Home
ಸುದ್ದಿಜಾಲ

ಏರ್‌ಟೆಲ್‌ನ ಈ ಪ್ಲ್ಯಾನಿನಲ್ಲಿ 210GB ಡೇಟಾ ಪಕ್ಕಾ!..ಬೆಲೆ ಎಷ್ಟು?..ರೀಚಾರ್ಜ್‌ಗೆ ಉತ್ತಮವೇ?

ದೇಶದ ಟೆಲಿಕಾಂ ವಲಯದಲ್ಲಿ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್‌ ಟೆಲಿಕಾಂ, ಚಂದಾದಾರರನ್ನು ಸೆಳೆಯಲು ಅಧಿಕ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅದೇ ದಾರಿಯಲ್ಲಿ ಮುಂದೆ ಸಾಗಿರುವ ಏರ್‌ಟೆಲ್‌ ಟೆಲಿಕಾಂ, ಜಿಯೋ ಟೆಲಿಕಾಂಗೆ ಫೈಟ್ ನೀಡುವ ಯೋಜನೆಗಳ ಆಯ್ಕೆ ಹೊಂದಿದೆ. ಏರ್‌ಟೆಲ್‌ ಕಂಪನಿಯು ಅಲ್ಪಾವಧಿಯ ಯೋಜನೆಗಳ ಜೊತೆಗೆ ಕೆಲವು ಆಕರ್ಷಕ ದೀರ್ಘಾವಧಿಯ ಪ್ರಿಪೇಯ್ಡ್‌ ಪ್ಲ್ಯಾನ್‌ಗಳನ್ನು ಪಡೆದಿದೆ. ಬಹುತೇಕ ಪ್ಲ್ಯಾನ್‌ಗಳು ಅಧಿಕ ದೈನಂದಿನ ಡೇಟಾ ಪಡೆದಿವೆ. ಆ ಪೈಕಿ ಏರ್‌ಟೆಲ್‌ ಟೆಲಿಕಾಂನ ಈ ಒಂದು ಪ್ಲ್ಯಾನ್‌ಗಳು ಭಾರೀ ಗಮನ ಸೆಳೆದಿದೆ.

ಓಟಿಟಿ

ಹೌದು, ಏರ್‌ಟೆಲ್‌ ಟೆಲಿಕಾಂ ಭಿನ್ನ ಪ್ರಿಪೇಯ್ಡ್‌ ಶ್ರೇಣಿಯ ಪ್ಲ್ಯಾನ್‌ಗಳ ಆಯ್ಕೆ ಪಡೆದಿದೆ. ಆ ಪೈಕಿ ಏರ್‌ಟೆಲ್‌ ಟೆಲಿಕಾಂ 999ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಭರ್ಜರಿ ಡೇಟಾ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆದಿದೆ. ಇದರಲ್ಲಿ ಒಟ್ಟು 210GB ಡೇಟಾ ದೊರೆಯುತ್ತದೆ ಜೊತೆಗೆ ಓಟಿಟಿ ಪ್ರಯೋಜನ ಸಹ ಒಳಗೊಂಡಿದೆ. ಇದರೊಂದಿಗೆ ದೈನಂದಿನ ಡೇಟಾ, ಎಸ್‌ಎಮ್‌ಎಸ್‌ ಪ್ರಯೋಜನ ಹಾಗೂ ಅನಿಯಮಿತ ವಾಯಿಸ್ ಸೌಲಭ್ಯಗಳು ಈ ಯೋಜನೆಯಲ್ಲಿ ದೊರೆಯುತ್ತವೆ. ಹಾಗಾದರೇ ಏರ್‌ಟೆಲ್‌ ಟೆಲಿಕಾಂ 999ರೂ. ಪ್ರೀಪೇಯ್ಡ್‌ ಯೋಜನೆಯ ಇತರೆ ಪ್ರಯೋಜನಗಳೆನು? ಈ ಯೋಜನೆ ರೀಚಾರ್ಜ್ ಮಾಡಿಸಬಹುದೇ? ಇತರೆ ಅತ್ಯುತ್ತಮ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಭಾರ್ತಿ ಏರ್‌ಟೆಲ್‌ 999ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಭಾರ್ತಿ ಏರ್‌ಟೆಲ್‌ 999ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ನ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2.5 GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಆಪ್‌ ಅಮೆಜಾನ್‌ ಪ್ರೈಮ್‌ನ ಒಂದು ತಿಂಗಳ ಚಂದಾದಾರಿಕೆ ಸಿಗಲಿದ್ದು, ಏರ್‌ಟೆಲ್‌ನ Wynk Music ಸೇವೆ ಸಹ ದೊರೆಯುತ್ತದೆ. ಇದರೊಂದಿಗೆ ಹೆಲೊಟೂನ್ಸ್ ಮತ್ತು 100 ರೂ. ಫಾಸ್ಟ್‌ಟ್ಯಾಗ್ ಕ್ಯಾಶ್-ಬ್ಯಾಕ್ ಸಹ ಸಿಗಲಿದೆ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 210GB ಡೇಟಾ ದೊರೆಯುತ್ತದೆ.

