Subscribe to Gizbot

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

Written By:

ಭಾರತೀಯ ಮೂಲದ ಕೆನಡಾ ಪ್ರಜೆ 16 ರ ಹರೆಯದ ಅನ್‌ಮೋಲ್ ತುಕ್ರಾಲ್, ವೈಯಕ್ತೀಕರಿಸಿದ ಸರ್ಚ್ ಎಂಜಿನ್ ಅನ್ನು ವಿನ್ಯಾಸಗೊಳಿಸಿದ್ದು ಇದು ಗೂಗಲ್‌ಗಿಂತಲೂ 47%ದಷ್ಟು ನಿಖರವಾಗಿದೆ ಎಂಬುದಾಗಿ ದೃಢಪಟ್ಟಿದೆ.

ಓದಿರಿ: ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ತನ್ನ ಹತ್ತನೇ ತರಗತಿಯನ್ನು ಮುಗಿಸಿರುವ ಅನ್‌ಮೋಲ್, ಈ ಎಂಜಿನ್ ವಿನ್ಯಾಸಕ್ಕಾಗಿ ಹಲವಾರು ತಿಂಗಳುಗಳ ಶ್ರಮ ವಹಿಸಿದ್ದಾರೆ. ಮತ್ತು ಈ ಎಂಜಿನ್‌ನ ಬಳಕೆಯನ್ನು 13 ರಿಂದ 18 ವರ್ಷ ವಯಸ್ಸಿನವರು ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರ್ಚ್ ಸ್ಪೇಸ್‌

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ವೈಯಕ್ತೀಕರಿಸಿದ ಸರ್ಚ್ ಸ್ಪೇಸ್‌ನಲ್ಲಿ ನಾನು ಏನಾದರೂ ಸಾಧಿಸುತ್ತೇನೆ ಎಂಬ ಭರವಸೆ ನನಗಿತ್ತು. ನಿಜಕ್ಕೂ ಇದು ಹೆಚ್ಚು ಬುದ್ಧಿವಂತಿಕೆಯ ಕೆಲಸವಾಗಿದೆ.ಆದರೆ ಗೂಗಲ್ ಈ ಕಾರ್ಯವನ್ನು ಈಗಾಗಲೇ ಸಾಧಿಸಿದೆ ಎಂಬುದು ನನಗೆ ತಿಳಿದ ಒಡನೆಯೇ ಇದಕ್ಕಿಂತಲೂ ಮಹತ್ತರವಾದುದನ್ನು ನಾನು ಸಾಧಿಸಬೇಕು ಎಂಬ ಸ್ಥೈರ್ಯ ನನ್ನಲ್ಲಿ ಮೂಡಿತು.

ನಾಲ್ಕುವಾರಗಳ ಇಂಟರ್ನ್‌ಶಿಪ್‌

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ನಾಲ್ಕುವಾರಗಳ ಇಂಟರ್ನ್‌ಶಿಪ್‌ಗಾಗಿ ಅನ್‌ಮೋಲ್ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

1 ಗಿಗಾಬೈಟ್ ಕಂಪ್ಯೂಟರ್

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ಉಚಿತ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿರುವ ಕನಿಷ್ಟ ಪಕ್ಷ 1 ಗಿಗಾಬೈಟ್ ಕಂಪ್ಯೂಟರ್, ಪೈಥಾನ್ ಭಾಷೆ ಅಭಿವೃದ್ಧಿಪಡಿಸಲಾಗಿದೆ, ಸ್ಪ್ರೆಡ್‌ಶೀಟ್ ಪ್ರೊಗ್ರಾಮ್ ಮತ್ತು ಗೂಗಲ್ ಅಂತೆಯೇ ನ್ಯೂಯಾರ್ಕ್ ಟೈಮ್ಸ್‌ಗೆ ಪ್ರವೇಶವನ್ನು ಇದು ಹೊಂದಿದೆ.

ಸರ್ಚ್ ಕ್ವೆರಿ

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ಪ್ರತಿಯೊಂದು ಸರ್ಚ್ ಎಂಜಿನ್‌ನ ನಿಖರೆತಯನ್ನು ಪರಿಶೀಲಿಸಲು, ದ ನ್ಯೂಯಾರ್ಕ್ ಟೈಮ್ಸ್‌ನಿಂದ ಈ ವರ್ಷದ ಸುದ್ದಿ ಲೇಖನಗಳಿಗೆ ತನ್ನ ಸರ್ಚ್ ಕ್ವೆರಿಯನ್ನು ಅವರು ಸೀಮಿತಗೊಳಿಸಿದರು.

