ವಿ ಟೆಲಿಕಾಂನ ಈ ಪ್ಲ್ಯಾನ್‌ಗಳಲ್ಲಿ 365 ದಿನಗಳ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಡೇಟಾ!
ಪ್ರಸ್ತುತ ಟೆಲಿಕಾಂ ಬಳಕೆದಾರರು ಅಧಿಕ ಡೇಟಾ ಜೊತೆಗೆ ದೀರ್ಘ ಅವಧಿಯ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳನ್ನು ರೀಚಾರ್ಜ್ ಮಾಡಿಸಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳು ಆಕರ್ಷಕ ವ್ಯಾಲಿಡಿಟಿಯ ಯೋಜನೆಗಳನ್ನು ಪರಿಚಯಿಸಿವೆ. ಆ ಪೈಕಿ (ವೊಡಾಫೋನ್-ಐಡಿಯಾ) ವಿ ಟೆಲಿಕಾಂನ ಕೆಲವು ಪ್ಲ್ಯಾನ್‌ಗಳು ಬಿಗ್ ವ್ಯಾಲಿಡಿಟಿ ಸೌಲಭ್ಯದಿಂದ ಗಮನ ಸೆಳೆದಿದ್ದು, ಡೇಟಾ ಪ್ರಯೋಜನ ಸಹ ಪಡೆದಿವೆ.

ಹೌದು, ವಿ ಟೆಲಿಕಾಂನ ಬಹುತೇಕ ಯೋಜನೆಗಳು ಹೆಚ್ಚಿನ ಡೇಟಾ ಹಾಗೂ ಬಿಗ್ ವ್ಯಾಲಿಡಿಟಿ ಸೌಲಭ್ಯ ಹೊಂದಿವೆ. ಆದರೆ ಅವುಗಳಲ್ಲಿ ಪ್ರತಿದಿನ ಡೇಟಾ ಪ್ರಯೋಜನ ಒಳಗೊಂಡ ವಾರ್ಷಿಕ ವ್ಯಾಲಿಡಿಟಿಯ ಪ್ಲ್ಯಾನ್‌ಗಳು ಹೆಚ್ಚು ಡಿಮ್ಯಾಂಡ್ ಪಡೆದಿವೆ. ಮತ್ತೆ ಕೆಲವು ಯೋಜನೆಗಳು ದೈನಂದಿನ ಡೇಟಾ ಹೊಂದಿರದೆ ಇದ್ದರೂ ಅಧಿಕ ವ್ಯಾಲಿಡಿಟಿ ಸೌಲಭ್ಯ ಪಡೆದಿವೆ. ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ವಾರ್ಷಿಕ ವ್ಯಾಲಿಡಿಟಿಯ ಯೋಜನೆಗಳು ಹೆಚ್ಚು ಅಟ್ರ್ಯಾಕ್ಟ್ ಅನಿಸಲಿವೆ. ಹಾಗಾದರೇ ವಿ ಟೆಲಿಕಾಂನ ವಾರ್ಷಿಕ ವ್ಯಾಲಿಡಿಟಿ ಅವಧಿಯ (365 ದಿನಗಳು) ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂನ 2595ರೂ. ಯೋಜನೆ
ವೊಡಾಫೋನ್-ಐಡಿಯಾದ 2595ರೂ. ಪ್ಲ್ಯಾನ್ ಒಂದು ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದೆ. ಹಾಗೂ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ZEE5 ಪ್ರೀಮಿಯಂ ಆಕ್ಸಸ್ ಸೌಲಭ್ಯ ಇದೆ.

ವಿ ಟೆಲಿಕಾಂನ 2399ರೂ. ಯೋಜನೆ
ವೊಡಾಫೋನ್-ಐಡಿಯಾದ 2399ರೂ. ಸಹ ಪ್ಲ್ಯಾನ್ ಒಂದು ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಹಾಗೂ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ZEE5 ಪ್ರೀಮಿಯಂ ಆಕ್ಸಸ್ ಸೌಲಭ್ಯ ಇದ್ದು, ವಿಕೇಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಸಹ ಇದೆ.

ವಿ ಟೆಲಿಕಾಂನ 1499ರೂ. ಯೋಜನೆ
ವೊಡಾಫೋನ್-ಐಡಿಯಾದ 1499ರೂ. ಪ್ರೀಪೇಯ್ಡ್ ಪ್ಲ್ಯಾನ್ ಸಹ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24GB ಡೇಟಾ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಒಟ್ಟು 3600 ಉಚಿತ ಎಸ್‌ಎಮ್‌ಎಸ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ವಿ ಮ್ಯೂವಿಸ್, ಇತರೆ ಆಪ್‌ಗಳ ಆಕ್ಸಸ್ ಸೌಲಭ್ಯ ಇದೆ.


Click it and Unblock the Notifications