Home
ಸುದ್ದಿಜಾಲ

ಈ ಒಂದೇ ಪ್ಲ್ಯಾನ್‌ ಸಾಕು!..ಪೂರ್ಣ ಮೂರು ತಿಂಗಳು ನೀವು ಟೆನ್ಷನ್‌ ಫ್ರೀ!

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್‌ ಜಿಯೋ, ಭಾರ್ತಿ ಏರ್‌ಟೆಲ್‌ ಟೆಲಿಕಾಂ ನಡುವೆ ಪೈಪೋಟಿ ಜೋರಾಗಿದೆ. ಜಿಯೋಗೆ ಟಾಂಗ್‌ ನೀಡುವ ನಿಟ್ಟಿನಲ್ಲಿ ಏರ್‌ಟೆಲ್‌ ಹೆಜ್ಜೆ ಹಾಕಿದ್ದು, ಕೆಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುಂದೆ ಸಾಗಿದೆ. ಇನ್ನು ಪದೇ ಪದೇ ರೀಚಾರ್ಜ್‌ ಬೇಡಾ ಹಾಗೂ ಪೂರ್ಣ ಎರಡು/ ಮೂರು ತಿಂಗಳು ವ್ಯಾಲಿಡಿಟಿ ಬೇಡು ಎನ್ನವ ಗ್ರಾಹಕರಿಗೂ ಅತ್ಯುತ್ತಮ ಯೋಜನೆಯ ಆಯ್ಕೆ ನೀಡಿದೆ.

ಹೌದು, ಏರ್‌ಟೆಲ್‌ ಟೆಲಿಕಾಂ ಸಂಸ್ಥೆಯು ದೈನಂದಿನ ಅಧಿಕ ಡೇಟಾ ಸೌಲಭ್ಯ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಪ್ರಯೋಜನದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆ ಗ್ರಾಹಕರಿಗೆ ನೀಡಿದೆ. ಆ ಪೈಕಿ ಪೂರ್ಣ 60 ದಿನಗಳ ವ್ಯಾಲಿಡಿಟಿ ಪ್ರಯೋಜನದ ಯೋಜನೆಯೊಂದು ಆಕರ್ಷಕ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಪೂರ್ಣ 90 ದಿನಗಳ ವ್ಯಾಲಿಡಿಟಿಯ ಯೋಜನೆ ಸಹ ಇದೆ.

ಈ ಒಂದೇ ಪ್ಲ್ಯಾನ್‌ ಸಾಕು!..ಪೂರ್ಣ ಮೂರು ತಿಂಗಳು ನೀವು ಟೆನ್ಷನ್‌ ಫ್ರೀ!

ಏರ್‌ಟೆಲ್‌ನ 519ರೂ ಈ ಪ್ಲ್ಯಾನ್‌ 60 ದಿನಗಳ ವ್ಯಾಲಿಡಿಟಿ ಪಡೆದಿರುವ ಯೋಜನೆ ಆಗಿದ್ದು, ಹಾಗೆಯೇ ಏರ್‌ಟೆಲ್‌ನ 779ರೂ. ಯೋಜನೆಯು ಪೂರ್ಣ ಮೂರು ತಿಂಗಳ ಅಂದರೇ 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಜೊತೆಗೆ ಡೇಟಾ ಪ್ರಯೋಜನ, ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ, ಎಸ್‌ಎಮ್‌ಎಸ್‌ ಪ್ರಯೋಜನ ಕೂಡಾ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಆಗಿದೆ. ಈ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ನ 779ರೂ. ರೀಚಾರ್ಜ್‌ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್‌ ಟೆಲಿಕಾಂನ 779ರೂ. ರೀಚಾರ್ಜ್‌ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಅಂದರೇ ಪೂರ್ಣ ಮೂರು ತಿಂಗಳ ವ್ಯಾಲಿಡಿಟಿ ಪಡೆದುಕೊಂಡಿದೆ. ಈ ವೇಳೆ ಪ್ರತಿದಿನ 1.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ.

ಇದರೊಂದಿಗೆ ಏರ್‌ಟೆಲ್‌ ಈ ಯೋಜನೆಯು ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಕೂಡಾ ಲಭ್ಯ ಮಾಡುತ್ತದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 135 GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್‌ಟೆಲ್‌ ಆಪ್‌ಗಳ ಸೌಲಭ್ಯ ಸಿಗುತ್ತವೆ.

ಏರ್‌ಟೆಲ್‌ನ 519ರೂ. ರೀಚಾರ್ಜ್‌ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್‌ ಟೆಲಿಕಾಂನ 519ರೂ. ರೀಚಾರ್ಜ್‌ ಪ್ಲ್ಯಾನ್ ಒಟ್ಟು 60 ದಿನಗಳ ವ್ಯಾಲಿಡಿಟಿ ಅವಧಿಯನ್ನು ಅಂದರೇ ಪೂರ್ಣ ಎರಡು ತಿಂಗಳ ವ್ಯಾಲಿಡಿಟಿ ಪಡೆದುಕೊಂಡಿದೆ. ಈ ವೇಳೆ ಪ್ರತಿದಿನ 1.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ.

ಇದರೊಂದಿಗೆ ಏರ್‌ಟೆಲ್‌ ಈ ಯೋಜನೆಯು ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಕೂಡಾ ಲಭ್ಯ ಮಾಡುತ್ತದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 90 GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್‌ಟೆಲ್‌ ಆಪ್‌ಗಳ ಸೌಲಭ್ಯ ಸಿಗುತ್ತವೆ.

84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ :
ಏರ್‌ಟೆಲ್‌ ಟೆಲಿಕಾಂನ 839 ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ವೇಳೆ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಪ್ರತಿದಿನ 2 GB ಡೇಟಾ ಪ್ರಯೋಜನ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಆಪ್‌ ಡಿಸ್ನಿ+ ಹಾಟ್‌ಸ್ಟಾರ್‌ ಮೂರು ತಿಂಗಳ ಚಂದಾದಾರಿಕೆ ಕೂಡಾ ದೊರೆಯುತ್ತದೆ. ಜೊತೆಗೆ ಏರ್‌ಟೆಲ್‌ನ Wynk Music ಸೇವೆ ಸಹ ಲಭ್ಯ.

Best Mobiles in India

English summary
These Two Airtel plans unlimited for validity with data. data, sms, call and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+