Home
ಸುದ್ದಿಜಾಲ

ಐಫೋನ್‌ನ ಸೆಕ್ಯುರಿಟಿ ಫೀಚರ್ ದುರ್ಬಳಕೆ ಮಾಡಿಕೊಂಡ ಕಳ್ಳ; 8 ಲಕ್ಷ ಪಂಗನಾಮ!

ಆಪಲ್‌ ಡಿವೈಸ್‌ಗಳನ್ನು ಖರೀದಿ ಮಾಡಿದರೆ ನಿಮ್ಮ ಡೇಟಾ ಹಾಗೂ ಇನ್ನಿತರೆ ಖಾಸಗಿ ಮಾಹಿತಿಗಳು ಸೇಫ್‌ ಎಂದು ನೀವು ಅಂದುಕೊಂಡಿರಬಹುದು. ಆದರೆ, ಇದು ಈಗ ಸುಳ್ಳಾಗಿದೆ. ಯಾಕೆಂದರೆ ಇಲ್ಲೋರ್ವ ಐಫೋನ್‌ ಬಳಕೆದಾರರು ಬರೋಬ್ಬರಿ 8 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾರೆ.

ಹೌದು, ಕೆಲವರು ಪ್ರತಿಷ್ಟೆಗಾಗಿ ಐಫೋನ್‌ ಖರೀದಿ ಮಾಡಿದರೆ, ಕೆಲವರು ತಮ್ಮ ಡೇಟಾ ಹಾಗೂ ಖಾಸಗಿ ಮಾಹಿತಿಯನ್ನು ಹೆಚ್ಚು ಭದ್ರವಾಗಿರಿಸಿಕೊಳ್ಳಲು ಖರೀದಿ ಮಾಡುತ್ತಾರೆ. ಅದರಂತೆ ಆಪಲ್‌ ಸಹ ಡಿವೈಸ್‌ಗಳಲ್ಲಿ ಹೆಚ್ಚಿನ ಭದ್ರತೆ ಸಹ ಒದಗಿಸುತ್ತಿದೆ. ಅದಾಗ್ಯೂ ಐಫೋನ್ ಮೂಲಕವೇ ಮಹಿಳೆಯ ದೊಡ್ಡ ಮೊತ್ತದ ಹಣ ಕದ್ದಿರುವುದು ಬೆಳಕಿಗೆ ಬಂದಿದೆ. ಹಾಗಿದ್ರೆ, ಈ ಘಟನೆ ನಡೆದಿದ್ದು ಎಲ್ಲಿ?, ಐಫೋನ್‌ನಲ್ಲಿ ಭದ್ರತಾ ಸಮಸ್ಯೆ ಇದೆಯೇ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ನ ಸೆಕ್ಯುರಿಟಿ ಫೀಚರ್ ದುರ್ಬಳಕೆ ಮಾಡಿಕೊಂಡ ಕಳ್ಳ; 8 ಲಕ್ಷ ಪಂಗನಾಮ!

ಘಟನೆ ನಡೆದಿದ್ದು ಎಲ್ಲಿ?

ಈ ಘಟನೆ ಜರುಗಿರುವುದು ಅಮೆರಿಕಾದ ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಲ್ಲಿ. ರೆಹಾನ್ ಅಯಾಸ್ ಎಂಬ ಮಹಿಳೆ ಬಾರ್‌ನಲ್ಲಿ ಥ್ಯಾಂಕ್ಸ್‌ಗಿವಿಂಗ್ ವಾರಾಂತ್ಯವನ್ನು ಆಚರಿಸಯವ ವೇಳೆ ಈ ಘಟನೆ ಜರುಗಿದೆ. ಈ ವೇಳೆ ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಕಳ್ಳ ಕಸಿದುಕೊಂಡಿದ್ದು, ಬಳಿಕ ಆಕೆಯ ಬ್ಯಾಂಕ್‌ನಿಂದ USD 10,000 (8 ಲಕ್ಷ ರೂ.) ಗಳನ್ನು ದೋಚಿದ್ದಾನೆ.

ಮೊಬೈಲ್‌ ಕಳೆದುಕೊಂಡ ತಕ್ಷಣ ಮಹಿಳೆ ಮಾಡಿದ್ದೇನು?

ಸಾಮಾನ್ಯವಾಗಿ ನಾವು ನೀವೆಲ್ಲಾ ಮೊಬೈಲ್‌ ಕಳೆದುಕೊಂಡರೆ ಮೊದಲು ಸಿಮ್‌ ಬ್ಲಾಕ್‌ ಮಾಡಿಸುತ್ತೇವೆ. ಹಾಗೆಯೇ ಕೆಲವು ಮಾರ್ಗಗಳ ಮೂಲಕ ಮೊಬೈಲ್‌ ಅನ್ನು ನಿಸ್ಕ್ರಿಯಗೊಳಿಸಲು ಮುಂದಾಗುತ್ತೇವೆ. ಇದೇ ಮಾದರಿಯಲ್ಲಿ ವರ್ಕ್‌ಫೋರ್ಸ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್‌ನಲ್ಲಿ ಹಿರಿಯ ಅರ್ಥಶಾಸ್ತ್ರಜ್ಞೆ ಆಗಿ ಕೆಲಸ ಮಾಡುವ ಈ ಮಹಿಳೆ ಸಹ ಪ್ರಯತ್ನಿಸಿದ್ದಾರೆ. ಆದರೆ, ಆಕೆ ಆ ಫೋನ್‌ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲೇ ಇಲ್ಲ.

ಆ ಫೋನ್‌ ನಲ್ಲಿ ಆಕೆ ಹಲವಾರು ಫೋಟೋಗಳು ಹಾಗೂ ಬ್ಯಾಂಕ್‌ ವಿವರಗಳನ್ನು ಇರಿಸಿದ್ದರು. ಎಷ್ಟೇ ಪ್ರಯತ್ನ ಪಟ್ಟರು ಏನೂ ಮಾಡಲು ಸಾಧ್ಯವಾಗದಿದ್ದಾಗ ಸುಮ್ಮನಾಗಿದ್ದಾರೆ. ಇದಾದ 24 ಗಂಟೆಗಳಲ್ಲಿ ಆಕೆಯ ಬ್ಯಾಂಕ್ ಖಾತೆಯಿಂದ ಸುಮಾರು USD 10,000 ಡೆಬಿಟ್ ಆಗಿದೆ. ಈ ಬಗ್ಗೆ ಬಂದ ಮೆಸೆಜ್‌ನಿಂದ ಆಯಸ್ ಶಾಕ್‌ ಆಗಿದ್ದಾರೆ.

ಐಫೋನ್‌ನ ಸೆಕ್ಯುರಿಟಿ ಫೀಚರ್ ದುರ್ಬಳಕೆ ಮಾಡಿಕೊಂಡ ಕಳ್ಳ; 8 ಲಕ್ಷ ಪಂಗನಾಮ!

ಇದು ಹೇಗೆ ಸಾಧ್ಯ?

ಸಾಮಾನ್ಯವಾಗಿ ಐಫೋನ್‌ಗಳು ಕಳ್ಳತನವಾದಾಗ ಈ ರೀತಿಯ ಹಲವಾರು ಪ್ರಕರಣಗಳು ಜರುಗುತ್ತವೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಫೋನ್‌ ಅನ್ನು ಕದಿಯಲು ಕಳ್ಳರು ಯಾವಾಗ ಹೊಂಚು ಹಾಕುತ್ತಾರೋ ಆ ವೇಳೆ ಬಳಕೆದಾರರು ಯಾವೆಲ್ಲಾ ಪಾಸ್‌ವರ್ಡ್‌ಗಳನ್ನು ಎಂಟ್ರಿ ಮಾಡುತ್ತಾರೆ ಎಂದು ಕದ್ದು ಮುಚ್ಚಿ ನೋಡಿಕೊಳ್ಳುತ್ತಾರೆ. ಇದಾದ ನಂತರ ಅವರು ಕಸಿದುಕೊಂಡು ತಕ್ಷಣವೇ ಲಾಗಿನ್ ಆಗುತ್ತಾರೆ.

ಲಾಗಿನ್‌ ಆದ ನಂತರದಲ್ಲಿ ಕಳ್ಳರು ಪಾಸ್‌ವರ್ಡ್‌ ಅನ್ನು ಬದಲಾಯಿಸಲು ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಪಾಸ್‌ವರ್ಡ್‌ ಬದಲಾಯಿಸುವ ಪ್ರಕ್ರಿಯೆ ಸರಳವಾದರೂ ಫೋನ್‌ ಕಳೆದುಕೊಂಡವರಿಗೆ ಮಾತ್ರ ಇದು ನರಕಯಾತನೆ. ಯಾಕೆಂದರೆ ಮತ್ತೆ ಅವರು ಯಾವ ಮೂಲದಿಂದಲೂ ತಮ್ಮ ಡಿವೈಸ್‌ಗೆ ಎಂಟ್ರಿ ಆಗಲು ಸಾಧ್ಯವಾಗುವುದಿಲ್ಲ. ಇದರಿಂದ ಫೋನ್ ಸಂಪೂರ್ಣವಾಗಿ ಕಳ್ಳನ ಹಿಡಿತಕ್ಕೆ ಹೋಗುತ್ತದೆ.

