Home
ಸುದ್ದಿಜಾಲ

BSNL ಎದುರು ಏರ್‌ಟೆಲ್‌, ಜಿಯೋ ಇನ್ಮುಂದೆ ಏನೇನು ಅಲ್ಲ; ಶಕ್ತಿ ನೀಡಿದ ಸರ್ಕಾರ!

ಟೆಲಿಕಾಂ ವಲಯದಲ್ಲಿ ಥಟ್ಟನೆ ನಮಗೆಲ್ಲರಿಗೂ ನೆನಪಾಗುವುದು ಜಿಯೋ, ನಂತರ ಏರ್ ಟೆಲ್‌ ಹಾಗೂ ವಿ ಟೆಲಿಕಾಂ. ಇದಾದ ಬಳಿಕ ಬಿಎಸ್‌ಎನ್‌ಎಲ್‌ ನೆನಪಿಗೆ ಬರುತ್ತದೆ. ಕಾರಣ ಇದು ಸರ್ಕಾರ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾಗಿದ್ದು, ಇದರಲ್ಲಿ ಹಲವು ಸೌಲಭ್ಯಗಳ ಕೊರತೆ ಇದೆ. ಹಾಗೂ ಖಾಸಗಿ ಸಂಸ್ಥೆಗಳು 5G ಪೂರ್ಣಗೊಳಿಸುವ ಹಂತದಲ್ಲಿದ್ದರೆ ಇದು ಮಾತ್ರ ಇನ್ನೂ 4G ಆರಂಭದ ಬಗ್ಗೆ ಮಾತನಾಡುತ್ತಿದೆ. ಆದರೆ, ಇನ್ಮುಂದೆ ಖಾಸಗಿ ಸಂಸ್ಥೆಗಳಿಗೆ ನಡುಕ ಉಂಟು ಮಾಡಲು ಸಿದ್ಧತೆ ನಡೆಸಿದೆ.

ಹೌದು, ಭಾರತ ಸಂಚಾರ ನಿಗಮ ಲಿಮಿಟೆಡ್‌ (BSNL) ತನ್ನ ಕ್ಷೀಣಿಸುತ್ತಿರುವ ಚಂದಾದಾರರ ವ್ಯವಸ್ಥೆಯನ್ನು ಕೊನೆಗೊಳಿಸಲು ಹಾಗೂ 4G ಮತ್ತು 5G ಸೇವೆಗಳ ರೋಲ್‌ಔಟ್‌ನೊಂದಿಗೆ ಖಾಸಗಿ ಟೆಲಿಕಾಂ ಆಪರೇಟರ್‌ಗಳ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ಗುರಿಯನ್ನು ಹೊಂದಿದೆ. ಯಾಕೆಂದರೆ ಬಿಎಸ್‌ಎನ್‌ಎಲ್‌ ಅಭಿವೃದ್ಧಿಗೆ 89,047 ಕೋಟಿಯ ಮೂರನೇ ಪರಿಹಾರ ಪ್ಯಾಕೇಜ್ ಅನ್ನು ಸರ್ಕಾರ ಘೋಷಣೆ ಮಾಡಲಾಗಿದೆ. ಹಾಗಿದ್ರೆ, ಬನ್ನಿ ಇದರ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.

BSNL ಎದುರು ಏರ್‌ಟೆಲ್‌, ಜಿಯೋ ಇನ್ಮುಂದೆ ಏನೇನು ಅಲ್ಲ; ಶಕ್ತಿ ನೀಡಿದ ಸರ್ಕಾರ!

