ಈ ಅಗ್ಗದ ಬೆಲೆಯ ಪ್ಲ್ಯಾನ್‌ನಲ್ಲಿ ಉಚಿತ ಓಟಿಟಿ ಪ್ರಯೋಜನ ಖಚಿತ!
ದೇಶದಲ್ಲಿ ಮೂರನೇ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಟೆಲಿಕಾಂ ಆಗಿರುವ ವಿ (Vi) ಸಂಸ್ಥೆಯು ಹಲವು ಪ್ರೀಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯು ಬಹುತೇಕ ಯೋಜನೆಗಳು ಡೇಟಾ ಪ್ರಯೋಜನ ಪಡೆದಿವೆ. ಹಾಗೆಯೇ ಇನ್ನು ಕೆಲವು ಯೋಜನೆಗಳು ಡೇಟಾ ಜೊತೆಗೆ ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯ ಸಹ ಪಡೆದಿವೆ.
ಹೌದು, ವಿ ಟೆಲಿಕಾಂನ ಕೆಲವಿ ಯೋಜನೆಗಳು ಓಟಿಟಿ ಪ್ರಯೋಜನ ಪಡೆದಿವೆ. ಆ ಪೈಕಿ 500ರೂ. ಬೆಲೆಯ ಒಳಗಿನ ಮೂರು ಪ್ಲ್ಯಾನ್‌ಗಳು ದೇಶದ ಅತ್ಯಂತ ಜನಪ್ರಿಯ OTT (ಓವರ್-ದಿ-ಟಾಪ್) ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆದಿದ್ದು, ಗ್ರಾಹಕರನ್ನು ಆಕರ್ಷಿಸಿವೆ.

ವಿ ಟೆಲಿಕಾಂನ ಮೂರು ಅಗ್ಗದ ಈ ಯೋಜನೆಗಳು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿಯ ಚಂದಾದಾರಿಕೆ ಅನ್ನು ಒದಗಿಸುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ, ಡೇಟಾ ಪ್ರಯೋಜನಗಳನ್ನು ಸಹ ಪಡೆದುಕೊಂಡಿವೆ. ಹಾಗಾದರೇ ಅಗ್ಗದ ಬೆಲೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ ಚಂದಾದಾರಿಕೆ ಪಡೆದ ವಿ ಟೆಲಿಕಾಂನ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿ ಟೆಲಿಕಾಂ 151ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳ ಮಾಹಿತಿ ಇಲ್ಲಿದೆ : ವಿ ಟೆಲಿಕಾಂನ ಈ ಪ್ರೀಪೇಯ್ಡ್ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಅವಧಿಯಲ್ಲಿ ಒಟ್ಟು 8GB ಡೇಟಾ ಪ್ರಯೋಜನ ಒಳಗೊಂಡಿದ್ದು, ಇದರೊಂದಿಗೆ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿಯ ಚಂದಾದಾರಿಕೆ ಅನ್ನು ಗ್ರಾಹಕರಿಗೆ ಒದಗಿಸುತ್ತದೆ.
ವಿ ಟೆಲಿಕಾಂ 399ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳ ವಿವರ : ವಿ ಟೆಲಿಕಾಂನ 399ರೂ. ಪ್ರೀಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಒಳಗೊಂಡಿದ್ದು, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಪಡೆದುಕೊಂಡಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿಯ ಚಂದಾದಾರಿಕೆ ಹಾಗೂ ಹೆಚ್ಚುವರಿ 5GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯ.
ವಿ ಟೆಲಿಕಾಂ 499ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳ ಮಾಹಿತಿ : ವಿ ಟೆಲಿಕಾಂನ 499ರೂ. ಪ್ರೀಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ಒಳಗೊಂಡಿದ್ದು, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಪಡೆದುಕೊಂಡಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿಯ ಚಂದಾದಾರಿಕೆ ಹಾಗೂ ಹೆಚ್ಚುವರಿ 5GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯ.
ಇತರೆ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ ಯೋಜನೆಗಳ ಮಾಹಿತಿ :
ವಿ ಟೆಲಿಕಾಂ 601ರೂ. ರೀಚಾರ್ಜ್ ಪ್ಲಾನ್ ಮಾಹಿತಿ : ವಿ ಟೆಲಿಕಾಂನ 601ರೂ. ರೀಚಾರ್ಜ್ ಪ್ಲಾನ್ ಒಂದು ವರ್ಷದ ಅವಧಿವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಒದಗಿಸಲಿದೆ. ಈ ಪ್ಲ್ಯಾನ್ ಅನಿಯಮಿತ ಧ್ವನಿ ಕರೆ, ದಿನವೂ 3 GB ಡೇಟಾ ಸೌಲಭ್ಯ ನೀಡುತ್ತದೆ. ಇದರೊಂದಿಗೆ ಈ ಪ್ಲ್ಯಾನ್ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಒದಗಿಸಲಿದೆ.
ಅಂದಹಾಗೆ ವಿ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 84GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ 16 GB ಡೇಟಾ ಸೌಲಭ್ಯ ಹೆಚ್ಚುವರಿಯಾಗಿ ಸಹ ದೊರೆಯಲಿದ್ದು, ಉಳಿದಂತೆ ವಿ ಆಪ್ಸ್ ಹಾಗೂ ಡೇಟಾ ರೋಲ್ ಓವರ್ ಸೌಲಭ್ಯ ಸಿಗಲಿದೆ.
ವಿ ಟೆಲಿಕಾಂ 901ರೂ. ರೀಚಾರ್ಜ್ ಪ್ಲಾನ್ ಮಾಹಿತಿ : ವಿ ಟೆಲಿಕಾಂನ 901ರೂ. ರೀಚಾರ್ಜ್ ಪ್ಲಾನ್ ಒಂದು ವರ್ಷದ ಅವಧಿವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಒದಗಿಸಲಿದೆ. ಈ ಪ್ಲ್ಯಾನ್ ಅನಿಯಮಿತ ಧ್ವನಿ ಕರೆ, ದಿನವೂ 3 GB ಡೇಟಾ ಸೌಲಭ್ಯ ನೀಡುತ್ತದೆ. ಇದರೊಂದಿಗೆ ಈ ಪ್ಲ್ಯಾನ್ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಒದಗಿಸಲಿದೆ. ಹಾಗೆಯೇ ಈ ರೀಚಾರ್ಜ್ ಯೋಜನೆಯು ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿ ಒಳಗೊಂಡಿದ್ದು, ಇದರೊಂದಿಗೆ 48GB ಡೇಟಾ ಸೌಲಭ್ಯ ಹೆಚ್ಚುವರಿಯಾಗಿ ದೊರೆಯುತ್ತದೆ.


Click it and Unblock the Notifications








