Home
ಸುದ್ದಿಜಾಲ

Smartphone Theft: ಐಫೋನ್‌ ಅಂದುಕೊಂಡು ಕದ್ದಿದ್ದ ಆಂಡ್ರಾಯ್ಡ್‌ ಫೋನ್‌ ಅನ್ನು ವಾಪಸ್‌ ನೀಡಿದ ಕಳ್ಳರು! ಎಂಥಾ ದವಲತ್ತು ರೀ..

ಕಳ್ಳರು (Thieves) ಎಂದರೆ ನಮ್ಮ ನಿಮ್ಮೆಲ್ಲರಿಗೂ ತಿಳಿದ ಸಾಮಾನ್ಯ ವಿಚಾರ ಏನೆಂದರೆ ಅವರು ಸಿಕ್ಕಸಿಕ್ಕದ್ದನ್ನೆಲ್ಲಾ ಕದ್ದು ಹೋಗುತ್ತಾರೆ ಎಂದು. ಆದರೆ ಈ ನಂಬಿಕೆಯನ್ನು ಈ ಕಳ್ಳರು ಹುಸಿ ಮಾಡಿದ್ದಾರೆ. ಈ ಮೂಲಕ ಕಳ್ಳರಿಗೂ ಈ ರೀತಿಯ ದವಲತ್ತು ಇರುತ್ತಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುವಂತೆ ಮಾಡಿದೆ.

ಹೌದು, ಕಳ್ಳರು ಎಲ್ಲಾ ಕಡೆ ಇದ್ದಾರೆ. ಈ ಕಾರಣಕ್ಕೆ ನಿತ್ಯವು ಜನರು ಸ್ಮಾರ್ಟ್‌ ಗ್ಯಾಜೆಟ್‌, ಹಣ-ಆಭರಣ ಸೇರಿದಂತೆ ಅನೇಕ ರೀತಿಯ ವಸ್ತುಗಳನ್ನು ಕಳೆದುಳ್ಳುತ್ತಾರೆ. ಅದರಲ್ಲೂ ಬೆಂಗಳೂರಂತ ಮಹಾನಗರಗಳಲ್ಲಿ ಈ ಕಳ್ಳತನ ಪ್ರಕರಣಗಳು ಮಿತಿ ಮೀರಿವೆ. ಅದರಲ್ಲೂ ಸಾರಿಗೆ ವಾಹನಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು (Smartphone) ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇಲ್ಲೊಂದು ಘಟನೆಯಲ್ಲಿ ಕದ್ದ ಆಂಡ್ರಾಯ್ಡ್‌ ಫೋನ್‌ ಅನ್ನು ಮಾಲೀಕರಿಗೆ ಕಳ್ಳರು ವಾಪಸ್‌ ನೀಡಿದ್ದಾರೆ. ಹಾಗಿದ್ರೆ, ಈ ಘಟನೆ ನಡೆದಿದ್ದು ಎಲ್ಲಿ?, ಯಾಕೆ ಕಳ್ಳ ಈ ರೀತಿ ಮಾಡಿದ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಫೋನ್‌ ಅಂದುಕೊಂಡು ಕದ್ದಿದ್ದ ಆಂಡ್ರಾಯ್ಡ್‌ ಫೋನ್‌ ಅನ್ನು ವಾಪಸ್‌ ನೀಡಿದ ಕಳ್ಳರು!

