Home
ಸುದ್ದಿಜಾಲ

ಜಿಯೋ ಟೆಲಿಕಾಂನ ಈ ಎರಡು ಪ್ಲ್ಯಾನ್‌ ಎಲ್ಲರಿಗೂ ಸೂಕ್ತ!..ಬೆಲೆಯೂ ಅಗ್ಗ!

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಈಗಾಗಲೇ ನಂಬರ್ ಒನ್ ಸ್ಥಾನದಲ್ಲಿ ಬೇರುರಿದೆ. ಅಧಿಕ ಡೇಟಾ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿರುವ ಜಿಯೋ ಟೆಲಿಕಾಂ ಪ್ರಸಕ್ತ ವರ್ಷವು ಜಿಯೋ ಟೆಲಿಕಾಂ ಕೆಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಮತ್ತಷ್ಟು ಸದ್ದು ಮಾಡಿದೆ. ಕಂಪನಿಯ ಬಹುತೇಕ ಯೋಜನೆಗಳು ಅಧಿಕ ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ ಹಾಗೂ ಇನ್ನಿತರೆ ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿವೆ. ಆದರೆ ಎರಡು ಪ್ಲ್ಯಾನ್‌ಗಳು ಬಹುತೇಕ ಎಲ್ಲ ಬಳಕೆದಾರರಿಗೂ ಸೂಕ್ತ ಎನಿಸುತ್ತವೆ.

ಪ್ರೈಸ್‌ಟ್ಯಾಗ್‌ನಿಂದ

ಹೌದು, ಜಿಯೋ ಸಂಸ್ಥೆಯು ಅಗ್ಗದ ಪ್ರೈಸ್‌ಟ್ಯಾಗ್‌ನಿಂದ ದುಬಾರಿ ಬೆಲೆಯಲ್ಲಿ ಹಲವು ಭಿನ್ನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿದೆ. ಅವುಗಳಲ್ಲಿ ಕೆಲವು ಅಲ್ಪಾವಧಿಯ ಯೋಜನೆಗಳಾಗಿದ್ದು, ಇನ್ನು ಕೆಲವು ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನದ ಪ್ಲ್ಯಾನ್‌ಗಳಾಗಿವೆ. ಆ ಪೈಕಿ ಜಿಯೋ 555ರೂ ಮತ್ತು ಜಿಯೋ 599ರೂ. ಪ್ರೀಪೇಯ್ಡ್‌ ಯೋಜನೆಗಳು ಹೆಚ್ಚು ಟ್ರೆಂಡಿ ಎನಿಸಿದ್ದು, ಹಲವು ಪ್ರಯೋಜನಗಳನ್ನು ಪಡೆದಿವೆ. ಈ ಎರಡು ಯೋಜನೆಗಳು ಎಲ್ಲ ಬಳಕೆದಾರರಿಗೂ ಸೂಕ್ತ ಎನಿಸಲಿವೆ. ಹಾಗಾದರೇ ಜಿಯೋ 555ರೂ ಮತ್ತು ಜಿಯೋ 599ರೂ. ಪ್ರೀಪೇಯ್ಡ್‌ ಯೋಜನೆಗಳ ಪ್ರಯೋಜನಗಳನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಆಲ್‌-ಇನ್‌-ಒನ್‌ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ಜಿಯೋಕ್ಲೌಡ್, ಜಿಯೋ ಸೆಕ್ಯುರಿಟಿ, ಜಿಯೋ ಸಿನಿಮ, ಜಿಯೋನ್ಯೂಸ್ ಮತ್ತು ಜಿಯೋಟಿವಿ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಹೆಚ್ಚುವರಿ ಪ್ರಯೋಜನವನ್ನು ಹೊಂದಿವೆ.

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ಜಿಯೋಕ್ಲೌಡ್, ಜಿಯೋ ಸೆಕ್ಯುರಿಟಿ, ಜಿಯೋ ಸಿನಿಮ, ಜಿಯೋನ್ಯೂಸ್ ಮತ್ತು ಜಿಯೋಟಿವಿ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಹೆಚ್ಚುವರಿ ಪ್ರಯೋಜನವನ್ನು ಹೊಂದಿವೆ.

ಜಿಯೋ 555ರೂ. ಮತ್ತು ಜಿಯೋ 599ರೂ. ಭಿನ್ನತೆಗಳು:

ಜಿಯೋ 555ರೂ. ಮತ್ತು ಜಿಯೋ 599ರೂ. ಭಿನ್ನತೆಗಳು:

ಇನ್ನು ಈ ಎರಡು ಯೋಜನೆಗಳ ನಡುವಿನ ವ್ಯತ್ಯಾಸವು ನೋಡುವುದಾದರೇ. ಜಿಯೋ 555ರೂ.ಗಳ ಯೋಜನೆಯು 1.5GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಹಾಗೆಯೇ ಜಿಯೋ 599ರೂ.ಗಳ ಯೋಜನೆಯು ದೈನಂದಿನ 2GB ಡೇಟಾದೊಂದಿಗೆ ಬರುತ್ತದೆ. 555ರೂ.ಗಳ ಯೋಜನೆನೊಂದಿಗೆ ಒಟ್ಟು ಡೇಟಾ 126GB ಡೇಟಾ ಲಭ್ಯವಾಗಲಿದೆ. ಅದೇ ರಿತಿ 599ರೂ. ಪ್ಲ್ಯಾನಿನಲ್ಲಿ ಬಳಕೆದಾರರು ಒಟ್ಟು 168GB ಪಡೆಯುತ್ತಾರೆ. ಇನ್ನು ಈ ಎರಡು ಯೋಜನೆಗಳು 84 ದಿನಗಳ ವ್ಯಾಲಿಡಿಟಿಯನ್ನು ಪಡೆದಿವೆ. ಇನ್ನು ಪ್ರತಿದಿನ 3GB ಡೇಟಾ ಬಯಸುವ ಗ್ರಾಹಕರಿಗೂ ಸರಿಹೊಂದುವಂತೆ ಯೋಜನೆಗಳ ಆಯ್ಕೆ ಇವೆ. ಆ ಬಗ್ಗೆ ಮುಂದೆ ಓದಿರಿ.

ಜಿಯೋ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಜಿಯೋ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಜಿಯೋದ 349ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 3GB ದೈನಂದಿನ ಡೇಟಾವನ್ನು ನೀಡುತ್ತದೆ, ಅಂದರೆ ಬಳಕೆದಾರರು ಒಟ್ಟು 84GB ಡೇಟಾವನ್ನು ಪಡೆಯುತ್ತಾರೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ದೊರೆಯುತ್ತದೆ. ಇದರೊಂದಿದೆ ಈ ಯೋಜನೆಯು ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಜಿಯೋಟಿವಿ, ಜಿಯೋ ಸಿನಿಮ, ಜಿಯೋ ಸೆಕ್ಯುರಿಟಿ, ಜಿಯೋನ್ಯೂಸ್ ಮತ್ತು ಜಿಯೋಕ್ಲೌಡ್ ಸೇರಿದಂತೆ ಹಲವು ಅಪ್ಲಿಕೇಶನ್‌ಗಳನ್ನು ನೀಡುತ್ತದೆ. ಅದೇ ರೀತಿ ಜಿಯೋ 999ರೂ. ಪ್ರೀಪೇಯ್ಡ್‌ ಪ್ಲಾನ್ ಸಹ ಪ್ರತಿದಿನ 3GB ಡೇಟಾ ಪ್ರಯೋಜನ ಪಡೆದಿದೆ.

Best Mobiles in India

English summary
These Two Reliance Jio Prepaid Plans For Everyone: Details Here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+