Home
ಸುದ್ದಿಜಾಲ

ಮೊಬೈಲ್‌ ರೀಚಾರ್ಜ್‌: ಒಂದು ತಿಂಗಳಿಗೆ ಈ ಪ್ಲ್ಯಾನಿನಲ್ಲಿ ಜಬರ್ದಸ್ತ್‌ ಪ್ರಯೋಜನ!

ವಿ ಟೆಲಿಕಾಂ ದೇಶದಲ್ಲಿ ಮೂರನೇ ದೊಡ್ಡ ಟೆಲಿಕಾಂ ಪೂರೈಕೆದಾರ ಸಂಸ್ಥೆಯಾಗಿ ಕಾಣಿಸಿಕೊಂಡಿದೆ. ವಿ ಟೆಲಿಕಾಂ ತನ್ನ ಗ್ರಾಹಕ ಬಳಗವನ್ನು ಹೆಚ್ಚಿಸಿಕೊಳ್ಳಲು ಹಲವು ಅತ್ಯುತ್ತಮ ಯೋಜನೆ ನೀಡುತ್ತ ಮುಂದೆ ಸಾಗಿದ್ದು, ಅದರಲ್ಲಿ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಬೊಂಬಾಟ್‌ ಎನಿಸಿವೆ. ಇದರೊಂದಿಗೆ ಎಂಟ್ರಿ ಲೆವೆಲ್‌ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಮೂಲಕವೂ ವಿ ಟೆಲಿಕಾಂ ಗ್ರಾಹಕರನ್ನು ಆಕರ್ಷಿಸಿದೆ.

ಹೌದು, ವಿ ಟೆಲಿಕಾಂ ಪ್ರೀಪೇಯ್ಡ್‌ ಯೋಜನೆಗಳಂತೆ ಕೆಲವು ಆಕರ್ಷಕ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆ ಪಡೆದಿದೆ. ಆ ಪೈಕಿ ಎಂಟ್ರಿ ಲೆವೆಲ್‌ ಪೋಸ್ಟ್‌ಪೇಯ್ಡ್‌ ಯೋಜನೆ ಎಂದೆನಿಸಿಕೊಂಡಿರುವ ವಿ. 401ರೂ. ಯೋಜನೆಯು ಡೇಟಾ, ವಾಯಿಸ್‌ ಕರೆ ಸೌಲಭ್ಯಗಳ ಜತೆಗೆ ಓಟಿಟಿ ಚಂದಾದಾರಿಕೆ ಪ್ರಯೋಜನ ಪಡೆದಿದ್ದು, ಹೆಚ್ಚಿನ ಗ್ರಾಹಕರು OMG ಎನ್ನುವಂತೆ ಮಾಡಿದೆ. ಹಾಗಾದರೆ ವಿ ಟೆಲಿಕಾಂನ ಈ ಪೋಸ್ಟ್‌ಪೇಯ್ಡ್‌ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಮೊಬೈಲ್‌ ರೀಚಾರ್ಜ್‌: ಒಂದು ತಿಂಗಳಿಗೆ ಈ ಪ್ಲ್ಯಾನಿನಲ್ಲಿ ಜಬರ್ದಸ್ತ್‌ ಪ್ರಯೋಜನ!

ವಿ ಟೆಲಿಕಾಂ 401ರೂ. ಪೋಸ್ಟ್‌ಪೇಯ್ಡ್‌ ಯೋಜನೆ ಮಾಹಿತಿ : ವಿ ಟೆಲಿಕಾಂನ ಈ ಪೋಸ್ಟ್‌ಪೇಯ್ಡ್‌ ಯೋಜನೆಯು ಎಂಟ್ರಿ ಲೆವೆಲ್‌ ಯೋಜನೆ ಆಗಿದ್ದು, ಆಕರ್ಷಕ ಪ್ರಯೋಜನಗಳಿಂದ ಗಮನ ಸೆಳೆದಿದೆ. ಈ ಯೋಜನೆಯಲ್ಲಿ 50GB ಡೇಟಾ ಪ್ರಯೋಜನ ಸಿಗಲಿದ್ದು, 200GB ಡೇಟಾ ರೋಲ್‌ ಓವರ್‌ ಸೌಲಭ್ಯ ಸಹ ಪಡೆದಿದೆ. ಇನ್ನು ರಾತ್ರಿ 12 ರಿಂದ ಮುಂಜಾನೆಯ 6 ಗಂಟೆಯ ವರೆಗೂ ಅನಿಯಮಿತ ಡೇಟಾ ಬಳಕೆಯ ಅವಕಾಶ ಪಡೆದಿದೆ.

