Home
ಸುದ್ದಿಜಾಲ

ಕಾರ್‌ ಕದಿಯಲು ನೋಕಿಯಾದ ಈ ಹಳೇ ಫೋನ್‌ ಬಳಕೆ: ಏನಿದು ಹೊಸ ಹ್ಯಾಕಿಂಗ್‌ ಟೆಕ್ನಾಲಜಿ!?

ನೋಕಿಯಾ ಫೋನ್‌ಗಳು 90ರ ದಶಕದಲ್ಲಿ ಮೊಬೈಲ್‌ ಮಾರುಕಟ್ಟೆಯನ್ನು ಆಳಿದ್ದವು. ಈಗಲೂ ಸಹ ನೋಕಿಯಾದ ಫೀಚರ್‌ ಫೋನ್‌ಗಳು ಭಾರಿ ಬೇಡಿಕೆ ಹೊಂದಿವೆ. ಇದರ ನಡುವೆ ಇದೇ ನೋಕಿಯಾದ ಫೀಚರ್ಸ್ ಫೋನ್‌ವೊಂದು ಕಾರನ್ನು ಕದಿಯಲು ಅಥವಾ ಕೀ ಇಲ್ಲದೆ ಕಾರ್‌ ಅನ್ನು ಸ್ಟಾರ್ಟ್‌ ಮಾಡಲು ಸಹಾಯಕವಾಗಿದೆ. ಈ ಮೂಲಕ ಮತ್ತೊಮ್ಮೆ ನೋಕಿಯಾ ಫೋನ್‌ ಮುನ್ನೆಲೆಗೆ ಬಂದಿದೆ.

ಹೌದು, ಇಂದು ಎಷ್ಟೇ ಸುಧಾರಿತ ಟೆಕ್ನಾಲಜಿ ಇರುವ ಸ್ಮಾರ್ಟ್‌ಫೋನ್‌ಗಳು ಬಳಕೆಯಲ್ಲಿದ್ದರೂ ಇವು ಮಾಡಲಾಗದ ಕೆಲಸವನ್ನು 90ರ ದಶಕದಲ್ಲಿ ಭಾರೀ ಬಳಕೆಯಲ್ಲಿದ್ದ ಈ ಹಳೆಯ ಈ ನೋಕಿಯಾ ಫೋನ್‌ ಮಾಡಿದೆ. ಇದರಿಂದ ಕಾರ್‌ ಅನ್ನು ಸ್ಟಾರ್ಟ್‌ ಮಾಡಲಾಗಿದೆ. ಅಷ್ಟಕ್ಕೂ ಈ ಫೋನ್‌ ಬಳಕೆ ಮಾಡಿಕೊಂಡು ಕಾರನ್ನು ಹೇಗೆ ಸ್ಟಾರ್ಟ್‌ ಮಾಡಲಾಗುತ್ತದೆ?, ಫೋನ್‌ ಹೇಗೆ ಇದಕ್ಕೆ ಸ್ಪಂಧಿಸುತ್ತದೆ, ಯಾವುದು ನೋಕಿಯಾ ಫೋನ್‌? ಎಂಬಿತ್ಯಾದಿ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿದುಕೊಳ್ಳಿ.

ಕಾರ್‌ ಕದಿಯಲು ನೋಕಿಯಾದ ಈ ಹಳೇ ಫೋನ್‌ ಬಳಕೆ:ಏನಿದು ಹೊಸ ಹ್ಯಾಕಿಂಗ್‌ ಟೆಕ್ನಾಲಜಿ!?

ನೋಕಿಯಾ ಫೋನ್‌ನಿಂದ ಕಾರ್ ಸ್ಟಾರ್ಟ್‌: ಸಾಮಾನ್ಯವಾಗಿ ಕಾರು ಅಥವಾ ಇನ್ಯಾವುದೇ ವಾಹನ ಚಾಲನೆ ಮಾಡಲು ಕೀ ಅಗತ್ಯ. ಆದರೆ, ವೈರಲ್‌ ಆಗಿರುವ ವಿಡಿಯೋದ ಪ್ರಕಾರ ಕೀ ಇಲ್ಲದೆ ಕೇವಲ ನೋಕಿಯಾ ಫೋನ್‌ ಬಳಕೆ ಮಾಡಿಕೊಂಡು ಕಾರ್‌ ಅನ್ನು ಸ್ಟಾರ್ಟ್‌ ಮಾಡಲಾಗಿದೆ. ಈ ಮೂಲಕ ಕಾರು ಕಳ್ಳರು ಹೊಸ ಕಾರ್‌ ಹ್ಯಾಕಿಂಗ್‌ ಟೆಕ್ನಾಲಜಿಯನ್ನು ಕಂಡುಕೊಂಡಿದ್ದಾರೆ.

ಯಾವುದು ಆ ನೋಕಿಯಾ ಫೋನ್‌?: ವಿಡಿಯೋದಲ್ಲಿ ಕಂಡುಬರುವಂತೆ ಕಾರ್ ಅನ್ನು ಸ್ಟಾರ್ಟ್‌ ಮಾಡಲು ನೋಕಿಯಾ 3310 (Nokia 3310 ) ಫೋನ್‌ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಅಂದರೆ ಓರ್ವ ಒಬ್ಬ ವ್ಯಕ್ತಿ ಒಂದು ಕೇಬಲ್ ಮತ್ತು ಈ ಫೋನ್‌ ಅನ್ನು ಬಳಕೆ ಮಾಡಿಕೊಂಡು ಒಂದೇ ಕ್ಲಿಕ್‌ನೊಂದಿಗೆ ಟೊಯೋಟಾ Rav4 ನ ಎಂಜಿನ್ ಅನ್ನು ಸ್ಟಾರ್ಟ್‌ ಮಾಡಿದ್ದಾನೆ. ಆದರೆ ಇದು ಹೇಗೆ ಸಾಧ್ಯ ಎಂಬುದನ್ನು ಆ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿಲ್ಲ.

ಈ ಘಟನೆಗಳು ನಡೆಯುತ್ತಿರುವುದು ಯುಎಸ್‌ನಲ್ಲಿ. ಕಾರಿನ ಸಿಸ್ಟಂ ಅನ್ನು ಪ್ರವೇಶಿಸಲು ಮತ್ತು ಕಂಟ್ರೋಲ್‌ ಮಾಡಲು ಕಾರ್ ಕಳ್ಳರು ಸಣ್ಣ ಗ್ಯಾಜೆಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ವೈಸ್ ವರದಿ ಮಾಡಿದ್ದು, ಈ ಘಟನೆ ಅದಕ್ಕೆ ನಿದರ್ಶನವಾಗಿದೆ. ಯಾಕೆಂದರೆ ಯಾವುದೇ ತಾಂತ್ರಿಕ ಪರಿಣತಿ ಇಲ್ಲದಿದ್ದರೂ ಹಾಗೂ ಕಾರಿನ ಕೀ ಅಗತ್ಯವಿಲ್ಲದೇ ಈ ವಿಧಾನವನ್ನು ಬಳಸಿಕೊಂಡು 15 ಸೆಕೆಂಡುಗಳಲ್ಲಿ ಕಾರುಗಳನ್ನು ಕದಿಯಬಹುದಾಗಿದೆಯಂತೆ. ಈ ಮೂಲಕ ಕಾರ್‌ ಮಾಲೀಕರು ಭಾರೀ ಎಚ್ಚರಿಕೆ ವಹಿಸಬೇಕಿದೆ.

ಕಾರ್‌ ಕದಿಯಲು ನೋಕಿಯಾದ ಈ ಹಳೇ ಫೋನ್‌ ಬಳಕೆ:ಏನಿದು ಹೊಸ ಹ್ಯಾಕಿಂಗ್‌ ಟೆಕ್ನಾಲಜಿ!?

ಇದು ಹೇಗೆ ಸಾಧ್ಯ?: ನೋಕಿಯಾದ ಈ ಫೋನ್‌ ಒಳಗೆ ಅಡಗಿರುವ ಒಂದು ಚಿಕ್ಕ ವ್ಯವಸ್ಥೆಯು ಕಾರ್‌ ಕಳ್ಳರಿಗೆ ಕಾರಿನ ನಿರ್ವಹಣಾ ವ್ಯವಸ್ಥೆಗೆ ಎಂಟ್ರಿ ಆಗಲು ಮತ್ತು ಅತಿಕ್ರಮಿಸಲು ಅನುವು ಮಾಡಿಕೊಡುತ್ತದಂತೆ. ಕ್ಯಾನಿಸ್ ಆಟೋಮೋಟಿವ್ ಲ್ಯಾಬ್ಸ್‌ನ ಸಿಟಿಓ ಡಾ. ಕೆನ್ ಟಿಂಡೆಲ್ ಅವರು ಇತ್ತೀಚಿನ ಈ ಬಗ್ಗೆ ಬರೆದುಕೊಂಡಿದ್ದು, ಸುಲಭವಾಗಿ ಅಪರಾಧಿಗಳು ಈ ಗ್ಯಾಜೆಟ್‌ಗಳನ್ನು ಬಳಸಿಕೊಂಡು ಕೆಲವೇ ಸೆಕೆಂಡುಗಳಲ್ಲಿ ಕಾರ್‌ನ ಎಂಜಿನ್‌ನ ಮೇಲೆ ಕಂಟ್ರೋಲ್ ಸಾಧಿಸುತ್ತಾರೆ ಎಂದಿದ್ದಾರೆ.

ಈ ರೀತಿಯ ಗ್ಯಾಜೆಟ್‌ಗಳನ್ನು ಪ್ರಚಾರ ಮಾಡುತ್ತಿರುವ ಹಲವಾರು ವೆಬ್‌ಸೈಟ್‌ಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳ ಬಗ್ಗೆ ಯೂಟ್ಯೂಬ್‌ ಚಾನಲ್‌ ಮದರ್‌ಬೋರ್ಡ್‌ ವರದಿ ಮಾಡಿದೆ. ಆದರೆ, ಈ ತಂತ್ರಜ್ಞಾನವನ್ನು ಎಮರ್ಜೆನ್ಸಿಯಲ್ಲಿ ಬಳಕೆಮಾಡುವ ಗ್ಯಾಜೆಟ್‌ಗಳಂತೆ ಮಾರಾಟಗಾರರು ಪ್ರತಿಬಿಂಬಿಸುತ್ತಿದ್ದಾರಂತೆ. ಈ ಡಿವೈಸ್‌ ಇಟ್ಟುಕೊಂಡು ಸಂಶೋಧನೆ ನಡೆಸಿದಾಗ ಕಂಡುಬಂದ ಮಾಹಿತಿ ಏನೆಂದರೆ ಇದು ಕಂಟ್ರೋಲರ್ ಏರಿಯಾ ನೆಟ್‌ವರ್ಕ್(CAN) ಇಂಜೆಕ್ಷನ್ ಎಂದು ಕರೆಯಲ್ಪಡುವ ಒಂದು ವಸ್ತುವಿನ ಮೂಲಕ ಕಾರ್ಯನಿರ್ವಹಿಸುತ್ತವೆ ಎನ್ನಲಾಗಿದೆ.

ಕಳ್ಳರು ಈ ಟೆಕ್ನಾಲಜಿ ಬಳಕೆ ಮಾಡಿಕೊಂಡು ಆಟೋಮೊಬೈಲ್‌ನ ಆಂತರಿಕ ಸಂವಹನ ಕಮ್ಯುನಿಟಿಗೆ ಎಂಟ್ರಿ ನೀಡಲಿದ್ದು, ಈ ಮೂಲಕ ಕಾರ್‌ ಅನ್ನು ಸ್ಟಾರ್ಟ್‌ ಮಾಡುತ್ತಾರೆ ಎಂದು ತಿಳಿದುಬಂದಿದೆ. ಅಂದರೆ, ಈ ವೇಳೆ ಸುಳ್ಳು ಸಂದೇಶಗಳನ್ನು ಕಾರ್‌ಗೆ ರವಾನೆ ಮಾಡಲಾಗುತ್ತಂತೆ. ಕಾರುಗಳು ಈ ಆಂತರಿಕ ಸಂದೇಶಗಳನ್ನು ಪರಿಶೀಲಿಸದೆ ನಂಬುತ್ತಿದ್ದು, ಈ ಮೂಲಕ ಕಳ್ಳರಿಗೆ ಸುಲಭವಾಗಿ ಕಾರನ್ನು ಕದಿಯಲು ಅನುವು ಮಾಡಿಕೊಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

Best Mobiles in India

English summary
No matter how technologically advanced smartphones are today, this old Nokia 3310 phone that was widely used in the 90s did a special job. From this the car is started.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+