Subscribe to Gizbot

ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ

Written By:

ಸಾಧಿಸುವ ಛಲ ಒಂದಿದ್ದರೆ ಬೆಟ್ಟವನ್ನೇ ಕಡಿದು ನಮಗೆ ಬೇಕಾದ ದಾರಿಯನ್ನು ಮಾಡಿಕೊಳ್ಳಬಹುದು ಎಂಬ ಮಾತಿನಂತೆ ಎಂದಿಗೂ ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ನಾವು ಕಳೆದುಕೊಳ್ಳಬಾರದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ 24 ರ ಹರೆಯದ ಶ್ರೀಕಾಂತ್ ಬೊಲ್ಲಾ. ಇವರು ಹುಟ್ಟು ಕುರುಡರಾಗಿದ್ದರೂ ಬೊಲ್ಲಂಟ್ ಇಂಡಸ್ಟ್ರಿಯ ಸಿಇಒ ಆಗಿದ್ದಾರೆ ಎಂದರೆ ನೀವು ನಂಬಲೇಬೇಕು. ಅಂಧರಾಗಿದ್ದರೂ ತಮ್ಮಲ್ಲಿನ ವಿಶ್ವಾಸವನ್ನು ಇವರು ಕಳೆದುಕೊಳ್ಳದೆ ಕಣ್ಣಿರುವವರಿಗೆ ಮಾದರಿಯಾಗಿದ್ದಾರೆ.

ಓದಿರಿ: ವಿದ್ಯೆ ತಲೆಗೆ ಹತ್ತದಿದ್ದರೂ ಯಶಸ್ಸು ಕೈ ಬಿಡಲಿಲ್ಲ

ಇವರ ಪಾಲಕರೂ ಕೂಡ ಮಗ ಅಂಧ ಎಂಬುದನ್ನು ತೋರ್ಪಡಿಸಿಕೊಳ್ಳದೆ ಅವನಿಗೆ ವಿದ್ಯಾಭ್ಯಾಸವನ್ನು ನೀಡಿ ಭವಿಷ್ಯದಲ್ಲಿ ಮುಂದೆ ಬರಲು ಸಹಾಯ ಮಾಡಿದ್ದಾರೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಬಾಳ್ವೆಯಲ್ಲಿ ಅವರು ಯಾವ ರೀತಿಯ ಹೋರಾಟವನ್ನು ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುಟ್ಟುವಾಗಲೇ ಇವರು ಅಂಧ

#1

ಹುಟ್ಟುವಾಗಲೇ ಇವರು ಅಂಧರಾಗಿದ್ದ ಕಾರಣ ಹಳ್ಳಿಯವರು ಇವರ ಪಾಲಕರಲ್ಲಿ ಶ್ರೀಕಾಂತ್‌ನನ್ನು ತೊರೆಯುವಂತೆ ಸಲಹೆ ಮಾಡಿದ್ದರು. ಈ ಹುಡುಗನಿಂದ ಯಾವುದೇ ಪ್ರಯೋಜನವಿಲ್ಲ ಎಂಬುದಾಗಿ ತಿಳಿಸಿದ್ದರು.

ಮಗನನ್ನು ಓದಿಸುವ ನಿರ್ಧಾರ

#2

ಆದರೆ ಇವರ ಹೆತ್ತವರು ಮಗನನ್ನು ಓದಿಸುವ ಹಟಕ್ಕೆ ಬಿದ್ದರು. ತಮ್ಮ 20,000 ಆದಾಯದಲ್ಲಿಯೇ ಮಗನನ್ನು ಓದಿಸುವ ನಿರ್ಧಾರವನ್ನು ತಳೆದರು.

ಬೊಲ್ಲಾಂಡ್ ಇಂಡಸ್ಟ್ರಿಯ ಸಿಇಒ

#3

ಈಗ ಶ್ರೀಕಾಂತ್ ಹೈದ್ರಾಬಾದ್ ಮೂಲದ ಬೊಲ್ಲಾಂಡ್ ಇಂಡಸ್ಟ್ರಿಯ ಸಿಇಒ ಆಗಿ ಮಿಂಚುತ್ತಿದ್ದು ಅದೂ ಬರೇ 24 ರ ಹರೆಯದಲ್ಲೇ ಈ ಸಾಧನೆಯನ್ನು ಮಾಡಿದ್ದಾರೆ.

ಟರ್ನ್ಓವರ್ 10 ಕೋಟಿ

#4

ಕಂಪೆನಿಯ ಟರ್ನ್ಓವರ್ 10 ಕೋಟಿಯಾಗಿದ್ದು ಪರಿಸರ ಸ್ನೇಹಿ ಉತ್ಪನ್ನಗಳು ಮತ್ತು ರೀಸೈಕಲೇಬಲ್ ವಸ್ತುಗಳನ್ನು ಈ ಕಂಪೆನಿ ತಯಾರಿಸುತ್ತದೆ.

60% ಉದ್ಯೋಗಿಗಳು ಅಂಗವಿಕಲರಾಗಿದ್ದಾರೆ

#5

ಇನ್ನು ಕಂಪೆನಿಯ ಇನ್ನೊಂದು ಮಹತ್ತರ ಅಂಶವೆಂದರೆ ಇಲ್ಲಿ ಕೆಲಸ ಮಾಡುತ್ತಿರುವ 60% ಉದ್ಯೋಗಿಗಳು ಅಂಗವಿಕಲರಾಗಿದ್ದಾರೆ.

ಶಾಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು

#6

ಓದುತ್ತಿರುವ ಸಂದರ್ಭದಲ್ಲಿ ಶ್ರೀಕಾಂತ್ ಅಂಧರು ಎಂಬ ಕಾರಣಕ್ಕೆ ಶಾಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು ಅಂತೆಯೇ ಕೊನೆಯ ಬೆಂಚ್‌ನಲ್ಲಿ ಇವರು ಕುಳಿತಿರುತ್ತಿದ್ದರು.

10 ನೇ ಪರೀಕ್ಷೆಯಲ್ಲಿ 90% ಅಂಕ

#7

ಆದರೆ ಈ ಎಲ್ಲಾ ಅಡೆತಡೆಗಳ ನಡುವೆಯೂ ಶ್ರೀಕಾಂತ್ 10 ನೇ ಪರೀಕ್ಷೆಯಲ್ಲಿ 90% ಅಂಕವನ್ನು ಗಳಿಸಿದ್ದರು. ಆದರೂ ಅವರ ಶಾಲಾ ಅಧಿಕಾರಿಗಳು ಅವರಲ್ಲಿದ್ದ ನ್ಯೂನತೆಯನ್ನು ಹಿರಿದು ಮಾಡಿ ಅವರಿಗೆ ವಿಜ್ಞಾನ ವಿಷಯವನ್ನು ಕಲಿಯಲು ಅನುಮತಿಸಲಿಲ್ಲ.

6 ತಿಂಗಳ ಹೋರಾಟ

#8

ಶ್ರೀಕಾಂತ್ ಇಷ್ಟಕ್ಕೆ ಸುಮ್ಮನಿರದೇ ರಾಜ್ಯ ಸರ್ಕಾರದಲ್ಲಿ ದಾವೆ ಹೂಡಿ 6 ತಿಂಗಳ ಹೋರಾಟದ ನಂತರ ಕಲಿಕೆಗೆ ಮಾನ್ಯತೆಯನ್ನು ಪಡೆದುಕೊಂಡರು.

ಎಮ್‌ಐಟಿಯಲ್ಲಿ ಇವರಿಗೆ ಪ್ರವೇಶ

#9

ಇವರ ಹೋರಾಟ ಇಲ್ಲಿಗೆ ಮುಗಿಯಲಿಲ್ಲ. ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವಲ್ಲೂ ಇವರಿಗೆ ಕಷ್ಟಗಳು ಉಂಟಾಗಿದ್ದವು. ಆದರ ಎಮ್‌ಐಟಿಯಲ್ಲಿ ಇವರಿಗೆ ಪ್ರವೇಶವನ್ನು ಒದಗಿಸಲು ಇದು ನೆರವು ನೀಡಿತು.

ಅಬ್ದುಲ್ ಕಲಾಂರೊಂದಿಗೆ ಕಾರ್ಯನಿರ್ವಹಿಸಿದ್ದಾರೆ

#10

2012 ರಲ್ಲಿ ಶ್ರೀಕಾಂತ್ ಬೊಲ್ಲಾಂಟ್ ಇಂಡಸ್ಟ್ರಿಯನ್ನು ಇವರು ಸ್ಥಾಪಿಸಿದರು. ಮುಖ್ಯ ಇಂಡಿಯಾ ಯೋಜನೆಯಲ್ಲಿ ಇವರು ಅಬ್ದುಲ್ ಕಲಾಂರೊಂದಿಗೆ ಕಾರ್ಯನಿರ್ವಹಿಸಿದ್ದಾರೆ.

ಇವರು ಬೆಲೆ ನೀಡಿದ ಒಂದು ಗುಣವೆಂದರೆ ಸಹಾನುಭೂತಿ

#11

ತಮ್ಮ ಹೋರಾಟದ ದಿನಗಳಲ್ಲಿ ಇವರು ಬೆಲೆ ನೀಡಿದ ಒಂದು ಗುಣವೆಂದರೆ ಸಹಾನುಭೂತಿಯಾಗಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಬೇಡುತ್ತಿರುವ ವ್ಯಕ್ತಿಗೆ ಹಣವನ್ನು ನೀಡುವುದು ಸಹಾನುಭೂತಿಯಲ್ಲ. ಅವನಿಗೆ ಜೀವಿಸುವ ವಿಧಾನವನ್ನು ತೋರಿಸುವುದೇ ನಿಜವಾದ ಸಹಾನುಭೂತಿಯಾಗಿದೆ ಎಂಬುದು ಶ್ರೀಕಾಂತ್ ಮಾತಾಗಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಜಾಹೀರಾತಿನಲ್ಲೂ ನಡೆದಿರುವ ಫೋಟೋಶಾಪ್ ತಪ್ಪುಗಳು
ಮಾನವನ ಮೆದುಳು ರೊಬೋಟ್ ದೇಹ: ಮರಣ ನಮ್ಮ ಕಾಲಡಿಯಲ್ಲಿ
25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
In this article we are giving you one beautiful story about 24 Year Old Never Let Blindness Affect Him. Now He’s The CEO Of A 10-Crore Company.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot