Home
ಸುದ್ದಿಜಾಲ

ವೊಡಾಫೋನಿನ ಈ ಮೂರು ಪ್ಲ್ಯಾನ್‌ಗಳಲ್ಲಿ ಪ್ರತಿದಿನ 4GB ಡೇಟಾ ಲಭ್ಯ!

ಲಾಕ್‌ಡೌನ್‌ ಅವಧಿಯಲ್ಲಿ ತನ್ನ ಚಂದಾದಾರರಿಗೆ ಅನುಕೂಲವಾಗಲೆಂದು ಒಳ ಬರುವ ಕರೆಗಳ ವ್ಯಾಲಿಡಿಟಿ ಅವಧಿ ವಿಸ್ತಿಸಿದೆ. ಹಾಗೆಯೇ ಇತ್ತೀಚಿಗೆ ತನ್ನ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳಿಗೆ ಡಬಲ್‌ ಡೇಟಾ ಪ್ರಯೋಜನವನ್ನು ನೀಡಿತ್ತು. ಆದ್ರೆ ವೊಡಾಫೋನ್ ಇದೀಗ ಮತ್ತೆ ಮೂರು ಪ್ರೀಪೇಯ್ಡ್‌ ಪ್ಲ್ಯಾನ್‌ಗಳಿಗೆ ಡಬಲ್‌ ಡೇಟಾ ಸೌಲಭ್ಯವನ್ನು ಘೋಷಿಸಿದ್ದು, ಚಂದಾದಾರರಿಗೆ ವಾಯಿಸ್‌ ಕರೆ ಜೊತೆ ಭರ್ಜರಿ ಡೇಟಾ ಪ್ರಯೋಜನ ಲಭ್ಯವಾಗಲಿದೆ.

ವೊಡಾಫೋನ್ ಟೆಲಿಕಾಂ

ಹೌದು, ವೊಡಾಫೋನ್ ಟೆಲಿಕಾಂ ಸಂಸ್ಥೆಯು ತನ್ನ 299ರೂ, 449ರೂ ಮತ್ತು 699ರೂ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಿಗೆ ಡಬಲ್‌ ಡೇಟಾ ಕೊಡುಗೆ ಘೋಷಿಸಿದೆ. ವೊಡಾಫೋನಿನ ಈ ಮೂರು ಪ್ಲ್ಯಾನ್‌ಗಳು ಪ್ರತಿದಿನ 2GB ಡೇಟಾ ಸೌಲಭ್ಯ ಹೊಂದಿದ್ದು, ಡಬಲ್‌ ಡೇಟಾ ಕೊಡುಗೆಯಿಂದ ಇನ್ನು ಪ್ರತಿದಿನ 4GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯ ಸಹ ದೊರೆಯುತ್ತದೆ. ವೊಡಾಫೋನ್ ಡಬಲ್‌ ಡೇಟಾ ಯೋಜನೆಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ವೊಡಾಫೋನ್ 299ರೂ. ಪ್ಲ್ಯಾನ್

ವೊಡಾಫೋನ್ 299ರೂ. ಪ್ಲ್ಯಾನ್

ವೊಡಾಫೋನಿನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದೆ. ಡಬಲ್‌ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದ್ದು, ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹಾಗೂ ವೊಡಾಫೋನ್ ಪ್ಲೇ ಹಾಗೂ Zee5 ಪ್ರಯೋಜನ ಸಿಗುತ್ತದೆ.

ವೊಡಾಫೋನ್ 499ರೂ. ಪ್ಲ್ಯಾನ್

ವೊಡಾಫೋನ್ 499ರೂ. ಪ್ಲ್ಯಾನ್

ವೊಡಾಫೋನಿನ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದ್ದು, ಡಬಲ್‌ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದೆ. ಹೀಗಾಗಿ ಈ ಪ್ಲ್ಯಾನಿನಲ್ಲಿ ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹಾಗೂ ವೊಡಾಫೋನ್ ಪ್ಲೇ ಹಾಗೂ Zee5 ಪ್ರಯೋಜನ ಸಿಗುತ್ತದೆ.

ವೊಡಾಫೋನ್ 699ರೂ. ಪ್ಲ್ಯಾನ್

ವೊಡಾಫೋನ್ 699ರೂ. ಪ್ಲ್ಯಾನ್

ವೊಡಾಫೋನಿನ 699ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದೆ. ಡಬಲ್‌ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದ್ದು, ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಆದರೆ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಒಟ್ಟು 168GB ಡೇಟಾ ಲಭ್ಯ. ಹಾಗೂ ವೊಡಾಫೋನ್ ಪ್ಲೇ ಹಾಗೂ Zee5 ಪ್ರಯೋಜನ ಸಿಗುತ್ತದೆ.

ಈ ಕೊಡುಗೆ ಆಯ್ದ ಪ್ರದೇಶಗಳಿಗೆ ಮಾತ್ರ

ಈ ಕೊಡುಗೆ ಆಯ್ದ ಪ್ರದೇಶಗಳಿಗೆ ಮಾತ್ರ

ಪ್ರಸ್ತುತ ವೊಡಾಫೋನಿನ 299ರೂ, 449ರೂ ಮತ್ತು 699ರೂ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಿಗೆ ಡಬಲ್‌ ಡೇಟಾ ಕೊಡುಗೆಯು ದೆಹಲಿ, ಮಧ್ಯಪ್ರದೇಶ, ಮುಂಬೈ, ಕೋಲ್ಕತಾ, ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರ ಒಂಬತ್ತು ಟೆಲಿಕಾಂ ವಲಯಗಳಲ್ಲಿ ಮಾತ್ರ ಲಭ್ಯವಿದೆ.

Best Mobiles in India

English summary
Vodafone Idea is offering Double Data benefit on Rs 299, Rs 449 and Rs 699 prepaid plans as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+