ಈ ಡಿವೈಸ್ ನಿಮ್ಮ ಬಳಿ ಇದ್ರೆ ಮೋಸ ಹೋಗೋ ಚಾನ್ಸೇ ಇಲ್ಲ, ಬೆಲೆಯೂ ಹೆಚ್ಚೇನಿಲ್ಲ!
ಸ್ಮಾರ್ಟ್ ಡಿವೈಸ್‌ಗಳು (Smart devices) ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ನಿತ್ಯವೂ ಸಹಕಾರಿ. ಆದರೆ, ಇವುಗಳನ್ನೇ ಬಳಕೆ ಮಾಡಿಕೊಂಡು ಕೆಲವು ಜನರು ಮೋಸ ಮಾಡುವ ಸಾಧ್ಯತೆಯೂ ಹೆಚ್ಚು. ಅದರಲ್ಲೂ ಯಾರೇ ಆದರೂ ನಿತ್ಯವೂ ಅಂಗಡಿಗೆ ಹೋಗಿ ಏನಾದರೂ ಖರೀದಿ ಮಾಡೇ ಮಾಡುತ್ತಾರೆ. ಆದರೆ, ಆ ಅಂಗಡಿಯವ ಎಷ್ಟು ಪ್ರಾಮಾಣಿಕ ಎಂದು ನಿಮಗೆ ಹೇಗೆ ಗೊತ್ತಿರುತ್ತದೆ.
ಹೌದು, ಎಲ್ಲರೂ ಅಲ್ಲದಿದ್ದರೂ ಕೆಲವರು ಮಾತ್ರ ಮೋಸ ಮಾಡಿಕೊಂಡೇ ಜೀವನ ಮಾಡುತ್ತಾರೆ. ಅದರಲ್ಲೂ ವ್ಯಾಪಾರದ ವಿಷಯದಲ್ಲಿ ಇದು ಕೊಂಚ ಹೆಚ್ಚಾಗಿಯೇ ಇರುತ್ತದೆ. ನೀವು ಅಂಗಡಿಯಲ್ಲಿ ಏನಾದರೂ ದಿನಸಿ ತರುವಾಗ ಅಥವಾ ಹಣ್ಣು, ತರಕಾರಿ ತರುವಾಗ ಮೋಸ ಹೋಗಬಾರದು, ಅಷ್ಟೇ ಯಾಕೆ ವಿಮಾನದಲ್ಲಿ ಸಂಚಾರ ಮಾಡುವಾಗ ಎಷ್ಟು ಲಗೇಜ್ ತೆಗೆದುಕೊಂಡು ಹೋದರೆ ಉತ್ತಮ ಎಂದು ತಿಳಿಯಬೇಕು ಎಂದರೆ ಈ ಪುಟ್ಟ ಡಿವೈಸ್ ನಿಮ್ಮ ಬಳಿ ಇದ್ರೆ ಸಾಕು. ಈಗಿನ ಕಾಲದಲ್ಲಿ ಇದು ಅಗತ್ಯವೂ ಹೌದು. ಹಾಗಿದ್ರೆ, ಯಾವುದು ಈ ಡಿವೈಸ್, ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಎಲೆಕ್ಟ್ರಾನಿಕ್ ಪೋರ್ಟಬಲ್ ಹುಕ್: ಮನೆಯಲ್ಲಿ ಸರಕುಗಳ ತೂಕವನ್ನು ಪರೀಕ್ಷಿಸಲು ನೀವು ಎಲೆಕ್ಟ್ರಾನಿಕ್ ಪೋರ್ಟಬಲ್ ಹುಕ್ (Electronic portable hook) ಅನ್ನು ಬಳಕೆ ಮಾಡಬಹುದಾಗಿದೆ. ವಿಷಯ ಏನೆಂದರೆ ಇದೇನು ದುಬಾರಿ ಬೆಲೆಯ ಡಿವೈಸ್ ಅಲ್ಲ ಬದಲಾಗಿ ನೀವು ಅಮೆಜಾನ್ ಸೇರಿದಂತೆ ಅನೇಕ ಇ-ಕಾಮರ್ಸ್ ಸೈಟ್‌ಗಳ ಮೂಲಕ 100 ರೂ.ಗಳ ಅಥವಾ 200 ರೂ.ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದು. ಅದರಲ್ಲೂ REMBIRD ಎಲೆಕ್ಟ್ರಾನಿಕ್ ಪೋರ್ಟಬಲ್ ಹುಕ್ ಅನ್ನು ಅಮೆಜಾನ್‌ನಲ್ಲಿ 175 ರೂ.ಗೆ ಖರೀದಿಗೆ ಲಭ್ಯ ಇದೆ.
ಈ ಸ್ಮಾರ್ಟ್ ಹುಕ್ ಡಿಜಿಟಲ್ ಎಲ್ಇಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಅಗತ್ಯ ಮಾಹಿತಿಯನ್ನು ತಕ್ಷಣವೇ ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ನೀವು ಅಚ್ಚರಿ ಪಡುವ ವಿಷಯ ಏನೆಂದರೆ ಈ ಡಿವೈಸ್ ಬರೋಬ್ಬರಿ 50 ಕೆಜಿ ವರೆಗಿನ ತೂಕವನ್ನು ಸಹ ತಿಳಿಸುತ್ತದೆ. ಇದನ್ನು ಚೀಲದ ಬದಿಗೆ ಸಿಕ್ಕಿಸಿ ಎತ್ತಿದಾಗ ಡಿಜಿಟಲ್ ಡಿಸ್‌ಪ್ಲೇ ಮೇಲೆ ಅದರ ತೂಕವನ್ನು ಪ್ರದರ್ಶಿಸುತ್ತದೆ. ಇದು ಸಾಂಪ್ರದಾಯಿಕ ಹುಕ್ ರೀತಿ ಕಂಡರೂ ಸಹ ಸ್ವಲ್ಪ ಭಿನ್ನವಾಗಿದೆ.
