Home
ಸುದ್ದಿಜಾಲ

BSNL ಗ್ರಾಹಕರೇ, ಈ ಪ್ಲ್ಯಾನಿನಲ್ಲಿ ಸಿಗುತ್ತೆ ಒಂದು ವರ್ಷ ವ್ಯಾಲಿಡಿಟಿ; ಭಾರೀ ಉಳಿತಾಯ!

ದೇಶದಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ (BSNL) ಖಾಸಗಿ ಟೆಲಿಕಾಂಗಳಾದ ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಬಿಎಸ್‌ಎನ್‌ಎಲ್‌ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ದೀರ್ಘ ವ್ಯಾಲಿಡಿಟಿಯ, ಅಧಿಕ ಡೇಟಾ ಪ್ರಯೋಜನದ ರೀಚಾರ್ಜ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ಕೂಡಾ ಒದಗಿಸಿದೆ. ಅದಾಗ್ಯೂ, ಬಿಎಸ್‌ಎನ್‌ಎಲ್‌ ಸಂಸ್ಥೆಯ 1499ರೂ. ಯೋಜನೆ ಹೆಚ್ಚಿನ ಆಕರ್ಷಣೆ ಪಡೆದಿದೆ.

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿಯ ಕೆಲವು ದೀರ್ಘಾವಧಿ ವ್ಯಾಲಿಡಿಟಿಯ ಪ್ಲ್ಯಾನ್‌ಗಳಲ್ಲಿ, 1499ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಸಹ ಒಂದು. ಬಳಕೆದಾರರು ತಮ್ಮ ಬಿಎಸ್‌ಎನ್‌ಎಲ್‌ ಸಿಮ್‌ ಅನ್ನು ಚಾಲ್ತಿ ಇಡಲು ಈ ಪ್ಲ್ಯಾನ್‌ ಸೂಕ್ತ ಎನಿಸಿದೆ. ಬಿಎಸ್‌ಎನ್‌ಎಲ್‌ನ ಈ ಯೋಜನೆಯು ಡೇಟಾ, ಬಿಗ್ ವ್ಯಾಲಿಡಿಟಿ, ಎಸ್‌ಎಮ್‌ಎಸ್‌, ವಾಯಿಸ್‌ ಕರೆಯ ಸೌಲಭ್ಯಗಳನ್ನು ಕೂಡಾ ಪಡೆದುಕೊಂಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ಓದಿರಿ.

BSNL ಗ್ರಾಹಕರೇ, ಈ ಪ್ಲ್ಯಾನಿನಲ್ಲಿ ಸಿಗುತ್ತೆ ಒಂದು ವರ್ಷ ವ್ಯಾಲಿಡಿಟಿ!

ಬಿಎಸ್‌ಎನ್‌ಎಲ್‌ 1,499ರೂ. ರೀಚಾರ್ಜ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ ಟೆಲಿಕಾಂನ 1,499ರೂ. ರೀಚಾರ್ಜ್‌ ಯೋಜನೆಯು ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿಯ ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆ ಗ್ರಾಹಕರು ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಪಡೆದಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಒಳಗೊಂಡಿದ್ದು, ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯ ಆಗಲಿದೆ.

ಹಾಗೆಯೇ ಈ ಯೋಜನೆಯಲ್ಲಿ ಕೆಲವು ಗೇಮಿಂಗ್ ಸೌಲಭ್ಯಗಳೂ ಸಿಗಲಿವೆ. Hardy Games, Challenger Arena Games, Gameson, Gameium, Lystn Podcast, Zing Music ಲಭ್ಯ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ಟ್ಯೂನ್‌ಗಳು ಬಳಕೆದಾರರಿಗೆ ಸಂಪೂರ್ಣ 365 ದಿನಗಳವರೆಗೆ ಲಭ್ಯವಿವೆ.

ಬಿಎಸ್‌ಎನ್‌ಎಲ್‌ ಟೆಲಿಕಾಂನ 666ರೂ. ರೀಚಾರ್ಜ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ ಟೆಲಿಕಾಂ 666ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 105 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಪ್ರೀಪೇಯ್ಡ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 0.5GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಅಧಿಕ ಡೇಟಾ ಅಗತ್ಯ ಇರದ ಗ್ರಾಹಕರಿಗೆ ಇದು ಅತ್ಯುತ್ತಮ ಪ್ಲ್ಯಾನ್‌ ಎನಿಸಲಿದೆ.

ಬಿಎಸ್‌ಎನ್‌ಎಲ್‌ ಟೆಲಿಕಾಂನ 797ರೂ. ರೀಚಾರ್ಜ್ ಪ್ಲ್ಯಾನ್‌
ಬಿಎಸ್‌ಎನ್‌ಎಲ್‌ ಟೆಲಿಕಾಂ 797ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 300 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ರೀಪೇಯ್ಡ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳಿಗೆ 3 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಬಿಗ್‌ ವ್ಯಾಲಿಡಿಟಿ ಅಗತ್ಯ ಇರುವ ಗ್ರಾಹಕರಿಗೆ ಈ ಯೋಜನೆಯು ಸೂಕ್ತ.

ಬಿಎಸ್‌ಎನ್‌ಎಲ್‌ ಟೆಲಿಕಾಂನ 1999ರೂ. ರೀಚಾರ್ಜ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ (BSNL) 1999ರೂ. ಪ್ರೀಪೇಯ್ಡ್‌ ರೀಚಾರ್ಜ್ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಇದರೊಂದಿಗೆ ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಕೂಡಾ ಲಭ್ಯ ಆಗಲಿದೆ.

ಬಿಎಸ್‌ಎನ್‌ಎಲ್‌ ಟೆಲಿಕಾಂನ 2999ರೂ. ರೀಚಾರ್ಜ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ ಟೆಲಿಕಾಂ (BSNL) 2999ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ರೀಪೇಯ್ಡ್‌ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಇದರೊಂದಿಗೆ ನಿತ್ಯ 3GB ಡೇಟಾ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಕೂಡಾ ಲಭ್ಯ ಆಗಲಿದೆ.

Best Mobiles in India

English summary
This BSNL Prepaid Plan is Good for Longer Validity: Check Benefits. check more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+