ಇಷ್ಟೆಲ್ಲಾ ಆದ ಮೇಲೆ ಸುಲಭವಾಗಿ ಕಳ್ಳರು ಮೊಬೈಲ್‌ನಲ್ಲಿನ ಬ್ಯಾಂಕಿಂಗ್‌ ಹಾಗೂ ಕೆಲವು ಖಾಸಗಿ ಮಾಹಿತಿ ಕಡೆ ಕಣ್ಣಾಯಿಸುತ್ತಾರೆ. ಹಾಗೆಯೇ ಬ್ಯಾಂಕ್‌ ಖಾತೆಗೆ ಈ ಮೂಲಕ ಲಾಗಿನ್‌ ಆಗಿ ಹಣ ಕದಿಯುತ್ತಾರೆ. ಈ ಸಂಬಂಧ ಆಪಲ್‌ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ಅನುಭವ ಪಡೆದ ಬಳಕೆದಾರರ ಬಗ್ಗೆ ನಾವು ಸಹಾನುಭೂತಿ ಹೊಂದಿದ್ದೇವೆ. ನಮ್ಮ ಬಳಕೆದಾರರ ಮೇಲಿನ ಎಲ್ಲಾ ದಾಳಿಗಳನ್ನು ನಾವು ಎಷ್ಟೇ ಅಪರೂಪವಾಗಿದ್ದರೂ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ತಿಳಿಸಿದ್ದಾರೆ.

ಐಫೋನ್‌ನ ಸೆಕ್ಯುರಿಟಿ ಫೀಚರ್ ದುರ್ಬಳಕೆ ಮಾಡಿಕೊಂಡ ಕಳ್ಳ; 8 ಲಕ್ಷ ಪಂಗನಾಮ!

ನೀವು ಎಚ್ಚರ ವಹಿಸಿ

ಕಳ್ಳರು ಸಾಮಾನ್ಯವಾಗಿ ಐಫೋನ್‌ಗಳನ್ನು ಕದಿಯಲು ಹೆಚ್ಚು ಕೇಂದ್ರೀಕರಿಸುತ್ತಾರೆ. ಯಾಕೆಂದರೆ ಈ ಫೋನ್‌ಗಳಿಗೆ ಬ್ಲಾಕ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದರೊಂದಿಗೆ ಪಾಸ್‌ಕೋಡ್‌ಗಳು ಭದ್ರತೆಯನ್ನು ನೀಡುತ್ತವೆಯಾದರೂ, ನಿಮ್ಮ ಫೋನ್ ಅನ್ನು ಸಾರ್ವಜನಿಕ ಸ್ಥಳದಲ್ಲಿ ಹೆಚ್ಚು ಭದ್ರತೆಯಿಂದ ನೋಡಿಕೊಳ್ಳುವುದು ಸಹ ಗಮನಾರ್ಹ ವಿಷಯ. ಆಪಲ್‌ ಫೋನ್‌ ಕದಿಯಲು ಬರುವ ಕಳ್ಳರು ಸುಲಭವಾಗಿ ನಿಮ್ಮನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ನಿಮಗೆ ಮಣ್ಣುಮುಕ್ಕಿಸಿಬಿಡುತ್ತಾರೆ ಎಂಬುದು ನಿಮ್ಮ ಗಮನಕ್ಕಿರಲಿ.

ಇನ್ನು ಕಳ್ಳರು ಫೋನ್‌ ಕದ್ದರೂ ಸಹ ಅವರು ಏನು ಮಾಡಲು ಸಾಧ್ಯವಾಗದ ಹಾಗೆ ಮಾಡಲು ಕೆಲವು ಭದ್ರತಾ ಫೀಚರ್ಸ್‌ಗಳಿದ್ದು, ಅದರಂತೆ ನೀವು ಲಾಕ್ ಸ್ಕ್ರೀನ್‌ನಲ್ಲಿ ಕೇವಲ ಸಂಖ್ಯಾ ಪಾಸ್‌ಕೋಡ್‌ನ ಬದಲಿಗೆ ಆಲ್ಫಾನ್ಯೂಮರಿಕ್ ಪಾಸ್‌ವರ್ಡ್ ಅನ್ನು ಬಳಸುವುದು ಹೆಚ್ಚು ಸೂಕ್ತವಾಗಿದೆ. ಜೊತೆಗೆ ಬಳಕೆದಾರರಿಗೆ 34 ಅಕ್ಷರಗಳ ಪಾಸ್‌ಕೋಡ್ ಅನ್ನು ಹೊಂದಿಸಲು ಆಪಲ್ ಅನುಮತಿಸಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬಹುದು. ಹಾಗೆಯೇ ಹೆಚ್ಚುವರಿ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಲಾಕ್ ಮತ್ತು ಫೇಸ್‌ಐಡಿಯನ್ನು ಬಳಕೆ ಮಾಡಿದರೆ ಫೋನ್‌ ಇನ್ನಷ್ಟು ಸೇಫ್.

Best Mobiles in India

English summary
thief stole an iPhone 13 Pro Max and withdrew a huge amount of cash. He knew about the password used by the user before thefting the phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+