ಕದ್ದ ಫೋನ್‌ ಅನ್ನು ವಾಪಸ್‌ ನೀಡಿದ ಕಳ್ಳರು: ಐಫೋನ್‌ಗಳಿಗೆ ಇರುವ ಕ್ರೇಜ್‌ ಬೇರೆ ಯಾವುದೇ ಫೋನ್‌ಗಳಿಗೆ ಇಲ್ಲ. ಅದರಲ್ಲೂ ಇತ್ತೀಚೆಗೆ ಹೊಸ ಐಫೋನ್‌ ಸರಣಿಯನ್ನು (iPhone series) ಲಾಂಚ್‌ ಮಾಡಲಾಗಿದ್ದು, ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ನಡುವೆ ಇಬ್ಬರು ಕಳ್ಳರು ಅಮಾಯಕರಿಂದ ಕಸಿದುಕೊಂಡ ಫೋನ್‌ ಅನ್ನು ಆನ್‌ ಮಾಡಿ ನೋಡಿದ್ದಾರೆ. ಆ ವೇಳೆ ತಕ್ಷಣವೇ ಅವರಿಗೆ ಆಶಾಭಂಗವಾಗಿದೆಯಂತೆ. ಅಂದರೆ, ಐಫೋನ್‌ ಎಂದು ಭಾವಿಸಿಕೊಂಡು ಆ ಫೋನ್‌ ಅನ್ನು ಕಸಿದುಕೊಂಡಿದ್ದಾರೆ. ಅದು ಆಂಡ್ರಾಯ್ಡ್‌ ಆಗಿದ್ದರಿಂದ ಮರಳಿ ಮಾಲೀಕರಿಗೆ ಅದನ್ನು ನೀಡಿದ್ದಾರೆ.

ಈ ಘಟನೆ ನಡೆದಿದ್ದು ಎಲ್ಲಿ?: ವಾಷಿಂಗ್ಟನ್ ಡಿಸಿಯಲ್ಲಿ ಈ ಘಟನೆ ನಡೆದಿದೆ. ಸಶಸ್ತ್ರದಾರಿಗಳಾಗಿ ಬಂದ ದರೋಡೆಕೋರರು ವ್ಯಕ್ತಿಯ ಬಳಿ ಇದ್ದದ್ದನ್ನೆಲ್ಲಾ ಕಸಿದುಕೊಳ್ಳಲು ಮುಂದಾಗಿದ್ದಾರೆ. ಅಂದರೆ ಆತನ ಬೇಜಿನಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಅವರು ಸ್ಮಾರ್ಟ್‌ಫೋನ್ ಅನ್ನು ಸ್ವೈಪ್ ಮಾಡಿದರು. ಅದು ಆಂಡ್ರಾಯ್ಡ್ ಫೋನ್‌ ಆಗಿತ್ತು. ಇದರಿಂದ ಬೇಸರಗೊಂಡ ಕಳ್ಳರು, ಓಹ್ ಇದು ಆಂಡ್ರಾಯ್ಡ್, ಇದು ನಮಗೆ ಬೇಡ ಅನ್ನೋ ರೀತಿಯಲ್ಲಿ ನಮಗೆ ವಾಪಸ್ ಮಾಡಿದರು ಎಂದು ಅಲ್ಲೇ ಇದ್ದ ಫೋನ್ ಕಳೆದುಕೊಂಡ ವ್ಯಕ್ತಿಯ ಹೆಂಡತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಐಫೋನ್‌ ಅಂದುಕೊಂಡು ಕದ್ದಿದ್ದ ಆಂಡ್ರಾಯ್ಡ್‌ ಫೋನ್‌ ಅನ್ನು ವಾಪಸ್‌ ನೀಡಿದ ಕಳ್ಳರು!

ಈ ಸಂಬಂಧ ABC7 ವರದಿ ಮಾಡಿದ್ದು, ಹೆಂಡತಿಯು ತಡರಾತ್ರಿಯ ಕೆಲಸದ ಶಿಫ್ಟ್ ಅನ್ನು ಮುಗಿಸಿ ಬರುತ್ತಿದ್ದರು. ಆ ವೇಳೆ ಆಕೆಯ ಪತಿ ಕಾರನ್ನು ಪಾರ್ಕಿಂಗ್‌ ಮಾಡಲು ಸಹಾಯ ಮಾಡುವ ಉದ್ದೇಶದಿಂದ ಅವರ ಅಪಾರ್ಟ್ಮೆಂಟ್‌ನ ಹೊರಗೆ ಆಕೆ ಬರುವುದನ್ನೇ ಕಾದು ಕುಳಿತಿದ್ದರಂತೆ. ನಂತರ ಕಾರನ್ನು ನಿಲ್ಲಿಸಿ ಅಪಾರ್ಟ್ಮೆಂಟ್‌ಗೆ ಹಿಂತಿರುಗುವಾಗ ಶಸ್ತ್ರಸಜ್ಜಿತವಾದ ಇಬ್ಬರು ಮಾಸ್ಕ್‌ ಧರಿಸಿದ ಕಳ್ಳರು ಎದುರಾಗಿದ್ದಾರೆ. ಈ ವೇಳೆ ಈ ಅಚ್ಚರಿ ಘಟನೆ ನಡೆದುಹೋಗಿದೆ.

