ನೀವು ಹೆಚ್ಚು ಡೇಟಾ ಬಳಕೆ ಮಾಡುವುದಿಲ್ಲವೇ?.ಹಾಗಿದ್ರೆ ಈ ಅಗ್ಗದ ಪ್ಲ್ಯಾನ್ ಉತ್ತಮ!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಮುಂಚೂಣಿಯಲ್ಲಿರುವ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳಿಗೆ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಸಂಸ್ಥೆಯು ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ವಿ ಟೆಲಿಕಾಂನ ಬಹುತೇಕ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಮುಖ್ಯವಾಗಿ ದೈನಂದಿನ ಡೇಟಾ, ಅನಿಯಮಿತ ವಾಯಿಸ್ ಕರೆ, ದೀರ್ಘಾವಧಿಯ ವ್ಯಾಲಿಡಿಟಿ ಆಯ್ಕೆಗಳು ಹೆಚ್ಚು ಗಮನ ಸೆಳೆದಿವೆ. ಆ ಪೈಕಿ ಕಡಿಮೆ ಡೇಟಾ ಬಳಕೆ ಇರುವ ಗ್ರಾಹಕರಿಗೂ ಅತ್ಯುತ್ತಮ ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ನೀಡಿದೆ.

ಹೌದು, ಜನಪ್ರಿಯ ವಿ ಟೆಲಿಕಾಂ ಭಿನ್ನ ಪ್ರೀಪೇಯ್ಡ್ ರೀಚಾರ್ಜ್ ಲಿಸ್ಟ್ ಒಳಗೊಂಡಿದೆ. ಆ ಪೈಕಿ ಹೆಚ್ಚು ಡೇಟಾ ಬಳಕೆ ಮಾಡದ ಗ್ರಾಹಕರಿಗಾಗಿ ಪ್ರತಿದಿನ 1GB ಡೇಟಾ ಸೌಲಭ್ಯದ ಯೋಜನೆಗಳು ಗಮನ ಸೆಳೆದಿದ್ದು, ಈ ಯೋಜನೆಗಳು ಕಡಿಮೆ ಪ್ರೈಸ್ ಟ್ಯಾಗ್‌ನಲ್ಲಿ ಇವೆ. ಈ ಯೋಜನೆಗಳು ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್, ಸೌಲಭ್ಯಗಳು ಸಹ ಒಳಗೊಂಡಿದೆ. ಹಾಗಾದರೇ ವಿ ಟೆಲಿಕಾಂನ ಪ್ರತಿದಿನ 1GB ಡೇಟಾ ಪ್ರಯೋಜನದ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ (ವೊಡಾಫೋನ್-ಐಡಿಯಾ) 219ರೂ. ಪ್ರೀಪೇಯ್ಡ್ ಪ್ಲ್ಯಾನ್
ವಿ ಟೆಲಿಕಾಂ 219ರೂ. ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ವಿ ಆಪ್ಸ್, ಮ್ಯೂವಿಸ್ ಸಹ ಲಭ್ಯವಾಗಲಿವೆ.

ವಿ ಟೆಲಿಕಾಂ (ವೊಡಾಫೋನ್-ಐಡಿಯಾ) 199ರೂ. ಪ್ರೀಪೇಯ್ಡ್ ಪ್ಲ್ಯಾನ್
ವೊಡಾಫೋನ್-ಐಡಿಯಾ ಟೆಲಿಕಾಂನ 199ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಇದೀಗ ಒಟ್ಟು 24 ದಿನಗಳ ವ್ಯಾಲಿಡಿಟಿ ಒದಗಿಸಲಾಗಿದೆ. ಹಾಗೆಯೇ ಈ ಯೋಜನೆಯಲ್ಲಿ ಮೊದಲು ಪ್ರತಿದಿನ 1GB ಡೇಟಾ ಸೌಲಭ್ಯ ಲಭ್ಯ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯಗಳು ದೊರೆಯಲಿವೆ. ಹೆಚ್ಚುವರಿಯಾಗಿ ವಿ ಮ್ಯೂವಿಸ್ ಮತ್ತು ಟಿವಿ ಆಪ್ ಲಭ್ಯ.

ವಿ ಟೆಲಿಕಾಂ 501ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 501ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ 16 GB ಡೇಟಾ ಲಭ್ಯವಾಗಲಿದೆ. ವಿಕೇಂಡ್ ಡೇಟಾ ರೋಲ್ ಓವರ್, ವಿ ಆಪ್ಸ್‌ಗಳ ಪ್ರಯೋಜನವು ಪಡೆದಿದೆ.

ವಿ ಟೆಲಿಕಾಂ 701ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 701ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ 32 GB ಡೇಟಾ ಲಭ್ಯವಾಗಲಿದೆ. ವಿಕೇಂಡ್ ಡೇಟಾ ರೋಲ್ ಓವರ್, ವಿ ಆಪ್ಸ್‌ಗಳ ಪ್ರಯೋಜನವು ಪಡೆದಿದೆ.

ವಿ ಟೆಲಿಕಾಂ 901ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 901ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ.


Click it and Unblock the Notifications