ಏರ್‌ಟೆಲ್ 299 ರೂ. ಪ್ರಿಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್ 299 ರೂ. ಪ್ರಿಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್ ಟೆಲಿಕಾಂ 299ರೂ.ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್ ಪ್ರಯೋಜನ ಸಿಗಲಿದೆ. ಜೊತೆಗೆ ಈ ಯೋಜನೆಯಲ್ಲಿಯೂ ಫಾಸ್ಟ್‌ಟ್ಯಾಗ್ ನಲ್ಲಿ 100ರೂ. ಕ್ಯಾಶ್‌ಬ್ಯಾಕ್ ಸಹ ಲಭ್ಯವಾಗಲಿದೆ.

ಏರ್‌ಟೆಲ್‌ 296ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 296ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 296ರೂ. ಪ್ರಿಪೇಯ್ಡ್ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಯೋಜನೆಯು 25GB ಡೇಟಾವನ್ನು ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ. ಇದರೊಂದಿಗೆ ಹೆಚ್ಚುವರಿಯಾಗಿ, ಚಂದಾದಾರರು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ 30 ದಿನದ ಪ್ರಯೋಗವನ್ನು ಪಡೆಯುತ್ತಾರೆ,

ಏರ್‌ಟೆಲ್‌ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಪ್ರಯೋಜನಗಳು

ಏರ್‌ಟೆಲ್‌ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಪ್ರಯೋಜನಗಳು

ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್‌ ಪ್ಯಾನ್‌ಗಳಲ್ಲಿ ಒಂದಾಗಿರುವ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ, ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಏರ್‌ಟೆಲ್‌ 319ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 319ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 319ರೂ. ಪ್ರಿಪೇಯ್ಡ್ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ದೊರೆಯಲಿದ್ದು, ತಿಂಗಳಿಗೆ ಒಟ್ಟು 60GB ಡೇಟಾ ಲಭ್ಯವಾಗಲಿದೆ. ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ. ಇದರೊಂದಿಗೆ ಹೆಚ್ಚುವರಿಯಾಗಿ, ಚಂದಾದಾರರು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ 30 ದಿನದ ಪ್ರಯೋಗವನ್ನು ಪಡೆಯುತ್ತಾರೆ.

ಏರ್‌ಟೆಲ್ 265 ರೂ.ಪ್ರಿಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್ 265 ರೂ.ಪ್ರಿಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್ 265ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಕೂಡ 28 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 1 GB ಡೇಟಾ ಲಭ್ಯವಿದೆ. ಇದಲ್ಲದೆ ಎಲ್ಲಾ ನೆಟ್‌ವರ್ಕ್‌ ಬೆಂಬಲಿಸುವ ಅನಿಯಮಿತ ಕರೆಗಳು ಹಾಗೂ ದಿನಕ್ಕೆ 100 ಎಸ್‌ಎಂಎಸ್‌ ಸೇವೆಗಳು ಲಭ್ಯವಾಗಲಿದೆ. ಈ ಯೋಜನೆಯೊಂದಿಗೆ ಅಮೆಜಾನ್‌ ಪ್ರೈಮ್‌ ವೀಡಿಯೊಗೆ ಮೊಬೈಲ್ ಚಂದಾದಾರಿಕೆಯು ಒಂದು ತಿಂಗಳವರೆಗೆ ಲಭ್ಯವಿರುತ್ತದೆ.

ಏರ್‌ಟೆಲ್‌ 1199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 1199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಹೊಸದಾಗಿ 1199 ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪರಿಚಯಿಸಿದೆ. ಈ ಯೋಜನೆಯು ಒಟ್ಟು 250 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌ ಬೇಸಿಕ್ ಅನ್ಲಿಮಿಟೆಡ್ ಪ್ರವೇಶ, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳು ಸೇರಿದಂತೆ ಇತರೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ.

Best Mobiles in India

English summary
This Budget Price Airtel Plan Offers 210 GB Data with 84 Days Validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+