AI camera: ಈ ಎಐ-ಚಾಲಿತ ಕ್ಯಾಮರಾ ನಿಮ್ಮ ಫೋಟೋಗಳಿಂದ ಕವಿತೆಗಳನ್ನು ಬರೆಯುತ್ತದೆ! ಹೇಗೆ ಗೊತ್ತಾ?
ಈಗಂತೂ ಎಲ್ಲಾ ವಿಭಾಗದಲ್ಲೂ ಎಐ (AI) ತನ್ನ ಸಾಮರ್ಥ್ಯ ತೋರುತ್ತಿದೆ. ಈ ಮೂಲಕ ಜನರಿಗೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತಿವೆ. ಅದರಂತೆ ಈಗ ಎಐ-ಚಾಲಿತ ಕ್ಯಾಮರಾ (AI-powered camera) ನಿಮ್ಮ ಫೋಟೋಗಳಿಂದ ಕವಿತೆಗಳನ್ನು ಬರೆಯಲಿದೆ.
ಹೌದು, ಈ ಮೊದಲು ಫೋಟೋಗಳನ್ನು ನೋಡಿ, ಅಥವಾ ಯಾವುದಾದರೂ ಸ್ಥಳಗಳನ್ನು ನೋಡಿ ಕಥೆ, ಕವನ ಬರೆಯುತ್ತಿದ್ದರು. ಆದರೆ, ಈಗ ಕ್ಯಾಮೆರಾವೇ ನೀವು ಸೆರೆಹಿಡಿದ ಫೋಟೋಗಳಿಗೆ ತಕ್ಕ ಕವಿತೆಯನ್ನು ಬರೆಯಲಿದೆ. ಹಾಗಿದ್ರೆ, ಇದು ಹೇಗೆ ಸಾಧ್ಯ?, ಕವಿತೆಗಳನ್ನು ಯಾವ ರೀತಿ ಬರೆಯುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಮೂಲಕ ತಿಳಿಸಿಕೊಡಲಾಗಿದೆ ಓದಿರಿ.

ಕವಿತೆ ಬರೆಯುವ ಕ್ಯಾಮೆರಾ: ಈ ಪೊಯೆಟ್ರಿ ಕ್ಯಾಮೆರಾ(Poetry Camera), ಕ್ಲಾಸಿಕ್ ಪೋಲರಾಯ್ಡ್ ಕ್ಯಾಮೆರಾವನ್ನು ಹೋಲುವ ಎಐ ಚಾಲಿತ ಡಿವೈಸ್ ಫೋಟೋಗಳಿಂದ ಕವನಗಳನ್ನು ಬರೆಯುವ ಸಾಮರ್ಥ್ಯ ಪಡೆದಿದೆ. ಸೃಜನಾತ್ಮಕ ಜೋಡಿಯಾದ ಕೆಲಿನ್ ಕ್ಯಾರೊಲಿನ್ ಝಾಂಗ್ ಮತ್ತು ರಯಾನ್ ಮಾಥರ್ ಅಭಿವೃದ್ಧಿಪಡಿಸಿದ ಈ ಓಪನ್ ಸೋರ್ಸ್ ಕ್ಯಾಮರಾ ಓಪನ್ ಎಐನ ಜಿಪಿಟಿ-4 ಅನ್ನು ಬಳಕೆ ಮಾಡಲಿದೆ. ಇದೇ ಎಐ ಮಾದರಿಯು ಚಾಟ್‌ಜಿಪಿಟಿ ಪ್ಲಸ್‌ಗೆ ಶಕ್ತಿ ನೀಡುವ ಕೆಲಸ ಮಾಡಲಿದೆ.
ಈ ವಿಶೇಷ ಕ್ಯಾಮರಾ ಸಿಂಗಲ್ ಬೋರ್ಡ್ ಕಂಪ್ಯೂಟರ್ ರಾಸ್ಪ್ಬೆರಿ ಪೈ ಫೋಟೋಗಳನ್ನು ವಿಶ್ಲೇಷಿಸುತ್ತದೆ ಮತ್ತು ದೃಶ್ಯ ಡೇಟಾವನ್ನು ಸರ್ಚ್ ಮಾಡುತ್ತದೆ. ಇದರ ನಂತರ, ಎಐ ಸಹಾಯದಿಂದ ಫೋಟೋದ ಬಣ್ಣಗಳು, ವಿಶೇಷ ಲಕ್ಷಣಗಳು, ಶೈಲಿ ಮತ್ತು ಭಾವನೆಗಳನ್ನು ಗುರುತಿಸುತ್ತದೆ. ಈ ಕ್ಯಾಮೆರಾ ಕೇವಲ ಕವಿತೆಯನ್ನು ಬರೆಯುವುದಕ್ಕಷ್ಟೇ ಸೀಮಿತಗೊಳಿಸಿಲ್ಲ ಎಂದು ಕ್ಯಾಮೆರಾವನ್ನು ತಯಾರಿಸಿದ ವಿನ್ಯಾಸಕರು ಹೇಳಿದ್ದು, ಇದು ಓಪನ್ ಸೋರ್ಸ್ ಡಿವೈಸ್ ಆಗಿ ಪ್ರಾರಂಭವಾದಾಗಿನಿಂದ, ಬಳಕೆದಾರರು ಅದರಲ್ಲಿ ಸೋನೆಟ್, ಹೈಕು ಮತ್ತು ಫ್ರೀ ವರ್ಸಸ್ ಮುಂತಾದ ಹಲವು ಆಯ್ಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಈ ಕ್ಯಾಮೆರಾ ಯಾವುದೇ ಫೋಟೋಗಳನ್ನು ಅಥವಾ ಕವಿತೆಯನ್ನು ಡಿಜಿಟಲ್ ಆಗಿ ಸ್ಟೋರ್ ಮಾಡುವುದಿಲ್ಲ. ಇನ್ನು ಈ ಕ್ಯಾಮೆರಾವನ್ನು ಮಾರಾಟ ಮಾಡುವ ಯಾವುದೇ ಯೋಜನೆ ಸಹ ಇರಲಿಲ್ಲವಂತೆ. ಆದಾಗ್ಯೂ, ವಿನ್ಯಾಸಕರು ಈಗ ಅದನ್ನು ವಾಣಿಜ್ಯಿಕವಾಗಿ ಮಾರಾಟ ಮಾಡುವ ಸಾಧ್ಯತೆಯನ್ನು ಅನ್ವೇಷಿಸುತ್ತಿದ್ದಾರೆ. ಈ ಸಂಬಂಧ ಮಾಥರ್ ಅವರು ಟೆಕ್ಕ್ರಂಚ್‌ಗೆ ನೀಡಿದ ಸಂದರ್ಶನದಲ್ಲಿ, ನಾನು ಚಾಟ್ ಜಿಪಿಟಿ-3 ಗೆ ಪ್ರವೇಶವನ್ನು ಪಡೆದಾಗ ಈ ಈ ಕ್ಯಾಮೆರಾ ಪ್ಲ್ಯಾನ್ ಅನ್ನು ಆರಂಭ ಮಾಡಿದೆ ಎಂದಿದ್ದಾರೆ.
ಪ್ರಮುಖವಾಗಿ ಈ ಕ್ಯಾಮೆರಾವು ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎನ್ನಲಾಗಿದೆ. ಯಾವುದೇ ಚಿತ್ರಗಳನ್ನು ಅಥವಾ ಕವಿತೆಗಳನ್ನು ಡಿಜಿಟಲ್ ಆಗಿ ಉಳಿಸದೆ ರಚಿಸಿದ ಕವಿತೆಗಳ ಅಸ್ಥಿರ ಸ್ವರೂಪವನ್ನು ಮಾತ್ರ ನೀಡುತ್ತದೆ. ಇನ್ನು ಜಾಂಗ್ ಮತ್ತು ಮಾಥರ್ ಅವರ ಈ ಯೋಜನೆಯನ್ನು ವಿವಿಧ ಪ್ಲಾಟ್‌ಫಾರ್ಮ್ ಮೂಲಕ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಂಡಾಗ ಇದು ಎಲ್ಲರ ಗಮನ ಸೆಳೆದಿದೆ.

