ಏರ್‌ಟೆಲ್‌ನ ಈ ಕಡಿಮೆ ಬೆಲೆಯ ರೀಚಾರ್ಜ್‌ನಲ್ಲಿ ಒಂದು ವರ್ಷದ ವ್ಯಾಲಿಡಿಟಿ ಗ್ಯಾರಂಟಿ!
ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಆದ್ರೆ ಜಿಯೋ ಟೆಲಿಕಾಂಗೆ ನೇರ ಪೈಪೋಟಿ ನೀಡುತ್ತಾ ಮುನ್ನುಗ್ಗಿರುವುದು ಭಾರ್ತಿ ಏರ್‌ಟೆಲ್ ಟೆಲಿಕಾಂ ಆಗಿದೆ. ಏರ್‌ಟೆಲ್ ಟೆಲಿಕಾಂ ತನ್ನ ಚಂದಾದಾರರಿಗಾಗಿ ಹಲವು ಭಿನ್ನ ಪ್ರಯೋಜನಗಳ ಪ್ರೀಪೇಯ್ಡ್ ಯೋಜನೆಗಳ ಲಿಸ್ಟ್ ಹೊಂದಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಆಕರ್ಷಕ ಡೇಟಾ ಹಾಗೂ ವ್ಯಾಲಿಡಿಟಿ ಪ್ರಯೋನ ಪಡೆದಿವೆ. ಆದರೆ ವಾರ್ಷಿಕ ಅಚಧಿಯ ವ್ಯಾಲಿಡಿಟಿಯ ಯೋಜನೆಗಳು ಗ್ರಾಹಕರ ಗಮನ ಸೆಳೆದಿವೆ.

ಹೌದು, ಏರ್‌ಟೆಲ್ ಟೆಲಿಕಾಂ ಭಿನ್ನ ಪ್ರೈಸ್ ಟ್ಯಾಗ್‌ನಲ್ಲಿ ಯೋಜನೆಗಳ ಆಯ್ಕೆ ಹೊಂದಿದೆ. ಹಾಗೆಯೇ ಅಲ್ಪಾವಧಿ ವ್ಯಾಲಿಡಿಟಿ ಜೊತೆಗೆ ವಾರ್ಷಿಕ ವ್ಯಾಲಿಡಿಟಿಯ ಆಯ್ಕೆಗಳನ್ನು ಒಳಗೊಂಡಿದೆ. ಆ ಪೈಕಿ ಬಹುತೇಕ ಎಲ್ಲ ಪ್ರೀಪೇಯ್ಡ್ ಯೋಜನೆಗಳು ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಪಡೆದಿವೆ. ಕೆಲವು ಬಳಕೆದಾರರು ಪದೇ ಪದೇ ರೀಚಾರ್ಜ್ ಮಾಡಿಸುವುದು ಬೇಡಾ ಎಂದು ವಾರ್ಷಿಕ ವ್ಯಾಲಿಡಿಟಿ ಅವಧಿಯ ಯೋಜನೆಗಳ ರೀಚಾರ್ಜ್‌ಗೆ ಮುಂದಾಗುತ್ತಾರೆ.

ಇನ್ನೂ ಕೆಲವು ಗ್ರಾಹಕರು ಹೆಚ್ಚು ಡೇಟಾ ಬಯಸಲ್ಲ, ಆದರೆ ವಾರ್ಷಿಕ ವ್ಯಾಲಿಡಿಟಿ ಅಗತ್ಯ ಆಗಿರುತ್ತದೆ ಇಂತಹ ಗ್ರಾಹಕರಿಗಾಗಿ ಏರ್‌ಟೆಲ್ ಟೆಲಿಕಾಂನ 1498ರೂ. ಪ್ರೀಪೇಯ್ಡ್ ಯೋಜನೆ ಆಕರ್ಷಕ ಎನಿಸಿದೆ. ಹಾಗಾದರೇ ಏರ್‌ಟೆಲ್ ಟೆಲಿಕಾಂನ 1498ರೂ. ಪ್ಲ್ಯಾನ್ ಬಗ್ಗೆ ಹಾಗೂ 365 ದಿನಗಳ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 1498ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್‌ನ 1498ರೂ. ಪ್ರೀಪೇಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಒಟ್ಟು 24GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೂ ಒಟ್ಟು 3600 ಉಚಿತ ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗುತ್ತದೆ. ಇನ್ನು ಹೆಚ್ಚುವರಿಯಾಗಿ ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್, ಹೆಲೊ ಟ್ಯೂನ್, ಏರ್‌ಟೆಲ್ ಆಪ್ ಸೇವೆ ಲಭ್ಯ.

ಏರ್‌ಟೆಲ್ 2498ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್‌ನ 2498ರೂ. ಪ್ರೀಪೇಯ್ಡ್ ಪ್ಲ್ಯಾನ್ ಸಹ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗುತ್ತದೆ. ಇನ್ನು ಹೆಚ್ಚುವರಿಯಾಗಿ ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್, ಹೆಲೊ ಟ್ಯೂನ್, ಏರ್‌ಟೆಲ್ ಎಕ್ಸ್‌ಟ್ರಿಮ್ ಆಪ್ ಸೇವೆ ಲಭ್ಯ.

ಏರ್‌ಟೆಲ್ 2698ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್‌ನ 2698ರೂ. ಪ್ರೀಪೇಯ್ಡ್ ಪ್ಲ್ಯಾನ್ ಸಹ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗುತ್ತದೆ. ಇನ್ನು ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿ ಸದಸ್ಯತ್ವ, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್, ಹೆಲೊ ಟ್ಯೂನ್, ಏರ್‌ಟೆಲ್ ಎಕ್ಸ್‌ಟ್ರಿಮ್ ಆಪ್ ಸೇವೆ ಲಭ್ಯ.

ಜಿಯೋ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್‌ಗಳು:
ರಿಲಯನ್ಸ್ ಜಿಯೋ ಕ್ರಮವಾಗಿ 2599ರೂ, 2399ರೂ ಮತ್ತು 2121ರೂ. ಪ್ರೈಸ್ ನ ವಾರ್ಷಿಕ ಯೋಜನೆಗಳನ್ನು ಹೊಂದಿವೆ. 2599ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದೆ. ಅದೇ ರೀತಿ 2399ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದೆ. ಇನ್ನು 2121ರೂ. ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಹೊಂದಿದ್ದು, 336 ದಿನಗಳ ವ್ಯಾಲಿಡಿಟಿ ಪಡೆದಿದೆ. ಅದೇ ರೀತಿ

ವಿ ಟೆಲಿಕಾಂ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್‌ಗಳು:
ವಿ ಟೆಲಿಕಾಂ 2,595ರೂ. 2399ರೂ ಮತ್ತು 1499ರೂ. ವಾರ್ಷಿಕ ಯೋಜನೆ ಹೊಂದಿದೆ. ಅವುಗಳಲ್ಲಿ 2,595ರೂ.ಯೋಜನೆಯು 1.5GB ದೈನಂದಿನ ಡೇಟಾದ ಜೊತೆ 365 ದಿನಗಳ ಮಾನ್ಯತೆ ಪಡೆದಿದೆ. ಹಾಗೆಯೇ 2,399ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾವನ್ನು ಸೌಲಭ್ಯ ನೀಡುತ್ತದೆ. 1499ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಯಲ್ಲಿ ಒಟ್ಟು 24GB ಡೇಟಾ ಪಡೆದಿದೆ.


Click it and Unblock the Notifications








