ಏರ್‌ಟೆಲ್ ಸಂಸ್ಥೆಯ ಈ ಪ್ಲ್ಯಾನಿನಲ್ಲಿ 2GB ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ!
ಭಾರತೀಯ ಟೆಲಿಕಾಂ ವಲಯದಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ ಭಿನ್ನ ಮಾದರಿಯ ಪ್ರಿಪೇಯ್ಡ್ ಯೋಜನೆ ಆಯ್ಕೆಯನ್ನು ಒದಗಿಸಿದೆ. ಆ ಪೈಕಿ ಏರ್‌ಟೆಲ್ ಬಹುತೇಕ ರೀಚಾರ್ಜ್ ಯೋಜನೆಗಳು ದೈನಂದಿನ ಡೇಟಾ ಪ್ರಯೋಜನದ ಸೌಲಭ್ಯ ಪಡೆದಿದ್ದು, ಇನ್ನು ಕೆಲವು ಪ್ಲ್ಯಾನ್‌ಗಳು ಓಟಿಟಿ ಪ್ರಯೋಜನ ಕೂಡಾ ಪಡೆದಿವೆ. ಅವುಗಳಲ್ಲಿ ಏರ್‌ಟೆಲ್‌ನ 979ರೂ. ಯೋಜನೆಯು ಬೊಂಬಾಟ್ ಡೇಟಾ ಪ್ರಯೋಜನ ಸಹ ಪಡೆದುಕೊಂಡಿದೆ. ಇದು ಗ್ರಾಹಕರು ಅಚ್ಚರಿ ಆಗುವಂತೆ ಮಾಡಿದೆ.
ಹೌದು, ಏರ್‌ಟೆಲ್ ಸಂಸ್ಥೆಯು ಭಿನ್ನ ದರದ ಹಾಗೂ ಭಿನ್ನ ಡೇಟಾ ಸೌಲಭ್ಯದ ಯೋಜನೆಗಳ ಆಯ್ಕೆ ಪಡೆದಿದೆ. ಅವುಗಳಲ್ಲಿ ದೈನಂದಿನ 1GB ಡೇಟಾ, 2GB ಡೇಟಾ ಅಲ್ಲದೇ 3GB ಡೇಟಾ ಪ್ರಯೋಜನದ ಯೋಜನೆಗಳ ಆಯ್ಕೆ ಇದೆ. ಇದಲ್ಲದೇ ದೈನಂದಿನ 2GB ಡೇಟಾ ಪ್ರಯೋಜನದ ಕೆಲವು ಪ್ಲ್ಯಾನ್‌ಗಳು ಹೆಚ್ಚು ಆಕರ್ಷಕ ಎನಿಸಿವೆ. ಅವುಗಳಲ್ಲಿ 979ರೂ. ಬೆಲೆಯ ರೀಚಾರ್ಜ್ ಯೋಜನೆಯು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಹಾಗಾದರೇ ಈ ಯೋಜನೆಯ ಪ್ರಯೋಜನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ 979ರೂ. ರೀಚಾರ್ಜ್ ಯೋಜನೆ ಮಾಹಿತಿ
ಭಾರ್ತಿ ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಯೋಜನೆ ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಇದು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನಗಳು ಸಿಗಲಿದೆ. ಇದರೊಂದಿಗೆ ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದ್ದು, ನಿತ್ಯ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಏರ್‌ಟೆಲ್ ಆಪ್ ಸೌಲಭ್ಯ ಕೂಡಾ ದೊರೆಯುತ್ತವೆ.
ಏರ್‌ಟೆಲ್ 649ರೂ. ರೀಚಾರ್ಜ್ ಯೋಜನೆ ಮಾಹಿತಿ
ಭಾರ್ತಿ ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಯೋಜನೆ ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಇದು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನಗಳು ದೊರೆಯುತ್ತದೆ. ಇದರ ಜೊತೆಗೆ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದ್ದು, ನಿತ್ಯ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಏರ್‌ಟೆಲ್ ಆಪ್ ಸೌಲಭ್ಯ ಕೂಡಾ ದೊರೆಯುತ್ತವೆ.
ಏರ್‌ಟೆಲ್ 379ರೂ. ರೀಚಾರ್ಜ್ ಯೋಜನೆ ಮಾಹಿತಿ
ಭಾರ್ತಿ ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಪ್ಲ್ಯಾನ್ ಅಲ್ಪಾವಧಿಯ ಯೋಜನೆ ಆಗಿದ್ದು, ಇದು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನಗಳು ಲಭ್ಯ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಏರ್‌ಟೆಲ್ ಆಪ್ ಸೌಲಭ್ಯ ಕೂಡಾ ದೊರೆಯುತ್ತವೆ.
ಏರ್‌ಟೆಲ್ 1029ರೂ. ರೀಚಾರ್ಜ್ ಯೋಜನೆ ಮಾಹಿತಿ
ಭಾರ್ತಿ ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಯೋಜನೆ ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಇದು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನಗಳು ಲಭ್ಯ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಡಿಸ್ನಿ+ ಹಾಟ್‌ಸ್ಟಾರ್ ಸೌಲಭ್ಯ ಕೂಡಾ ದೊರೆಯುತ್ತವೆ.


Click it and Unblock the Notifications








