ಏರ್‌ಟೆಲ್‌ನ ಈ ಅಗ್ಗದ ಪ್ಲ್ಯಾನ್ ರೀಚಾರ್ಜ್‌ನಲ್ಲಿ ಡೇಟಾ ಜೊತೆಗೆ ಫ್ರೀ ಇನ್ಶೂರೆನ್ಸ್!
ದೇಶದ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಇದಲ್ಲದೇ ಕೆಲವು ಯೋಜನೆಗಳಲ್ಲಿ ಕೆಲವೊಮ್ಮೆ ಹೆಚ್ಚುವರಿ ಟಾಕ್‌ಟೈಮ್, ಹೆಚ್ಚುವರಿ ಡೇಟಾ ಹಾಗೂ ಹೆಚ್ಚುವರಿ ಆಪ್ಸ್, ಸೇವೆಗಳಂತಹ ಕೊಡುಗೆಗಳನ್ನು ಘೋಷಿಸುತ್ತವೆ. ಹಾಗೆಯೇ ದೇಶದಲ್ಲಿ ಟೆಲಿಕಾಂ ಸಂಸ್ಥೆಗಳ ನಡುವೆ ಪೈಪೋಟಿ ಇದ್ದು, ಬಜೆಟ್ ಬೆಲೆಯಲ್ಲಿ ಬೆಸ್ಟ್ ಪ್ರೀಪೇಡ್ ಪ್ಲ್ಯಾನ್‌ಗಳ ಮೂಲಕ ಚಂದಾದಾರರನ್ನು ಆಕರ್ಷಿಸಲು ಯತ್ನ ನಡೆಸಿವೆ. ಆ ಪೈಕಿ ಏರ್‌ಟೆಲ್ ಟೆಲಿಕಾಂ ಸಂಸ್ಥೆಯು ವಿಭಿನ್ನ ಆಫರ್ ನೀಡಲು ಮೂಲಕ ಗಮನ ಸೆಳೆದಿದೆ.

ಹೌದು, ಜನಪ್ರಿಯ ಏರ್‌ಟೆಲ್ ಟೆಲಿಕಾಂ ಸಂಸ್ಥೆಯು ಕೆಲವು ಪ್ರೀಪೇಯ್ಡ್ ಯೋಜನೆಗಳಲ್ಲಿ ಆಕರ್ಷಕ ಪ್ರಯೋಜನಗಳ ಜೊತೆಗೆ ಹೆಚ್ಚುವರಿ ಸೇವೆ/ಸೌಲಭ್ಯವನ್ನು ನೀಡಿದೆ. ಗಮನಿಸಬೇಕಾದ ಅಂಶವೆಂದರೇ ಏರ್‌ಟೆಲ್‌ನ 279ರೂ ಮತ್ತು 179ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಗಳು ಜೀವವಿಮೆ/ ಇನ್ಶೂರೆನ್ಸ್ ಸೌಲಭ್ಯ ಪಡೆದಿವೆ. ಹಾಗೆಯೇ ಉಚಿತ ವಾಯಿಸ್ ಕರೆ, ಡೇಟಾ ಹಾಗೂ ವ್ಯಾಲಿಡಿಟಿ ಆಫರ್ ಸಹ ಇದೆ. ಹಾಗಾದರೇ ಏರ್‌ಟೆಲ್‌ನ 279ರೂ ಮತ್ತು 179ರೂ. ಬೆಲೆಯ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಉಚಿತ ಇನ್ಶೂರೆನ್ಸ್
ಏರ್‌ಟೆಲ್‌ನ 279ರೂ. ಪ್ರೀಪೇಡ್ ಪ್ಲ್ಯಾನ್ ರೀಚಾರ್ಜ್ ಮಾಡಿಕೊಂಡರೇ ಗ್ರಾಹಕರಿಗೆ ಹೆಚ್‌ಡಿಎಫ್‌ಸಿ ಲೈಫ್ ನಿಂದ 4 ಲಕ್ಷದ ಟರ್ಮ್ ಜೀವ ವಿಮೆ/ಇನ್ಸೂರೆನ್ಸ್ ಲಭ್ಯವಾಗಲಿದೆ. ಹಾಗೆಯೇ ಏರ್‌ಟೆಲ್‌ನ 179ರೂ. ಪ್ರೀಪೇಯ್ಡ್ ಯೋಜನೆ ರೀಚಾರ್ಜ್ ಮಾಡಿಸಿದರೇ ಗ್ರಾಹಕರಿಗೆ ಭಾರ್ತಿ ಆಕ್ಸ್ ಲೈಫ್ ಇನ್ಶೂರೆನ್ಸ್ ನಿಂದ 2 ಲಕ್ಷದ ಇನ್ಶೂರೆನ್ಸ್ ಲಭ್ಯವಾಗಲಿದೆ.

ಏರ್‌ಟೆಲ್ 279ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 279ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಸಿಗಲಿದೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ಗಳು ದೊರೆಯಲಿವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಜೊತೆಗೆ ಹೆಚ್‌ಡಿಎಫ್‌ಸಿ ಲೈಫ್ ನಿಂದ 4 ಲಕ್ಷದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಿಗಲಿದೆ. ಇದಲ್ಲದೇ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಸೇರಿದಂತೆ ಇನ್ನಿತರೆ ಸೌಲಭ್ಯಗಳು ಲಭ್ಯವಾಗಲಿವೆ.

ಏರ್‌ಟೆಲ್ 179ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 179ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 2 GB ಡೇಟಾ ಪ್ರಯೋಜನ ಸಿಗಲಿದೆ ಹಾಗೂ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯಲಿವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಜೊತೆಗೆ ಭಾರ್ತಿ ಆಕ್ಸ್ ಲೈಫ್ ಇನ್ಶೂರೆನ್ಸ್ ನಿಂದ 2 ಲಕ್ಷದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಿಗಲಿದೆ. ಇದಲ್ಲದೇ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಸೇವೆ ಸೇರಿದಂತೆ ಇನ್ನಿತರೆ ಸೌಲಭ್ಯಗಳು ಲಭ್ಯವಾಗಲಿವೆ.


Click it and Unblock the Notifications