ಖಾಸಗಿ ಸಂಸ್ಥೆಗಳ ವಿರುದ್ಧ ಸೆಣಸಾಡಲು ಸಾಧ್ಯವೇ ಇಲ್ಲದಂತಿಲ್ಲ ಈ ಸಂದರ್ಭದಲ್ಲಿ ಸರ್ಕಾರ ಬಿಎಸ್‌ಎನ್‌ಎಲ್‌ಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಈ ಮೂಲಕ ಏರ್‌ಟೆಲ್‌,ಜಿಯೋ ಹಾಗೂ ವಿಟೆಲಿಕಾಂಗೆ ತೀವ್ರ ಪೈಪೋಟಿ ನೀಡಲಿದೆ. ಅದರಂತೆ ಕೇಂದ್ರ ಸಚಿವ ವೈಷ್ಣವ್ ಮಾತನಾಡಿ, ಒಮ್ಮೆಲೆ 4G ಮತ್ತು 5Gಯ ​​ರೋಲ್‌ಔಟ್ ಕೆಲಸ ನಡೆಯುತ್ತದೆ, ಹಾಗೆಯೇ ಕಂಪನಿಯು ತನ್ನ ಚಂದಾದಾರರನ್ನು ಕಳೆದುಕೊಳ್ಳುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲಿದೆ ಎಂದಿದ್ದಾರೆ.

ಬಿಎಸ್‌ಎನ್‌ಎಲ್‌ ಎದುರಿಸುತ್ತಿರುವ ಸವಾಲುಗಳೇನು?:ಸದ್ಯಕ್ಕೆ ತನ್ನ ಚಂದಾದಾರರ ಸಂಖ್ಯೆಯನ್ನು ಕಾಪಾಡಿಕೊಳ್ಳುವಲ್ಲಿ ಬಿಎಸ್‌ಎನ್‌ಎಲ್‌ ತೀವ್ರ ಸಮಸ್ಯೆ ಎದುರಿಸುತ್ತಿದೆ. ಈ ಮೂಲಕ ಬಿಎಸ್‌ಎನ್‌ಎಲ್‌ ಗ್ರಾಹಕರು ಏರ್‌ಟೆಲ್‌,ಜಿಯೋ ಕಡೆ ಹೆಚ್ಚು ಮುಖ ಮಾಡುತ್ತಿದ್ದಾರೆ.ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಪ್ರಕಾರ, ಮಾರ್ಚ್ 2023ರ ಹೊತ್ತಿಗೆ ಮೊಬೈಲ್ ವಿಭಾಗದಲ್ಲಿ ಕೇವಲ ಶೇಕಡಾ 9.27ಮಾರುಕಟ್ಟೆ ಪಾಲನ್ನು ಹೊಂದಿದ್ದು, ಇದಕ್ಕೆ ತದ್ವಿರುದ್ಧವಾಗಿ, ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿ 90.73% ಸಂಯೋಜಿತ ಮಾರುಕಟ್ಟೆ ಪಾಲನ್ನು ಹೊಂದಿವೆ.

BSNL ಎದುರು ಏರ್‌ಟೆಲ್‌, ಜಿಯೋ ಇನ್ಮುಂದೆ ಏನೇನು ಅಲ್ಲ; ಶಕ್ತಿ ನೀಡಿದ ಸರ್ಕಾರ!

ಬಿಎಸ್‌ಎನ್‌ಎಲ್‌ ಮಾರ್ಚ್ 2023 ರಲ್ಲೇ 50,000 ಚಂದಾದಾರರನ್ನು ಕಳೆದುಕೊಂಡಿದೆ. ಇದು ಒಂದು ಕಡೆಯಾದರೆ ವೈರ್‌ಲೈನ್ ವಿಭಾಗದಲ್ಲಿ ಈ ಪರಿಸ್ಥಿತಿ ಏನೂ ಭಿನ್ನವಾಗಿಲ್ಲ. ಇನ್ನು ಮಾರ್ಚ್ 2023 ರ ಹೊತ್ತಿಗೆ ಬಿಎಸ್‌ಎನ್‌ಎಲ್‌ 25 %ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ಈ ಎಲ್ಲಾ ಪ್ರಮುಖ ಸಮಸ್ಯೆಗಳಿಗೆ 4G ನೆಟ್‌ವರ್ಕ್ ಕೊರತೆಯೇ ಕಾರಣ ಎಂದು ಉದ್ಯಮ ತಜ್ಞರು ಉಲ್ಲೇಖಿಸಿದ್ದಾರೆ.

