Subscribe to Gizbot

ಇಂಟರ್ನೆಟ್‌ ಆಧಾರವೇ ಅಂಡರ್‌ವಾಟರ್‌ ಕೇಬಲ್‌ಗಳು

Written By:

ಟೆಕ್‌ ಎಷ್ಟೇ ಬೆಳವಣಿಗೆ ಆಗಿರಬಹುದು, ಇಂದು ಸಂವಹನ ಎಂಬುದು ಹಳ್ಳಿಯಿಂದ ದಿಲ್ಲಿಯವರೆಗೆ ಕೇವಲ ಅಂಗೈಯಲ್ಲಿನ ಗ್ಯಾಜೆಟ್ಸ್‌ಗಳಿಂದ ನೆಡೆದುಬಿಡುತ್ತದೆ. ಇದಕ್ಕೆ ಅಡಿಪಾಯ ಎಂಬುದು ಇಂಟರ್ನೆಟ್‌. ಇಂದು ದಿನನಿತ್ಯ ಜೀವನದಲ್ಲಿ ಇಂಟರ್ನೆಟ್‌ ಇಲ್ಲದೇ ಯಾವ ವ್ಯವಹಾರಗಳು ನೆಡೆಯದಂತಹ ಕಾಲಮಾನಕ್ಕೆ ನಾವು ಬಂದುನಿಂತಿದ್ದೇವೆ.

ಇಂದು ಅತ್ಯಧಿಕವಾದ ಇಂಟರ್ನೆಟ್‌ ಕಂಮ್ಯುನಿಕೇಷನ್ ನೆಡೆಯುತ್ತಿರುವುದು ಅಧಿಕ ವೇಗದ ಅಂಡರ್‌ವಾಟರ್‌ ಕೇಬಲ್ಸ್‌ನ ಮೂಲಕ ಎಂಬುದನ್ನು ಎಲ್ಲರೂ ತಿಳಿಯಬೇಕಾಗಿದೆ. ಆದಾಗ್ಯೂ ಕೆಲವರು ಇಂದು ಉಪಗ್ರಹ ಸಂವಹನವನ್ನು ನೇರವಾಗಿ ಪಡೆಯುತ್ತಿದ್ದಾರೆ. ಆದರೆ ಇಂದಿನ ಸಂಪರ್ಕ ಸಹಿತ ಪ್ರಪಂಚಕ್ಕೆ ಬೆನ್ನಲುಬಾಗಿರುವುದು ಈ ಅಂಡರ್‌ವಾಟರ್‌ ಕೇಬಲ್‌ಗಳು ಎಂಬುದನ್ನು ಮರೆಯೋ ಹಾಗಿಲ್ಲ. ಇದರ ಪ್ರಾಮುಖ್ಯತೆಯನ್ನು ನೋಡುವುದಾದರೆ ಒಮ್ಮೆ ಕೇಬಲ್‌ಗಳನ್ನು ಸ್ಥಗಿತಗೊಳಿಸಿದಾಗ ಇಂಟರ್ನೆಟ್‌ ಸಂಪರ್ಕವು ಸ್ಥಗಿತಗೊಂಡು, ಆನ್‌ಲೈನ್‌ ಕೆಲಸಗಳು ಬಾಕಿ ಉಳಿದುಬಿಡುತ್ತವೆ.

ಇಂಟರ್ನೆಟ್‌ ಆಧಾರವೇ ಅಂಡರ್‌ವಾಟರ್‌ ಕೇಬಲ್‌ಗಳು

ಓದಿರಿ: ಫೇಸ್‌ಬುಕ್‌ನಲ್ಲಿ ಎಲ್ಲರ ಪೋಸ್ಟ್‌ಗಳು ಬಹಿರಂಗ

ಈ ಅಂಡರ್‌ವಾಟರ್ ಕೇಬಲ್‌ಗಳು ಸುಮಾರು 885,000 ಕಿಲೋಮೀಟರ್‌ನಷ್ಟು ಉದ್ದವಿವೆ. ಅಂದರೆ ವಿಶ್ವವನ್ನು 22 ಭಾರಿ ಪ್ರದಕ್ಷಿಣೆ ಹಾಕಬಹುದಾಗಿದೆ. ಇವುಗಳು ಪ್ರಪಂಚದ ಶೇಕಡ 99 ರಷ್ಟು ಸಾಮಾಜಿಕ ಮಾಧ್ಯಮ, ಸುದ್ದಿ, ಹಾಗೂ ಮಿಲಿಟಿರಿಗೆ ಸಂಬಂಧಿಸಿದ ಮಾಹಿತಿಯ ಡಾಟಾವನ್ನು ಚಾಲನೆಮಾಡುತ್ತಿವೆ.

ಅಂಡರ್‌ವಾಟರ್‌ ಕೇಬಲ್‌ನ ಆನಿಮೇಷನ್ ಲೈನ್‌ಗಳು ಹೇಗೆ ಹರಡಿದೆ ಎಂಬ ವಿಡಿಯೋವನ್ನು ಇಲ್ಲಿನೋಡಿ.

English summary
Most of the internet communication is still done with the help of high-speed underwater cables. While some of us are lucky to use satellite communication directly, the fact remains that these cables are the backbone of today’s connected world.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot