ ಇದೆ. ಈ ಡಿವೈಸ್‌ಗಳನ್ನು ಬಳಕೆ ಮಾಡುವ ಮೂಲಕ ಬಳಕೆದಾರರು ಮನೆಯನ್ನು ಸ್ಮಾರ್ಟ್‌ ಹೋಮ್ ಆಗಿ ಮಾರ್ಪಡಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಕೆಲವು ಪ್ರತಿಷ್ಠಿತ ಕಂಪನಿಗಳ ಸ್ಮಾರ್ಟ್‌ ಡಿವೈಸ್‌ಗಳು ದುಬಾರಿ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಇನ್ನು ಮತ್ತೆ ಕೆಲವು ಸಂಸ್ಥೆಗಳ ಸ್ಮಾರ್ಟ್‌ ಡಿವೈಸ್‌ಗಳು ಅಗ್ಗದ ಬೆಲೆಯಲ್ಲಿ ಲಭ್ಯ ಇವೆ. ಹಾಗಾದರೇ ಇಂದಿನ ಈ ಲೇಖನದಲ್ಲಿ 1000ರೂ. ಒಳಗೆ ಲಭ್ಯ ಇರುವ ಕೆವು ಉಪಯುಕ್ತ ಸ್ಮಾರ್ಟ್‌ ಡಿವೈಸ್‌ಗಳ ಬಗ್ಗೆ ನೋಡೋಣ ಬನ್ನಿರಿ.

ವಿಪ್ರೋ Wi-Fi ಸ್ಮಾರ್ಟ್ ಬಲ್ಬ್

ವಿಪ್ರೋ Wi-Fi ಸ್ಮಾರ್ಟ್ ಬಲ್ಬ್

ಪ್ರತಿಯೊಬ್ಬರ ಮನೆಯಲ್ಲಿ ಬೆಳಕಿಗೆ ಲೈಟ್‌ ಅತೀ ಅಗತ್ಯ ಡಿವೈಸ್‌ ಆಗಿದೆ. ಆದರೆ ಸದ್ಯ ಸ್ಮಾರ್ಟ್‌ ಲೈಟ್‌ಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈ ಪೈಕಿ ಅಗ್ಗದ ದರದಲ್ಲಿ ವಿಪ್ರೋ Wi-Fi ಸ್ಮಾರ್ಟ್ ಬಲ್ಬ್ ಆಕರ್ಷಕ ಅನಿಸಿದ್ದು, ಈ ಡಿವೈಸ್‌ ವೈ-ಫೈ ಸೌಲಭ್ಯ ಪಡೆದಿದೆ. ಹಾಗೂ ಈ ಡಿವೈಸ್ ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟಂಟ್‌ ಸೌಲಭ್ಯವನ್ನು ಪಡೆದಿದೆ. ಇನ್ನು ಅಮೆಜಾನ್‌ನಲ್ಲಿ ಈ ಡಿವೈಸ್‌ ಬೆಲೆಯು 599ರೂ. ಗಳು ಆಗಿದೆ.

ಆಂಬ್ರೇನ್ ಸ್ಮಾರ್ಟ್‌ ಪ್ಲಗ್

ಆಂಬ್ರೇನ್ ಸ್ಮಾರ್ಟ್‌ ಪ್ಲಗ್

ಮನೆಯ ರೂಮಿನಲ್ಲಿ ವಿದ್ಯುತ್ ಸಾಕೆಟ್‌ಗಳಿಗೆ, ಬಾಹ್ಯವಾಗಿ ಸ್ಮಾರ್ಟ್‌ಪ್ಲಗ್‌ಗಳನ್ನು ಬಳಸಬಹುದು. ಸ್ಮಾರ್ಟ್‌ಪ್ಲಗ್‌ಗಳು ವಿವಿಧ ಅಗತ್ಯಗಳಿಗೆ ಅನುಸಾರವಾಗಿ ಭಿನ್ನ ವಿದ್ಯುತ್ ಸಾಮರ್ಥ್ಯದಲ್ಲಿ ಲಭ್ಯವಾಗಲಿವೆ. ಈ ಪೈಕಿ ಆಂಬ್ರೇನ್ ವೈಫೈ ಸ್ಮಾರ್ಟ್ ಪ್ಲಗ್ 10A ಡಿವೈಸ್‌ ಹೆಚ್ಚು ಗಮನ ಸೆಳೆದಿದ್ದು, ಈ ಡಿವೈಸ್‌ಗೆ ಯಾವುದೇ ಹಬ್‌ ಅಗತ್ಯ ಇಲ್ಲ. ಇನ್ನು ಈ ಡಿವೈಸ್‌ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲ ಹೊಂದಿದೆ. ಇನ್ನು ಅಮೆಜಾನ್‌ನಲ್ಲಿ ಈ ಡಿವೈಸ್‌ ಬೆಲೆಯು 899ರೂ. ಗಳು ಆಗಿದೆ.

ಶಿಯೋಮಿ ಸ್ಮಾರ್ಟ್ LED ಬಲ್ಬ್

ಶಿಯೋಮಿ ಸ್ಮಾರ್ಟ್ LED ಬಲ್ಬ್

ಅಗ್ಗದ ಪ್ರೈಸ್‌ನಲ್ಲಿ ಶಿಯೋಮಿ ಸ್ಮಾರ್ಟ್ ಎಲ್ಇಡಿ ಬಲ್ಬ್ ಸಹ ಆಕರ್ಷಣೆ ಅನಿಸಿದೆ. ಇನ್ನು ಈ ಡಿವೈಸ್‌ನ ವೈಟ್‌ ಬಣ್ಣದ ವೇರಿಯಂಟ್‌ ಬೆಲೆಯು ಜಸ್ಟ್‌ 799 ರೂ. ಆಗಿದೆ. ಈ ಬಲ್ಬ್ 7.5W ಬಿ 22 ಬಲ್ಬ್ ಆಗಿದೆ. ಸಾಧನವು ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಹೊಂದಿಕೊಳ್ಳುತ್ತದೆ. ಬಲ್ಬ್ 16 ಮಿಲಿಯನ್ ಬಣ್ಣಗಳನ್ನು ನೀಡುತ್ತದೆ.

ರಿಯಲ್‌ ಮಿ ಸ್ಮಾರ್ಟ್‌ ಪ್ಲಗ್

ರಿಯಲ್‌ ಮಿ ಸ್ಮಾರ್ಟ್‌ ಪ್ಲಗ್

ರಿಯಲ್‌ ಮಿ ಕಂಪನಿಯ ಸ್ಮಾರ್ಟ್ ಪ್ಲಗ್‌ನ ಗ್ರಾಹಕರನ್ನು ಆಕರ್ಷಿಸಿದ್ದು, ಈ ಡಿವೈಸ್‌ ಬೆಲೆಯು ಜಸ್ಟ್‌ 799ರೂ. ಆಗಿದೆ. ಈ ಸ್ಮಾರ್ಟ್ ಪ್ಲಗ್ ಸ್ಮಾರ್ಟ್ ವೈ-ಫೈ ನಿಯಂತ್ರಣವನ್ನು ನೀಡುತ್ತದೆ ಮತ್ತು ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾ ಜೊತೆ ಕಾರ್ಯನಿರ್ವಹಿಸುತ್ತದೆ. ಇದು ಐದು ಪದರಗಳ ಸುರಕ್ಷತೆಯ ರಕ್ಷಣೆಯನ್ನು ಹೊಂದಿದೆ.

ಶಿಯೋಮಿ ಆಟೋಮ್ಯಾಟಿಕ್ ಸೋಪ್ ಡಿಸ್‌ಪೆನ್ಸರ್‌

ಶಿಯೋಮಿ ಆಟೋಮ್ಯಾಟಿಕ್ ಸೋಪ್ ಡಿಸ್‌ಪೆನ್ಸರ್‌

ಮಿ ಆಟೋಮ್ಯಾಟಿಕ್ ಸೋಪ್ dispenser ಬೆಲೆಯು 999ರೂ. ಆಗಿದೆ. ಈ ಸಾಧನವು ಸಂಪರ್ಕ-ಮುಕ್ತ ನೈರ್ಮಲ್ಯವನ್ನು ನೀಡುತ್ತದೆ. ಹಾಗೆಯೇ ಅತಿಗೆಂಪು ಸಂವೇದಕಗಳನ್ನು ಹೊಂದಿದೆ. ಈ ಡಿವೈಸ್‌ ಗಟ್ಟಿಮುಟ್ಟಾದ ರಚನೆ ಪಡೆದಿದ್ದು, ಹೆಚ್ಚು ಬಾಳಿಕೆ ಬರುವುದು ಎಂದು ಕಂಪನಿಯು ಹೇಳಿಕೊಂಡಿದೆ.

ಸ್ಮಾರ್ಟ್‌ ಸನ್‌ಗ್ಲಾಸ್‌

ಸ್ಮಾರ್ಟ್‌ ಸನ್‌ಗ್ಲಾಸ್‌

ಗ್ಯಾಡ್ಜೆಟ್‌ ಫ್ಯಾಕ್ಟರಿ ಬ್ಲೂಟೂತ್ ಸ್ಮಾರ್ಟ್ ಸನ್‌ಗ್ಲಾಸ್‌ ವಾಹನ ಸವಾರರಿಗೆ, ಮೀನುಗಾರರಿಗೆ, ಹೊರಾಂಗಣ ಕ್ರೀಡಾಪಟುಗಳಿಗೆ ಉತ್ತಮ ಅನಿಸಿದೆ. ಈ ಡಿವೈಸ್‌ ವಾಯರ್‌ಲೆಸ್‌ ಇಯರ್‌ಫೋನ್‌ ಹೊಂದಿದ್ದು, ಹ್ಯಾಂಡ್ಸ್-ಫ್ರೀ ಕರೆಗಾಗಿ ಲಗತ್ತಿಸಲಾಗಿದೆ. ಅಮೆಜಾನ್‌ನಲ್ಲಿ ಈ ಡಿವೈಸ್‌ ಬೆಲೆಯು 499ರೂ. ಆಗಿದೆ.

Best Mobiles in India

English summary
These top Smart Products Available Under Rs 1000. smart plug, smart bulb and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X