Subscribe to Gizbot

ಫೇಸ್‌ಬುಕ್‌ನಲ್ಲಿ ಎಲ್ಲರ ಪೋಸ್ಟ್‌ಗಳು ಬಹಿರಂಗ

Written By:

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಇತ್ತೀಚೆಗೆ ಡಿಸ್‌ಲೈಕ್‌ ಬಟನ್‌ ಹೊರತರುವ ವಿಷಯದಲ್ಲಿ ಸುದ್ಧಿಯಾಗಿತ್ತು. ತದನಂತರ ಅದರ ಬದಲಾಗಿ ಇತರೆ ಹಲವು ಭಾವನಾತ್ಮಕ ಪ್ರತಿಕ್ರಿಯೆ ಸೂಚಿಸುವ ಕೆಲವು ಬಟನ್‌ಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಪ್ರಸ್ತುತದಲ್ಲಿ ಈಗ ಹೊಸದೊಂದು ವಿಷಯದಲ್ಲಿ ಸುದ್ಧಿಯಾಗಿದೆ.
ಓದಿರಿ: ಭಾರತದ ಟಾಪ್‌ ಟೆಕ್‌ ಬಿಲಿಯನಿಯರ್‌ಗಳು

ಫೇಸ್‌ಬುಕ್‌ ಈಗ ತನ್ನ ಸರ್ಚ್‌ ಇಂಜಿನ್‌ನಲ್ಲಿ ಫೇಸ್‌ಬುಕ್‌ ಬಳಕೆದಾರರ ಎಲ್ಲಾ ವಯಕ್ತಿಕ ಪೋಸ್ಟ್‌ಗಳನ್ನು ಯಾರಾದರೂ ವೀಕ್ಷಿಸಬಹುದಾದ ಹೊಸ ಅವಕಾಶವನ್ನು ಕಲ್ಪಿಸಿದೆ. ಈ ಮೊದಲು ಫೇಸ್‌ಬುಕ್‌ ಬಳಕೆದಾರರ, ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ಆದವರು ಮಾತ್ರ ಆ ಫ್ರೆಂಡ್‌ಗಳ ಪೋಸ್ಟ್‌ಗಳನ್ನು ವೀಕ್ಷಿಸಬಹುದಿತ್ತು, ಈಗ ಯಾರಾದರೂ ಎಲ್ಲರ ವಯಕ್ತಿಕ ಪೋಸ್ಟ್‌ಗಳನ್ನು ವೀಕ್ಷಿಸುವ ಅವಕಾಶ ಮಾಡಿರುವುದಾಗಿ ಸುದ್ಧಿಯಾಗಿದೆ. ಇದರ ಪ್ರಮುಖ ಅಂಶಗಳು ನಿಮಗಾಗಿ ಈ ಲೇಖನದಲ್ಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌

ಫೇಸ್‌ಬುಕ್‌

ಫೇಸ್‌ಬುಕ್‌ ಜಾಲತಾಣ, ತನ್ನ ಬಳಕೆದಾರರಿಗೆ ಎಲ್ಲರ ಪೋಸ್ಟ್‌ಗಳನ್ನು ಸರ್ಚ್ ಮಾಡಿ ನೋಡಬಹುದಾದಾ ಅವಕಾಶ ಕಲ್ಪಿಸಿದೆ. ಎಲ್ಲರ ಹಳೆಯ ಪೋಸ್ಟ್‌ಗಳನ್ನು ಸಹ ಹುಡುಕಿ ಯಾರಾದರೂ ವೀಕ್ಷಿಸುವಂತ ಅವಕಾಶವನ್ನು ಫೇಸ್‌ಬುಕ್‌ ತನ್ನ ಸರ್ಚ್‌ ಇಂಜಿನ್‌ನಲ್ಲಿ ನೀಡಿದೆ.

ವಯಕ್ತಿಕ ಅಪ್‌ಡೇಟ್‌

ವಯಕ್ತಿಕ ಅಪ್‌ಡೇಟ್‌

ಫೇಸ್‌ಬುಕ್‌ನ ಈ ನಡೆಯಿಂದ ಹಿಂದಿನ ವರ್ಷಗಳ ಎಲ್ಲರ ವಯಕ್ತಿಕ ಅಪ್‌ಡೇಟ್‌ಗಳನ್ನು ಸಹ ಸರ್ಚ್‌ಮಾಡಬಹುದಾಗಿದೆ.

ಫೇಸ್‌ಬುಕ್‌ ಸ್ನೇಹಿತರು

ಫೇಸ್‌ಬುಕ್‌ ಸ್ನೇಹಿತರು

ಈ ಹಿಂದೆ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಅವರವರ ಫೇಸ್‌ಬುಕ್‌ ಸ್ನೇಹಿತರು ಮಾತ್ರ ನೋಡಬಹುದಾಗಿತ್ತು ಮತ್ತು ಸರ್ಚ್ ಮಾಡಬಹುದಾಗಿತ್ತು.

2 ಟ್ರಿಲಿಯನ್‌ ಸಾರ್ವಜನಿಕ ಪೋಸ್ಟ್‌ಗಳು ಸೇರಿವೆ

2 ಟ್ರಿಲಿಯನ್‌ ಸಾರ್ವಜನಿಕ ಪೋಸ್ಟ್‌ಗಳು ಸೇರಿವೆ

ಪ್ರಸ್ತುತದಲ್ಲಿ ಈಗಾಗಲೇ ಪ್ರಪಂಚದ 2 ಟ್ರಿಲಿಯನ್‌ (ಲಕ್ಷಕೋಟಿ) ಸಾರ್ವಜನಿಕ ಪೋಸ್ಟ್‌ಗಳು ಸೇರಿವೆ. ಇವುಗಳನ್ನು ಫೇಸ್‌ಬುಕ್‌ನ ಯಾವುದೇ ಬಳಕೆದಾರರು ಲೈಕ್‌ ಮಾಡಬಹುದಾಗಿದೆ.

ಫೇಸ್‌ಬುಕ್‌ ಚಟುವಟಿಕೆ ಹೇಗೆ

ಫೇಸ್‌ಬುಕ್‌ ಚಟುವಟಿಕೆ ಹೇಗೆ

ಈ ಹೊಸ ಟೂಲ್‌ನಿಂದ ಫೇಸ್‌ಬುಕ್‌ ಚಟುವಟಿಕೆ ಹೇಗೆ ನಡೆಯುತ್ತಿದೆ, ಬಳಕೆದಾರರು ನ್ಯೂಸ್‌ಗಳಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ತಿಳಿಯುತ್ತದೆ ಎಂಬ ಆಕಾಂಕ್ಷೆಯನ್ನು ಫೇಸ್‌ಬುಕ್‌ ಹೊಂದಿದೆ. ಇದರಿಂದ ನಿಖರವಾಗಿ ಜನರು ಏನು ಹೇಳುತ್ತಿದ್ದಾರೆ ಎಂಬುದನ್ನು ಟ್ರ್ಯಾಕ್‌ ಮಾಡಿ ಮಾಹಿತಿ ಕಲೆಹಾಕಲು ಸಹಾಯವಾಗುತ್ತದೆ ಎನ್ನಲಾಗಿದೆ.

 ಹಳೆಯ ಪೋಸ್ಟ್‌ಗಳನ್ನು ಹುಡುಕಲು ಸಹಾಯ

ಹಳೆಯ ಪೋಸ್ಟ್‌ಗಳನ್ನು ಹುಡುಕಲು ಸಹಾಯ

ಹಳೆಯ ಪೋಸ್ಟ್‌ಗಳನ್ನು ಹುಡುಕಲು ಸಹಾಯವಾಗುತ್ತದೆ, ಹಾಗೂ ಬಳಕೆದಾರರು ನಿಜವಾಗಿಯೂ ಸಾರ್ವಜನಿಕ ಉದ್ದೇಶದಿಂದ ಪೋಸ್ಟ್‌ ಮಾಡಿದ್ದಾರೆಯೇ ಎಂಬುದನ್ನು ತಿಳಿಯಬಹುದಾಗಿದೆ.

ಹೈಡ್‌ ಮಾಡಲು ಆಯ್ಕೆ

ಹೈಡ್‌ ಮಾಡಲು ಆಯ್ಕೆ

ಫೇಸ್‌ಬುಕ್‌ ಪೋಸ್ಟ್‌ಗಳನ್ನು ಹೈಡ್‌ ಮಾಡಲು ಆಯ್ಕೆಗಳನ್ನು ಹೊಂದಿದ್ದು, ಸೆಟ್ಟಿಂಗ್ಸ್‌ ಬಾರ್‌ನಲ್ಲಿ 'ಸೀ ಮೋರ್‌ ಸೆಟ್ಟಿಂಗ್ಸ್‌' ಕ್ಲಿಕ್‌ ಮಾಡುವ ಮುಖಾಂತರ ನಿಮ್ಮ ಪೋಸ್ಟ್‌ಗಳನ್ನು ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಬಹುದಾಗಿದೆ, ಇದು ವಯಕ್ತಿಕ ಆಯ್ಕೆಗಳ ಬದಲಾವಣೆಯಲ್ಲಿದೆ.

ರಿವೀವ್‌ ಟೂಲ್‌

ರಿವೀವ್‌ ಟೂಲ್‌

ಸೆಟ್ಟಿಂಗ್ಸ್‌ನಲ್ಲಿ 'ಲಿಮಿಟ್‌ ಪಾಸ್ಟ್ ಪೋಸ್ಟ್‌' ಆಯ್ಕೆ ಹೊಂದಿದೆ. ಅಲ್ಲದೇ ಈ ಸೈಟ್‌ ರಿವೀವ್‌ ಟೂಲ್‌ ಹೊಂದಿದೆ. ಈ ಆಯ್ಕೆಯು ' ಹೂ ಕೆನ್‌ ಸೀ ಮೈ ಸ್ಟಫ್‌' ಮೆನುನಲ್ಲಿದೆ. ಇದರ ಮೂಲಕ ಪೋಸ್ಟ್‌ಗಳನ್ನು ವಯಕ್ತಿಕಗೊಳಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook has fed everyone's public posts into its search engine, meaning that most updates will now be readily available for everyone — no matter how old they are.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot