ಏರ್‌ಟೆಲ್‌ನ ಈ ಪ್ಲ್ಯಾನ್‌ನಲ್ಲಿ ಸಿಗುತ್ತೆ 4.15 ರೂ.ಗೆ 1GB ಡೇಟಾ!

|

ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರ್ತಿ ಏರ್‌ಟೆಲ್ ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಕಂಪನಿಯ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲಿ ಅಧಿಕ ಡೇಟಾ, ದೀರ್ಘಾವಧಿಯ ವ್ಯಾಲಿಡಿಟಿ ಹಾಗೂ ವಾಯಿಸ್‌ ಕರೆಗಳ ಸೌಲಭ್ಯದ ಹಲವು ಪ್ಲ್ಯಾನ್‌ಗಳು ಸೇರಿವೆ. ಹಾಗೆಯೇ ಇನ್ನು ಕೆಲವೊಂದು ಯೋಜನೆಗಳು ಕಡಿಮೆ ದರದಲ್ಲಿ ದೈನಂದಿನ ಡೇಟಾ ದರವನ್ನು ಪಡೆದಿವೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ಹಲವು ದೀರ್ಘಾವಧಿಯ ಯೋಜನೆಗಳನ್ನು ಹೊಂದಿದ್ದು, ಅವುಗಳಲ್ಲಿ ಏರ್‌ಟೆಲ್ 698ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಆಕರ್ಷಕ ಅನಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಉಚಿತ ವಾಯಿಸ್‌ ಕರೆ, ಬಿಗ್ ವ್ಯಾಲಿಡಿಟಿ ಹಾಗೂ 4.15 ರೂ.ಗಳಿಗೆ 1GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅರೇ ಅದು ಹೇಗೆ ಅಂತೀರಾ?..ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್‌ 698ರೂ.ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 698ರೂ.ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 698ರೂ. ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್ ಕರೆ ಸೌಲಭ್ಯ ಮತ್ತು 100 ಎಸ್‌ಎಂಎಸ್ ಪ್ರಯೋಜನವನ್ನು ಸಹ ಹೊಂದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯ.

ಕೇವಲ 4.15 ರೂ.ಗೆ 1GB ಡೇಟಾ

ಕೇವಲ 4.15 ರೂ.ಗೆ 1GB ಡೇಟಾ

ಹೌದು, ಏರ್‌ಟೆಲ್‌ 698ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯಲಿದೆ. ಒಟ್ಟು 84 ದಿನಗಳಿಗೆ 168GB ಡೇಟಾ ಸಿಗಲಿದೆ. ಲಭ್ಯವಾಗುವ ಒಟ್ಟು ಡೇಟಾವನ್ನು 698ರೂ. ಗೆ ಲೆಕ್ಕಹಾಕಿದರೇ, 1GB ಡೇಟಾಗೆ ಶುಲ್ಕ ಕೇವಲ 4.15 ರೂ. ಆಗುತ್ತದೆ.

ಏರ್‌ಟೆಲ್‌ ವಾರ್ಷಿಕ ಪ್ಲ್ಯಾನ್‌

ಏರ್‌ಟೆಲ್‌ ವಾರ್ಷಿಕ ಪ್ಲ್ಯಾನ್‌

ಏರ್‌ಟೆಲ್‌ನ 2498ರೂ. ಪ್ರೀಪೇಡ್‌ ಪ್ಲ್ಯಾನ್‌ ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗುತ್ತದೆ.

Most Read Articles
Best Mobiles in India

English summary
Airtel, the customers can get 1GB data for just Rs 4.15. If you haven’t guessed which prepaid plan it is yet, let us tell you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X