Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಎಂದಾದರೂ ಈ ಫೀಚರ್‌ ಬಳಕೆ ಮಾಡಿದ್ದೀರಾ?..ತಿಳಿದ್ರೆ ವಾವ್ಹ್ ಅಂತೀರಾ!

ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಾಪ್‌' ಅಪ್ಲಿಕೇಶನ್ ಈಗಾಗಲೇ ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರ ನೆಚ್ಚಿನ ಪ್ಲಾಟ್‌ಫಾರ್ಮ್ ಆಗಿದೆ. ಅದೇ ರೀತಿ ಸಂಸ್ಥೆಯು ತನ್ನ ಬಳಕೆದಾರರ ಪ್ರೈವೆಸಿ ಸುರಕ್ಷತೆಗಾಗಿ ಸತತ ಹೊಸ ಫೀಚರ್ಸ್‌ಗಳನ್ನು ಅಪ್‌ಡೇಟ್‌ ವರ್ಷನ್‌ನಲ್ಲಿ ಅಳವಡಿಸಿಕೊಳ್ಳುತ್ತಲೆ ಸಾಗಿದೆ. ಹಾಗೆಯೇ ವಾಟ್ಸಾಪ್‌ನಲ್ಲಿರುವ ಕೆಲವು ಕುತೂಹಲಕಾರಿ ಆಯ್ಕೆಗಳು ಬಳಕೆದಾರರಿಗೆ ಅಚ್ಚರಿ ಮೂಡಿಸಿವೆ.

ಹೌದು, ಮೆಟಾ ಮಾಲೀಕತ್ವದ ವಾಟ್ಸಾಪ್‌ ಅಪ್ಲಿಕೇಶನ್ ನಲ್ಲಿ ಹಲವು ಉಪಯುಕ್ತ ಆಯ್ಕೆಗಳು ಸಹ ಇವೆ. ಆದ್ರೆ ಕೆಲವು ಅಚ್ಚರಿಯ ಆಯ್ಕೆಗಳ ಬಗ್ಗೆ ಬಹುತೇಕ ಬಳಕೆದಾರರಿಗೆ ಹೆಚ್ಚಾಗಿ ತಿಳಿದಿಲ್ಲ. ಪ್ರಮುಖ ಮೆಸೆಜ್‌ ಗುರುತು ಮಾಡುವುದು, ಫಾಂಟ್‌ ಬದಲಿಸುವ, ನಂತಹ ಹಲವು ಅತ್ಯುತ್ತಮ ಫೀಚರ್ಸ್‌ಗಳು ವಾಟ್ಸಾಪ್‌ನಲ್ಲಿವೆ.

ವಾಟ್ಸಾಪ್‌ನಲ್ಲಿ ಎಂದಾದರೂ ಈ ಫೀಚರ್‌ ಬಳಕೆ ಮಾಡಿದ್ದೀರಾ?..ವಾವ್ಹ್ ಅಂತೀರಾ!

ಬಳಕೆದಾರರು ಚಾಟ್‌ ಮಾಡುವ ವೇಳೆ ಸುಲಭವಾಗಿ ಫಾಂಟ್‌ ಬದಲಿಸಬಹುದು, ಮೆಸೆಜ್‌ ಬೋಲ್ಡ್‌ ಮಾಡಬಹುದು. ಹಾಗೆಯೇ ಮೆಸೆಜ್‌ Strikethrough (ಸ್ಟ್ರೈಕ್ಥ್ರೂ) ಮಾದರಿಯಲ್ಲಿ ಬಳುಹಿಸಬಹುದು. ಹಾಗಾದರೆ ಮೆಸೆಜ್‌ ಮಾಡುವಾಗ ಈ ಆಯ್ಕೆಗಳನ್ನು ಬಳಕೆ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಎಂದಾದರೂ ಈ ಫೀಚರ್‌ ಬಳಕೆ ಮಾಡಿದ್ದೀರಾ?..ವಾವ್ಹ್ ಅಂತೀರಾ!

ಇಟಾಲಿಕ್ ಫಾಂಟ್‌ (Italic) : ಬಳಕೆದಾರರು ವಾಟ್ಸಾಪ್‌ ನಲ್ಲಿ ಚಾಟ್‌ ಮಾಡುವಾಗ ಸಾಮಾನ್ಯವಾಗಿ ಫಾಂಟ್‌ನಲ್ಲಿ ಮೆಸೆಜ್‌ ಟೈಪ್ ಮಾಡುತ್ತಾರೆ. ಆದರೆ ಇಟಾಲಿಕ್ ಫಾಂಟ್‌ ಸ್ಟೈಲ್‌ನಲ್ಲಿ ಸಹ ಅಕ್ಷರ ಟೈಪ್ ಮಾಡಬಹುದಾದ ಆಯ್ಕೆ ಇದೆ. ಅದಕ್ಕಾಗಿ ಬಳಕೆದಾರರು ಮೆಸೆಜ್ ಬರೆಯುವಾಗ _text_ ಈ ಕ್ರಮ ಅನುಸರಿಸಬೇಕು.

ದಪ್ಪ ಅಕ್ಷರ (Bold) : ಬಳಕೆದಾರರು ವಾಟ್ಸಾಪ್‌ ನಲ್ಲಿ ಚಾಟ್‌ ಮಾಡುವಾಗ ಮೆಸೆಜ್‌ ಸಾಮಾನ್ಯ ಗಾತ್ರದಲ್ಲಿ ಇರುತ್ತದೆ. ಆದರೆ ಬಳಕೆದಾರರು ಪ್ರಮುಖ ಅಂಶವನ್ನು ದಪ್ಪ ಅಕ್ಷರ (Bold) ಸ್ಟೈಲ್‌ನಲ್ಲಿ ಸಹ ಟೈಪ್ ಮಾಡಬಹುದಾದ ಆಯ್ಕೆ ಇದೆ. ಅದಕ್ಕಾಗಿ ಬಳಕೆದಾರರು ಮೆಸೆಜ್ ಬರೆಯುವಾಗ *text* ಈ ಕ್ರಮ ಅನುಸರಿಸಬೇಕು.

ವಾಟ್ಸಾಪ್‌ನಲ್ಲಿ ಎಂದಾದರೂ ಈ ಫೀಚರ್‌ ಬಳಕೆ ಮಾಡಿದ್ದೀರಾ?..ವಾವ್ಹ್ ಅಂತೀರಾ!

Strikethrough (ಸ್ಟ್ರೈಕ್ಥ್ರೂ) : ಬಳಕೆದಾರರು ವಾಟ್ಸಾಪ್‌ನಲ್ಲಿ ಮೆಸೆಜ್‌ ಟೈಪ್‌ ಮಾಡುವಾಗ Strikethrough (ಸ್ಟ್ರೈಕ್ಥ್ರೂ) ಸ್ಟೈಲ್‌ನಲ್ಲಿ ಅಕ್ಷರ ಬರೆಯಬೇಕಿದ್ದರೆ, ಅದಕ್ಕೆ ಆಯ್ಕೆ ಇದೆ. ಅದಕ್ಕಾಗಿ ಬಳಕೆದಾರರು ಮೆಸೆಜ್ ಟೈಪ್ ಮಾಡುವಾಗ ~text~ ಈ ಕ್ರಮ ಅನುಸರಿಸಬೇಕು.

ಟೈಪ್‌ ಮಾಡದೇ ಮೆಸೆಜ್ ಸೆಂಡ್ ಮಾಡಿ ವಾಟ್ಸಪ್‌ನಲ್ಲಿ ಟೈಪ್ ಮಾಡದೇ ಮೆಸೆಜ್ ಸೆಂಡ್ ಮಾಡಬಹುದಾಗಿದ್ದು, ಆದ್ರೆ ಅದಕ್ಕಾಗಿ ಕಂಪೆನಿ ಯಾವುದೇ ಫೀಚರ್ ನೀಡಿಲ್ಲ. ಬದಲಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ 'ಸಿರಿ' ಮತ್ತು 'ಗೂಗಲ್ ಅಸಿಸ್ಟಂಟ್' ವಾಯಿಸ್‌ ಅಸಿಸ್ಟಂಟ್‌ಗಳನ್ನು ಬಳಸುವ ಮೂಲಕ ವರ್ಬಲ ಕಮಾಂಡ್ ನೀಡಬಹುದು. ಹೀಗಾಗಿ ವಾಯಿಸ್‌ ಅಸಿಸ್ಟಂಟ್ ಸೇವೆ ಬಳಸಿದರೇ ಮೆಸೆಜ್ ಟೈಪ್ ಮಾಡುವ ಅಗತ್ಯ ಇರುವುದಿಲ್ಲ.

ಸ್ಟಾರ್ ಟೆಕ್ಸ್ಟ್‌ ಮುಖ್ಯ ಮೆಸೆಜ್‌, ಫೋಟೊ, ಕಾಂಟ್ಯಾಕ್ಟ್‌ ಅಥವಾ ಲಿಂಕ್ ಅನ್ನು ಸಾಗಿಸುವ ಚಾಟ್‌ಗಳು. ಸ್ಟಾರ್ ಅನ್ನು ಸೇರಿಸುವ ಮೂಲಕ ನೀವು ಅವುಗಳನ್ನು ನಂತರ ಸೇವ್ ಮಾಡಬಹುದು. ಹಾಗೆ ಮಾಡಲು, ಮೆಸೆಜ್‌ ಮೇಲೆ ದೀರ್ಘವಾಗಿ ಒತ್ತಿ ಮತ್ತು ಮೇಲ್ಭಾಗದಲ್ಲಿರುವ ಸ್ಟಾರ್‌ ಐಕಾನ್ ಮೇಲೆ ಟ್ಯಾಪ್ ಮಾಡಿ. ನಿಮ್ಮ ಸ್ಟಾರ್ ಹಾಕಿದ ಮೆಸೆಜ್‌ಗಳಿಗೆ ಹಿಂತಿರುಗಲು, ಆಂಡ್ರಾಯ್ಡ್‌ನಲ್ಲಿ ಮೆನು ಬಾರ್ ಮತ್ತು ಐಫೋನ್‌ ನಲ್ಲಿ ಸೆಟ್ಟಿಂಗ್‌ಗಳಿಗೆ ಹೋಗಿ.

ವಾಟ್ಸಾಪ್‌ ಗ್ರೂಪ್‌ನಿಂದ ಎಕ್ಸಿಟ್‌ ಆಗಲು ಐಫೋನ್‌ನಲ್ಲಿ ಈ ಕ್ರಮ ಅನುಸರಿಸಿ: > ಮೊದಲು ಐಫೋನ್‌ನಲ್ಲಿ ವಾಟ್ಸಾಪ್‌ ಆಪ್‌ ತೆರೆಯಿರಿ > ನಂತರ ಈಗ ಗುಂಪಿನಲ್ಲಿ ಎಡಕ್ಕೆ ಸ್ವೈಪ್ ಮಾಡಿರಿ > ಬಳಿಕ ನೀವು ಎರಡು ಆಯ್ಕೆಗಳನ್ನು ಕಾಣುವಿರಿ > ಅವುಗಳು ಮೋರ್ ಮತ್ತು ಆರ್ಕೈವ್, ಇವುಗಳಲ್ಲಿ ನೀವು 'ಮೋರ್' ಕ್ಲಿಕ್ ಮಾಡರಿ > ನಂತರ 'Exit Group' ಅನ್ನು ಟ್ಯಾಪ್ ಮಾಡಿ ಮತ್ತು ದೃಢೀಕರಿಸಿ.

Best Mobiles in India

English summary
Secret WhatsApp tips and tricks you need to know. explained in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+