ಕದ್ದ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಿಕ್ಕಿಬಿದ್ದ ಕಳ್ಳ!!

Written By:

ಕಳ್ಳರು ಮೊಬೈಲ್ ಕದ್ದರೂ ಸಹ ಅದನ್ನು ಬಳಕೆ ಮಾಡಲು ಸಾಧ್ಯವಾಗದಂತೆ ಮಾಡಬಹುದಾದ ತಂತ್ರಜ್ಞಾನ ಈಗಾಗಲೇ ಬಳಕೆಗೆ ಬಂದಿದೆ ಮತ್ತು ಬರುತ್ತಿವೆ. ಆದರೂ ಸಹ ಮೊಬೈಲ್ ಖದಿಯುವವರ ಪ್ರಮಾಣ ಕಡಿಮೆಯಾಗಿಲ್ಲ ಎನ್ನಬಹುದು.! ಏಕೆಂದರೆ ಕದ್ದ ಮೊಬೈಲ್ ಬಿಡಿಬಾಗಗಳನ್ನು ಮಾಡಿಕೊಳ್ಳುವ ಚಾಣಾಕ್ಷರು ಅವರಲ್ಲಿದ್ದಾರೆ.!!

ಆದರೆ, ಇಲ್ಲೊಬ್ಬ ಕಳ್ಳ ಮೊಬೈಲ್ ಕದ್ದು ಅದರಲ್ಲಿ ಸೆಲ್ಫಿ ತೆಗೆದುಕೊಂಡು ಪೋಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.! ಹೌದು, ದೆಹಲಿಯ ದರ್ಯಾಗಂಜ್ ಪ್ರದೇಶದಲ್ಲಿ ಸಂಗೀತಾ ಅಗರ್ವಾಲ್ ಎಂಬ ಮಹಿಳೆ ಬಸ್‌ನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕದ್ದಿದ್ದ ಕಳ್ಳನೊಬ್ಬ ಕದ್ದ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಿಕ್ಕಿಬಿದ್ದಿದ್ದಾನೆ.!!

ಕದ್ದ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಿಕ್ಕಿಬಿದ್ದ ಕಳ್ಳ!!

ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಕಳ್ಳನು ಸಿಕ್ಕಿಬಿದ್ದ ಈ ಪ್ರಕರಣದಲ್ಲಿ ನೂತನ ತಂತ್ರಜ್ಞಾನವೇ ಉಪಯೋಗಕ್ಕೆ ಬಂದಿದ್ದು, ಮೊಬೈಲ್ ಕಳೆದುಕೊಂಡಿದ್ದ ಮಹಿಳೆ ಮೊಬೈಲ್‌ನಲ್ಲಿ ಯಾವುದೇ ಫೋಟೊ ಚಿತ್ರಸಿದರೂ ಅದು ಅವರ ಇ-ಮೇಲ್‌ಗೆ ಬರುವಂತೆ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಇದರಿಂದ ಕಳ್ಳ ತೆಗೆದ ಸೆಲ್ಫಿ ಚಿತ್ರ ಮಹಿಳೆಯ ಇಮೇಲ್‌ಗೆ ಬಂದಿದೆ.!!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಕದ್ದ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಿಕ್ಕಿಬಿದ್ದ ಕಳ್ಳ!!

ನಂತರ ಈ ಮಹಿಳೆ ಕಳ್ಳನ ಫೋಟೊವನ್ನು ಪೊಲೀಸರಿಗೆ ನೀಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಫೋಟೊದ ಸಹಾಯದಿಂದ ನಸೀಮ್ ಮೊಹಮ್ಮದ್ ಎಂಬ ಕಳ್ಳ ಈ ಕಳ್ಳತನ ಮಾಡಿದ್ದರ ಬಗ್ಗೆ ಪೊಲೀಸರು ಪತ್ತೆ ಮಾಡಿ ಆತನ ಮನೆಯಿಂದ ಫೋನನ್ನು ವಶಪಡಿಸಿಕೊಂಡಿದ್ದಾರೆ, ಆದರೆ, ಆರೋಪಿ ತಲೆಮರೆಸಿಕೊಂಡಿದ್ದಾನೆ.!!

ಓದಿರಿ: ಡಿಜಿಟಲ್ ಪರಿವರ್ತನೆ...ಬೀಜಿಂಗ್, ಲಂಡನ್, ಸಿಂಗಾಪುರವನ್ನು ಹಿಂದಿಕ್ಕಿದ ನಮ್ಮ ಬೆಂಗಳೂರು!!

English summary
A phone thief was identified after he clicked his photo on the stolen phone, police said on Tuesday.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot