ಮಳೆಗಾಲದಲ್ಲಿ ನಿಮ್ಮ ಬಟ್ಟೆಗಳನ್ನು ಕ್ಷಣಮಾತ್ರದಲ್ಲಿ ಒಣಗಿಸುತ್ತೆ ಈ ಡಿವೈಸ್; ಬೆಲೆಯೂ ಕಡಿಮೆ!
ಮಳೆಗಾಲ ಆರಂಭ ಆದರೆ ಸಾಕು ಜನರಿಗೆ ಹಲವಾರು ಸಮಸ್ಯೆಗಳು ತಲೆದೂರುತ್ತವೆ. ಅದರಲ್ಲೂ ಕೆಲಸಕ್ಕೆ ಹೊಗುವ ಅಥವಾ ಶಾಲೆಗೆ ಹೋಗುವ ಮಕ್ಕಳಿಗೆ ಇದೊಂದು ಸಂಕಷ್ಟದ ಪರಿಸ್ಥಿತಿ. ಯಾಕೆಂದರೆ ಮೆಳೆಗಾಲದಲ್ಲಿ ಬಟ್ಟೆಗಳು ಬೇಗ ಒಣಗುವುದಿಲ್ಲ. ಅದಾಗ್ಯೂ ಅನಿವಾರ್ಯ ಕಾರಣಕ್ಕೆ ಅಲ್ವ-ಸ್ವಲ್ಪ ಒಣಗಿರುವ ಬಟ್ಟೆಗಳನ್ನು ಹಾಕಿಕೊಂಡು ಬಂದರೂ ಅವುಗಳಿಂದ ಕೆಟ್ಟ ವಾಸನೆ ಬರಲು ಆರಂಭ ಆಗುತ್ತದೆ. ಆದರೆ, ಇನ್ಮುಂದೆ ಈ ಸಮಸ್ಯೆ ಮುಕ್ತಿ ಹಾಡಿ.
ಹೌದು, ಮಳೆಗಾಲದ ವೇಳೆ ಬಿಸಿಲಿಗೆ ಬರ ಬರುತ್ತದೆ. ಈ ಕಾರಣಕ್ಕೆ ತೊಳೆದು ಹಾಕಿದ ಬಟ್ಟೆಗಳನ್ನು ಒಣಗಿಸಲು ಬಹಳ ಕಷ್ಟ ಪಡಬೇಕು. ಆದರೆ, ಈ ಕಡಿಮೆ ಬೆಲೆಯ ಡಿವೈಸ್ ನಿಮ್ಮ ಮನೆಯಲ್ಲಿದ್ದರೆ ಅತ್ಯಂತ ಸರಳವಾಗಿ ಎಷ್ಟೇ ಬಟ್ಟೆ ಇದ್ದರೂ ಅಥವಾ ಎಷ್ಟೇ ಒದ್ದೆಯಾದ್ದರೂ ಕ್ಷಣಮಾತ್ರದಲ್ಲಿ ಡ್ರೈ ಮಾಡಬಹುದು. ಹಾಗಿದ್ರೆ, ಯಾವುದು ಈ ಡಿವೈಸ್?, ಇದರ ಬೆಲೆ ಎಷ್ಟು?, ಇದು ಹೇಗೆ ಕೆಲಸ ಮಾಡುತ್ತದೆ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸೂರ್ಯನ ಬೆಳಕಿನ ಕೊರತೆ: ಪ್ರಸ್ತುತ ನಾಡಿನ ಹಲವು ಕಡೆ ಭಾರೀ ಮಳೆಯಾಗುತ್ತಿದೆ. ಈ ವೇಳೆ ಸೂರ್ಯನ ಬೆಳಕಿನ ಕೊರತೆಯಿಂದಾಗಿ ಹೆಚ್ಚಿನ ಆರ್ದ್ರತೆ ಕೂಡ ಸಂಭವಿಸುತ್ತದೆ. ಇದು ಬಟ್ಟೆಗಳನ್ನು ಒಣಗಿಸಲು ಆಗದಂತೆ ಮಾಡುತ್ತದೆ. ಅದರಲ್ಲೂ ಜೀನ್ಸ್ ನಂತಹ ದಪ್ಪ ಬಟ್ಟೆಗಳನ್ನು ಒಣಗಿಸುವುದು ಮನೆಯವರಿಗೆ ದೊಡ್ಡ ಕೆಲಸ. ಅಷ್ಟು ಮಾತ್ರವಲ್ಲದೆ ಒಳ ಉಡುಪುಗಳನ್ನು ಸರಿಯಾಗಿ ಒಣಗಿಸದಿದ್ದರೆ ಅಲರ್ಜಿ ಮತ್ತು ಸೋಂಕು ತಗಲುವ ಅಪಾಯ ಸಹ ಹೆಚ್ಚಾಗಿರುತ್ತದೆ.
ಈ ಕಾರಣಕ್ಕಾಗಿಯೇ ಪ್ರಮುಖ ಸ್ಮಾರ್ಟ್ ಗ್ಯಾಜೆಟ್ ತಯಾರಿಕಾ ಸಂಸ್ಥೆಗಳು ಇಂದು ವಿವಿಧ ಫೀಚರ್ಸ್ ಆಯ್ಕೆ ಇರುವ ಹೊಸ ಹೊಸ ಡ್ರೈಯರ್ ಯಂತ್ರಗಳನ್ನು(Clothes Dryer) ಪರಿಚಯಿಸಿದ್ದು, ಇವು ನಿಮ್ಮ ಎಂಥಹುದೇ ಬಟ್ಟೆಗಳನ್ನಾದರೂ ಸಹ ಕ್ಷಣಮಾತ್ರದಲ್ಲಿ ಡ್ರೈ ಮಾಡಿಕೊಡುತ್ತದೆ. ಅದರಲ್ಲೂ ದೊಡ್ಡ ಕುಟುಂಬ ಹೊಂದಿರುವವರಿಗೆ ಈ ಡಿವೈಸ್‌ಗಳು ಅತ್ಯಂತ ಸಹಾಯಕ ಎಂದರೆ ತಪ್ಪಾಗಲಾರದು.
