Home
ಸುದ್ದಿಜಾಲ

ಒದ್ದೆ ಬಟ್ಟೆಗಳನ್ನು ತಕ್ಷಣವೇ ಒಣಗಿಸಲಿದೆ ಈ ಡಿವೈಸ್‌; ಬೆಲೆ ಕೇಳಿದ್ರೆ ಇಷ್ಟೇನಾ ಅಂತೀರಾ!

ಮಳೆಗಾಲದಲ್ಲಿ ಬಟ್ಟೆ ಒಣಗಿಸಿವುದು ಒಂದು ದೊಡ್ಡ ತಾಪತ್ರಯದ ಕೆಲಸ. ಏನೇ ಮಾಡಿದರೂ ಸಹ ಬಟ್ಟೆ ಒಣಗುವುದಿಲ್ಲ. ಅಷ್ಟು ಮಾತ್ರವಲ್ಲದೆ ಬಟ್ಟೆಗಳಲ್ಲಿ ಕೆಟ್ಟ ವಾಸನೆ ಸಹ ಬರಲು ಆರಂಭ ಆಗುತ್ತದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಆಫೀಸ್‌ಗೆ ಹೋಗುವವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ, ಈ ರೀತಿ ಸಮಸ್ಯೆಗೆ ಇಂದೇ ಕೊನೆ ಹೇಳಿ.

ಹೌದು, ಸ್ಮಾರ್ಟ್ ಗ್ಯಾಜೆಟ್‌ಗಳು ಇಂದು ಮಾನವರ ಹಲವಾರು ಅಗತ್ಯತೆಗಳಿಗೆ ಸಹಕಾರಿ. ಆದರೆ, ಕೆಲವು ಗ್ಯಾಜೆಟ್‌ಗಳ ಬಗ್ಗೆ ಜನರಿಗೆ ತಿಳಿದೇ ಇರುವುದಿಲ್ಲ. ಈ ಕಾರಣಕ್ಕೆ ನಾವಿಂದು ಈ ಮಳೆಗಾಲಕ್ಕೆ ಉತ್ತಮವಾದ ಬಟ್ಟೆ ಒಣಗಿಸುವ ಸ್ಮಾರ್ಟ್‌ಡಿವೈಸ್‌ ಬಗ್ಗೆ ತಿಳಿಸಲಿದ್ದೇವೆ. ಇದು ಅಗ್ಗದ ಬೆಲೆ ಹೊಂದಿದ್ದು, ಬಟ್ಟೆ ಮಾತ್ರವಲ್ಲದೆ ಶೂಗಳನ್ನೂ ಸಹ ಇದು ಒಣಗಿಸಲಿದೆ. ಹಾಗಿದ್ರೆ ಯಾವುದು ಈ ಡಿವೈಸ್‌, ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಒದ್ದೆ ಬಟ್ಟೆಗಳನ್ನು ತಕ್ಷಣವೇ ಒಣಗಿಸಲಿದೆ ಈ ಡಿವೈಸ್‌...

ಎಲೆಕ್ಟ್ರಿಕ್ ಕ್ಲೋತ್ಸ್ ಡ್ರೈಯರ್ ಹ್ಯಾಂಗರ್: ಮಳೆಗಾಲ ಆರಂಭ ಆಗಿದ್ದು, ಈ ಸಮಯದಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಈ ಋತುವಿನಲ್ಲಿ ಸೂರ್ಯನ ಬೆಳಕು ಕಡಿಮೆ ಇರಲಿದ್ದು, ತೇವಾಂಶ ಹೆಚ್ಚಾಗಿರುತ್ತದೆ. ಇದರಿಂದಾಗಿಯೇ ಬಟ್ಟೆಗಳು ಅಷ್ಟು ಸುಲಭವಾಗಿ ಒಣಗುವುದಿಲ್ಲ. ಆದರೆ ಈ ಪ್ಲಾಸ್ಟಿಕ್ ವೈಟ್ ಪೋರ್ಟಬಲ್ ಎಲೆಕ್ಟ್ರಿಕ್ ಕ್ಲೋತ್ಸ್ ಡ್ರೈಯರ್ ಹ್ಯಾಂಗರ್ ಮಾತ್ರ ನಿಮ್ಮ ಬಟ್ಟೆಗಳನ್ನು ಗರಿಗರಿಯಾಗಿಸುತ್ತದೆ.

ಈ ಡಿವೈಸ್‌ ನೋಡಲು ಬಟ್ಟೆಗಳನ್ನು ನೇತು ಹಾಕುವ ಹ್ಯಾಂಗರ್‌ನಂತೆ ಕಾಣಿಸುತ್ತದೆಯಾದರೂ ಸಹ ಇದನ್ನು ಯಾವ ರೂಪಕ್ಕಾದರೂ ಪರಿವರ್ತಿಸಬಹುದಾದ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಬಟನ್‌ ಆಯ್ಕೆ ನೀಡಲಾಗಿದ್ದು, ನೀವು ಬಟ್ಟೆ ಹಾಕುತ್ತೀರೋ ಅಥವಾ ಶೂ ಹಾಕುತ್ತಿರೋ ಎಂಬುದನ್ನು ನಿರ್ಧರಿಸಿ ಅದರ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬಹುದು.ಇದಾದ ನಂತರ ಡಿವೈಸ್ ಕೆಲವೇ ಸಮಯದಲ್ಲಿ ನಿಮ್ಮ ಬಟ್ಟೆಯಲ್ಲಿನ ನೀರನ್ನು ಹೀರಿಕೊಳ್ಳುತ್ತದೆ.

