Home
ಸುದ್ದಿಜಾಲ

ಈ ಒಂದೇ ಪ್ಲ್ಯಾನಿನಲ್ಲಿ ಸಿಗುತ್ತೆ 730GB ಡೇಟಾ ಜೊತೆಗೆ ಉಚಿತ OTT ಚಂದಾದಾರಿಕೆ!

ದೇಶದ ಟೆಲಿಕಾಂ ವಲಯದಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಡಿರುವ ಭಾರ್ತಿ ಏರ್‌ಟೆಲ್‌ (Airtel) ಸಂಸ್ಥೆಯು ಹಲವು ಆಕರ್ಷಕ ಪ್ರಿಪೇಯ್ಡ್ ಯೋಜನೆಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಆ ಪೈಕಿ ದೈನಂದಿನ 3 GB ಡೇಟಾ ಪ್ರಯೋಜನ ಒದಗಿಸುವ ಜಿಯೋ ರೀಚಾರ್ಜ್‌ ಪ್ಲ್ಯಾನ್‌ಗಳು ಹೆಚ್ಚಿನ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಅತ್ಯುತ್ತಮ ಆಗಿವೆ. ಈ ಯೋಜನೆಗಳಲ್ಲಿ ಪ್ರತಿದಿನ ಡೇಟಾ ಸೌಲಭ್ಯದ ಜೊತೆಗೆ ಓಟಿಟಿ ಚಂದಾದಾರಿಕೆಯಂತಹ ಸೌಲಭ್ಯ, ಅಲ್ಲದೇ ಕೆಲವು ಹೆಚ್ಚುವರಿ ಸೌಲಭ್ಯಗಳು ಸಹ ಲಭ್ಯ ಇರಲಿವೆ.

ಹೌದು, ಭಾರ್ತಿ ಏರ್‌ಟೆಲ್‌ (Airtel) ಸಂಸ್ಥೆಯು ಭಿನ್ನ ಡೇಟಾ ಪ್ರಯೋಜನಗಳ ಆಯ್ಕೆ ಪಡೆದಿದ್ದು, ಅವುಗಳಲ್ಲಿ ದೈನಂದಿನ 1 GB ಡೇಟಾ ಸೌಲಭ್ಯ, 2 GB ಡೇಟಾ ಸೌಲಭ್ಯ ಮತ್ತು 3 GB ಡೇಟಾ ಸೌಲಭ್ಯ ಪ್ಲ್ಯಾನ್‌ಗಳ ಸೌಲಭ್ಯ ಇದೆ. ಅಧಿಕ ಡೇಟಾ ಇರುವ ಕೆಲವು ಯೋಜನೆಯು ಹೆಚ್ಚಿನ ಜನಪ್ರಿಯತೆ ಹೊಂದಿವೆ. ಆ ಪೈಕಿ ಏರ್‌ಟೆಲ್‌ನ 3599ರೂ. ಯೋಜನೆ ಆಕರ್ಷಕ ಎನಿಸಿದೆ. ಹಾಗಾದರೇ ಏರ್‌ಟೆಲ್‌ನ ಈ ಅಧಿಕ ಡೇಟಾ ಪ್ರಯೋಜನ ಪಡೆದ ಪ್ಲ್ಯಾನ್‌ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಈ ಒಂದೇ ಪ್ಲ್ಯಾನಿನಲ್ಲಿ ಸಿಗುತ್ತೆ 730GB ಡೇಟಾ ಜೊತೆಗೆ ಉಚಿತ OTT ಚಂದಾದಾರಿಕೆ!

ಏರ್‌ಟೆಲ್‌ 3599ರೂ. ರೀಚಾರ್ಜ್‌ ಪ್ಲ್ಯಾನ್‌ ಸೌಲಭ್ಯಗಳು

ಏರ್‌ಟೆಲ್‌ ಕಂಪನಿಯ 3599ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ, ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 730 GB ಡೇಟಾ ಪ್ರಯೋಜನ ಸಿಗುತ್ತದೆ. ಹಾಗೆಯೇ ಈ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಹಾಗೂ ನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯ. ಇದರೊಂದಿಗೆ ಏರ್‌ಟೆಲ್‌ ಫ್ರೀ ಹೆಲೋ ಟ್ಯೂನ್‌ ಹಾಗೂ ಇತರೆ ಆಪ್ಸ್‌ ಲಭ್ಯ.

ಏರ್‌ಟೆಲ್‌ 1199ರೂ. ರೀಚಾರ್ಜ್‌ ಪ್ಲ್ಯಾನ್‌ ಸೌಲಭ್ಯಗಳು

ಏರ್‌ಟೆಲ್‌ ಕಂಪನಿಯ 1199ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಹಾಗೂ ನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯ. ಇದರೊಂದಿಗೆ ಅಮೆಜಾನ್‌ ಪ್ರೈಮ್‌ ಮೆಂಬರ್‌ಶಿಪ್‌, ಏರ್‌ಟೆಲ್‌ ಫ್ರೀ ಹೆಲೋ ಟ್ಯೂನ್‌ ಹಾಗೂ ಇತರೆ ಆಪ್ಸ್‌ ಲಭ್ಯ.

ಏರ್‌ಟೆಲ್‌ 1999ರೂ. ರೀಚಾರ್ಜ್‌ ಪ್ಲ್ಯಾನ್‌ ಸೌಲಭ್ಯಗಳು

ಏರ್‌ಟೆಲ್‌ ಕಂಪನಿಯ 1999ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟಾರೇ 24 GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಹಾಗೂ ನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯ. ಇದರೊಂದಿಗೆ ಏರ್‌ಟೆಲ್‌ ಫ್ರೀ ಹೆಲೋ ಟ್ಯೂನ್‌ ಹಾಗೂ ಇತರೆ ಆಪ್ಸ್‌ ಲಭ್ಯ.

ಏರ್‌ಟೆಲ್‌ 929ರೂ. ರೀಚಾರ್ಜ್‌ ಪ್ಲ್ಯಾನ್‌ ಸೌಲಭ್ಯಗಳು

ಏರ್‌ಟೆಲ್‌ ಕಂಪನಿಯ 929ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಹಾಗೂ ನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯ. ಇದರೊಂದಿಗೆ ಏರ್‌ಟೆಲ್‌ ಫ್ರೀ ಹೆಲೋ ಟ್ಯೂನ್‌ ಹಾಗೂ ಇತರೆ ಆಪ್ಸ್‌ ಲಭ್ಯ.

Best Mobiles in India

English summary
This Airtel Recharge Plan is ideal for heavy mobile data users. Know more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+