Home
ಸುದ್ದಿಜಾಲ

ವೊಡಾಫೋನ್-ಐಡಿಯಾದ ಈ ಪ್ಲ್ಯಾನ್‌ಗಳಲ್ಲಿ ಅಧಿಕ ಡೇಟಾ ಜೊತೆ ಹೆಚ್ಚುವರಿ ಸೌಲಭ್ಯ!

ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಗಳು ಒಟ್ಟಾಗಿ ಈಗ Vi ಹೆಸರಿನಿಂದ ಕಾಣಿಸಿಕೊಂಡಿವೆ. ವೊಡಾಫೋನ್ ಐಡಿಯಾ ಜಂಟಿಯಾಗಿ ಬ್ರ್ಯಾಂಡ್ Vi ನಲ್ಲಿ ಈಗ ಹೊಸ ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್ ಘೋಷಿಸಿದೆ. ಬಹುತೇಕ ಪ್ಲ್ಯಾನ್‌ಗಳು ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಸೌಲಭ್ಯ ಪಡೆದಿವೆ. ಇನ್ನು ಕೆಲವು ಯೋಜನೆಗಳು ವಿಶೇಷ ಪ್ರಯೋಜನಗಳಿಂದ ಗ್ರಾಹಕರನ್ನು ಸೆಳೆದಿವೆ.

ವೊಡಾಫೋನ್-ಐಡಿಯಾ

ಹೌದು, ವೊಡಾಫೋನ್-ಐಡಿಯಾ (Vi) ಟೆಲಿಕಾಂ ಭಿನ್ನ ಪ್ರಯೋಜನಗಳ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಕೆಲವು ಆಯ್ದ ಪ್ಲ್ಯಾನ್‌ಗಳು ZEE ಪ್ರೀಮಿಯಂ ಆಕ್ಸಸ್ ಸೌಲಭ್ಯವನ್ನು ಒಳಗೊಂಡಿವೆ. ಇನ್ನು ಕೆಲವು ಯೋಜನೆಗಳು ಅನಿಯಮಿತ ಉಚಿತ ವಾಯಿಸ್‌ ಕರೆ ಸೌಲಭ್ಯ, ಎಸ್‌ಎಮ್‌ಎಸ್‌ ಪ್ರಯೋಜನ ಹಾಗೂ ಪ್ರತಿದಿನ ಅಧಿಕ ಡೇಟಾ ಸೌಲಭ್ಯವನ್ನು ಪಡೆದಿವೆ. ವೊಡಾಫೋನ್ ಐಡಿಯಾದ ಕೆಲವು ವಿಶೇಷ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

Vi 405ರೂ. ಪ್ಲ್ಯಾನ್

Vi 405ರೂ. ಪ್ಲ್ಯಾನ್

ವೊಡಾಫೋನ್ ಐಡಿಯಾ ಸಂಸ್ಥೆಯ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಅವಧಿಯಲ್ಲಿ ಒಟ್ಟು 90GB ಡೇಟಾ ಪ್ರಯೋಜನ ಇದ್ದು, ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಅವಕಾಶ ಹೊಂದಿದೆ. ಪ್ರತಿದಿನ 100ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದ್ದು, ZEE ಪ್ರೀಮಿಯಂ ಆಕ್ಸಸ್‌ನ ಸೌಲಭ್ಯವನ್ನು ಒಳಗೊಂಡಿದೆ.

Vi 299ರೂ. ಪ್ಲ್ಯಾನ್

Vi 299ರೂ. ಪ್ಲ್ಯಾನ್

ವೊಡಾಫೋನ್‌-ಐಡಿಯಾದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದೆ. ಡಬಲ್‌ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದ್ದು, ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹಾಗೂ ವೊಡಾಫೋನ್ ಪ್ಲೇ ಹಾಗೂ Zee5 ಪ್ರಯೋಜನ ಸಿಗುತ್ತದೆ.

Vi 351ರೂ. ಡೇಟಾ ಪ್ಲ್ಯಾನ್

Vi 351ರೂ. ಡೇಟಾ ಪ್ಲ್ಯಾನ್

ವೋಡಾಫೋನ-ಐಡಿಯಾ 351ರೂ. ವರ್ಕ್ ಫ್ರಮ್ ಹೋಮ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 100GB ಡೇಟಾ ಸೌಲಭ್ಯ ದೊರೆಯುತ್ತದೆ. ಹಾಗೆಯೇ ವೊಡಾಫೋನ್-ಐಡಿಯಾ ಟೆಲಿಕಾಂ ಡಬಲ್ ಡೇಟಾ ಕೊಡುಗೆಯ ಯೋಜನೆಗಳನ್ನು ಹೊಂದಿವೆ.

Vi 499ರೂ. ಪ್ಲ್ಯಾನ್

Vi 499ರೂ. ಪ್ಲ್ಯಾನ್

ವೊಡಾಫೋನ್‌-ಐಡಿಯಾದ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದ್ದು, ಡಬಲ್‌ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದೆ. ಹೀಗಾಗಿ ಈ ಪ್ಲ್ಯಾನಿನಲ್ಲಿ ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹಾಗೂ ವೊಡಾಫೋನ್ ಪ್ಲೇ ಹಾಗೂ Zee5 ಪ್ರಯೋಜನ ಸಿಗುತ್ತದೆ.

Vi 699ರೂ. ಪ್ಲ್ಯಾನ್

Vi 699ರೂ. ಪ್ಲ್ಯಾನ್

ವೊಡಾಫೋನ್‌-ಐಡಿಯಾದ 699ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದೆ. ಡಬಲ್‌ ಡೇಟಾ ಕೊಡುಗೆಯಿಂದ ಹೆಚ್ಚುವರಿ 2GB ಡೇಟಾ ಲಭ್ಯವಾಗಲಿದ್ದು, ಒಟ್ಟಾರೆ 4GB ಡೇಟಾ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಆದರೆ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಒಟ್ಟು 168GB ಡೇಟಾ ಲಭ್ಯ. ಹಾಗೂ ವೊಡಾಫೋನ್ ಪ್ಲೇ ಹಾಗೂ Zee5 ಪ್ರಯೋಜನ ಸಿಗುತ್ತದೆ.

Best Mobiles in India

English summary
Vi is offering some prepaid plans to the customers with unique benefits such as ZEE5 Premium.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+