ಈ ಡ್ರೈಯರ್ ಡಿವೈಸ್‌ಗಳ ವಿಭಾಗದಲ್ಲಿ ಪ್ರಮುಖವಾಗಿ DMR-DO-55A ಸೆಮಿ-ಆಟೋಮ್ಯಾಟಿಕ್ 5kg ಸ್ಪಿನ್ ಡ್ರೈಯರ್ ಹೆಚ್ಚು ಗಮನ ಸೆಳೆದಿದೆ. ಇದು ಕೇವಲ 5,799ರೂ.ಗಳ ಬೆಲೆ ಹೊಂದಿದ್ದು, ಬಟ್ಟೆ ತೊಳೆಯುವ ಯಂತ್ರಕ್ಕಿಂತ ಕೊಂಚ ಭಿನ್ನವಾಗಿದೆ. ಅಂದರೆ, ಇದನ್ನು ಬಟ್ಟೆಗಳನ್ನು ಒಣಗಿಸಲು ಮಾತ್ರ ಬಳಕೆ ಮಾಡುವಂತೆ ತಯಾರು ಮಾಡಲಾಗಿದೆ. ಅದರಂತೆ ಈ ಟಾಪ್ ಲೋಡ್ ಡ್ರೈಯರ್ 5 ಕೆಜಿ ಸಾಮರ್ಥ್ಯವನ್ನು ಹೊಂದಿದ್ದು, ಇದರ ಮೋಟಾರ್ 320W ಆಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?: ಇನ್ನು ನಿಮ್ಮ ಮನೆಯಲ್ಲಿ ಈಗಾಗಲೇ ಡ್ರೈಯರ್ ಆಯ್ಕೆ ಇಲ್ಲದ ವಾಷಿಂಗ್ ಮೆಷಿನ್ ಇದ್ದರೆ ಇದನ್ನು ಖರೀದಿ ಮಾಡಬಹುದಾಗಿದೆ. ಅಥವಾ ಕೈನಿಂದಲೇ ಬಟ್ಟೆ ತೊಳೆಯುವ ಅಭ್ಯಾಸ ಇರುವವರೂ ಸಹ ಈ ಡಿವೈಸ್ ಅನ್ನು ಖರೀದಿ ಮಾಡಬಹುದಾಗಿದ್ದು, ಒಗೆದ ಬಟ್ಟೆಗಳನ್ನು ಕ್ಷಣ ಮಾತ್ರದಲ್ಲೇ ಒಣಗಿಸಿಕೊಳ್ಳಬಹುದಾಗಿದೆ. ಇದು ಬಿಸಿ ಗಾಳಿಯ ಶುಷ್ಕಕಾರಿಯಲ್ಲದ ಕಾರಣದಿಂದಾಗಿ ಇದು ನಿಮ್ಮ ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸುವುದಿಲ್ಲ ಬದಲಾಗಿ 80-90 ಪ್ರತಿಶತ ನೀರನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದರೊಂದಿಗೆ DMR-DO-55A (W2Yr) ಸೆಮಿ ಆಟೋಮ್ಯಾಟಿಕ್ 5 ಕೆಜಿ ಸ್ಪಿನ್ ಡ್ರೈಯರ್ ಸಹ ಅಮೆಜಾನ್‌ನಲ್ಲಿ ಹೆಚ್ಚು ಸೇಲ್ ಆಗುತ್ತಿದ್ದು, ಇದರ ಸಾಮರ್ಥ್ಯ ಸಹ 5 ಕೆಜಿಯಾಗಿದೆ. ಇದರೊಂದಿಗೆ 320W ಮೋಟಾರ್ ಬಲ ಹೊಂದಿದ್ದು, ಪ್ಲಾಸ್ಟಿಕ್, ಅಲ್ಯೂಮಿನಿಯಂ ಮಿಶ್ರಿತ ಈ ಡಿವೈಸ್ ದೀರ್ಘ ಬಾಳಿಕೆಯ ಭರವಸೆ ನೀಡುತ್ತದೆ. ಈ ಡಿವೈಸ್ ಖರೀದಿಗೆ ಹಲವಾರು ರೀತಿಯಲ್ಲಿ ಅಮೆಜಾನ್ ಅನುಕೂಲ ಮಾಡಿಕೊಟ್ಟಿದೆ.
ಇದರ ಸಾಮಾನ್ಯ ದರ 6,499ರೂ.ಗಳಾಗಿದ್ದು, ಇದನ್ನು ಹೆಚ್‌ಡಿಎಫ್‌ಸಿ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದರೆ 1,750ರೂ.ಗಳ ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದು. ಇದರೊಂದಿಗೆ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 3 ತಿಂಗಳ ಸದಸ್ಯತ್ವದೊಂದಿಗೆ 1,800 ರೂ.ಗಳ ವೆಲ್‌ಕಮ್ ಆಫರ್ ಸಹ ಲಭ್ಯ ಇದೆ. ಇನ್ನು ಈ ಶಾಪಿಂಗ್‌ನಲ್ಲಿ ಪ್ರೈಮ್ ಸದಸ್ಯರಿಗೆ 5% ಕ್ಯಾಶ್‌ಬ್ಯಾಕ್ ಲಭ್ಯ ಆಗುತ್ತಿದೆ.


Click it and Unblock the Notifications