ತಂತ್ರಜ್ಞಾನ ಮತ್ತು ಕಲೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಈ ಕ್ಯಾಮೆರಾದ ಸಾಮರ್ಥ್ಯವು ಜನರನ್ನು ನಿಬ್ಬೆರಗಾಗಿಸಿದೆ. ಅಲ್ಲದೆ ಸಾಕಷ್ಟು ಚರ್ಚೆಗಳನ್ನು ಸಹ ಹುಟ್ಟುಹಾಕಿದ್ದು, ಜನರ ಹುಬ್ಬೇರುವಂತೆ ಮಾಡಲಾಗಿದೆ. ಹಾಗೆಯೇ ಈ ಕ್ಯಾಮೆರಾ ಎಐ ಯೊಂದಿಗೆ ಅನೇಕ ಕೈಗಾರಿಕೆಗಳಿಗೆ ಏನಾಗುತ್ತದೆ ಎಂಬುದರ ಸೂಕ್ಷ್ಮದರ್ಶಕವಾಗಿದೆ ಎಂದು ಜಾಂಗ್ ಟೆಕ್ಕ್ರಂಚ್‌ಗೆ ಮಾಹಿತಿ ನೀಡಿದ್ದಾರೆ. ಜನರು ಅದರೊಂದಿಗೆ ಸಂವಹನ ನಡೆಸುವುದನ್ನು ನೋಡುವುದು ಆನಂದದಾಯಕವಾಗಿದೆ, ಈ ಮೂಲಕ ಮಗುವಿನಂತಹ ಸಂತೋಷವನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಝಾಂಗ್ ಮತ್ತು ಮಾಥರ್ ಅವರ ಈ ಕ್ಯಾಮೆರಾವು ಭವಿಷ್ಯದಲ್ಲಿ ನವೀನತೆಯ ಡಿವೈಸ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ತಂತ್ರಜ್ಞಾನ ಮತ್ತು ಕಲೆಯೊಂದಿಗೆ ಜನರು ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಬದಲಾವಣೆಗೆ ಕಾರಣವಾಗುತ್ತದೆ. ಈ ಇಬ್ಬರ ಅನ್ವೇಷಣೆಯು ಈ ಎರಡು ಕ್ಷೇತ್ರಗಳ ಛೇದಕವನ್ನು ಅನ್ವೇಷಿಸಲು ಇತರರನ್ನು ಸಹ ಪ್ರೇರೇಪಿಸುತ್ತದೆ ಎಂದು ಇವರೇ ಭಾವಿಸಿದ್ದಾರೆ. ಹಾಗೆಯೇ ಈ ಕ್ಯಾಮೆರಾ ಯಾವಾಗ ಲಭ್ಯವಾಗಲಿದೆ?, ಇದರ ಬೆಲೆ ಎಷ್ಟಿರಲಿದೆ ಎಂಬಿತ್ಯಾದಿ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.


Click it and Unblock the Notifications








