ಈ ವಿವೋ ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ!..ಲಿಸ್ಟ್ ಇಲ್ಲಿದೆ ನೋಡಿ!
ವಿವೋ ಸಂಸ್ಥೆಯು ಭಿನ್ನ ಶ್ರೇಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ವಿವೋ ಸಂಸ್ಥೆಯು ತನ್ನ ವಿವೋ Y16, ವಿವೋ Y02t, ವಿವೋ Y02, ವಿವೋ Y27 ಮತ್ತು ವಿವೋ17s ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಶಾಶ್ವತ ಬೆಲೆ ಇಳಿಕೆ ಮಾಡಿದ್ದು, ಗ್ರಾಹಕರಿಗೆ ಭಾರೀ ಅಚ್ಚರಿ ಮೂಡಿಸಿದೆ.
ಹೌದು, ವಿವೋ ಕಂಪನಿಯು ತನ್ನ Y ಸರಣಿಯ ವಿವೋ Y16, ವಿವೋ Y02t, ವಿವೋ Y02, ವಿವೋ Y27 ಮತ್ತು ವಿವೋ17s ಫೋನ್‌ಗಳ ಬೆಲೆಯಲ್ಲಿ 1,000ರೂ. ಗಳ ವರೆಗೆ ಬೆಲೆ ಇಳಿಕೆ ತಿಳಿಸಿದೆ. ಇನ್ನು ಹೊಸ ಬೆಲೆಗಳು ಈಗ ಲೈವ್ ಆಗಿದ್ದು, ಗ್ರಾಹಕರು ಆನ್‌ಲೈನ್ ತಾಣಗಳ ಮೂಲಕ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಫೋನ್ ಖರೀದಿ ಮಾಡಬಹುದು.

ಅಂದಹಾಗೆ ವಿವೋ ಸಂಸ್ಥೆಯ Y ಸರಣಿಯ ಬಹುತೇಕ ಫೋನ್‌ಗಳು ಬಜೆಟ್ ಪ್ರೈಸ್‌ಟ್ಯಾಗ್ ಹೊಂದಿದ್ದು, ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರನ್ನು ಸೆಳೆದಿವೆ. ಹಾಗಾದರೆ ವಿವೋ Y16, ವಿವೋ Y02t, ವಿವೋ Y02, ವಿವೋ Y27 ಮತ್ತು ವಿವೋ17s ಫೋನ್‌ಗಳ ಫೀಚರ್ಸ್ ಹಾಗೂ ಬೆಲೆ ಇಳಿಕೆ ಮಾಹಿತಿ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿವೋ Y16 ಫೋನ್ ಬೆಲೆ ಇಳಿಕೆ
ವಿವೋ Y16 ಸ್ಮಾರ್ಟ್‌ಫೋನ್ 4GB RAM + 64GB ವೇರಿಯಂಟ್ ಬೆಲೆ ಇಳಿಕೆಯಿಂದಾಗಿ ಈಗ 9,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯ ಇದೆ. ಇನ್ನು ಫೋನ್ 6.51 ಇಂಚಿನ IPS LCD HD+ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೇ ಮೀಡಿಯಾ ಟೆಕ್ ಹೆಲಿಯೋ P35 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ರನ್ ಆಗುತ್ತದೆ.

ವಿವೋ Y17s ಫೋನ್ ಬೆಲೆ ಇಳಿಕೆ
ವಿವೋ ಸಂಸ್ಥೆಯ ವಿವೋ Y17s ಸ್ಮಾರ್ಟ್‌ಫೋನ್ ಬೆಲೆಯಲ್ಲಿ 500ರೂ. ಇಳಿಕೆ ಆಗಿದ್ದು, 4GB RAM + 64GB ವೇರಿಯಂಟ್ ಈಗ 10,499ರೂ. ಗಳಲ್ಲಿ ಖರೀದಿಗೆ ಸಿಗಲಿದೆ. ಇನ್ನು ಈ ಫೋನ್ 6.56 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಹಿಲಿಯೋ G85SoC ಪ್ರೊಸೆಸರ್ ಹೊಂದಿದ್ದು, 5,000mAh ಸಾಮರ್ಥ್ಯ ಬ್ಯಾಕ್‌ಅಪ್ ಜೊತೆಗೆ 15W ವೈರ್ಡ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.

ವಿವೋ Y27 ಫೋನ್ ಬೆಲೆ ಇಳಿಕೆ
ವಿವೋ ಕಂಪನಿಯ ವಿವೋ Y27 ಮೊಬೈಲ್ ಬೆಲೆಯಲ್ಲಿ ಇಳಿಕೆ ಆಗಿದ್ದು, 6GB + 128GB ವೇರಿಯಂಟ್ ಈಗ 12,999ರೂ. ಗಳಲ್ಲಿ ಖರೀದಿಗೆ ಲಭ್ಯ. ಇನ್ನು ಈ ಫೋನ್ FHD+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಹಾಗೆಯೇ 50 ಮೆಗಾ ಪಿಕ್ಸಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಸೌಲಭ್ಯ ಪಡೆದುಕೊಂಡಿದೆ. ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 44W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.
ವಿವೋ Y02 ಮತ್ತು ವಿವೋ Y02t ಫೋನ್ ಬೆಲೆ ಇಳಿಕೆ
ಇನ್ನು ವಿವೋ Y02 ಮತ್ತು ವಿವೋ Y02t ಫೋನ್‌ಗಳ ಬೆಲೆಯಲ್ಲಿಯೂ ಆಕರ್ಷಕ ಇಳಿಕೆ ಆಗಿದೆ. ವಿವೋ Y02 ಫೋನಿನ 3GB + 32GB ವೇರಿಯಂಟ್‌ನ ಆಫರ್ ಬೆಲೆ 7,999 ರೂ. ಆಗಿದೆ. ಅದೇ ರೀತಿ ವಿವೋ Y02t ಫೋನಿನ ಡಿಸ್ಕೌಂಟ್ ಬೆಲೆಯು 8,499ರೂ. ಆಗಿದೆ.


Click it and Unblock the Notifications