ಹಾಗೆಯೇ ಈ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ತಿಂಗಳಿಗೆ 3000 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದ್ದು, ಸೋನಿ ಲೈವ್‌ (SonyLiv) ಮೊಬೈಲ್‌ ಚಂದಾದಾರಿಕೆ ಪಡೆದಿದೆ. ಇದರೊಂದಿಗೆ ವಿ ಟೆಲಿಕಾಂ ನಿಂದ ಇತರೆ ಕೆಲವು ಆಪ್‌ಗಳ ಸೇವೆ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ 50GB ಸೌಲಭ್ಯ ಸಹ ಪಡೆದಿದೆ. ಹಾಗೆಯೇ 401ರೂ. ಪೋಸ್ಟ್‌ಪೇಯ್ಡ್‌ ಸೌಥ್ ಯೋಜನೆಯಲ್ಲಿ ಸಬ್‌ನೆಕ್ಸ್ಟ್‌ ಓಟಿಟಿ ಪ್ರಯೋಜನ ದೊರೆಯುತ್ತದೆ.

ವಿ ಟೆಲಿಕಾಂ 501ರೂ. ಪೋಸ್ಟ್‌ಪೇಯ್ಡ್‌ ಯೋಜನೆ ಮಾಹಿತಿ : ವಿ ಟೆಲಿಕಾಂ 501ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ 90GB ಡೇಟಾ ಪ್ರಯೋಜನ ಲಭ್ಯ ಇದ್ದು, 200GB ಡೇಟಾ ರೋಲ್‌ ಓವರ್‌ ಸೌಲಭ್ಯ ಸಹ ಪಡೆದಿದೆ. ಇನ್ನು ರಾತ್ರಿ 12 ರಿಂದ ಮುಂಜಾನೆಯ 6 ಗಂಟೆಯ ವರೆಗೂ ಅನಿಯಮಿತ ಡೇಟಾ ಬಳಕೆಯ ಅವಕಾಶ ಪಡೆದಿದೆ. ಜೊತೆಗೆ ಅಮೆಜಾನ್‌ ವಿಡಿಯೋ ಓಟಿಟಿ ಸೌಲಭ್ಯ, ಡಿಸ್ನಿ+ ಹಾಟ್‌ಸ್ಟಾರ್‌ ಓಟಿಟಿ ಪ್ರಯೋಜನ ಸೇರಿದಂತೆ ಇತರೆ ಕೆಲವು ಆಪ್‌ಗಳು ದೊರೆಯುತ್ತವೆ.

ವಿ ಟೆಲಿಕಾಂ 701ರೂ. ಪೋಸ್ಟ್‌ಪೇಯ್ಡ್‌ ಯೋಜನೆ ಮಾಹಿತಿ : ವಿ ಟೆಲಿಕಾಂ 701ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಲಭ್ಯ. ಜೊತೆಗೆ ತಿಂಗಳಿಗೆ 3,000 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅಮೆಜಾನ್‌ ವಿಡಿಯೋ ಓಟಿಟಿ ಸೌಲಭ್ಯ, ಡಿಸ್ನಿ+ ಹಾಟ್‌ಸ್ಟಾರ್‌ ಓಟಿಟಿ ಪ್ರಯೋಜನ ಸೇರಿದಂತೆ ಇತರೆ ಕೆಲವು ಆಪ್‌ಗಳು ಸಿಗಲಿವೆ.

ವಿ ಟೆಲಿಕಾಂ 1101ರೂ. ಪೋಸ್ಟ್‌ಪೇಯ್ಡ್‌ ಯೋಜನೆ ಸೌಲಭ್ಯಗಳು : ವಿ ಟೆಲಿಕಾಂ 1101ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿಯೂ ಸಹ ಗ್ರಾಹಕರಿಗೆ ಅನಿಯಮಿತ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ಲೋಕಲ್‌ ಹಾಗೂ ರಾಷ್ಟ್ರೀಯ ರೋಮಿಂಗ್ ವಾಯಿಸ್‌ ಕರೆಯ ಸೌಲಭ್ಯ ಸಹ ಲಭ್ಯ. ಜೊತೆಗೆ ತಿಂಗಳಿಗೆ 3,000 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅಮೆಜಾನ್‌ ವಿಡಿಯೋ ಓಟಿಟಿ ಸೌಲಭ್ಯ, ಡಿಸ್ನಿ+ ಹಾಟ್‌ಸ್ಟಾರ್‌ ಓಟಿಟಿ ಪ್ರಯೋಜನ ಸೇರಿದಂತೆ ಇತರೆ ಕೆಲವು ಆಪ್‌ಗಳು ಸಿಗಲಿವೆ.

Best Mobiles in India

English summary
This entry level postpaid plan offer ott benefits, data, sms and more. details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+