ಹಾಗೆಯೇ ಈ ಪೋರ್ಟಬಲ್ ಹುಕ್ ಎರಡು ಬ್ಯಾಟರಿ ಆಯ್ಕೆ ಹೊಂದಿದ್ದು, ಸಾಮಾನು ಸರಂಜಾಮು ಅಷ್ಟೇ ಅಲ್ಲದೆ ತರಕಾರಿಗಳು ಅಥವಾ ಹಣ್ಣುಗಳು, ಮೀನು, ಕೋಳಿ ಹೀಗೆ ತೂಕದ ಮೂಲಕ ಖರೀದಿ ಮಾಡುವ ಯಾವುದೇ ವಸ್ತುಗಳನ್ನೂ ಸಹ ಇದರಲ್ಲಿ ತೂಗಬಹುದು. ಇದರಿಂದಾಗಿ ಮೋಸ ಮಾಡುವ ಕೆಲವು ವರ್ತಕರಿಗೆ ತಕ್ಕ ಪಾಠ ಕಲಿಸಬಹುದಾಗಿದೆ.
ಈ ಡಿವೈಸ್ ಹಗುರವಾಗಿರುವುದರಿಂದ ನಿಮ್ಮ ಪಾಕೆಟ್ ಅಥವಾ ಬ್ಯಾಗ್‌ನಲ್ಲೇ ಇಟ್ಟುಕೊಳ್ಳಬಹುದು. ಉಳಿದಂತೆ ಇದರಲ್ಲಿನ ಎಲ್‌ಸಿಡಿ ಡಿಸ್‌ಪ್ಲೇ g/kg/lb/oz ನಲ್ಲಿ ತೂಕವನ್ನು ತೋರಿಸಲಿದ್ದು, ಯಾವಾಗ ಈ ಡಿವೈಸ್ ಅನ್ನು ಬಳಕೆ ಮಾಡುವುದಿಲ್ಲವೋ ಆಗ ಅಂದರೆ 120 ಸೆಕೆಂಡುಗಳ ನಂತರ ಆಟೋಮ್ಯಾಟಿಕ್ ಆಗಿ ಆಫ್ ಆಗುತ್ತದೆ. ಈ ಮೂಲಕ ಹೆಚ್ಚಿನ ಬ್ಯಾಟರಿ ಬ್ಯಾಕಪ್ ಆಯ್ಕೆಯನ್ನೂ ಸಹ ನೀಡುತ್ತದೆ.
ಇದಿಷ್ಟೇ ಅಲ್ಲದೆ ಆನ್‌ಲೈನ್‌ನಲ್ಲಿ ಇತರೆ ಕಂಪೆನಿಯ ಸ್ಮಾರ್ಟ್‌ಹುಕ್‌ಗಳನ್ನು ನೀವು ಖರೀದಿ ಮಾಡಬಹುದು. ಅವುಗಳಲ್ಲಿ, ಡೆಸ್ಟಿನಿಯೋ ಹ್ಯಾಂಗಿಂಗ್ ವೇಯ್ಟ್ ಮಷೀನ್ ಅಗಲವಾದ ಮೃದುವಾದ ಹ್ಯಾಂಡಲ್ ಅನ್ನು ಹೊಂದಿದ್ದು, ಇದರಲ್ಲೂ ಸಹ 50 ಕೆಜಿ ವರೆಗೆ ತೂಕ ಮಾಡಬಹುದು. ಇದನ್ನು ಗ್ಯಾಸ್ ಸಿಲಿಂಡರ್, ಸಾಮಾನು, ಸೂಟ್‌ಕೇಸ್ ಸೇರಿದಂತೆ ಅನೇಕ ವಸ್ತುಗಳನ್ನು ತೂಗಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರ ಬೆಲೆ ಕೊಂಚ ಹೆಚ್ಚಿದೆ ಅಂದರೆ 849ರೂ.ಗಳಾಗಿದೆ.

ಇದರೊಂದಿಗೆ GoTrippin ಮೆಟಲ್ ಲಗೇಜ್ ವೇಯ್ಟ್ ಸ್ಕೇಲ್ ಡಿಜಿಟಲ್ ಸಹ ಲಭ್ಯ ಇದೆ. ಇದು 799ರೂ.ಗಳ ಬೆಲೆ ಹೊಂದಿದ್ದು, ಈ ಡಿವೈಸ್ ಸ್ಟೇನ್ಲೆಸ್ ಸ್ಟೀಲ್ ಟಾಪ್ ಮತ್ತು ಎಬಿಎಸ್ ಪ್ಲಾಸ್ಟಿಕ್ ಬಾಟಮ್ ಅನ್ನು ಹೊಂದಿದೆ. ಇದರೊಂದಿಗೆ ಒಂದು 3V CR2032 ಬ್ಯಾಟರಿ ಆಯ್ಕೆ ಮೂಲಕ ಕಾರ್ಯನಿರ್ವಹಿಸುವ ಈ ಡಿವೈಸ್ ಸ್ವಯಂ ಸ್ಥಗಿತಗೊಳಿಸುವಿಕೆ, ಸ್ವಯಂ ಲಾಕ್ ಫೀಚರ್ಸ್ ಅನ್ನು ಹೊಂದಿದೆ.


Click it and Unblock the Notifications