ಇನ್ನು ಪತಿ ತನ್ನ ಫೋನ್ ಅನ್ನು ಮರಳಿ ಪಡೆದರೂ ಸಹ ಈ ಘಟನೆಯು ನನ್ನ ಜೀವನವನ್ನು ತಲೆಕೆಳಗಾಗಿ ಮಾಡಿದೆ ಎಂದು ಮಹಿಳೆ ಈ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಘಟನೆ ಆಕೆಯ ಮೇಲೆ ಆಳವಾದ ಪ್ರಭಾವ ಬೀರಿದೆಯಂತೆ. ಅಂದರೆ ದರೋಡೆಕೋರರು ಬಹುತೇಕ ಎಲ್ಲವನ್ನೂ ಕಿತ್ತುಕೊಂಡು ಹೋದರೂ ಸಹ ಆಂಡ್ರಾಯ್ಡ್ ಫೋನ್ ಅನ್ನು ಮಾತ್ರ ನಮಗೆ ಯೋಗ್ಯವಾಗಿಲ್ಲ ಎಂದು ನಿರ್ಧರಿಸಿ ಒಟ್ಟು ಹೋಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಫೋನ್‌ ಕಳೆದುಹೋದರೆ ಏನು ಮಾಡಬೇಕು?: ಈ ಘಟನೆ ದೂರದ ಎಲ್ಲೋ ನಡೆದರೂ ಸಹ ಇಂದಿಗೂ ನಮ್ಮ ನಡುವೆಯೇ ಅದೆಷ್ಟೋ ಜನರು ಸ್ಮಾರ್ಟ್ಫೋನ್‌ ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ ಸರ್ಕಾರಗಳು ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಇದಕ್ಕಾಗಿ ವಿಶೇಷ ಪೋರ್ಟರ್‌ ಅನ್ನು ಆರಂಭ ಮಾಡಿದೆ. ಅದುವೇ ಸಂಚಾರ್ ಸಾಥಿ ಪೋರ್ಟಲ್.

ಐಫೋನ್‌ ಅಂದುಕೊಂಡು ಕದ್ದಿದ್ದ ಆಂಡ್ರಾಯ್ಡ್‌ ಫೋನ್‌ ಅನ್ನು ವಾಪಸ್‌ ನೀಡಿದ ಕಳ್ಳರು!

ಜನರ ಬಳಿ ಕದ್ದ ವಸ್ತುಗಳನ್ನು ಹುಡುಕುವುದೇ ಇದರ ಮುಖ್ಯ ಉದ್ದೇಶವಾಗಿದೆ. ಈ ವರ್ಷದ ಮೇ 17 ರಿಂದ ಜನರಿಗೆ ಇದರ ಸೇವೆ ಸಿಗುತ್ತಿದೆ ಸಂಚಾರ್ ಸಾಥಿ ಪೋರ್ಟಲ್ (Sanchar Sathi Portal) ಮೂಲಕ ಬಳಕೆದಾರರು ತಮ್ಮ ಫೋನ್ ಅನ್ನು ಎಲ್ಲಿದೆ ಎಂದು ಸರ್ಚ್‌ ಮಾಡಬಹುದು ಅಥವಾ ಸ್ವಿಚ್ ಆಫ್ ಮಾಡಬಹುದು. ಆಪಲ್‌ ಐಫೋನ್​ನಲ್ಲಿರುವ ಫೈಂಡ್ ಮೈ ಫೋನ್ ಫೀಚರ್ಸ್‌ನಂತೆ ಇದು ಆಂಡ್ರಾಯ್ಡ್ ಫೋನ್​ನಲ್ಲಿ ಕೆಲಸ ಮಾಡಲಿದೆ. ಜೊತೆಗೆ ದೂರು ಸಹ ದಾಖಲು ಮಾಡಬಹುದಾಗಿದೆ.

Best Mobiles in India

English summary
Thieves who stole an Android Smartphone mistaking it for an iPhone returned it to the owner. This incident has created a huge debate on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+