ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರೇ ಸ್ವಲ್ಪ ಗಮನಿಸಿ!
ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ನೂತನ ಫೋನ್‌ಗಳು ಲಗ್ಗೆ ಇಡುತ್ತಲೇ ಸಾಗಿದ್ದು, ಪ್ರತಿ ಫೋನ್ ಹೊಸದೊಂದು ಅಪ್‌ಡೇಟ್ ನೊಂದಿಗೆ ಕಾಣಿಸಿಕೊಳ್ಳುತ್ತದೆ. ಪ್ರತಿಷ್ಠಿತ ಮೊಬೈಲ್ ತಯಾರಿಕಾ ಕಂಪನಿಗಳು ಕಡಿಮೆ ಪ್ರೈಸ್‌ನಿಂದ ಹೈ ಎಂಡ್ ವರೆಗಿನ ದರದಲ್ಲಿ ಹಲವು ಶ್ರೇಣಿಗಳ ಫೋನ್‌ಗಳ ಲಿಸ್ಟ್ ಹೊಂದಿವೆ. ಆದರೆ ಹೊಸದೊಂದು ಸ್ಮಾರ್ಟ್‌ಫೋನ್ ಖರೀದಿಸುವ ಬಹುತೇಕ ಗ್ರಾಹಕರು ಮೀಡ್‌ರೇಂಜ್‌ನಲ್ಲಿ ಆಕರ್ಷಕ ಫೀಚರ್ಸ್‌ವುಳ್ಳ ಸ್ಮಾರ್ಟ್‌ಫೋನ್ ಹೊಂದಲು ಬಯಸುತ್ತಾರೆ.

ಹೌದು, ಮೀಡ್‌ರೇಂಜ್ ದರದಲ್ಲಿರುವ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗೆಯೇ ಫೋನ್ ಖರೀದಿಸುವ ಗ್ರಾಹಕರು ಮುಖ್ಯವಾಗಿ ಬ್ಯಾಟರಿ, ಕ್ಯಾಮೆರಾ ಮತ್ತು RAM ಸಾಮರ್ಥ್ಯದ ಫೀಚರ್ಸ್‌ಗಳನ್ನು ಗಮನಿಸುತ್ತಾರೆ. ಹೀಗೆ ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಆಲೋಚನೆಯಲ್ಲಿ ಇದ್ದರೇ, ಫೋನ್ ಖರೀದಿಸುವ ಮುನ್ನ ಕೆಲವು ಅಂಶಗಳನ್ನು ನೀವು ಅವಲೋಕಿಸಬೇಕಿದೆ. ಆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಕಂಫರ್ಟ್ ಸ್ಕ್ರೀನ್ ಆಯ್ಕೆ ನಿಮ್ಮದಾಗಲಿ
ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ಆಯ್ಕೆಯು ತುಂಬಾ ಮಹತ್ವದ್ದು, ಇದು ಫೋನಿನ ಅತ್ಯಂತ ನಿರ್ಣಾಯಕ ಭಾಗಗಳಲ್ಲಿ ಒಂದಾಗಿದೆ. FHD+ ಪ್ಯಾನೆಲ್ (2220×1080 ಪಿಕ್ಸಲ್) ಆಗಿರುತ್ತದೆ. ಹಾಗೂ HD+ (1366×768 ಪಿಕ್ಸಲ್ ರೆಸಲ್ಯೂಶನ್) ಹೊಂದಿರುತ್ತದೆ. ಇದರ ಜೊತೆಗೆ ಸ್ಕ್ರೀನ್ ರೀಫ್ರೇಶ್ ರೇಟ್, ಡಿಸ್‌ಪ್ಲೇ ಗುಣಮಟ್ಟವನ್ನು ನೀವು ಗಮನಿಸುವುದು ಅಗತ್ಯ.

ಅಪ್‌ಡೇಟ್ ಓಎಸ್ ಉತ್ತಮ ಆಯ್ಕೆ
ಫೋನಿನಲ್ಲಿ ಓಎಸ್-ಆಪರೇಟಿಂಗ್ ಸಿಸ್ಟಮ್ ಕೆಲಸ ತುಂಬಾ ಮುಖ್ಯವಾಗಿದ್ದು, ಹೀಗಾಗಿ ಚಾಲ್ತಿ ಇರುವ ಅಪ್‌ಡೇಟ್ ಓಎಸ್ ಫೋನ್ ಆಯ್ಕೆ ಉತ್ತಮ. ಸದ್ಯ ಆಂಡ್ರಾಯ್ಡ್ 11 ಓಎಸ್ ಬಳಕೆಯಲ್ಲಿದ್ದು, ಅದಾಗ್ಯೂ ನೀವು ಆಂಡ್ರಾಯ್ಡ್ 10 ಓಎಸ್ ಇರುವ ಫೋನ್ ಖರೀದಿಸುವುದಾದರೇ ನಂತರದಲ್ಲಿ ಆ ಓಎಸ್ ಅಪ್‌ಡೇಟ್ ಸೌಲಭ್ಯ ಪಡೆದಿರುವ ಬಗ್ಗೆ ಗಮನ ನೀಡಿ.