ವೆಬ್ ಇತಿಹಾಸ

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ವೆಬ್ ಇತಿಹಾಸಗಳನ್ನು ಸಂಯೋಜಿಸುವ ಮೂಲಕ ಬೇರೆ ಬೇರೆ ಆಸಕ್ತಿಗಳನ್ನು ಹೊಂದಿರುವ ಬಳಕೆದಾರರೊಂದಿಗೆ ಹಲವಾರು ಕಟ್ಟುಕಥೆಗಳನ್ನು ಇವರು ರಚಿಸಿದರು.

ಆಸಕ್ತಿ ಆಧಾರಿತ ಸರ್ಚ್ ಎಂಜಿನ್‌

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ನಂತರ ತುಕ್ರೇಲ್ ಈ ಮಾಹಿತಿಯನ್ನು ಗೂಗಲ್ ಮತ್ತು ತನ್ನ ಆಸಕ್ತಿ ಆಧಾರಿತ ಸರ್ಚ್ ಎಂಜಿನ್‌ನಿಗೆ ಉಣಿಸಿದರು.

ಫಲಿತಾಂಶ

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ಕೊನೆಗೆ ಈ ಎರಡೂ ಸರ್ಚ್ ಎಂಜಿನ್‌ಗಳ ಫಲಿತಾಂಶಗಳನ್ನು ಹೋಲಿಸಿದರು.

ಅವಿರತ ಶ್ರಮ

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ನನ್ನ ಕಂಪ್ಯೂಟರ್ ಗುರುಗಳು ನನ್ನ ಪ್ರಾಜೆಕ್ಟ್‌ನಿಂದ ಹೆಚ್ಚು ಆಕರ್ಷಿತಗೊಂಡಿದ್ದರು. ಇದಕ್ಕಾಗಿ ಅವಿರತ ಶ್ರಮ ಪಟ್ಟ ತುಕ್ರೇಲ್ ಒಂದು ವರ್ಷದ ಕಂಪ್ಯೂಟರ್ ಕೋರ್ಸ್ ಅನ್ನು ತ್ಯಜಿಸಿದ್ದಾರೆ.

ಮಹದಾಸೆ

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ಕಳೆದ ತಿಂಗಳು ಅಂತರಾಷ್ಟ್ರೀಯ ಹೈಸ್ಕೂಲ್ ಜರ್ನಲ್ ಆಫ್ ಸೈನ್ಸ್‌ಗೆ ತುಕ್ರೇಲ್ ಈ ಪೇಪರ್ ಅನ್ನು ಸಲ್ಲಿಸಿದ್ದಾರೆ. ಮತ್ತು ಸ್ಟ್ಯಾನ್‌ಫೋರ್ಟ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನವನ್ನು ಪಡೆಯುವ ಮಹದಾಸೆಯನ್ನು ಹೊಂದಿದ್ದಾರೆ.

ಸುದ್ದಿ ಸಂಗ್ರಾಹಕ

ಗೂಗಲ್‌ಗೆ ಸವಾಲೊಡ್ಡಿದ 16 ರ ಪೋರ

ಈ ತಂತ್ರಜ್ಞಾನವನ್ನು ಬಳಸಿಕೊಂಡು ಸುದ್ದಿ ಸಂಗ್ರಾಹಕವನ್ನು ಅಭಿವೃದ್ಧಿಪಡಿಸುವ ಇರಾದೆ ಕೆಲವೊಂದು ಮಾರುಕಟ್ಟೆ ಏಜೆನ್ಸಿಗಳಿಗೆ ಇದನ್ನು ಪರವಾನಗಿಯನ್ನಾಗಿಸುವ ಇರಾದೆ ಇವರದ್ದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Sixteen-year-old Anmol Tukrel, an Indian-origin Canadian citizen has designed a personalized search engine that claims to be as high as 47% more accurate than Google, and about 21% more accurate on an average.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot