Airtel ಟೆಲಿಕಾಂನ ಈ ದುಬಾರಿ ಪ್ಲ್ಯಾನಿನಲ್ಲಿ ಏನೆಲ್ಲಾ ಸಿಗುತ್ತೆ ಗೊತ್ತಾ?..ಡೇಟಾ ಸಮಸ್ಯೆ ಇರಲ್ಲ!
ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವಿ ಟೆಲಿಕಾಂ ಸಂಸ್ಥೆಗಳು ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಹೊಂದಿವೆ. ಕೆಲವೊಂದು ಪ್ರೀಪೇಯ್ಡ್ ಪ್ಲ್ಯಾನ್‌ಗಳು ಹೆಚ್ಚಿನ ಪ್ರಯೋಜನಗಳನ್ನು ಪಡೆದಿದ್ದು, ಚಂದಾದಾರರನ್ನು ಸೆಳೆದಿವೆ. ಆ ಪೈಕಿ ಏರ್‌ಟೆಲ್ (Airtel) ಸಂಸ್ಥೆಯ ಅಧಿಕ ವ್ಯಾಲಿಡಿಟಿ ಸೌಲಭ್ಯದ ಜೊತೆಗೆ ದೈನಂದಿನ ಡೇಟಾ ಪ್ರಯೋಜನ ಪಡೆದ ಪ್ಲ್ಯಾನ್‌ಗಳು ಹೆಚ್ಚು ಬೇಡಿಕೆ ಹೊಂದಿದೆ. ಅದಾಗ್ಯೂ, ಸಂಸ್ಥೆಯ ಈ ದುಬಾರಿ ಬೆಲೆಯ ಪ್ಲ್ಯಾನ್ ಆಕರ್ಷಕ ಎನಿಸಿದೆ.
ಹೌದು, ಭಾರ್ತಿ ಏರ್‌ಟೆಲ್ ಭಿನ್ನ ಶ್ರೇಣಿಯ ಯೋಜನೆಗಳ ಆಯ್ಕೆ ಪಡೆದಿದೆ. ಅವುಗಳ ಪೈಕಿ ದುಬಾರಿ ದರದ ಯೋಜನೆಗಳು ಸೇರಿವೆ. ಏರ್‌ಟೆಲ್ 3999ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಯು ಬಿಗ್ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಇದರೊಂದಿಗೆ ಅತ್ಯುತ್ತಮ ಡೇಟಾ ಪ್ರಯೋಜನ ಕೂಡಾ ಒಳಗೊಂಡಿದೆ. ಬೆಲೆ ದುಬಾರಿ ಎನಿಸಿದರೂ, ಆಕರ್ಷಕ ಪ್ರಯೋಜನ ಪಡೆದಿದೆ. ಹಾಗಾದರೇ ಏರ್‌ಟೆಲ್‌ನ ಈ ಯೋಜನೆ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 3999ರೂ. ಪ್ರೀಪೇಯ್ಡ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 3999ರೂ. ಪ್ರೀಪೇಯ್ಡ್ ಯೋಜನೆಯು ದುಬಾರಿ ಪ್ರೈಸ್‌ಟ್ಯಾಗ್ ಹೊಂದಿದ್ದು, ಇದು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಈ ಅವಧಿಯಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ದೊರೆಯುತ್ತದೆ.
ಇನ್ನು ಈ ಯೋಜನೆಯಲ್ಲಿ ಹೆಚ್ಚುವಾರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ ಪಡೆದಿದೆ. ಅಲ್ಲದೇ ಫ್ರೀ ಹೆಲೋ ಟ್ಯೂನ್ ಸೇವೆ ಸಿಗಲಿದೆ. ಏರ್‌ಟೆಲ್ ಎಕ್ಸ್‌ಟ್ರೀಮ್ ಆಪ್ ಮೂಲಕ ಉಚಿತ ಟಿವಿ ಶೋ, ಮ್ಯೂವೀಸ್, ಲೈವ್ ಚಾನೆಲ್ಸ್ ಸೇವೆಗಳು ಸಿಗಲಿವೆ.
ಏರ್‌ಟೆಲ್ 3599ರೂ. ಪ್ರೀಪೇಯ್ಡ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 3599 ರೂ. ಪ್ರೀಪೇಯ್ಡ್ ಯೋಜನೆಯು ವಾರ್ಷಿಕ ಪ್ಲ್ಯಾನ್ ಆಗಿದ್ದು, ಇದು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಲಭ್ಯ.
ಏರ್‌ಟೆಲ್ 1999ರೂ. ಪ್ರೀಪೇಯ್ಡ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 1999 ರೂ. ಪ್ರೀಪೇಯ್ಡ್ ಯೋಜನೆಯು ವಾರ್ಷಿಕ ಪ್ಲ್ಯಾನ್ ಆಗಿದ್ದು, ಇದು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24 GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಿಗಲಿದೆ.
ಏರ್‌ಟೆಲ್ 1199ರೂ. ಪ್ರೀಪೇಯ್ಡ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 1199 ರೂ. ಪ್ರೀಪೇಯ್ಡ್ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಈ ಅವಧಿಯಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ದೊರೆಯುತ್ತದೆ.
ಏರ್‌ಟೆಲ್ 929ರೂ. ಪ್ರೀಪೇಯ್ಡ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 929ರೂ. ಪ್ರೀಪೇಯ್ಡ್ ಯೋಜನೆಯು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ದೊರೆಯುತ್ತದೆ.


Click it and Unblock the Notifications








