ನೀವು ಬೇಡ ಅಂದ್ರೂ, ಈ ಪ್ಲ್ಯಾನಿನಲ್ಲಿ ಉಚಿತವಾಗಿ 5GB ಡೇಟಾ ಸಿಗುತ್ತೆ!
ದೇಶದ ಟೆಲಿಕಾಂ ವಲಯದಲ್ಲಿ ತೃತೀಯ ದೊಡ್ಡ ಟೆಲಿಕಾಂ ಸಂಸ್ಥೆ ಎನಿಸಿಕೊಂಡಿರುವ ವಿ ಟೆಲಿಕಾಂ ಆಕರ್ಷಕ ಯೋಜನೆಗಳ ಜೊತೆಗೆ ಜಿಯೋ, ಏರ್‌ಟೆಲ್ ಟೆಲಿಕಾಂಗಳಿಗೆ ಪೈಫೋಟಿ ನೀಡುತ್ತ ಮುನ್ನಡೆದಿದೆ. ಅಧಿಕ ಚಂದಾದಾರರನ್ನು ಸೆಳೆಯಲು ವಿ ಸಂಸ್ಥೆಯು ತನ್ನ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳಲ್ಲಿ ಹೆಚ್ಚಿನ ಸೌಲಭ್ಯ ನೀಡಿದೆ. ಅದರಲ್ಲಿಯೂ ಕೆಲವು ಪ್ಲ್ಯಾನ್ ಅಂತೂ 5GB ಡೇಟಾ ಪ್ರಯೋಜನ ಪಡೆದಿವೆ.
ಹೌದು, ವಿ ಟೆಲಿಕಾಂ (Vi Telecom) ಅಧಿಕ ಡೇಟಾ ಪ್ರಯೋಜನದ ಹಲವು ಯೋಜನೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳು ಹೆಚ್ಚುವರಿ 5GB ಡೇಟಾ ಸೌಲಭ್ಯ ಪಡೆದಿದ್ದು, ಡೇಟಾ ಪ್ರಿಯ ಗ್ರಾಹಕರನ್ನು ಸೆಳೆದಿವೆ. ಅಧಿಕ ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್ ಪ್ರಯೋಜನ ಸಹ ಲಭ್ಯವಾಗಲಿವೆ.

ವಿ ಟೆಲಿಕಾಂ ಅಲ್ಪಾವಧಿಯ ಪ್ಲ್ಯಾನ್ ಹಾಗೂ ದೀರ್ಘಾವಧಿಯ ಯೋಜನೆಯಲ್ಲಿಯೂ ಹೆಚ್ಚುವರಿ ಡೇಟಾ ಪ್ರಯೋಜನ ಲಭ್ಯ ಮಾಡಿದೆ. ಅಲ್ಲದೇ ಆಯ್ದ ಪ್ಲ್ಯಾನ್‌ಗಳಲ್ಲಿ ವಿ ಆಪ್ಸ್‌ಗಳ ಸೇವೆ ಸಹ ನೀಡುತ್ತದೆ ಮತ್ತು ಡೇಟಾ ವಿಕೆಂಡ್ ರೋಲ್‌ಓವರ್ ಸೌಲಭ್ಯ ಸಹ ನೀಡುತ್ತದೆ. ಹಾಗಾದರೇ ಹೆಚ್ಚುವರಿ ಆಗಿ 5 GB ಡೇಟಾ ಸೌಲಭ್ಯ ಪಡೆದ ಕೆಲವು ವಿ ಟೆಲಿಕಾಂನ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿ ಟೆಲಿಕಾಂನ 719 ರೂ. ರೀಚಾರ್ಜ್ ಪ್ಲ್ಯಾನ್
ವಿ ಟೆಲಿಕಾಂನ 719 ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಲಭ್ಯ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಪಡೆದಿದೆ. ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ 5 GB ಡೇಟಾ ಪ್ರಯೋಜನ ಸಹ ಸಿಗಲಿದ್ದು, ಅಲ್ಲದೇ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.
ವಿ ಟೆಲಿಕಾಂನ 479 ರೂ. ರೀಚಾರ್ಜ್ ಪ್ಲ್ಯಾನ್
ವಿ ಟೆಲಿಕಾಂ ಸಂಸ್ಥೆಯ 479 ರೂ. ರೀಚಾರ್ಜ್ ಯೋಜನೆಯು ಒಟ್ಟು ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಕೂಡಾ ದೊರೆಯುತ್ತದೆ. ಇದರ ಜೊತೆಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಸಿಗಲಿದೆ. ಅಲ್ಲದೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಪಡೆದಿದೆ. ಈ ಪ್ರೀಪೇಯ್ಡ್ ಯೋಜನೆಯಲ್ಲಿ ಕೂಡಾ ಹೆಚ್ಚುವರಿಯಾಗಿ 5 GB ಡೇಟಾ ಪ್ರಯೋಜನ ಸಹ ಸಿಗಲಿದ್ದು, ಅಲ್ಲದೇ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.
ವಿ ಟೆಲಿಕಾಂನ 299 ರೂ. ರೀಚಾರ್ಜ್ ಪ್ಲ್ಯಾನ್
ವಿ ಟೆಲಿಕಾಂ ಸಂಸ್ಥೆಯ 299 ರೂ. ರೀಚಾರ್ಜ್ ಯೋಜನೆಯು ಒಟ್ಟು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಸೌಲಭ್ಯ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಸಿಗಲಿದೆ. ಅಲ್ಲದೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಪಡೆದಿದೆ. ಈ ಪ್ರೀಪೇಯ್ಡ್ ಯೋಜನೆಯಲ್ಲಿ ಕೂಡಾ ಹೆಚ್ಚುವರಿಯಾಗಿ 5 GB ಡೇಟಾ ಪ್ರಯೋಜನ ಸಹ ಸಿಗಲಿದ್ದು, ಅಲ್ಲದೇ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.


Click it and Unblock the Notifications