ಈ ಕಾರಣಕ್ಕಾಗಿಯೇ ಇದೀಗ ಬಿಎಸ್‌ಎನ್‌ಎಲ್‌ 200 ಸೈಟ್‌ಗಳೊಂದಿಗೆ 4G ನೆಟ್‌ವರ್ಕ್‌ನ ನಿಯೋಜನೆಯನ್ನು ಪ್ರಾರಂಭಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದು, ಇನ್ನು ಮೂರು ತಿಂಗಳ ಪ್ರಾಯೋಗಿಕ ಅವಧಿಯ ನಂತರ ದಿನಕ್ಕೆ ಸರಾಸರಿ 200 ಸೈಟ್‌ಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಹಾಗಿದ್ರೆ, ಇದರ ಧನಾತ್ಮಕ ಬೆಳವಣಿಗೆಯನ್ನೂ ಗಮನಿಸೋಣ ಬನ್ನಿ.

ಬಿಎಸ್‌ಎನ್‌ಎಲ್‌ನ ಧನಾತ್ಮಕ ಬೆಳವಣಿಗೆ ಏನೇನು?: ಬಿಎಸ್‌ಎನ್‌ಎಲ್‌ನ ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಹೊಸ ಸಂಪರ್ಕಗಳನ್ನು ನೀಡುತ್ತಿದೆ. ಜೊತೆಗೆ ಮೇ 2023 ರಲ್ಲಿ ಬಿಎಸ್‌ಎನ್‌ಎಲ್‌ನ ಒಟ್ಟು ಹೋಮ್ ಫೈಬರ್ ಸಬ್‌ಸ್ಕ್ರೈಬರ್ ಬೇಸ್ 30.88 ಲಕ್ಷ ಎಂದು ವೈಷ್ಣವ್ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಬಿಎಸ್‌ಎನ್‌ಎಲ್‌ ಎಮ್‌ಟಿಎನ್‌ಎಲ್‌ನ ಮೊಬೈಲ್ ಸೇವಾ ಕಾರ್ಯಾಚರಣೆಗಳನ್ನು ದೆಹಲಿ ಮತ್ತು ಮುಂಬೈನಲ್ಲಿ ವಹಿಸಿಕೊಂಡಿದೆ. ಈ ಮೂಲಕ ಮುಂದಿನ ವರ್ಷದೊಳಗೆ ಈ ಪ್ರದೇಶಗಳಲ್ಲಿ 4G ಮತ್ತು 5G ಸೇವೆಗಳನ್ನು ನೀಡಲಿದೆ.

BSNL ಎದುರು ಏರ್‌ಟೆಲ್‌, ಜಿಯೋ ಇನ್ಮುಂದೆ ಏನೇನು ಅಲ್ಲ; ಶಕ್ತಿ ನೀಡಿದ ಸರ್ಕಾರ!

ಈ ಎಲ್ಲಾ ಕಾರಣಗಳಿಂದಾಗಿ ಹಾಗೂ ಸರ್ಕಾರದ ಉತ್ತೇಜನದಿಂದಾಗಿ ಬಿಎಸ್‌ಎನ್‌ಎಲ್‌ 4G ಮತ್ತು 5G ಸೇವೆಯ ಮೂಲಕ ಬಳಕೆದಾರರಿಗೆ ಈಗ ಏರ್‌ಟೆಲ್‌, ಜಿಯೋ ಹಾಗೂ ವಿ ಸೇವೆ ನೀಡುತ್ತಿವೆಯೋ ಅದಕ್ಕಿಂತ ಒಂದು ಕೈ ಮೇಲೆ ಬಿಎಸ್‌ಎನ್‌ಎಲ್‌ ಸೇವೆ ನೀಡಲಿದೆ. ಇದರಿಂದಾಗಿ ಬಳಕೆದಾರರು ಅಗ್ಗದ ದರದಲ್ಲಿ ಅತ್ಯುತ್ತಮ ಸೇವೆ ಪಡೆದುಕೊಳ್ಳಲು ಇನ್ನು ಕೇವಲ ಒಂದು ವರ್ಷವಷ್ಟೇ ಕಾಯಬೇಕಿದೆ.

Best Mobiles in India

English summary
Bharat Sanchar Nigam Limited (BSNL) aims to end its declining subscriber base and emerge as a strong competitor against private telecom operators with the rollout of 4G and 5G services.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+