ಇನ್ನು ಇದನ್ನು ಪ್ಲಾಸ್ಟಿಂಗ್‌ನಿಂದ ನಿರ್ಮಾಣ ಮಾಡಲಾಗಿದೆಯಾದರೂ ಸಹ ಐದು ಕೆಜಿವರೆಗೆ ತೂಕ ಹೊಂದಿದೆ. ಪ್ಲಾಸ್ಟಿಕ್‌ ಅಂದ ತಕ್ಷಣ ಇದು ಮುರಿದು ಹೋಗಬಹುದು ಅಥವಾ ಶೀಘ್ರದಲ್ಲೆ ಹಾಳಾಗಬಹುದು ಎಂದುಕೊಳ್ಳಬೇಡಿ. ಯಾಕೆಂದರೆ ಇದು ಹಾರ್ಡ್‌ ಪ್ಲಾಸ್ಟಿಂಗ್‌ ವಸ್ತುಗಳಿಂದ ನಿರ್ಮಾಣ ಆಗಿದ್ದು, ಇದರಿಂದಾಗಿಯೇ ಡಿವೈಸ್‌ ಎಷ್ಟೇ ಬಿಸಿಯಾದರೂ ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಪಡೆದುಕೊಂಡಿದೆ.

ಇಷ್ಟು ಮಾತ್ರವಲ್ಲದೆ ಈ ವಿಶೇಷ ಹ್ಯಾಂಗರ್ ಪೋರ್ಟಬಲ್‌ ಆಗಿದ್ದು, ನೀವು ಹೋದ ಕಡೆಯಲೆಲ್ಲಾ ತೆಗೆದುಕೊಂಡು ಹೋಗಬಹುದು. ಅಂದರೆ ಆಫೀಸ್ ಕೆಲಸದ ಮೇಲೆ ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಿಗೆ ಹೋಗುವ ಜನರಿಗೆ ಇದು ಅತ್ಯುತ್ತಮ ಆಯ್ಕೆ ಆಗಿದೆ. ಅದೆಲ್ಲಕ್ಕೂ ಮಿಗಿಲಾಗಿ ಸಾಮಾನ್ಯ ದೊಡ್ಡ ಗಾತ್ರದ ಡ್ರೈಯರ್‌ಗಳಿಗೆ ಹೋಲಿಕೆ ಮಾಡಿದರೆ ಈ ಡಿವೈಸ್ ನಯವಾಗಿ ಕೆಲಸ ಮಾಡಲಿದ್ದು, ನಿಮ್ಮ ಬಟ್ಟೆಗಳಿಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ.

ಎಲೆಕ್ಟ್ರಿಕ್ ಕ್ಲೋತ್ಸ್ ಡ್ರೈಯರ್ ಹ್ಯಾಂಗರ್ ಬೆಲೆ ಹಾಗೂ ಲಭ್ಯತೆ: ಈ ಡಿವೈಸ್‌ ಎಲ್ಲಾ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ.ಆದರೆ ಇದಕ್ಕೆ ಇಂಡಿಯಾ ಮಾರ್ಟ್‌ನಲ್ಲಿ ಹೆಚ್ಚಿನ ಆಫರ್‌ ನೀಡಲಾಗಿದ್ದು, ಈ ಮೂಲಕ ಇದನ್ನು ಕೇವಲ 549 ರೂ.ಗಳಿಗೆ ಕೊಂಡುಕೊಳ್ಳಬಹುದು. ಉಳಿದಂತೆ ಈ ಡಿವೈಸ್‌ ಹೊರತು ಪಡಿಸಿ ಇತರೆ ಡಿವೈಸ್‌ಗಳು ಎಲ್ಲೆಲ್ಲಿ ಎಷ್ಟಕ್ಕೆ ಲಭ್ಯ ಎಂದು ನೋಡೋಣ.

ಒದ್ದೆ ಬಟ್ಟೆಗಳನ್ನು ತಕ್ಷಣವೇ ಒಣಗಿಸಲಿದೆ ಈ ಡಿವೈಸ್‌...

SMG ಪ್ಲಾಸ್ಟಿಕ್ ಸೀಲಿಂಗ್ ಕ್ಲಾತ್ ಡ್ರೈಯರ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇದ್ದು, ಇದರ ಸಾಮಾನ್ಯ ದರ 3,928ರೂ.ಗಳಾಗಿದೆ. ಆದರೆ, ನೀವು ಆಫರ್‌ ಬೆಲೆಗೆ ಅಂದರೆ 2,999ರೂ.ಗಳಿಗೆ ಖರೀದಿ ಮಾಡಬಹುದು. ಜೊತೆಗೆ ಅಮೆಜಾನ್‌ನಲ್ಲಿ 3nh ಪೋರ್ಟಬಲ್ ಕ್ಲೋತ್ಸ್ ಹ್ಯಾಂಗರ್ಸ್ ಎಲೆಕ್ಟ್ರಿಕ್ ಲಾಂಡ್ರಿ ಡ್ರೈಯರ್ 13,499ರೂ.ಗಳ ಸಾಮಾನ್ಯ ದರ ಹೊಂದಿದ್ದು, ಆಫರ್‌ ಬೆಲೆ 6,727ರೂ.ಗಳಿಗೆ ಕೊಂಡುಕೊಳ್ಳಬಹುದು.

Best Mobiles in India

English summary
Electric clothes dryer hanger is one of the best clothes drying smart devices for rainy season. It is available at the lowest price in India Mart, its features and price details are here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+