ವೇಗದ ಪ್ರೊಸೆಸರ್‌ಗೆ ಆದ್ಯತೆ ನೀಡಿ
ಪ್ರೊಸೆಸರ್ ಸ್ಮಾರ್ಟ್‌ಫೋನಿನ ಹೃದಯ ಇದ್ದಂತೆ. ಮಲ್ಟಿಟಾಸ್ಕ್ ಕೆಲಸಗಳು ಸುಲಲಿತವಾಗಿ ನಡೆಯಲು ವೇಗದ ಪ್ರೊಸೆಸರ್ ಸಾಮರ್ಥ್ಯ ಅಗತ್ಯ. ಹೀಗಾಗಿ ಫೋನ್ ಖರೀದಿಸುವಾಗ ಹೆಚ್ಚಿನ ವೇಗದ ಹಾಗೂ ಇತ್ತೀಚಿಗಿನ ಹೊಸ ಪ್ರೊಸೆಸರ್ ಇರುವ ಫೋನ್ ಖರೀದಿಸಿ. ಮೀಡ್‌ರೇಂಜ್ ದರದಲ್ಲಿ ಸ್ನ್ಯಾಪ್‌ಡ್ರಾಗನ್ 700 ಪ್ರೊಸೆಸರ್ ಸರಣಿ ಹಾಗೂ ಮೀಡಿಯಾ ಟೆಕ್ ಡೈಮೆನ್ಸಿಟಿ 700/ 800 ಚಿಪ್‌ಸೆಟ್ ಆಯ್ಕೆಗಳು ಲಭ್ಯ.

ಚಿತ್ರದ ಗುಣಮಟ್ಟದ ಬಗ್ಗೆ ಗಮನ ನೀಡಿ
ಇತ್ತೀಚಿಗಿನ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿವೆ ಅದಾಗ್ಯೂ ನೀವು ಅವುಗಳ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಫೋನ್ ಖರೀದಿಸಲು ಮುಂದಾಗಿ. ಟ್ರಿಪಲ್ ಕ್ಯಾಮೆರಾ ಅಥವಾ ಕ್ವಾಡ್ ಕ್ಯಾಮೆರಾ ಸೌಲಭ್ಯ ಇದ್ದು, ಮುಖ್ಯ ಕ್ಯಾಮೆರಾವು 48 ಎಂಪಿ ಅಥವಾ 64 ಎಂಪಿ ಸೆನ್ಸಾರ್ ಹೊಂದಿರಬೇಕು. ಜೊತೆಗೆ ಕನಿಷ್ಠ 8ಎಂಪಿ ಅಲ್ಟ್ರಾವೈಡ್ ಲೆನ್ಸ್ ಹೊಂದಿರಬೇಕು.

ಅಧಿಕ ಬ್ಯಾಟರಿ ಬ್ಯಾಕ್‌ಅಪ್ ಇರಲಿ
ಫೋನಿಗೆ ಬ್ಯಾಟರಿಯೇ ಜೀವಾಳ. ಇತ್ತೀಚಿಗಿನ ನೂತನ ಫೋನ್‌ಗಳು ಹೆಚ್ಚಿನ ಬ್ಯಾಟರಿ ಸಾಮರ್ಥ್ಯದ ಆಯ್ಕೆ ಒಳಗೊಂಡಿವೆ. ಅದಾಗ್ಯೂ ನೀವು ಖರೀದಿಸುವ ಹೊಸ ಫೋನಿನಲ್ಲಿ 4,500mAh-5,000mAh ಅಥವಾ 6000mAh ಬ್ಯಾಟರಿ ಆಯ್ಕೆ ಲಭ್ಯತೆ ಬಗ್ಗೆ ಗಮನಿಸಿ. ಜೊತೆಗೆ ವೇಗದ ಚಾರ್ಜಿಂಗ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು ಇದ್ದರೇ ಉತ್ತಮ.


Click it and Unblock the Notifications




